ಮಿಚಾಂಗ್ ಸೈಕ್ಲೋನ್ ಎಫೆಕ್ಟ್; ತಿರುಪತಿ ಸೇರಿ ಆಂಧ್ರಪ್ರದೇಶದ 7 ಪ್ರದೇಶಗಳಲ್ಲಿ ಭಾರಿ ಮಳೆ, ತೆಲಂಗಾಣಕ್ಕೂ ಹೊಡೆತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಿಚಾಂಗ್ ಸೈಕ್ಲೋನ್ ಎಫೆಕ್ಟ್; ತಿರುಪತಿ ಸೇರಿ ಆಂಧ್ರಪ್ರದೇಶದ 7 ಪ್ರದೇಶಗಳಲ್ಲಿ ಭಾರಿ ಮಳೆ, ತೆಲಂಗಾಣಕ್ಕೂ ಹೊಡೆತ

ಮಿಚಾಂಗ್ ಸೈಕ್ಲೋನ್ ಎಫೆಕ್ಟ್; ತಿರುಪತಿ ಸೇರಿ ಆಂಧ್ರಪ್ರದೇಶದ 7 ಪ್ರದೇಶಗಳಲ್ಲಿ ಭಾರಿ ಮಳೆ, ತೆಲಂಗಾಣಕ್ಕೂ ಹೊಡೆತ

ಆಂಧ್ರಪ್ರದೇಶದಲ್ಲಿ ಮಿಚಾಂಗ್ ಸೈಕ್ಲೋನ್ ಪರಿಣಾಮವಾಗಿ ತಿರುಪತಿ, ಕರಾವಳಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪರಿಹಾರ ಕಾರ್ಯ ನಡೆದಿದೆ.

ಆಂಧ್ರ ಪ್ರದೇಶದ ಕೆಲವು ಕಡೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದ್ದು, ಮುಂದಿನ ಕೆಲ ಗಂಟೆಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ.
ಆಂಧ್ರ ಪ್ರದೇಶದ ಕೆಲವು ಕಡೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದ್ದು, ಮುಂದಿನ ಕೆಲ ಗಂಟೆಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ.

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಕೆಲವು ಪ್ರದೇಶಗಳು ಮಿಚಾಂಗ್ ಸೈಕ್ಲೋನ್‌ಗೆ (Michaung Cyclone) ತತ್ತರಿಸಿವೆ. ತಿರುಪತಿ ಸೇರಿದಂತೆ 7 ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ (ಡಿಸೆಂಬರ್ 5, ಮಂಗಳವಾರ) ಸಂಜೆ ಬಾಪಟ್ಲಾ ಪ್ರದೇಶದ ಕರಾವಳಿಯನ್ನ ದಾಟಿ ಮುಂದೆ ಸಾಗಿರುವ ಮಿಚಾಂಗ್ ಚಂಡಮಾರುತ ಆ ಬಳಿಕ ದುರ್ಬಲಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆದರೆ ಚಂಡಮಾರುತದ ಪ್ರಭಾವದಿಂದ ಆಂಧ್ರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಭತ್ತ ಸೇರಿದಂತೆ ಬೆಳೆಗಳು ಹಾನಿಯಾಗಿದೆ. ಮರಗಳು ಧರೆಗುಳಿದ್ದು, ಕೆಲವೆಡೆ ಮನೆಗಳಿಗೂ ಹಾನಿಯಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕೆಲವು ಪ್ರದೇಶಗಳಲ್ಲಿ ಇಂದು (ಡಿಸೆಂಬರ್ 6, ಬುಧವಾರ) ಕೂಡ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ನೆಲ್ಲೂರು ಜಿಲ್ಲೆಯಲ್ಲಿ 366 ಮಿಲಿ ಮೀಟರ್ ಮಳೆ

ವೆಂಕಟೇಶ್ವರ ಸನ್ನಿಧಾನ ಇರುವ ತಿರುಪತಿ, ನೆಲ್ಲೂರಿನ ಮೂರು ಸ್ಥಳಗಳು ಸೇರಿ ಒಟ್ಟು 7 ಪ್ರದೇಶಗಳಲ್ಲಿ ವರುಣ ಅಬ್ಬರಿಸಿದ್ದಾನೆ. ನೆಲ್ಲರೂನಲ್ಲಿ 200 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನೆಲ್ಲೂರು ಜಿಲ್ಲೆಯ ಮನುಬೋಲು 366.5 ಮಿಮೀ ಮಳೆಯಾಗಿದೆ.

ಆಂಧ್ರ ಪ್ರದೇಶದ 194 ಹಳ್ಳಿಗಳು, 2 ಪಟ್ಟಣಗಳು ಮೇಲೆ ಮಿಚಾಂಗ್ ಭಾರಿ ಪರಿಣಾಮ ಬೀರಿದ್ದು, ಬರೋಬ್ಬರಿ 25 ಹಳ್ಳಿಗಳು ಮುಳುಗಡೆಯಾಗಿವೆ. ಒಟ್ಟಾರೆಯಾಗಿ 40 ಲಕ್ಷ ಜನರರನ್ನು ಭಾದಿಸುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಕಚೇರಿಯ ಅಂಕಿ ಅಂಶಗಳ ಸಹಿತಿ ಮಾಹಿತಿ ನೀಡಿದೆ. ಚಂಡಮಾರುತಕ್ಕೆ 8 ಗುಂಡಿಸಲುಗಳು, ದನದ ಕೊಟ್ಟಿಗೆಗಳು ನೀರುಪಾಲಾಗಿವೆ. 232 ಮನೆಗಳ ಮುಳುಗಿವೆ. 35 ಮರಗಳು ಧರೆಗುರುಳಿವೆ. ಮೂರು ಜಾನುವಾರುಗಳು ಮೃತಪಟ್ಟಿವೆ.

15,000ಕ್ಕೂ ಹೆಚ್ಚು ಜನರಿಗೆ ಶಿಬಿರಗಳಲ್ಲಿ ಆಶ್ರಯ

ಇವೆಷ್ಟೇ ಅಲ್ಲದೆ ಮೂಲ ಸೌಕರ್ಯಗಳಿಗೂ ಹಾನಿಯಾಗಿವೆ. ನೆಲ್ಲೂರಿನ 433 ಕಿಲೋ ಮೀಟರ್ ರಸ್ತೆ, ಕೋನಸೀಮಾ 234 ಕಿಮೀ, ಪ್ರಕಾಶಂ ಜಿಲ್ಲೆ 55 ಕಿಮೀ, ತಿರುಪತಿ 48 ಕಿಮೀ ಸೇರಿದಂತೆ ಪ್ರಮುಖ ರಸ್ತೆಗಳ ಮೇಲೂ ಈ ಚಂಡಮಾರುತ ಪರಿಣಾಮ ಬೀರಿದೆ ಎಂದು ವರದಿಯಾಗಿದೆ. ಆಂಧ್ಯಪ್ರದೇಶಾದ್ಯಂತ 204 ಪರಿಣಾಮ ಶಿಬಿರಗಳನ್ನು ತೆರೆಯಲಾಗಿದ್ದು, ಅಲ್ಲಿ 15,000 ಕ್ಕೂ ಹೆಚ್ಚು ಜನರಿಗ ಆಶ್ರಯ ನೀಡಲಾಗಿದೆ. 80 ಆರೋಗ್ಯ ಶಿಬಿರಗಳು, 18,000 ಕ್ಕೂ ಹೆಚ್ಚು ಆಹಾರ ಪ್ಯಾಕೆಟ್‌ಗಳು, 1 ಲಕ್ಷ ನೀರಿನ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ.

ಕೊಯ್ಲಿಗೆ ಬಂದು ನಿಂತಿದ್ದ ನೂರಾರು ಎಕರೆ ಭತ್ತದ ಬೆಳೆ ನೀರು ಪಾಲಾಗಿದ್ದು, ಅನ್ನದಾತರ ಅಕ್ರಂದನ ಮುಗಿಲು ಮುಟ್ಟುವಂತಿದೆ. ಸಂತ್ರಸ್ತ ಜಿಲ್ಲೆಗಳ ನೆರವಿಗಾಗಿ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳಿಗಾಗಿ 23 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮಳೆ ನೀರು ಇಳಿಮುಖವಾಗುತ್ತಿದ್ದಂತೆ ಕೃಷಿ ಮತ್ತು ತೋಟಗಾರಿಕಾ ಹಾನಿಯನ್ನು ಪರಿಶೀಲನೆ ನಡೆಸಿ ಎಷ್ಟು ಹಾನಿಯಾಗಿದೆ ಎಂಬುದರ ಲೆಕ್ಕಾಚಾರವನ್ನು ಹಾಕಲಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.