ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ನಿಮಗೆ ಹಂಚಿಕೆಯಾಯ್ತ? ಲಿಸ್ಟಿಂಗ್ ದಿನಾಂಕ, ಸಮಯ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ
Hyundai Motor India IPO Listing: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಐಪಿಒ ಅಕ್ಟೋಬರ್ 22ರಂದು ಭಾರತೀಯ ಷೇರುಪೇಟೆಯಲ್ಲಿ ಲಿಸ್ಟ್ ಆಗಲಿದೆ. ಬಿಎಸ್‌ಇ ಎನ್‌ಎಸ್‌ಇಯಲ್ಲಿ ಬೆಳಗ್ಗೆ 10 ಗಂಟೆಗೆ ಲಿಸ್ಟ್ ಆಗಲಿದೆ.
Hyundai Motor India IPO Listing: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಐಪಿಒ ಅಕ್ಟೋಬರ್ 22ರಂದು ಭಾರತೀಯ ಷೇರುಪೇಟೆಯಲ್ಲಿ ಲಿಸ್ಟ್ ಆಗಲಿದೆ. ವಾಹನ ಕಂಪನಿಯ ಈ ಆರಂಭಿಕ ಷೇರು ವಿತಣೆಯು ಭಾರತದ ಇತ್ತೀಚಿನ ಬೃಹತ್ ಆರಂಬಿಕ ಷೇರು ಮಾರಾಟವಾಗಿದೆ. ಅಕ್ಟೋಬರ್ 17ರವರೆಗೆ ಈ ಐಪಿಒಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈ ಐಪಿಒಗೆ 2.37 ಪಟ್ಟು ಹೆಚ್ಚು ಅರ್ಜಿ ಸಲ್ಲಿಕೆಯಾಗಿತ್ತು. ರಿಟೇಲ್ ವಿಭಾಗವು ಶೇಕಡ 50ರಷ್ಟು ಸಬ್‌ಸ್ಕ್ರಿಪ್ಷನ್ ಆಗಿತ್ತು. ಅಂದಹಾಗೆ, ಈ ಐಪಿಒ ನಾಳೆ ಲಿಸ್ಟ್ ಆಗಲಿದೆ. ಈಗಾಗಲೇ ಹ್ಯುಂಡೈ ಐಪಿಒ ಹಂಚಿಕೆಗೊಂಡವರು "ಲಾಭವಾಗಬಹುದೇ?" ಎಂದು ಆಲೋಚಿಸುತ್ತಿದ್ದಾರೆ.
ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಲಿಸ್ಟಿಂಗ್ ದಿನಾಂಕ ಮತ್ತು ಸಮಯ
ಹ್ಯುಂಡ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಅಕ್ಟೋಬರ್ 22ರಂದು ಲಿಸ್ಟ್ ಆಗಲಿದೆ.
ಹ್ಯುಂಡೈ ಐಪಿಒ ಚಂದಾದಾರಿಕೆ
ಮೂರು ದಿನಗಳಲ್ಲಿ ಅಂದರೆ ಅಕ್ಟೋಬರ್ 15ರಿಂದ ಅಕ್ಟೋಬರ್ 17ರವರೆಗೆ ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒಒ 2.37 ಪಟ್ಟು ಚಂದಾದಾರಿಕೆಯಾಗಿತ್ತು. ಅರ್ಹ ಸಾಂಸ್ಥಿಕ ಖರೀದಿದಾರರು (ಲಭ್ಯವಿದ್ದ 2.82 ಕೋಟಿ ಷೇರು ಪ್ರಮಾಣ ) 19.72 ಕೋಟಿ ಷೇರುಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ವಿಭಾಗದ ಚಂದಾದಾರಿಕೆ 6.97 ಪಟ್ಟು ತಲುಪಿದೆ. ಸಾಂಸ್ಥಿಕೇತರ ಹೂಡಿಕೆದಾರರು ಶೇಕಡ 60ರಷ್ಟು ಅರ್ಜಿ ಸಲ್ಲಿಸಿದಾರೆ. ರಿಟೇಲ್ ಹೂಡಿಕೆದಾರರು ತಮಗೆ ಮೀಸಲಿಟ್ಟ ಷೇರುಗಳಲ್ಲಿ ಶೇಕಡ 50ಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ಉದ್ಯೋಗಿಗಳ ಕೋಟಾಕ್ಕೆ ಉದ್ಯೋಗಿಗಳು 1.74 ಪಟ್ಟು ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 18ರಂದು ಅರ್ಹರಿಗೆ ಷೇರು ಹಂಚಿಕೆ ಮಾಡಲಾಗಿತ್ತು. ಈ ಐಪಿಒದ ಜಿಎಂಪಿ ಆರಂಭದಲ್ಲಿ ಏರಿಕೆ ಕಂಡಿತ್ತು. ಬಳಿಕ ಕುಸಿದಿತ್ತು. ಇದರಿಂದ ಸಾಕಷ್ಟು ಜನರು ಐಪಿಒ ಖರೀದಿಗೆ ಹಿಂಜರಿದ್ದರು. ಈಗ ಜಿಎಂಪಿ ತುಸು ಏರಿಕೆ ಕಂಡಿದೆ.
ಹ್ಯುಂಡೈ ಐಪಿಒ ಕುರಿತು ವಿವರ
ಹುಂಡೈ ಮೋಟಾರ್‌ನ 27,870.16 ಕೋಟಿ ರೂ. ಗಾತ್ರದ ಆರಂಭಿಕ ಷೇರು ವಿತರಣೆಯಾಗಿದೆ. ಅಂದರೆ, 14.22 ಕೋಟಿ ಷೇರುಗಳ ಮಾರಾಟವಾಗಿದೆ. ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಬಳಿಕದ ಬೃಹತ್ ಗಾತ್ರದ ಐಪಿಒ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹ್ಯುಂಡೈ ಐಪಿಒ ಅಕ್ಟೋಬರ್ 15, 2024ರಂದು ಆರಂಭವಾಗಿ ಅಕ್ಟೋಬರ್ 17, 2024ರವರೆಗೆ ಬಿಡ್ ಸಲ್ಲಿಸಲು ಅವಕಾಶವಿತ್ತು. ಅಕ್ಟೋಬರ್ 18ರಂದು ಐಪಿಒ ಹಂಚಿಕೆಯಾಗಿತ್ತು. ಅಕ್ಟೋಬರ್ 22, 2024ರಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಲಿದೆ. ಅಲೋಟ್‌ಮೆಂಟ್ ಆದವರು ಎಷ್ಟು ದರದಲ್ಲಿ ಲಿಸ್ಟ್ ಆಗಲಿದೆ ಎಂಬ ಕಾತರದಲ್ಲಿದ್ದಾರೆ. ಹ್ಯುಂಡೈ ಮೋಟಾರ್ ಐಪಿಒ ದರ ಪ್ರತಿ ಷೇರಿಗೆ 1865 ರೂಪಾಯಿಯಿಂದ 1960 ರೂವರೆಗೆ ನಿಗದಿಪಡಿಸಿತ್ತು.
ಲೀಡ್ ಮ್ಯಾನೇಜರ್‌ಗಳು: ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್ & ಕ್ಯಾಪಿಟಲ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್, ಜೆಪಿ ಮೋರ್ಗಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮೋರ್ಗಾನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್.