ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fact Check: ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹಿಂದೆ ಇರುವ ಫೋಟೋ ಯೇಸುಕ್ರಿಸ್ತನದ್ದಲ್ಲ

Fact Check: ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹಿಂದೆ ಇರುವ ಫೋಟೋ ಯೇಸುಕ್ರಿಸ್ತನದ್ದಲ್ಲ

ಫ್ಯಾಕ್ಟ್‌ಚೆಕ್: ಈ ಕಲಾಕೃತಿ 'ಮಡೋನಾ ಒರಿಫ್ಲಾಮಾ' ಎಂದು ಹೆಸರಿಸಲಾದ ರಷ್ಯಾದ ಕಲಾವಿದ ನಿಕೋಲಸ್ ರೋರಿಚ್ ಅವರದ್ದು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ ಚಲಾಯಿಸಿದ ನಂತರ ಕೈಬೆರಳಿನ ಶಾಯಿ ತೋರಿಸುತ್ತಿರುವ ಫೋಟೊದಲ್ಲಿ ಇದನ್ನು ಯೇಸುಕ್ರಿಯನ ಚಿತ್ರ ಎಂದು ಹೇಳಲಾಗಿದೆ. ಇದು ಸುಳ್ಳು ಎಂದು ಫ್ಯಾಕ್ಟ್‌ಚೆಕ್ ನಂತರ ತಿಳಿದಿದೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ ಚಲಾಯಿಸಿದ ನಂತರ ಹಂಚಿಕೊಂಡ ಫೋಟೊ ಇದು. ಈ ಫೋಟದ ಹಿನ್ನೆಲೆಯಲ್ಲಿ ಕಾಣಿಸಿದ್ದ ಕಲಾಕೃತಿಯನ್ನು ಹಲವರು ತಪ್ಪಾಗಿ ವ್ಯಾಖ್ಯಾನಿಸಿದ್ದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ ಚಲಾಯಿಸಿದ ನಂತರ ಹಂಚಿಕೊಂಡ ಫೋಟೊ ಇದು. ಈ ಫೋಟದ ಹಿನ್ನೆಲೆಯಲ್ಲಿ ಕಾಣಿಸಿದ್ದ ಕಲಾಕೃತಿಯನ್ನು ಹಲವರು ತಪ್ಪಾಗಿ ವ್ಯಾಖ್ಯಾನಿಸಿದ್ದರು.

ಭಾರತದಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆ ಕಾವೇರಿದೆ. ಚುನಾವಣೆಯ ಆರನೇ ಹಂತದಲ್ಲಿ ನವದೆಹಲಿಯಲ್ಲಿ ಮತ ಚಲಾಯಿಸಿದ ನಂತರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ತಮ್ಮ ಶಾಯಿಯ ಬೆರಳುಗಳನ್ನು ತೋರಿಸುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಿನ್ನೆಲೆಯಲ್ಲಿರುವುದು ಯೇಸುಕ್ರಿಸ್ತನ ಕಲಾಕೃತಿ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಫೋಟೊವನ್ನು 'ನ್ಯೂಸ್‌ಮೀಟರ್' ಜಾಲತಾಣವು ಫ್ಯಾಕ್ಟ್‌ಚೆಕ್ ತಂತ್ರಗಳ ಮೂಲಕ ಪರಿಶೀಲಿಸಿತು. ಈ ಚೌಕಟ್ಟಿನಲ್ಲಿರುವ ಚಿತ್ರಕಲೆಯು ಬಿಳಿ ಬಣ್ಣದ ಬ್ಯಾನರ್ ಅನ್ನು ಹಿಡಿದಿರುವ ವ್ಯಕ್ತಿಯನ್ನು ತೋರಿಸುತ್ತದೆ ಹಾಗೂ ಅದರ ಮೇಲೆ ವೃತ್ತದೊಳಗೆ ಮೂರು ಕೆಂಪು ಚುಕ್ಕೆಗಳನ್ನು ನೋಡಬಹುದು.

ಟ್ರೆಂಡಿಂಗ್​ ಸುದ್ದಿ

ತಪ್ಪು ಮಾಹಿತಿಯನ್ನು ಹರಡಲು ಹೆಸರುವಾಸಿಯಾದ 'Mr Sinha' ಎಂಬ ಹೆಸರಿನ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಿಂದ ಹಂಚಿಕೊಂಡ ಅಂತಹ ಒಂದು ಪೋಸ್ಟ್‌ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೀಗೆ ಹೇಳುತ್ತದೆ, "ಜನಿವಾರಧಾರಿ ಬ್ರಾಹ್ಮಣ (ಹಿಂದೂ ಬ್ರಾಹ್ಮಣ ಮತ್ತು ಕ್ಷತ್ರಿಯ ಸಮುದಾಯಗಳು ಧರಿಸಿರುವ ಪವಿತ್ರ ದಾರ) ರಾಹುಲ್ ಗಾಂಧಿ ಅವರ ಕೋಣೆಯಲ್ಲಿ ಯೇಸುವಿನ ಚಿತ್ರವಿದೆ. ಕೋಣೆಯಲ್ಲಿ ಒಂದು ಹಿಂದೂ ದೇವರುಗಳ ಚಿತ್ರವಿಲ್ಲ."ಈ ಫ್ಯಾಕ್ಟ್- ಚೆಕ್ ಬರೆಯುವ ಸಮಯದಲ್ಲಿ ಪೋಸ್ಟ್‌ 1.2 ಲಕ್ಷ ವೀಕ್ಷಣೆ ಪಡೆದಿದೆ. ಹಲವರು ಇದೇ ರೀತಿಯ ಹೇಳಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂತಹ ಕೆಲ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ನೋಡಬಹುದು.

ಕಲಾಕೃತಿಯ ಮೂಲ ಯಾವುದು?

ಈ ಚೌಕಟ್ಟಿನಲ್ಲಿರುವ ಕಲಾಕೃತಿಯು ಮಡೋನಾ ಒರಿಫ್ಲಾಮಾ ಎಂಬ ಪೇಂಟಿಂಗ್ ಅನ್ನು ತೋರಿಸುತ್ತದೆ. ಇದನ್ನು ರಚಿಸಿದವರು ರಷ್ಯಾದ ಕಲಾವಿದ ನಿಕೋಲಸ್ ರೋರಿಚ್. ಸಂಸ್ಕೃತಿಯಲ್ಲಿ ಮಾನವ ಏಕತೆಯನ್ನು ಇದು ಸಂಕೇತಿಸುತ್ತದೆ ಎಂದು 'ಲಾಜಿಕಲಿ ಫ್ಯಾಕ್ಟ್ಸ್' ಕಂಡು ಹಿಡಿದಿದೆ.

ವಾಸ್ತವಾಂಶಗಳೇನು?

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇರುವ ಈ ವೈರಲ್ ಚಿತ್ರದ ಹಿನ್ನೆಲೆಯಲ್ಲಿ ಕಂಡು ಬಂದಿರುವ ಪೇಂಟಿಂಗ್‌ನ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಗೆಟ್ಟಿ ಇಮೇಜಸ್‌ನಲ್ಲಿ ಪೋಸ್ಟ್‌ ಮಾಡಲಾದ ಚಿತ್ರ ಕಂಡುಬಂತು. "ಮಡೋನಾ ಒರಿಫ್ಲಾಮಾ, 1932 ನ್ಯೂಯಾರ್ಕ್‌ನ ನಿಕೋಲಸ್ ರೋರಿಚ್ ಮ್ಯೂಸಿಯಂ ಸಂಗ್ರಹದಲ್ಲಿ ಈ ಕಲಾಕೃತಿ ಕಂಡುಬಂದಿದೆ" ಎಂದು ಚಿತ್ರ ಶೀರ್ಷಿಕೆ ಹೇಳುತ್ತದೆ.

ಕಲಾವಿದರ ವೆಬ್‌ಸೈಟ್‌ನಲ್ಲಿ ವರ್ಣಚಿತ್ರದ ವಿವರವಾದ ವಿವರಣೆಯಿದೆ. ಶ್ವೇತವರ್ಣದ ಹಿನ್ನೆಲೆಯಲ್ಲಿ ಮೂರು ಕೆಂಪು ಚುಕ್ಕೆಗಳು ಮತ್ತು ವೃತ್ತವನ್ನು ರೋರಿಚ್ ಅವರು 'ಬ್ಯಾನರ್ ಆಫ್ ಪೀಸ್' ಎಂದು ಕರೆದಿದ್ದರು. ಇದು ಸಂಸ್ಕೃತಿಯಲ್ಲಿ ಏಕತೆಯನ್ನು ಸಂಕೇತಿಸುತ್ತದೆ ಎಂದು ವೆಬ್‌ಸೈಟ್ ವಿವರಿಸಿದೆ. ಮೊದಲನೆಯ ಮಹಾಯುದ್ಧದಿಂದ ಉಂಟಾದ ವಿನಾಶದಿಂದ ಸೃಜನಶೀಲ ಚಟುವಟಿಕೆಗಳು, ವಿಶ್ವವಿದ್ಯಾನಿಲಯಗಳು, ಗ್ರಂಥಾಲಯಗಳು, ಆಸ್ಪತ್ರೆಗಳು, ಸಂಗೀತ ಕಾರ್ಯಕ್ರಮಗಳ ಸಭಾಂಗಣಗಳು ಮತ್ತು ಥಿಯೇಟರ್‌ಗಳನ್ನು ಸಂರಕ್ಷಿಸಲು ಬ್ಯಾನರ್ ಆಫ್ ಪೀಸ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವೆಬ್‌ಸೈಟ್‌ ಉಲ್ಲೇಖಿಸಿದೆ.

ವೆಬ್‌ಸೈಟ್‌ನಲ್ಲಿರುವ ವಿವರಗಳ ಪ್ರಕಾರ ರೋರಿಚ್ ವೃತ್ತವು ಸಂಸ್ಕೃತಿಯ ಸಂಪೂರ್ಣತೆಯನ್ನು ಸಂಕೇತಿಸುತ್ತದೆ. ಮತ್ತು ಅದರಲ್ಲಿರುವ ಮೂರು ಚುಕ್ಕೆಗಳು ಕಲೆ, ವಿಜ್ಞಾನ ಮತ್ತು ಧರ್ಮವನ್ನು ಸಂಕೇತಿಸುತ್ತವೆ. 1960 ರಿಂದ ನಿಕೋಲಸ್ ರೋರಿಚ್ ಮ್ಯೂಸಿಯಂಗೆ ಈ ಕಲಾಕೃತಿಯನ್ನು ಸಾಲವಾಗಿ ನೀಡಲಾಗಿದೆ.

ನಿಕೋಲಸ್ ರೋರಿಚ್ ಮ್ಯೂಸಿಯಂನ ಫೇಸ್‌ಬುಕ್ ಪುಟವು ಕಲಾಕೃತಿಯನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. 'ಮೂರು ಚುಕ್ಕೆಗಳ ಚಿಹ್ನೆಯ ಅರ್ಥವೇನೆಂದು ಎಂದಾದರೂ ಆಶ್ಚರ್ಯಪಡುತ್ತೀರಾ? ಇದು ಈ ವರ್ಣಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ, "ಮಡೋನಾ ಒರಿಫ್ಲಾಮಾ" (1932), ಮತ್ತು ರೋರಿಚ್ ಒಪ್ಪಂದ ಮತ್ತು ಶಾಂತಿಯ ಬ್ಯಾನರ್‌ನ ಸಂಕೇತವಾಗಿ' ಎಂದು ಹೇಳಲಾಗಿದೆ.

ಇದು ವಾಸ್ತವ

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವೈರಲ್ ಚಿತ್ರದಲ್ಲಿರುವ ಪೇಂಟಿಂಗ್ ವಾಸ್ತವವಾಗಿ ಮಡೋನಾ ಒರಿಫ್ಲಾಮಾ ಹೆಸರಿನ ಕಲಾಕೃತಿಯಾಗಿದೆ. ಇದನ್ನು ಯೇಸುಕ್ರಿಸ್ತನ ಫೋಟೋ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು 'ಲಾಜಿಕಲಿ ಫ್ಯಾಕ್ಸ್ಟ್' ಜಾಲತಾಣವು ತಿಳಿಸಿದೆ.

ಓದುಗರ ಗಮನಕ್ಕೆ

ಈ ಬರಹವನ್ನು ‘ಶಕ್ತಿ ಕಲೆಕ್ಟಿವ್‌’ನ ಭಾಗವಾದ ನ್ಯೂಸ್‌ಚೆಕರ್ ಪ್ರಕಟಿಸಿದ್ದಾರೆ. ಶೀರ್ಷಿಕೆ / ಉಲ್ಲೇಖ / ಪರಿಚಯದ ಭಾಗ, ಕರ್ನಾಟಕದಲ್ಲಿ ವೈರಲ್ ಆಗಿದ್ದ ವಿಡಿಯೊ ಸೇರ್ಪಡೆ ಹೊರತುಪಡಿಸಿದರೆ ಇಡೀ ಬರಹವನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಸಿಬ್ಬಂದಿ ಯಥಾವತ್ತಾಗಿ ಮರುಪ್ರಕಟಿಸಿದ್ದಾರೆ. ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಟಿ20 ವರ್ಲ್ಡ್‌ಕಪ್ 2024