ಬಿಹಾರ ಲೋಕಸಭಾ ಫಲಿತಾಂಶ; ಎನ್‌ಡಿಎ vs ಇಂಡಿಯಾ ಪೈಪೋಟಿ, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ-bihar lok sabha results 2024 fight between bjp jdu nda and congress rjd india ls poll results latest updates uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಹಾರ ಲೋಕಸಭಾ ಫಲಿತಾಂಶ; ಎನ್‌ಡಿಎ Vs ಇಂಡಿಯಾ ಪೈಪೋಟಿ, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ

ಬಿಹಾರ ಲೋಕಸಭಾ ಫಲಿತಾಂಶ; ಎನ್‌ಡಿಎ vs ಇಂಡಿಯಾ ಪೈಪೋಟಿ, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಹಾರದ ಕಡೆಗೆ ಎಲ್ಲರ ನೋಟ ಹರಿದಿದೆ. ಬಿಹಾರ ಲೋಕಸಭಾ ಫಲಿತಾಂಶ ಗಮನಿಸಿದರೆ ಎನ್‌ಡಿಎ vs ಇಂಡಿಯಾ ಪೈಪೋಟಿ ಸ್ಪಷ್ಟ ಗೋಚರಿಸಿದ್ದು, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ ಕಂಡುಬಂದಿದೆ. ಇದರ ವಿವರ ಇಲ್ಲಿದೆ.

ಬಿಹಾರ ಲೋಕಸಭಾ ಫಲಿತಾಂಶ; ಎನ್‌ಡಿಎ vs ಇಂಡಿಯಾ ಪೈಪೋಟಿ, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ
ಬಿಹಾರ ಲೋಕಸಭಾ ಫಲಿತಾಂಶ; ಎನ್‌ಡಿಎ vs ಇಂಡಿಯಾ ಪೈಪೋಟಿ, ಬಿಜೆಪಿ, ಜೆಡಿಯು ಮೇಲುಗೈ, ಆರ್‌ಜೆಡಿ, ಕಾಂಗ್ರೆಸ್‌ಗೆ ಹಿನ್ನಡೆ

ಪಾಟ್ನಾ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಗಳೆಲ್ಲ ಮುಗಿದಿದೆ. ಕೊನೆಯ ಮತ್ತು ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಿತು. ದೇಶದ ಗಮನಸೆಳೆದ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಪೈಕಿ ಎನ್‌ಡಿಎ 30 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಐಎನ್‌ಡಿಐಎ 9 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಬಿಹಾರದ 40 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಮತದಾನ ನಡೆಯಿತು. ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಜೊತೆಗೆ ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ, ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದೆ. ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಐದು ಸ್ಥಾನಗಳಿಗೆ ಸ್ಪರ್ಧಿಸಿದ್ದು, ಎಚ್‌ಎಎಂ ಮತ್ತು ಆರ್‌ಎಲ್‌ಪಿ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸಿವೆ.

ಮಹಾಘಟಬಂಧನ್‌ನಲ್ಲಿ ಒಕ್ಕೂಟದ ಅತಿದೊಡ್ಡ ಸದಸ್ಯ ಪಕ್ಷ ಆರ್‌ಜೆಡಿ 26 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಸಿಪಿಐ(ಎಂಎಲ್) ಮೂರು ಸ್ಥಾನಗಳಿಗೆ, ಸಿಪಿಐ ಮತ್ತು ಸಿಪಿಎಂ ಒಂದರಲ್ಲಿ ಸ್ಪರ್ಧಿಸಿದ್ದವು. ಇಂಡಿಯಾ ಗುಂಪು ಕಟ್ಟಿಕೊಂಡ ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಬಿಹಾರ ರಾಜಕೀಯ ಚಿತ್ರಣವನ್ನು ಗಮನಿಸಿದರೆ, ಅಲ್ಲಿ 2000ನೇ ಇಸವಿಯಿಂದೇಚೆಗೆ ಮೈತ್ರಿ ರಾಜಕಾರಣವೇ ಮುಂದುವರಿದಿದೆ. ಏಕೈಕ ಪಕ್ಷ ಕೊನೆಯಾದಾಗಿ ಆಡಳಿತ ನಡೆಸಿದ್ದು 1995ರಲ್ಲಿ. ಅಂದು ಜನತಾದಳ 167 ಸ್ಥಾನ ಗೆದ್ದು ಆಡಳಿತ ನಡೆಸಿತ್ತು. ಇನ್ನು ಲೋಕಸಭಾ ಚುನಾವಣೆ ವಿಚಾರಕ್ಕೆ ಬಂದರೆ, ಇಲ್ಲೂ ಮೈತ್ರಿ ರಾಜಕಾರಣವೇ ಗಮನಸೆಳೆಯುತ್ತದೆ. 2014ರ ನಂತರ ಬಿಹಾರದಲ್ಲಿ ಬಿಜೆಪಿ ನಿಧಾನವಾಗಿ ತನ್ನ ಪಕ್ಷ ಸಂಘಟನೆಯನ್ನು ಬಲಗೊಳಿಸುತ್ತ ಸಾಗಿದ್ದು, ಫಲಿತಾಂಶದಲ್ಲಿ ಗೋಚರಿಸಿದೆ. ಅದರ ಪ್ರಮುಖ ಮಿತ್ರ ಪಕ್ಷ ಜೆಡಿಯು ಮೈತ್ರಿ ವಿಚಾರದಲ್ಲಿ ಬದ್ಧತೆಯನ್ನು ಉಳಿಸಿಕೊಂಡಿಲ್ಲ. ಅದರ ಪರಿಣಾಮವೂ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಗೋಚರಿಸಿದೆ. ಲೋಕಸಭಾ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ.

ಇನ್ನು ಇಲ್ಲಿಯೂ ಜಾತಿ ಲೆಕ್ಕಾಚಾರಗಳು ಬಹಳ ಕೆಲಸ ಮಾಡುತ್ತವೆ. ವಿಶೇಷವಾಗಿ ಬಿಹಾರದ 40 ಕ್ಷೇತ್ರಗಳ ಪೈಕಿ 5ರಲ್ಲಿ ಅಂದರೆ, ಮುಂಗೇರ್, ಬೇಗುಸರಾಯಿ, ಸಮಸ್ತಿಪುರ್, ಉಜಿಯಾರ್ಪುರ್ ಮತ್ತು ದರ್ಭಾಂಗಗಳಲ್ಲಿ ಜಾತಿ ಲೆಕ್ಕಾಚಾರಕ್ಕೆ ಮಣೆ. ಹೀಗಾಗಿ ಪಕ್ಷಗಳು ಅಳೆದೂ ತೂಗಿ ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಉಳಿದ ಕಡೆ ಜಾತಿ ಲೆಕ್ಕಾಚಾರ ಇಲ್ಲ ಎಂದಲ್ಲ. ಬಿಹಾರದ ಚುನಾವಣೆಯ ಮೇಲೆ ಪ್ರಭಾವ ಬೀರುವ ಜಾತಿ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡೇ ಪಕ್ಷಗಳು ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದವು.

ಬಿಹಾರದಲ್ಲಿ ಲೋಕಸಭಾ ಚುನಾವಣೆ 2024; ಹೈಪ್ರೊಫೈಲ್ ಕ್ಷೇತ್ರಗಳು

ಪಾಟ್ನಾ ಸಾಹಿಬ್‌ - ರವಿಶಂಕರ ಪ್ರಸಾದ್ (ಬಿಜೆಪಿ)

ಪಾಟಲಿ ಪುತ್ರ - ಮಿಸಾ ಭಾರತಿ (ಆರ್‌ಜೆಡಿ), ರಾಮಕೃಪಾಲ್ ಯಾದವ್ (ಬಿಜೆಪಿ

ಗಯಾ - ಜಿತಿನ್ ರಾಮ್ ಮಾಂಜಿ (ಎನ್‌ಡಿಎ)

ಬೇಗು ಸರಾಯಿ- ಗಿರಿರಾಜ್ ಸಿಂಗ್ (ಬಿಜೆಪಿ)

ಸಿವಾನ್ - ಹಿನಾ ಸಾಹಬ್ (ಮೊಹಮ್ಮದ್ ಶಹಾಬುದ್ದೀನ್ ಪತ್ನಿ)

ಕಾರಕಟ್‌ - ಉಪೇಂದ್ರ ಕುಶ್ವಾಹ (ಬಿಜೆಪಿ), ಪವನ್ ಸಿಂಗ್ (ಭೋಜ್‌ಪುರಿ ಗಾಯಕ, ನಟ)

ಲೋಕಸಭಾ ಚುನಾವಣೆ; ಬಿಹಾರದ ರಾಜಕೀಯ ಚಿತ್ರಣ

ಬಿಹಾರದ 40 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಮತದಾನ ನಡೆಯಿತು. ಎನ್‌ಡಿಎ ಮೈತ್ರಿಕೂಟದ ಬಿಜೆಪಿ 17, ಜೆಡಿಯು 16, ಲೋಕ ಜನಶಕ್ತಿ ಪಾರ್ಟಿ(ರಾಮ್ ವಿಲಾಸ್ ಪಾಸ್ವಾನ್‌) 5, ಹಿಂದೂಸ್ತಾನಿ ಅವಾಮ್ ಮೋರ್ಚಾ 1, ರಾಷ್ಟ್ರೀಯ ಲೋಕ ಮೋರ್ಚಾ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

ಇನ್ನು ಇಂಡಿಯಾ ಗುಂಪಿನ ಆರ್‌ಜೆಡಿ 23, ಕಾಂಗ್ರೆಸ್ 9, ಸಿಪಿಐ (ಎಂಎಲ್‌) ಲಿಬರೇಷನ್ 3, ವಿಕಾಸಶೀಲ್ ಇನ್‌ಸಾನ್ ಪಾರ್ಟಿ 3, ಸಿಪಿಐ (ಎಂ) ಮತ್ತು ಸಿಪಿಐ ತಲಾ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇವೆರಡೂ ಮೈತ್ರಿಗೆ ಹೊರತುಪಡಿಸಿ ಎಐಎಂಐಎಂ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

2014ರ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಕಡಿದುಕೊಂಡಿದ್ದ ಜೆಡಿಯು ಒಂಟಿಯಾಗಿ ಸ್ಪರ್ಧಿಸಿತ್ತು. ಆದರೆ ಕಳೆದ ಚುನಾವಣೆ ವೇಳೆ ಮತ್ತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಕಳೆದ (2019) ಚುನಾವಣೆಯಲ್ಲಿ ಎನ್‌ಡಿಎಗೆ ಪ್ರತಿಸ್ಪರ್ಧಿಯಾಗಿ ಯುಪಿಎ ಮಾತ್ರವಲ್ಲದೇ ಎಡರಂಗ ಮೈತ್ರಿಯ ಸವಾಲು ಕೂಡ ಇತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಎಲ್‌ಜೆಪಿ 6 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ 6 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಮಹಾಗಟಬಂಧನ ಮಾಡಿಕೊಂಡ ಆರ್‌ಜೆಡಿ ಸ್ಪರ್ಧಿಸಿದ 19 ಕ್ಷೇತ್ರಗಳಲ್ಲೂ ಸೋಲನುಭವಿಸಿತು. ಕಾಂಗ್ರೆಸ್ ಪಕ್ಷ 1 ರಲ್ಲಿ ಗೆಲುವು ಕಂಡಿದೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.