ಕನ್ನಡ ಸುದ್ದಿ  /  Nation And-world  /  India News Explained Telangana Election 2023 Voting Date Time Constituencies And Other Details In 5 Points Uks

Explained: ತೆಲಂಗಾಣದಲ್ಲಿ ನ.30ಕ್ಕೆ ಮತದಾನ, ನೀವು ತಿಳಿದಿರಬೇಕಾದ 5 ಅಂಶಗಳು ಹೀಗಿವೆ ನೋಡಿ

ತೆಲಂಗಾಣ ವಿಧಾನಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ಬಂದಿದೆ. ನವೆಂಬರ್ 30ಕ್ಕೆ ಮತದಾನ ನಡೆಯಲಿದೆ. ಈ ರಾಜ್ಯದ ವಿಧಾನ ಸಭಾ ಚುನಾವಣೆ ಕುರಿತ ಮುಖ್ಯ ಅಂಶಗಳ ವಿವರ ಇಲ್ಲಿದೆ. ಗಮನಿಸಿ.

ತೆಲಂಗಾಣ ಚುನಾವಣೆ 2023 (ಸಾಂಕೇತಿಕ ಚಿತ್ರ)
ತೆಲಂಗಾಣ ಚುನಾವಣೆ 2023 (ಸಾಂಕೇತಿಕ ಚಿತ್ರ)

ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೇ ನವೆಂಬರ್ 30ರಂದು ಅಲ್ಲಿ ಮತದಾನ ನಡೆಯಲಿದೆ. ಪ್ರಸ್ತುತ ಕೆ.ಚಂದ್ರಶೇಖರ್ ರಾವ್ (ಕೆಸಿಆರ್‌) ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಆಡಳಿತ ಚುಕ್ಕಾಣಿ ಹಿಡಿದಿದೆ. ಇದು ಮೂರನೇ ಬಾರಿ ಈ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ.

ಕಳೆದ ಎರಡೂ ಚುನಾವಣೆಯಲ್ಲಿ ಕೆಸಿಆರ್ ನಾಯಕತ್ವದ ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರಸಮಿತಿ) ಆಡಳಿತ ಚುಕ್ಕಾಣಿ ಹಿಡಿದಿದೆ. ಆದರೆ ಈ ಬಾರಿ ಈ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಯ ಲಕ್ಷಣ ಗೋಚರಿಸಿದೆ. ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸಿವೆ. ಸದ್ಯ ಅಂತಿಮ ಹಂತದ ಪ್ರಚಾರ ತೀವ್ರಗೊಂಡಿದ್ದು, ಮೆಗಾ ರಾಜಕೀಯ ರ‍್ಯಾಲಿಗಳು ನಡೆಯುತ್ತಿವೆ.

1. ತೆಲಂಗಾಣ ವಿಧಾನಸಭಾ ಚುನಾವಣಾ ಕ್ಷೇತ್ರಗಳು ಎಷ್ಟು

ತೆಲಂಗಾಣದಲ್ಲಿರುವ ವಿಧಾನಸಭಾ ಚುನಾವಣಾ ಕ್ಷೇತ್ರಗಳ ಸಂಖ್ಯೆ 119. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 60 ಸ್ಥಾನ ಗೆದ್ದ ಪಕ್ಷ ಅಧಿಕಾರ ಗದ್ದುಗೆ ಏರಬಹುದು.

2. ತೆಲಂಗಾಣ ಚುನಾವಣಾ ವೇಳಾಪಟ್ಟಿ

ಚುನಾವಣಾ ಅಧಿಸೂಚನೆ ಪ್ರಕಟ - 03.11.2023

ನಾಮಪತ್ರ ಸಲ್ಲಿಕೆಗೆ ಕೊನೇ ದಿನ 10.11.2023

ನಾಮಪತ್ರ ಪರಿಶೀಲನೆ ದಿನ 13.11.2023

ನಾಮಪತ್ರ ಹಿಂಪಡೆಯಲು ಕೊನೇ ದಿನ 15.11.2023

ಮತದಾನದ ದಿನ 30.11.2023

ಮತ ಎಣಿಕೆ ದಿನ - 03.12.2023

3. ಪ್ರಮುಖ ಪಕ್ಷಗಳು ಕೊಟ್ಟಿರುವ ಮುಖ್ಯ ಭರವಸೆಗಳು

ಬಿಆರ್‌ಎಸ್ ಭರವಸೆಗಳು ಹೀಗಿವೆ

 • ರೈತು ಬಂಧು ಸಹಾಯಧನ ಹಂತ ಹಂತವಾಗಿ ಎಕರೆಗೆ 16,000 ರೂಪಾಯಿಗೆ ಏರಿಕೆ
 • ತೆಲಂಗಾಣ ಅನ್ನಪೂರ್ಣ ಯೋಜನೆ - ಎಲ್ಲ ಪಡಿತರ ಚೀಟಿದಾರರಿಗೆ ಉತ್ತಮ ಅಕ್ಕಿ
 • ಆಸರಾ ಪಿಂಚಣಿ ಹೆಚ್ಚಳ. 5,016 ರೂಪಾಯಿಗೆ ಮತ್ತು ವಿಕಲಚೇತನರ ಪಿಂಚಣಿಗಳನ್ನು 6,016 ರೂಪಾಯಿಗೆ ಹೆಚ್ಚಳ ಮಾಡುವ ಭರವಸೆ
 • ಹೈದರಾಬಾದ್‌ನಲ್ಲಿ ಇನ್ನೂ 1 ಲಕ್ಷ 2BHK ಮನೆಗಳ ನಿರ್ಮಾಣ. ಗೃಹ ಲಕ್ಷ್ಮಿ ಯೋಜನೆಯೊಂದಿಗೆ, ಭೂರಹಿತರಿಗೆ ವಸತಿ ಪ್ಲಾಟ್‌ಗಳು ಒದಗಿಸುವುದು
 • ಕೆಸಿಆರ್ ಬಿಮಾ ಯೋಜನೆ - ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳಿಗೆ 5 ಲಕ್ಷ ರೂಪಾಯಿ ವಿಮೆ
 • ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಂತ ಕಟ್ಟಡ
 • ಎಲ್ಲಾ ಅರ್ಹ ಬಡ ಮಹಿಳೆಯರಿಗೆ 400 ರೂಪಾಯಿಗೆ ಸಬ್ಸಿಡಿ ಎಲ್ಪಿಜಿ ಸಿಲಿಂಡರ್
 • ಸೌಭಾಗ್ಯ ಲಕ್ಷ್ಮಿ ಯೋಜನೆಯಂತೆ, ಎಲ್ಲಾ ಅರ್ಹ ಬಡ ಮಹಿಳೆಯರಿಗೆ ತಿಂಗಳಿಗೆ 3,000 ರೂಪಾಯಿ
 • ನಗದು ರಹಿತ ಚಿಕಿತ್ಸೆಗಾಗಿ ಕೆಸಿಆರ್ ಆರೋಗ್ಯ ರಕ್ಷಾ ವೈದ್ಯಕೀಯ ಕವರೇಜ್ ಅನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ

ಕಾಂಗ್ರೆಸ್ ಪಕ್ಷದ ಭರವಸೆಗಳು

 • ಮಹಾಲಕ್ಷ್ಮಿ ಯೋಜನೆ ಪ್ರಕಾರ, ಮಹಿಳೆಯರಿಗೆ 2,500 ರೂಪಾಯಿ ತಿಂಗಳಿಗೆ ಪಾವತಿ.
 • 500 ರೂಪಾಯಿಗೆ ಗ್ಯಾಸ್ ಸಿಲಿಂಡರ್‌
 • ರಾಜ್ಯಾದ್ಯಂತ ಟಿಎಸ್‌ಆರ್‌ಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
 • ಗೃಹಜ್ಯೋತಿ - ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಫ್ರೀ
 • ಇಂದಿರಮ್ಮ ಮನೆ ಯೋಜನೆ ಪ್ರಕಾರ, ಮನೆ ನಿವೇಶನ ಹಂಚಿಕೆ ಮತ್ತು ಸ್ವಂತ ಮನೆ ಇಲ್ಲದವರಿಗೆ 5 ಲಕ್ಷ ರೂ.
 • ಇಂದಿರಮ್ಮ ಮನೆ ಯೋಜನೆ ಪ್ರಕಾರ, ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಗಜ ಜಮೀನು
 • ಯುವ ವಿಕಾಸ ಯೋಜನೆ ಪ್ರಕಾರ, 5 ಲಕ್ಷ ರೂಪಾಯಿ ಗ್ಯಾರೆಂಟಿಯ ವಿದ್ಯಾ ಭರೋಸಾ ಕಾರ್ಡ್ಸ್‌

4 ತೆಲಂಗಾಣ ಚುನಾವಣೆ ಕಣದಲ್ಲಿರುವ ಮುಖ್ಯ ಉಮೇದುವಾರರು ಇವರು

ಕೆ ಚಂದ್ರಶೇಖರ್ ರಾವ್ (ಬಿಆರ್‌ಎಸ್ ಮುಖ್ಯಸ್ಥ): ತೆಲಂಗಾಣದ ಮುಖ್ಯಮಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಈ ಬಾರಿ ಗಜ್ವೇಲ್ ಮತ್ತು ಕಾಮರೆಡ್ಡಿ ಎಂಬ ಎರಡು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗಜ್ವೇಲ್ ಅವರ ತವರು ಕ್ಷೇತ್ರ. ಅಲ್ಲಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಎ ರೇವಂತ್ ರೆಡ್ಡಿ (ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ): ಕೆಸಿಆರ್ ಸ್ಪರ್ಧಿಸುತ್ತಿರುವ ಕಾಮರೆಡ್ಡಿ ಕ್ಷೇತ್ರದಿಂದ ರೇವಂತ್ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ರೆಡ್ಡಿ ಕಾಂಗ್ರೆಸ್‌ನ ಫೈರ್‌ಬ್ರಾಂಡ್ ನಾಯಕರಾಗಿದ್ದು, ತವರು ಕ್ಷೇತ್ರ ಕೊಡಂಗಲ್‌ನಿಂದಲೂ ಸ್ಪರ್ಧಿಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ಬಂಡಿ ಸಂಜಯ್ ಕುಮಾರ್ (ತೆಲಂಗಾಣ ಬಿಜೆಪಿ ಅಧ್ಯಕ್ಷ) : ಕರೀಂನಗರ ವಿಧಾನಸಭಾ ಕ್ಷೇತ್ರದಿಂದ ಬಂಡಿ ಸಂಜಯ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. 2018 ಮತ್ತು 2014 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಪ್ರಬಲ ಪ್ರತಿಸ್ಪರ್ಧಿ ತೆಲಂಗಾಣ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಗಂಗುಲಾ ಕಮಲಾಕರ್ ಅವರನ್ನು ಎದುರಿಸುತ್ತಾರೆ.

5 ತೆಲಂಗಾಣದಲ್ಲಿ ಹಿಂದಿನ 2 ಚುನಾವಣೆ ಮತ್ತು ಫಲಿತಾಂಶ

1. ತೆಲಂಗಾಣದಲ್ಲಿ 2018ರ ಚುನಾವಣೆಯ ಕಿರುನೋಟ

ತೆಲಂಗಾಣದಲ್ಲಿ 2018ರ ಚುನಾವಣೆಯಲ್ಲಿ ವಿಧಾನಸಭೆಯ 119 ಸ್ಥಾನಗಳ ಪೈಕಿ ಟಿಆರ್‌ಎಸ್‌ 87 ಗೆದ್ದುಕೊಂಡಿತ್ತು. ಎರಡನೇ ಬಾರಿಗೆ ಕೆಸಿಆರ್ ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕರಾದರು. ಶೇಕಡ 47 ಮತದಾನವೂ ಟಿಆರ್‌ಎಸ್‌ಗೆ ಲಭಿಸಿತ್ತು. ಕೆಸಿಆರ್‌ ಅವರ ಟಿಆರ್‌ಎಸ್‌ಗೆ ಪರ್ಯಾಯವಾಗಿ ಪ್ರಜಾ ಕೂಟಮಿ ಎಂಬ ಮೈತ್ರಿ ಎದುರಾಳಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ, ತೆಲುಗು ದೇಶಂ ಪಾರ್ಟಿ (ಟಿಡಿಪಿ), ತೆಲಂಗಾಣ ಜನ ಸಮಿತಿ, ಸಿಬಿಐ ಗಳಿದ್ದು, 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದವು. ಇನ್ನುಳಿದಂತೆ ಎಐಎಂಐಎಂ 7, ಬಿಜೆಪಿ 1, ಪಕ್ಷೇತರ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು.

2. 2014ರಲ್ಲಿ ತೆಲಂಗಾಣ ಚುನಾವಣೆ ಮತ್ತು ಫಲಿತಾಂಶದ ವಿವರ

ಭಾರತದ 29ನೇ ರಾಜ್ಯವಾಗಿ 2014ರಲ್ಲಿ ತೆಲಂಗಾಣ ರಾಜ್ಯ ರಚನೆ ಆಯಿತು. 2014ರ ಜೂನ್‌ನಲ್ಲಿ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 63 ಸ್ಥಾನ ಗೆದ್ದು ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣ ಸ್ವೀಕರಿಸಿದರು. ಕಾಂಗ್ರೆಸ್‌ 21, ಟಿಡಿಪಿ 15, ಎಐಎಂಐಎಂ 7, ಬಿಜೆಪಿ 5, ಇತರೆ 8 ಸ್ಥಾನಗಳನ್ನು ಗೆದ್ದುಕೊಂಡಿದ್ದವು.