G20 Dinner Menu: ಜಿ20 ನಾಯಕರ ಡಿನ್ನರ್ ಮೆನು, ಹಲಸಿನ ಭಕ್ಷ್ಯದಿಂದ ಹಿಡಿದು ಮುಂಬಯಿ ಪಾವ್ ತನಕ ಸಿರಿಧಾನ್ಯ ಖಾದ್ಯ ವೈವಿಧ್ಯ
ಭಾರತದ ಆತಿಥ್ಯದಲ್ಲಿ ಎರಡು ದಿನಗಳ ಜಿ20 ಶೃಂಗ ನವದೆಹಲಿಯಲ್ಲಿ ಇಂದು (ಸೆ.9) ಶುರುವಾಗಿದೆ. ಮೊದಲ ದಿನದ ಪೂರ್ಣ ಅವಧಿಯ ಕಲಾಪಗಳು ನಡೆದಿದ್ದು, ರಾತ್ರಿ ಭೋಜನಕೂಟವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದರು. ಇದರ ಮೆನು ವೈರಲ್ ಆಗಿದ್ದು, ವಿವರ ಇಲ್ಲಿದೆ.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗದ ಮೊದಲ ದಿನ ಭಾರಿ ಚಟುವಟಿಕೆಗಳಿಂದ ಕೂಡಿತ್ತು. ಜಿ20 ನಾಯಕರ ಮಾತುಕತೆ, ದೆಹಲಿ ಘೋಷಣೆ ಅಂಗೀಕಾರ ಹೀಗೆ ಹಲವು ವಿಚಾರಗಳು ಗಮನಸೆಳೆದವು. ಈ ನಡುವೆ ನಿಗದಿಯಂತೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ನಾಯಕರಿಗೆ ರಾತ್ರಿ ಭೋಜನಕೂಟವನ್ನು ಭಾರತ್ ಮಂಟಪದಲ್ಲಿ ಏರ್ಪಾಡು ಮಾಡಿದ್ದರು.
ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜಗನ್ನಾಥ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸೇರಿ ಹಲವರು ಶೃಂಗದಲ್ಲಿ ಭಾಗಿಯಾಗಿದ್ದಾರೆ. ರಾತ್ರಿ ಭೋಜನಕೂಟ ಸಂಪೂರ್ಣವಾಗಿ ಸಸ್ಯಾಹಾರದ್ದಾಗಿದ್ದು, ಡಿನ್ನರ್ ಮೆನು ಬಹಿರಂಗವಾಗಿ ವೈರಲ್ ಆಗಿದೆ.
ವೈರಲ್ ಆಗಿರುವ ಮೊದಲ ದಿನದ ಡಿನ್ನರ್ ಮೆನುವಿನಲ್ಲಿ ಏನೇನಿವೆ?
ಸ್ಟಾರ್ಟರ್
ಪಾತ್ರಮ್: ನವಣೆ ಎಲೆಗಳಿಂದ ಅಲಂಕೃತ ಗಟ್ಟಿಮೊಸರು ಮತ್ತು ಖಾರ ಚಟ್ನಿ
ಮೇನ್ ಕೋರ್ಸ್
ವನವರ್ಣಂ: ಕೇರಳದ ಕೆಂಪಕ್ಕಿ ಅನ್ನಕ್ಕೆ ಕರಿಬೇವು ಒಗ್ಗರಣೆ ಮತ್ತು ಹಲಸಿನ ಖಾದ್ಯ ಜತೆಗೆ ಮಶ್ರೂಮ್ ಖಾದ್ಯ.
ಭಾರತದ ಬ್ರೆಡ್ಸ್
ಮುಂಬಯಿ ಪಾವ್: ಈರುಳ್ಳಿ ರುಚಿಯ ಬನ್
ಬಕರ್ಖಾನಿ: ಏಲಕ್ಕಿ ಪರಿಮಳದ ಸಿಹಿ ರೋಟಿ
ಡೆಸರ್ಟ್
ಮಧುರಿಮಾ: ಏಲಕ್ಕಿ ಪರಿಮಳದ ಬಾರ್ನ್ಯಾರ್ಡ್ ಧಾನ್ಯದ ಪುಡಿಂಗ್, ಅಂಜೂರದ ಪೀಚ್ ಕಾಂಪೋಟ್ ಮತ್ತು ಅಂಬೆಮೊಹರ್ ಅನ್ನ.
ಬೆವರೇಜಸ್
ಕಾಶ್ಮೀರಿ ಕಾಹ್ವಾ, ಫಿಲ್ಟರ್ ಕಾಫಿ, ಡಾರ್ಜಲಿಂಗ್ ಟೀ.
ಇದಲ್ಲದೆ, ಪಾನ್ ಫ್ಲೇವರ್ನ ಚಾಕೊಲೇಟ್ ಲೀವ್ಸ್ ಕೂಡ ಮೆನುವಿನಲ್ಲಿದೆ.