ಹರಿಯಾಣ, ಜಮ್ಮು-ಕಾಶ್ಮೀರದ ಫಲಿತಾಂಶ ಮಹಾರಾಷ್ಟ್ರ ಚುನಾವಣೆಗೆ ದಿಕ್ಸೂಚಿ; ವಿರೋಧ ಪಕ್ಷಗಳಿಗೆ ಟಾನಿಕ್, ಕೇಂದ್ರ ಸರ್ಕಾರಕ್ಕೆ ಕಹಿಗುಳಿಗೆ?
ಜಮ್ಮು ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ಚುನಾವಣಾ ಎಕ್ಸಿಲ್ ಫೋಲ್ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಗೋಚರವಾಗುತ್ತಿದೆ. ಪ್ರಸ್ತುತ ಸಮ್ಮಿಶ್ರ ಸರ್ಕಾರ ಹಾಗೂ ಸೀಟು ಹಂಚಿಕೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ನಡುವೆ ಈ ಎರಡೂ ರಾಜ್ಯಗಳ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಉತ್ತರದ ರಾಜ್ಯಗಳಾದ ಜಮ್ಮು–ಕಾಶ್ಮೀರ ಮತ್ತು ಹರಿಯಾಣದ ಚುನಾವಣಾ ಕಣದ ಮೇಲೆ ಭಾರತದ ರಾಜಕೀಯ ರಂಗದ ದೃಷ್ಟಿ ನೆಟ್ಟಿದೆ. ಚುನಾವಣೆ ಮುಗಿದು ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬಿದಿದ್ದು ಬಹುತೇಕ ಕಾಂಗ್ರೆಸ್ ಗೆಲುವಿನ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ನಿಖರವಾಗುತ್ತಿವೆ. ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಹಾಗೂ ಕಾಂಗ್ರೆಸ್ ಮೈತ್ರಿಗೆ ಗೆಲುವು ಎಂದು ಭವಿಷ್ಯ ನುಡಿದಿದೆ.
ಈ ಎರಡೂ ರಾಜ್ಯಗಳ ಎಕ್ಸಿಟ್ ಫೋಲ್ ಫಲಿತಾಂಶ ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿರುವುದು ಸುಳ್ಳಲ್ಲ. ಇದರಿಂದ ಬಿಜೆಪಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಅಷ್ಟೇ ಈ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗುತ್ತಿದೆ.
ಈ ಎರಡರಲ್ಲೂ ಬಿಜೆಪಿ ದೊಡ್ಡದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದು, ಎಕ್ಸಿಟ್ ಫೋಲ್ ಫಲಿತಾಂಶವು ಕೇಂದ್ರಾಡಳಿತ ಪಕ್ಷಕ್ಕೆ ಭಾರಿ ಮುಖಭಂಗ ಉಂಟು ಮಾಡಿದೆ.
ಹರಿಯಾಣದ ಎಕ್ಸಿಟ್ ಪೋಲ್ ಫಲಿತಾಂಶ
ಶನಿವಾರ ನಡೆದ ಎಕ್ಸಿಟ್ ಪೋಲ್‌ನಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಮುನ್ಸೂಚನೆ ಸಿಕ್ಕಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 15-29 ಸ್ಥಾನಗಳನ್ನು ಗಳಿಸಿದರೆ, ಕಾಂಗ್ರೆಸ್ 44-54 ಸ್ಥಾನಗಳನ್ನು ಗೆಲ್ಲಲಿದೆ ಎಂದು 'ದೈನಿಕ್ ಭಾಸ್ಕರ್' ಸಂಸ್ಥೆ ಭವಿಷ್ಯ ನುಡಿದಿದೆ. ಸಿ-ವೋಟರ್-ಇಂಡಿಯಾ ಟುಡೇ ಸಮೀಕ್ಷೆಗಳು ಕಾಂಗ್ರೆಸ್ 50-58 ಸ್ಥಾನಗಳಲ್ಲಿ ಮತ್ತು ಬಿಜೆಪಿ 20-28 ಸ್ಥಾನ ಗಳಿಸಬಹುದು ಎಂದು ಅಂದಾಜಿಸಿವೆ. ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಸಮೀಕ್ಷೆಗಳು ಕಾಂಗ್ರೆಸ್ 55-62 ಮತ್ತು ಬಿಜೆಪಿ 18-24 ಸ್ಥಾನಗಳನ್ನು ನೀಡಿತು. ರೆಡ್ ಮೈಕ್-ದತಾಂಶ್ ನಿರ್ಗಮನ ಸಮೀಕ್ಷೆಯು ಕಾಂಗ್ರೆಸ್‌ಗೆ 50-55 ಮತ್ತು ಬಿಜೆಪಿ 20-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದರೆ, ಧ್ರುವ್ ರಿಸರ್ಚ್ ಕಾಂಗ್ರೆಸ್‌ಗೆ 50-64 ಮತ್ತು ಬಿಜೆಪಿಗೆ 22-32 ಸ್ಥಾನ ಸಿಗಲಿದೆ ಎಂದು ಹೇಳಿದೆ. ಪೀಪಲ್ಸ್ ಪಲ್ಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 49-60 ಮತ್ತು ಬಿಜೆಪಿ 20-32 ಸ್ಥಾನಗಳನ್ನು ಗಳಿಸಲಿದೆ. ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ಭಾರತೀಯ ರಾಷ್ಟ್ರೀಯ ಲೋಕದಳವನ್ನು (ಐಎನ್‌ಎಲ್‌ಡಿ) ಜನನಾಯಕ ಜನತಾ ಪಕ್ಷ (ಜೆಜೆಪಿ) ಗಿಂತ ಮುಂದಿವೆ, ಇತರ ಪಕ್ಷಗಳು 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಬಿಜೆಪಿಯು 2014 ರಿಂದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಹರಿಯಾಣವನ್ನು ಆಳುತ್ತಿದೆ, 2019ರಲ್ಲಿ ಬಿಜೆಪಿ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಆದಾಗ್ಯೂ, ಖಟ್ಟರ್ ಮತ್ತು JJP ನಾಯಕ ದುಶ್ಯಂತ್ ಸಿಂಗ್ ಚೌತಾಲಾ ಇಬ್ಬರೂ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಇದು ಪ್ರಮುಖ ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಕಾರಣವಾಯಿತು. ಚೌತಾಲಾ ಅವರ ಜೆಜೆಪಿ ಕೂಡ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿತು. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಕಾಂಗ್ರೆಸ್ ಪುನರಾವರ್ತನೆಗೆ ಪ್ರಯತ್ನಿಸುತ್ತಿದೆ.
ಜುಮ್ಮು ಕಾಶ್ಮೀರ ಎಕ್ಸಿಟ್ ಪೋಲ್ ಫಲಿತಾಂಶ
ಜಮ್ಮು ಮತ್ತು ಕಾಶ್ಮೀರದಲ್ಲಿ, ಎಕ್ಸಿಟ್ ಪೋಲ್‌ಗಳು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)-ಕಾಂಗ್ರೆಸ್ ಮೈತ್ರಿಗೆ ಮುನ್ನಡೆ ಸೂಚಿಸಿವೆ. ವೋಟರ್-ಇಂಡಿಯಾ ಟುಡೇ ಸಮೀಕ್ಷೆಯು ಮೈತ್ರಿಕೂಟಕ್ಕೆ 40-48 ಸ್ಥಾನಗಳನ್ನು ನೀಡಿತು, 90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 27-32 ಸ್ಥಾನಗಳಲ್ಲಿ ಹಿಂದುಳಿದಿದೆ. ದೈನಿಕ್ ಭಾಸ್ಕರ್ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟವನ್ನು 35-40 ಸ್ಥಾನಗಳಲ್ಲಿ ಮತ್ತು ಬಿಜೆಪಿಗೆ 20-25 ಸ್ಥಾನಗಳನ್ನು ನೀಡಿದರು. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಎನ್‌ಸಿ-ಕಾಂಗ್ರೆಸ್‌ಗೆ 35-45, ಬಿಜೆಪಿ 24-34 ಮತ್ತು ಇತರರಿಗೆ 4-10 ಸ್ಥಾನಗಳನ್ನು ನಿರೀಕ್ಷಿಸಲಾಗಿದೆ.
ಪೀಪಲ್ಸ್ ಪಲ್ಸ್ ಎನ್‌ಸಿ-ಕಾಂಗ್ರೆಸ್‌ಗೆ 46-50 ಸ್ಥಾನಗಳನ್ನು ನೀಡಿದರೆ, ಬಿಜೆಪಿ 23-27 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ರಿಪಬ್ಲಿಕ್-ಗುಲಿಸ್ತಾನ್ ಎನ್‌ಸಿ-ಕಾಂಗ್ರೆಸ್‌ಗೆ 31-36 ಸ್ಥಾನಗಳು, ಬಿಜೆಪಿ 28-30 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಹಲವಾರು ಸಮೀಕ್ಷೆಗಳಲ್ಲಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) 5-12 ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ಹೇಳಿದ್ದರೆ, ಇತರ ಪಕ್ಷಗಳು 4 ಮತ್ತು 16 ರ ನಡುವೆ ಗೆಲ್ಲುತ್ತವೆ ಎಂದು ಅಂದಾಜಿಸಿವೆ.
ಈ ಚುನಾವಣೆಯು ವಿಶೇಷವಾಗಿ ಮಹತ್ವದ್ದಾಗಿದೆ ಏಕೆಂದರೆ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ಮೊದಲನೆಯ ಚುನಾವಣೆಯಾಗಿದೆ. ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶವು ಅಕ್ಟೋಬರ್ 8 ರಂದು ಹೊರ ಬೀಳಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಧ್ಯದಲ್ಲೇ ನಡೆಯಲಿದ್ದು, ಇನ್ನೂ ಚುನಾವಣಾ ದಿನಾಂಕ ಪ್ರಕಟವಾಗಿಲ್ಲ. ಆದರೆ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಫಲಿತಾಂಶಗಳು ಮಹಾರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಅವಧಿಯು ನವೆಂಬರ್ 26 ರಂದು ಕೊನೆಗೊಳ್ಳುವುದರಿಂದ ಚುನಾವಣಾ ಆಯೋಗವು ಶೀಘ್ರದಲ್ಲೇ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ. ಮುಂಬರುವ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ, ಶಿವಸೇನೆ, ಎನ್‌ಸಿಪಿಯ ಶರದ್ ಪವಾರ್, ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟ ಕಣಕ್ಕೆ ಇಳಿಯಲಿದೆ. ಕಾಂಗ್ರೆಸ್-ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಒಳಗೊಂಡಿರುವ ಮಹಾ ಯುತಿ ಮೈತ್ರಿಯ ವಿರುದ್ಧ ಮುಖಾಮುಖಿಯಾಗುತ್ತವೆ.
2019ರಲ್ಲಿ ಬಿಜೆಪಿ ಮಹಾರಾಷ್ಟ್ರದ 164 ವಿಧಾನಸಭಾ ಸ್ಥಾನಗಳಲ್ಲಿ 105 ಸ್ಥಾನಗಳನ್ನು ಗಳಿಸಿತು, ಅವಿಭಜಿತ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ಆದಾಗ್ಯೂ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿಯು ರಾಜ್ಯದಲ್ಲಿ ಸ್ಪರ್ಧಿಸಿದ 28 ಲೋಕಸಭಾ ಸ್ಥಾನಗಳ ಪೈಕಿ ಒಂಬತ್ತನ್ನು ಮಾತ್ರ ಗೆದ್ದು ಕಳಪೆ ಪ್ರದರ್ಶನ ನೀಡಿತು.
ಹರಿಯಾಣ ಮತ್ತು ಜಮ್ಮು ಕಾಶ್ಮೀರದ ಎಕ್ಸಿಟ್ ಫೋಲ್ ಫಲಿತಾಂಶಗಳು ನಿಖರವಾದರೆ ಮಹಾ ಯುತಿ ಮೈತ್ರಿಕೂಟದೊಳಗಿನ ಸೀಟು ಹಂಚಿಕೆಯ ಮಾತುಕತೆಗಳ ಮೇಲೆ ಪರಿಣಾಮ ಬೀರಬಹುದು. ಕಾಂಗ್ರೆಸ್ ಪ್ರಬಲವಾದರೆ ಬಿಜೆಪಿ ಇತರ ಮೈತ್ರಿ ಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸುವ ಬಗ್ಗೆ ಯೋಚಿಸಿದರೂ ಇತರ ಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿಯೊಂದಿಗೆ ಚೌಕಾಶಿ ಮಾಡಬಹುದು. 288 ಸ್ಥಾನಗಳಲ್ಲಿ ಬಿಜೆಪಿ 160 ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿ ಹೊಂದಿದೆ ಎಂದು ವರದಿಗಳು ಸೂಚಿಸಿದರೆ, ಶಿವಸೇನೆ 100-105 ಸ್ಥಾನಗಳನ್ನು ಬಯಸುತ್ತಿದೆ ಮತ್ತು ಎನ್‌ಸಿಪಿ 60-80 ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಶಿವಸೇನೆ 80-90 ಸ್ಥಾನಗಳಿಗೆ ತೃಪ್ತಿಪಡಬಹುದು ಮತ್ತು ಎನ್‌ಸಿಪಿ 50-60 ಸ್ಥಾನಗಳನ್ನು ಪಡೆಯಬಹುದು ಎಂಬ ಊಹಾಪೋಹವಿದೆ.ಏತನ್ಮಧ್ಯೆ, MVA ತನ್ನ ಸೀಟು-ಹಂಚಿಕೆ ವ್ಯವಸ್ಥೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ದಸರಾ ಮುಗಿಯುವ ಹೊತ್ತಿಗೆ ಅದು ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ. ಎರಡೂ ಮೈತ್ರಿಕೂಟಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆಯೂ ಕಿತ್ತಾಟ ನಡೆಯುತ್ತಿದೆ. ಏಕನಾಥ್ ಶಿಂಧೆ ಪ್ರಸ್ತುತ ಮಹಾ ಯುತಿ ಮೈತ್ರಿಕೂಟಕ್ಕೆ ಸಿಎಂ ಮುಖವಾಗಿ ಕಂಡುಬಂದರೆ, ಉದ್ಧವ್ ಠಾಕ್ರೆ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷವು ಸ್ವಯಂಚಾಲಿತವಾಗಿ ಸಿಎಂ ಸ್ಥಾನವನ್ನು ಪಡೆದುಕೊಳ್ಳಬಾರದು ಎಂದು ಸೂಚಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದರೆ, ಅದರ ಮೈತ್ರಿ ಪಾಲುದಾರರು ಮಹಾರಾಷ್ಟ್ರದಲ್ಲಿ ಹೆಚ್ಚು ಸಮರ್ಥರಾಗಬಹುದು, ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಸಿಎಂ ಮಾಡಲು ಪಕ್ಷದ ಪ್ರಯತ್ನಗಳನ್ನು ಸಂಕೀರ್ಣಗೊಳಿಸಬಹುದು.