Kawasaki Ninja ZX-6R: ಬಂದ ನೋಡಿ 2024ರ ಕವಾಸಕಿ ನಿಂಜಾ, ಯುರೋಪ್ ರಸ್ತೆಗಿಳಿದ ಈ ಸೂಪರ್‌ಸ್ಪೋರ್ಟ್ ಬೈಕ್‌ನ ವಿಶೇಷಗಳ ಮೇಲೊಂದು ಸವಾರಿ
ಕವಾಸಕಿ ನಿಂಜಾ ಬೈಕ್ ಪ್ರಿಯರಿಗೆ ಸಿಹಿಸುದ್ದಿ. ಕಂಪನಿಯು 2024 Kawasaki Ninja ZX-6R ಸೂಪರ್‌ಸ್ಪೋರ್ಟ್ ಬೈಕನ್ನು ಯುರೋಪ್ ರಸ್ತೆಗೆ ಪರಿಚಯಿಸಿದೆ. ಮುಂದಿನ ದಿನಗಗಳಲ್ಲಿ ಇದು ಭಾರತದ ರಸ್ತೆಗೂ ಆಗಮಿಸುವ ನಿರೀಕ್ಷೆಯಿದೆ.
ಕವಾಸಕಿ ನಿಂಜಾ ಬೈಕ್ ಪ್ರಿಯರಿಗೆ ಸಿಹಿಸುದ್ದಿ. ಕಂಪನಿಯು 2024 Kawasaki Ninja ZX-6R ಸೂಪರ್‌ಸ್ಪೋರ್ಟ್ ಬೈಕನ್ನು ಯುರೋಪ್ ರಸ್ತೆಗೆ ಪರಿಚಯಿಸಿದೆ. ಇದು ಇತ್ತೀಚಿನ ಯೂರೋ 5 ಮಾಲಿನ್ಯ ನಿಯಂತ್ರಣ ಗುಣಮಟ್ಟಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದೆ. ಈ ಜನಪ್ರಿಯ ಮಧ್ಯಮ ತೂಕದ ಸೂಪರ್‌ಸ್ಪೂರ್ಟ್ ಬೈಕ್‌ನ ಎಂಜಿನ್, ವಿನ್ಯಾಸ, ಫರ್ಮಾಮೆನ್ಸ್‌ನಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ಅಪ್‌ಗ್ರೇಡ್ ಆಗಿರುವ ಈ ಬೈಕ್ ಭಾರತಕ್ಕೂ ಆಗಮಿಸಲಿದೆ ಎನ್ನಲಾಗಿದೆ. ಆದರೆ, ಯಾವಾಗ ಎಂದು ಸದ್ಯಕ್ಕೆ ಕಂಪನಿ ಮಾಹಿತಿ ನೀಡಿಲ್ಲ.
2024ರ ಕವಾಸಕಿ ನಿಂಜಾ ಝಡ್‌ಎಕ್ಸ್ 6ಆರ್‌ನಲ್ಲಿ ಹಳೆಯ ಬೈಕ್‌ನಲ್ಲಿದ್ದ 637 ಸಿಸಿ ಇನ್‌ಲೈನ್ ಫೋರ್ ಸಿಲಿಂಡರ್ ಎಂಜಿನ್ ಇದೆ. ಆದರೆ, ಎಂಜಿನ್‌ನ ಕ್ಯಾಮ್ ಪ್ರೊಫೈಲ್ ಪರಿಷ್ಕರಿಸಿ ಹೆಚ್ಚಿನ ಪರ್ಫಾಮೆನ್ಸ್ ಬರುವಂತೆ ಮಾಡಲಾಗಿದೆ. ಇದರೊಂದಿಗೆ ಪರಿಸರಕ್ಕೆ ಹೊರಸೂಸುವ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಇದರ ಇಂಜೆಕ್ಟರ್‌ಗಳು ಅತ್ಯುತ್ತಮ ಇಂಧನ ದಕ್ಷತೆಗೆ ಮತ್ತು ಪರಿಸರಕ್ಕೆ ಪೂರಕವಾಗಿದೆ ಎಂದು ಕಂಪನಿ ತಿಳಿಸಿದೆ.
ಇದರೊಂದಿಗೆ 5.09 ಲೀಟರ್‌ನ ಏರ್‌ಬಾಕ್ಸ್ ಅನ್ನು ಕವಾಸಕಿಯು ಅಪ್‌ಡೇಟ್ ಮಾಡಿದೆ. ಇದರಿಂದ ಹೆಚ್ಚು ಉತ್ತಮವಾಗಿ ಇಂಧನ ಗಾಳಿ ಮಿಶ್ರಣವಾಗುತ್ತದೆ. ಘರ್ಷಣೆಯನ್ನು ಕಡಿಮೆ ಮಾಡಲು ಪಿಸ್ಟನ್ ಸ್ಕರ್ಟ್‌ಗಳಲ್ಲಿ ಅಪ್‌ಡೇಟ್ ಮಾಡಲಾಗಿದೆ. ಬ್ರೇಕಿಂಗ್ ಕಾರ್ಯಕ್ಷಮತೆಗಾಗಿ ಹೊಸ ನಿಸ್ಸಿನ್ ರೇಡಿಯಲ್-ಮೌಂಟ್ ಬದಲು ನಾಲ್ಕು-ಪಿಸ್ಟನ್ ಮೊನೊಬ್ಲಾಕ್ ಕ್ಯಾಲಿಪರ್ ಅಳವಡಿಸಲಾಗಿದೆ. ಅವಳಿ 310 ಎಂಎಂ ಸ್ಟೇನ್‌ಲೆಸ್ ಸ್ಟೀಲ್ ಫ್ರಂಟ್ ಬ್ರೇಕ್ ಡಿಸ್ಕ್ ಇದೆ. ಮಿಶ್ರಲೋಹದ ಚಕ್ರಗಳಿಗೆ ಪಿರೆಲ್ಲಿ ಡಯಾಬ್ಲೊ ರೊಸ್ಸೊ IV ಟೈರ್ ಬೆಂಬಲವಿದೆ.
2024ರ ಕವಾಸಕಿ ನಿಂಜಾ ಝಡ್‌ಎಕ್ಸ್ 6ಆರ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಿಷಯ ಈ ಮುಂದಿನಂತೆ ಇದೆ. ಸ್ಟ್ಯಾಂಡರ್ಡ್ ಕ್ವಿಕ್‌ಶಿಫ್ಟರ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಪವರ್ ಮೋಡ್ ಸೆಲೆಕ್ಷನ್ ಇದೆ. ಈ ಬೈಕ್ ಹೊಸ 4.3-ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಇದಕ್ಕೆ ಬ್ಲೂಟೂಥ್ ಸಂಪರ್ಕ ಇದೆ. ಸ್ಪೋರ್ಟ್, ರೋಡ್ ಮತ್ತು ರೈನ್ ಎಂಬ ಮೂರು ಚಾಲನಾ ಆಯ್ಕೆಗಳಲ್ಲಿ ದೊರಕುತ್ತದೆ.
ಭಾರತದ ರಸ್ತೆಗೆ ಅರ್ಟುರಾ ಹೆಸರಿನ ಸೂಪರ್‌ಕಾರೊಂದನ್ನು ಮೆಕ್‌ಲಾರೆನ್ ಆಟೋಮೋಟಿವ್ ಕಂಪನಿಯು ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದರ 5.1 ಕೋಟಿ ರೂಪಾಯಿ. ರಸ್ತೆ ತೆರಿಗೆ ಇತ್ಯಾದಿಗಳೆಲ್ಲ ಸೇರಿ ಆನ್‌ರೋಡ್ ದರ ಆರು ಕೋಟಿ ರೂಪಾಯಿ ದಾಟಿದರೂ ಅಚ್ಚರಿಯಿಲ್ಲ. ಆರ್ಟ್ ಮತ್ತು ಫ್ಯೂಚರ್ (ಕಲೆ ಮತ್ತು ಭವಿಷ್ಯ) ಎಂಬೆರಡು ಪದಗಳ ಯುಗಳಗೀತೆಯಾಗಿ ಅರ್ಟುರಾ ಎಂಬ ಹೆಸರನ್ನು ಈ ಸೂಪರ್‌ಕಾರಿಗೆ ಇಡಲಾಗಿದೆ ಎಂದು ಮೆಕ್‌ಲಾರೆನ್ ತಿಳಿಸಿದೆ. ಈ ಕುರಿತು ಓದಲು ಇಲ್ಲಿ ಕ್ಲಿಕ್ ಮಾಡಿ.