ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾ, 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ ಎಸ್‌ಬಿಐ-govt jobs sbi sco recruitment 2024 apply for 1497 deputy manger assistant manager posts bank jobs uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾ, 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ ಎಸ್‌ಬಿಐ

ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾ, 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ ಎಸ್‌ಬಿಐ

ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾದರೆ ನಿಮಗೊಂದು ಖುಷಿ ಸುದ್ದಿ. ಭಾರತದ ಮುಂಚೂಣಿ ಬ್ಯಾಂಕ್ ಆಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ. ಅದರ ವಿವರ ಹೀಗಿದೆ.

ಎಸ್‌ಬಿಐ ತನ್ನಲ್ಲಿರುವ 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ. (ಸಾಂಕೇತಿಕ ಚಿತ್ರ)
ಎಸ್‌ಬಿಐ ತನ್ನಲ್ಲಿರುವ 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ. (ಸಾಂಕೇತಿಕ ಚಿತ್ರ) (sbi)

ಬೆಂಗಳೂರು: ಸರ್ಕಾರಿ ಉದ್ಯೋಗ, ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇರುವವರಿಗೊಂದು ಖುಷಿ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನಲ್ಲಿರುವ 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ.

ಈ ಹುದ್ದೆಗಳನ್ನು ಅದು ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆ ಎಂದು ಪ್ರಕಟಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡೆಪ್ಯುಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದಕ್ಕೆ ಅದು ಅವಕಾಶ ಕಲ್ಪಿಸಿದೆ. ಅಂದ ಹಾಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4 ಎಂಬುದನ್ನು ಮರೆಯಬೇಡಿ. ಅಷ್ಟರೊಳಗೆ ಅರ್ಜಿ ಸಲ್ಲಿಸಿಬಿಡಿ. ಅದಕ್ಕೂ ಮೊದಲು ಈ ವಿವರಗಳನ್ನು ಒಮ್ಮೆ ಗಮನಿಸಿ.

ಎಸ್‌ಬಿಐ ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗಳ ವಿವರ

ಎಸ್‌ಬಿಐನ ವಿವಿಧ ಶಾಖೆಗಳಲ್ಲಿ ಖಾಲಿ ಇರುವಂತಹ 1497 ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಈಗ ನೇಮಕಾತಿ ಅಧಿಸೂಚನೆ ಪ್ರಕಟಿಸಿರುವಂಥದ್ದು. ಇದರಂತೆ, ಹುದ್ದೆಗಳ ವಿವರ ಹೀಗಿದೆ.

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) - ಯೋಜನಾ ನಿರ್ವಹಣೆ ಮತ್ತು ವಿತರಣೆ- 187 ಹುದ್ದೆಗಳು

ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) - ಇನ್ಫ್ರಾ ಸಪೋರ್ಟ್‌ ಮತ್ತು ಕ್ಲೌಡ್ ಆಪರೇಷನ್ಸ್- 412 ಹುದ್ದೆಗಳು

ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) - ನೆಟ್‌ವರ್ಕಿಂಗ್ ಆಪರೇಷನ್ಸ್‌ - 80 ಹುದ್ದೆಗಳು

ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) - ಐಟಿ ಆರ್ಕಿಟೆಕ್ಟ್:- 27 ಹುದ್ದೆಗಳು

ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) - ಮಾಹಿತಿ ಭದ್ರತೆ: 7 ಹುದ್ದೆಗಳು

ಸಹಾಯಕ ವ್ಯವಸ್ಥಾಪಕ (ಸಿಸ್ಟಮ್): 784 ಹುದ್ದೆಗಳು

ಎಸ್‌ಬಿಐ ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಪೆಷಲಿಸ್ಟ್ ಕೆಡರ್ ಆಫೀಸರ್‌ ನೇಮಕಾತಿಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಅರ್ಜಿ ಸಲ್ಲಿಸುವ ಸರಳ ಹಂತಗಳು ಹೀಗಿವೆ -

1) ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ (sbi.co.in) ಭೇಟಿ ನೀಡಿ

2) ಮುಖಪುಟದಲ್ಲಿ ಲಭ್ಯವಿರುವ "ಕೆರಿಯರ್ಸ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ

3) ಎಸ್‌ಬಿಐ ಲೋಗೋ ಪಕ್ಕದಲ್ಲೇ ಇರುವ ಜಾಯಿನ್ ಎಸ್‌ಬಿಐ ಮೆನು ಕ್ಲಿಕ್ ಮಾಡಿ

4) ಅದರಲ್ಲಿ ಕರೆಂಟ್ ಓಪನಿಂಗ್ಸ್ ಅನ್ನು ಕ್ಲಿಕ್ ಮಾಡಿ

5) ಅಲ್ಲಿ “RECRUITMENT OF SPECIALIST CADRE OFFICERS ON REGULAR BASIS DEPUTY MANAGER (SYSTEMS) & ASSISTANT MANAGER (SYSTEM)” ಕ್ಲಿಕ್ ಮಾಡಿ. ಅದರಲ್ಲಿ ಜಾಹೀರಾತು ಮತ್ತು ಅಪ್ಲೈ ಆನ್‌ಲೈನ್ ಎಂಬ ಎರಡು ಲಿಂಕ್‌ಗಳು ಕಾಣುತ್ತವೆ.

6) ಜಾಹೀರಾತು ಪೂರ್ತಿಯಾಗಿ ಓದಿಕೊಂಡು ಅಪ್ಲೈ ಆನ್‌ಲೈನ್ ಕ್ಲಿಕ್ ಮಾಡಿ

7) ಹೊಸದಾಗಿ ಅರ್ಜಿ ಸಲ್ಲಿಸುವವರಾದರೆ ಎಸ್‌ಬಿಐ ಕೆರಿಯರ್ ಸೈಟ್‌ನಲ್ಲಿ ಖಾತೆ ತೆರೆದು ನಂತರ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಖಾತೆ ಹೊಂದಿದ್ದರೆ ಲಾಗಿನ್ ಆಗಿ ಹುದ್ದೆಗೆ ಅರ್ಜಿ ಸಲ್ಲಿಸಿ.

ಅರ್ಹತೆಯ ಮಾನದಂಡಗಳು: ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿಯ ಅವಶ್ಯಕತೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ಎಸ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು. ಇದು ಸರ್ಕಾರಿ ಹುದ್ದೆಯಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಒಬಿಸಿ ವರ್ಗಗಳ ಅಭ್ಯರ್ಥಿಗಳು 750 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಅಧಿಸೂಚನೆ - https://sbi.co.in/documents/77530/43947057/130924-DETAIL+ADV_GITC+REGULAR_SCO_2024-25_15.pdf/0cc2be40-6407-ecdb-3099-effd169f7709?t=1726224993068

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.