IDBI Recruitment: ಐಡಿಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್
IDBI Bank SCO Recruitment; ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಖುಷಿ ಸುದ್ದಿ. ಕೇಂದ್ರ ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್ ತನ್ನಲ್ಲಿರುವ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರ ಪೂರ್ಣ ವಿವರ ಮತ್ತು ಅರ್ಜಿ ಸಲ್ಲಿಸಲು ಬೇಕಾದ ಡೈರೆಕ್ಟ್ ಲಿಂಕ್ ಇಲ್ಲಿದೆ.
ಬೆಂಗಳೂರು/ನವದೆಹಲಿ: ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳ ಪೈಕಿ ಸೇವಾ ಕ್ಷೇತ್ರ ಪ್ರಮುಖವಾದುದು. ಇದರಲ್ಲೇ ಬ್ಯಾಂಕಿಂಗ್ ಕೂಡ ಸೇರಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಐಡಿಬಿಐ ಬ್ಯಾಂಕ್ ಸದ್ಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ನೀವು ಗಮನಿಸಿದರೆ ನಮ್ಮ ಸುತ್ತಮುತ್ತ ಬ್ಯಾಂಕ್ ಉದ್ಯೋಗ ಸೇರಬೇಕು ಎಂದು ಪ್ರಯತ್ನಿಸುತ್ತಿರುವವರು ಅನೇಕರು ಇರಬಹುದು. ಈ ಸುದ್ದಿಯನ್ನು ಅವರಿಗೆ ತಲುಪಿಸಿ ನೀವು ಕೂಡ ಅವರ ಕನಸು ನನಸು ಮಾಡುವುದಕ್ಕೆ ನೆರವಾಗಬಹುದು. ಅಂದ ಹಾಗೆ ಈ ನೇಮಕ ಅಭಿಯಾನದಲ್ಲಿ ಬ್ಯಾಂಕ್ ಒಟ್ಟು 56 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ಐಡಿಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ
ಐಡಿಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಇದೇ ತಿಂಗಳ 15 ಕೊನೇ ದಿನ. ಅಷ್ಟರೊಳಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೇ ದಿನ - ಸೆಪ್ಟೆಂಬರ್ 15
ಒಟ್ಟು ಖಾಲಿ ಹುದ್ದೆಗಳು 56
ಅಸ್ಟಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆ - 25
ಮ್ಯಾನೇಜರ್ ಗ್ರೇಡ್ ಬಿ ಹುದ್ದೆ - 31
ಅರ್ಹತಾ ಮಾನದಂಡ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ - ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರ ಮತ್ತು ಅದರ ನಿಯಂತ್ರಣ ಸಂಸ್ಥೆಗಳಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರಬೇಕು. ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ 28 ರಿಂದ 40 ವರ್ಷಗಳ ನಡುವೆ ಇರಬೇಕು.
ಮ್ಯಾನೇಜರ್ ಅಥವಾ ವ್ಯವಸ್ಥಾಪಕ ಹುದ್ದೆಗೆ - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ಸರ್ಕಾರ ಮತ್ತು ಅದರ ನಿಯಂತ್ರಣ ಸಂಸ್ಥೆಗಳಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ.
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ ವಿವರ: ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಘೋಷಿಸಿದಂತೆ ಮತ್ತು ಸಲ್ಲಿಸಿದ ದಾಖಲೆಗಳ ಪ್ರಕಾರ ವಯಸ್ಸು, ಶೈಕ್ಷಣಿಕ ಅರ್ಹತೆಗಳು ಮತ್ತು ಕೆಲಸದ ಅನುಭವ ಇತ್ಯಾದಿಗಳ ನಿಗದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಅದಾಗಿ, ಹೆಚ್ಚು ಸೂಕ್ತ ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನಕ್ಕೆ ಕರೆಯುತ್ತಾರೆ. ಅಲ್ಲಿ ಆಯ್ಕೆ ಅಂತಿಮವಾಗುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದವರು, ಒಬಿಸಿ ಮತ್ತು ಇಡಬ್ಲ್ಯುಎಸ್ ಕೋಟಾದವರು ಅರ್ಜಿ ಶುಲ್ಕವಾಗಿ ಜಿಎಸ್‌ಟಿ ಸೇರಿ 1000 ರೂಪಾಯಿ ಪಾವತಿಸಬೇಕು. ಎಸ್‌ಸಿ/ ಎಸ್‌ಟಿ ವರ್ಗದ ಅಭ್ಯರ್ಥಿಗಳು ಜಿಎಸ್‌ಟಿ ಸೇರಿ 200 ರೂಪಾಯಿ ಪಾವತಿಸಬೇಕು. ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮೂಲಕವೂ ಈ ಶುಲ್ಕ ಪಾವತಿಸಬಹುದಾಗಿದೆ.
ಐಡಿಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ
1) ಐಡಿಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.inಗೆ ಭೇಟಿ ನೀಡಿ
2) ಅಲ್ಲಿ ಹೋಮ್ ಪೇಜ್‌ನಲ್ಲಿರುವ ಕರಿಯರ್ಸ್ ಎಂಬ ಲಿಂಕ್ ಕ್ಲಿಕ್ ಮಾಡಿ
3) ಕೂಡಲೇ ಹೊಸ ಪುಟ ತೆರೆದುಕೊಳ್ಳುತ್ತದೆ. ಅದು IDBI Bank SCO Recruitment 2024 ಎಂಬ ಲಿಂಕ್ ಇರುವ ಪುಟಕ್ಕೆ ಕರೆದೊಯ್ಯುತ್ತದೆ.
4) ಅಲ್ಲಿ ಲಾಗಿನ್ ವಿವರ ದಾಖಲಿಸಿ, ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ, ನೇಮಕಾತಿ ಸಂಬಂಧಿಸಿದ ಖಾತೆ ತೆರೆಯಿರಿ.
5) ಅದಾಗುತ್ತಿದ್ದಂತೆ, ಅರ್ಜಿ ನಮೂನೆ ಕಾಣಿಸುತ್ತದೆ. ಅದನ್ನು ಭರ್ತಿ ಮಾಡಬೇಕು.
6) ಅರ್ಜಿ ಶುಲ್ಕ ಪಾವತಿಸಬೇಕು
7) ಇಷ್ಟಾದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ, ಆ ಪುಟವನ್ನು ಡೌನ್‌ಲೋಡ್ ಮಾಡಿ.
8) ಡೌನ್‌ಲೋಡ್ ಮಾಡಿದ ಪುಟವನ್ನು ಪ್ರಿಂಟ್ ಮಾಡಿ ಒಂದು ಪ್ರತಿ ಭವಿಷ್ಯದ ಅಗತ್ಯಕ್ಕೆ ಇಟ್ಟುಕೊಳ್ಳಿ. ಡೌನ್‌ಲೋಡ್ ಮಾಡಿದ ಡಿಜಿಟಲ್ ಪ್ರತಿಯನ್ನು ಒಂದು ಕಡೆ ಸೇವ್ ಮಾಡಿ.