ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುಜರಾತ್‌ನ ಅಮುಲ್ ದಕ್ಷಿಣ ಭಾರತ ಪ್ರವೇಶಿಸಿದ್ದು ಹೇಗೆ; ಇಲ್ಲಿನ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟನಾ?

ಗುಜರಾತ್‌ನ ಅಮುಲ್ ದಕ್ಷಿಣ ಭಾರತ ಪ್ರವೇಶಿಸಿದ್ದು ಹೇಗೆ; ಇಲ್ಲಿನ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟನಾ?

ದಕ್ಷಿಣ ಭಾರತದಲ್ಲಿ ಯಾವುದೇ ಸ್ಪರ್ಧೆಯಿಲ್ಲದೆ ಆಯಾ ರಾಜ್ಯಗಳಲ್ಲಿ ಉತ್ತಮವಾಗಿ ನಡೆಯುತ್ತಿದ್ದ ಹಾಲು ಸಹಕಾರ ಸಂಘಗಳಿಗೆ ಗುಜರಾತ್‌ನ ಅಮುಲ್ ಸ್ಪರ್ಧೆ ನೀಡೋಕೆ ಬಂದಿರೋದು ಕೋಲಾಹಲಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತಕ್ಕೆ ಅಮುಲ್ ಹಾಲಿನ ಉತ್ಪನ್ನಗಳು ದಕ್ಷಿಮ ಭಾರತ ಪ್ರವೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಗುಜರಾತ್ ಮೂಲದ ಅಮುಲ್ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಎಂಬುದರ ವಿವರ ಇಲ್ಲಿದೆ.
ದಕ್ಷಿಣ ಭಾರತಕ್ಕೆ ಅಮುಲ್ ಹಾಲಿನ ಉತ್ಪನ್ನಗಳು ದಕ್ಷಿಮ ಭಾರತ ಪ್ರವೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಗುಜರಾತ್ ಮೂಲದ ಅಮುಲ್ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಎಂಬುದರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ನಂದಿನಿ, ತಮಿಳನಾಡಿನಲ್ಲಿ ಆವಿನ್ ಹಾಗೂ ಆಂಧ್ರಪ್ರದೇಶದಲ್ಲಿ ವಿಜಯಾ ಹಾಲು ತುಂಬಾ ಜನಪ್ರಿಯವಾಗಿದ್ದು, ಅಲ್ಲಿನ ರೈತರ ಜೀವನ ಮಟ್ಟ ಸುಧಾರಿಸಲು ಈ ಹಾಲು ಸಹಕಾರ ಒಕ್ಕೂಟಗಳು ಪಾತ್ರ ಬಹಳಷ್ಟಿದೆ. ಇತ್ತೀಚೆಗೆ ಗುಜರಾತ್ ಮೂಲಕ ಅಮುಲ್ ದಕ್ಷಿಣ ಭಾರತಕ್ಕೆ ಪ್ರವೇಶಿಸುತ್ತಿರುವುದು ಸ್ಥಳೀಯ ಒಕ್ಕೂಟಗಳ ಏಕಸ್ವಾಮ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಮುಲ್ ದಕ್ಷಿಣ ಭಾರತಕ್ಕೆ ಪ್ರವೇಶಿಸುವುದರಿಂದ ಈ ಭಾಗದಲ್ಲಿನ ಎಲ್ಲಾ ರಾಜ್ಯಗಳ ಹೈನುಗಾರರು, ಒಕ್ಕೂಟಗಳು ಮತ್ತು ಗ್ರಾಹಕರ ನಡುವಿನ ದೀರ್ಘಕಾಲದ ಸಂಬಂಧವನ್ನು ಭಂಗಗೊಳಿಸಲಿದೆ ಎಂದು ಕೆಲವ ಸಂಘಟನೆಗಳು ದೂರಿವೆ.

ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಒಡೆತನದ ಅಮುಲ್ ಅಥವಾ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ ಅನ್ನು ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಹಾಲು ಸಂಗ್ರಹ ಮತ್ತು ಮಾರಾಟಗಾರ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ತನ್ನ ನ್ಯಾಯವ್ಯಾಪ್ತಿಯನ್ನ ಬಿಟ್ಟು ಬೇರೆ ಪ್ರದೇಶಗಳಿಗೆ ಪ್ರವೇಶಿಸಿ ಇಲ್ಲಿನ ರೈತರಿಂದ ಹಾಲನ್ನು ಖರೀದಿಸಿ ಇಲ್ಲೇ ಪ್ಯಾಕ್ ಮಾಡಿದ ಉತ್ಪನ್ನಗಳನ್ನ ಮಾರಾಟ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇದೆ.

ಕರ್ನಾಟಕದಲ್ಲಿ ಕಳೆದ ವರ್ಷ ಚುನಾವಣೆಯ ಸಮಯದಲ್ಲಿ ಈ ವಿಷಯವು ರಾಜಕೀಯ ಕೆಸರೆರಚಾಟವಾಗಿ ಮಾರ್ಪಟ್ಟಿತು. ಕರ್ನಾಟಕದ ಹಾಲು ಉತ್ಪಾದಕ ಸಂಸ್ಥೆ ನಂದಿನಿಯನ್ನು ಕತ್ತು ಹಿಸುಕಲು ಗುಜರಾತ್ ಮೂಲದ ಅಮುಲ್‌ಗೆ ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಡೆಸುತ್ತಿರುವ ನಂದಿನಿ ಬ್ರಾಂಡ್ ರಾಜ್ಯದ ಅಗ್ಗದ ಹಾಲನ್ನು ನೀಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಹೆಸರು ಹೇಳಲು ಇಚ್ಛಿಸದ ಕರ್ನಾಟಕದ ಮಂಡ್ಯ ಪ್ರದೇಶದ ಹೈನುಗಾರರೊಬ್ಬರು, "ಅಮುಲ್ ಇಂಡಿಯಾ ಟೊಬ್ಯಾಕೊ ಕಂಪನಿ ಒಡೆತನದ (ಐಟಿಸಿ) ಸನ್‌ಫೀಸ್ಟ್‌ನ ರೈತ ಉತ್ಪಾದಕ ಸಂಸ್ಥೆಗಳ ನೆಟ್‌ವರ್ಕ್ ಮೂಲಕ ಹಾಲನ್ನು ಸಂಗ್ರಹಿಸುತ್ತಿದೆ. ಸನ್‌ಫೀಸ್ಟ್‌ ಅಮುಲ್‌ಗೆ ವೈಟ್-ಲೇಬಲ್ ಮಾಡುತ್ತಿದೆ. ಅಂದರೆ, ಇದು ಅಮುಲ್‌ಗಾಗಿ ಪ್ಯಾಕೇಜಿಂಗ್ ಉತ್ಪನ್ನವಾಗಿದೆ. ನಂತರ ಅದನ್ನು ಅಮುಲ್ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈಗ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರವು ಸರ್ಕಾರಿ ಸ್ವಾಮ್ಯದ ಕೆಎಂಎಫ್‌ಗೆ ಮಾರಾಟ ಮಾಡುವ ಪ್ರತಿ ಲೀಟರ್ ಹಾಲಿಗೆ 5 ರೂ.ಗಳ ಸಬ್ಸಿಡಿಯನ್ನು ಪರಿಚಯಿಸಿದೆ.

ತಮಿಳುನಾಡಿನ ಆವಿನ್ ಪರಿಸ್ಥಿತಿ ಹೇಗಿದೆ?

ನಾಲ್ಕು ಪ್ರಾದೇಶಿಕ ಹಾಲು ಮಾರಾಟ ಒಕ್ಕೂಟಗಳಾದ ನಂದಿನಿ, ಆವಿನ್, ವಿಜಯಾ ಮತ್ತು ಕೇರಳದ ಮಿಲ್ಮಾ ಒಕ್ಕೂಟಗಳು ಅಮುಲ್‌ನ ಅನ್ಯಾಯದ ಬೆಲೆ ಮತ್ತು ಹೈನುಗಾರರಿಂದ ಹಾಲನ್ನು ಸಂಗ್ರಹಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಗುದ್ದಾಟ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ತಿಂಗಳ ಆರಂಭದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿನ ಆವಿನ್ ಹಾಲಿನ ಶೆಡ್ ಪ್ರದೇಶದಲ್ಲಿ ಹಾಲು ಸಂಗ್ರಹಣೆಯನ್ನು ನಿಲ್ಲಿಸುವಂತೆ ಅಮುಲ್‌ಗೆ ನಿರ್ದೇಶನ ನೀಡೇಬೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಕೋರಿದ್ದಾರೆ. ಆನಂದ್ ಹಾಲು ಒಕ್ಕೂಟ (ಅಮುಲ್) ಮಾರುಕಟ್ಟೆಗೆ ಪ್ರವೇಶಿಸುವುದರಿಂದ 1981 ರಿಂದ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಡೈರಿ ಸಹಕಾರಿ ಒಕ್ಕೂಟವಾದ ಆವಿನ್ ನೊಂದಿಗೆ ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.

"ಇಲ್ಲಿಯವರೆಗೆ, ಅಮುಲ್ ತಮ್ಮ ಉತ್ಪನ್ನಗಳನ್ನು ರಾಜ್ಯದ ತಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿತ್ತು" ಎಂದು ಸ್ಟಾಲಿನ್ ಶಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. "ಇತ್ತೀಚೆಗೆ, ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಅಮುಲ್ ರಚಿಸುವ ಒಕ್ಕೂಟಗಳಲ್ಲಿ ಒಂದಾಗಿದೆ) ಕೃಷ್ಣಗಿರಿ ಜಿಲ್ಲೆಯಲ್ಲಿ ಶೀತಲೀಕರಣ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ತಮ್ಮ ಬಹು-ರಾಜ್ಯ ಸಹಕಾರಿ ಪರವಾನಗಿಯನ್ನು ಬಳಸಿದೆ.

ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟೆ ಮತ್ತು ಸುತ್ತಮುತ್ತಲಿನ ಸ್ವಸಹಾಯ ಗುಂಪುಗಳ ಮೂಲಕ ಹಾಲನ್ನು ಸಂಗ್ರಹಿಸಲು ಯೋಜಿಸಿರುವುದು ನಮ್ಮ ಗಮನಕ್ಕೆ ಬಂದಿದೆ."ಅಮುಲ್‌ನ ಈ ಕೃತ್ಯವು ದಶಕಗಳಿಂದ ನಿಜವಾದ ಸಹಕಾರಿ ಮನೋಭಾವದಿಂದ ಪೋಷಿಸಲ್ಪಟ್ಟ ಅವಿನ್ ಹಾಲಿನ ಶೆಡ್ ಪ್ರದೇಶವನ್ನು ಉಲ್ಲಂಘಿಸುತ್ತದೆ" ಎಂದು ತಮಿಳುನಾಡು ಸಿಎಂ ಬರೆದಿದ್ದಾರೆ. ಆದರೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 244 ಎಲ್‌ಎಲ್‌ಪಿಡಿ ಹಾಲು ಉತ್ಪಾದನೆಯಾಗುತ್ತಿದ್ದು, ಆವಿನ್ ನ ದೈನಂದಿನ ಹಾಲು ಸಂಗ್ರಹಣೆ 35 ಎಲ್‌ಎಲ್‌ಪಿಡಿ ಆಗಿದೆ ಎಂದು ಎಂದಿದ್ದಾರೆ.

ಆಂಧ್ರ ಪ್ರದೇಶದ ರೈತರಿಗೆ ಅಮುಲ್ ನೆರವು!

2020 ರ ಕೊನೆಯಲ್ಲಿ ಅಮುಲ್ ನುಸುಳಲು ಪ್ರಯತ್ನಿಸಿದ ಮೊದಲ ರಾಜ್ಯವಾದ ಆಂಧ್ರಪ್ರದೇಶದಲ್ಲಿ, ಅಲ್ಲಿನ ಸರ್ಕಾರ ಪರಿಚಯಿಸಿದ ಜಗನ್ನ ಪಾಲು (ಹಾಲು) ಯೋಜನೆಯ ಮೂಲಕ ಹಾಲು ಸಂಗ್ರಹಿಸಿತು. 2022 ರ ವೇಳೆಗೆ, ರೈತರು ಹಸು ಮತ್ತು ಎಮ್ಮೆ ಹಾಲಿನ ಖರೀದಿ ಬೆಲೆಯಲ್ಲಿ ಹೆಚ್ಚಳವನ್ನು ಕಂಡರು. ತರುವಾಯ, ಅಮುಲ್ ಉತ್ತರ ಆಂಧ್ರ ಜಿಲ್ಲೆಗಳಲ್ಲಿ ಬೆಣ್ಣೆ ಸಂಗ್ರಹ ಬೆಲೆಯನ್ನು 32 ರೂಪಾಯಿಗೆ ಹೆಚ್ಚಿಸಿತು.

"ಜಗನ್ನ ಹಾಲು ಸಂಗ್ರಹವು 2020 ರ ಡಿಸೆಂಬರ್‌ನಲ್ಲಿ ಮೂರು ಜಿಲ್ಲೆಗಳಲ್ಲಿ ಪ್ರಾರಂಭವಾಯಿತು. ಮೂರು ತಿಂಗಳ ಅವಧಿಯಲ್ಲಿ ಅಮುಲ್ ತನ್ನ ಸಂಗ್ರಹಣಾ ಕಾರ್ಯಾಚರಣೆಯನ್ನು 17 ಜಿಲ್ಲೆಗಳಿಗೆ ವಿಸ್ತರಿಸಲು ಪ್ರಾರಂಭಿಸಿತು. 100 ಹಳ್ಳಿಗಳು ಮತ್ತು 27,300 ರೈತರಿಂದ ಈ ಸಂಖ್ಯೆ ಈಗ ರಾಜ್ಯದ ಸುಮಾರು 2,900 ಹಳ್ಳಿಗಳಲ್ಲಿ 2,50,000 ಕ್ಕೂ ಹೆಚ್ಚು ರೈತರಿಗೆ ಏರಿದೆ. ಇದು ರೈತರಿಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಕೃಷ್ಣಾ ಜಿಲ್ಲಾ ಹಾಲು ಉತ್ಪಾದಕರ ಪರಸ್ಪರ ಅನುದಾನಿತ ಸಹಕಾರಿ ಹಾಲು ಒಕ್ಕೂಟದ ಮುಖಂಡ ವಿ.ಶ್ರೀನಿವಾಸ ರಾವ್ ಹೇಳಿದರು.

ಒಂದು ವರ್ಷದಲ್ಲಿ ಐದನೇ ಬಾರಿಗೆ ರಾಜ್ಯವು ಹಾಲಿನ ಖರೀದಿ ಬೆಲೆಯನ್ನು ಹೆಚ್ಚಿಸಿದ ನಂತರ ಅಮುಲ್ ಎಮ್ಮೆ ಹಾಲನ್ನು 87.52 ರೂ.ಗೆ ಖರೀದಿಸುತ್ತಿದೆ, ಇದು ರಾಜ್ಯ ಡೈರಿಗಿಂತ 16 ರೂಪಾಯಿಗಳಷ್ಟು ಹೆಚ್ಚಾಗಿದೆ. ಹಸುವಿನ ಹಾಲನ್ನು 42.46 ರೂಗೆ ಖರೀದಿಸುತ್ತಿದೆ, ವಿಜಯಾ ಡೈರಿಯ ಖರೀದಿ ಬೆಲೆಗಿಂತ 8.26 ರೂ. 2022 ರ ಅಂತ್ಯದ ವೇಳೆಗೆ, ರಾಯಲಸೀಮಾ, ಕರಾವಳಿ ಮತ್ತು ಉತ್ತರಾಂದ್ರ ಪ್ರದೇಶಗಳಲ್ಲಿನ ಕೈರಾ, ಸಬರ್ಕಾಂತ ಮತ್ತು ಬನಸ್ಕಾಂತ ಒಕ್ಕೂಟಗಳಿಂದ ಕ್ರಮವಾಗಿ ಐದು ಕೋಟಿ ಲೀಟರ್‌ಗಿಂತ ಹೆಚ್ಚು ಹಾಲು ಖರೀದಿಸಲು ಅಮುಲ್ ರೈತರಿಗೆ 232 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಪರಿಹಾರವನ್ನು ನೀಡಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಸೀದರಿ ಅಪ್ಪಲರಾಜು ಕಳೆದ ವರ್ಷ ನವೆಂಬರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಹಾಲು ಖರೀದಿ ಬೆಲೆಯು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗೆ ಹೋಲುತ್ತದೆ, ಇದು ಬೇಸ್‌ಲೈನ್ ಅಥವಾ ಸ್ಥಳೀಯ ಬೆಲೆಯಾಗಿದ್ದು, ಪೂರೈಕೆಯ ಕೊರತೆ ಅಥವಾ ಬಂಪರ್ ಬೆಳೆಯ ಸಂದರ್ಭದಲ್ಲಿಯೂ ಸರಕುಗಳ ಮಾರುಕಟ್ಟೆ ಬೆಲೆಗಳು ಕುಸಿಯುವುದಿಲ್ಲ. ಬೆಳೆಗಳ ವಿಷಯದಲ್ಲಿ, ಕೇಂದ್ರ ಸರ್ಕಾರವು ಪ್ರತಿ ವರ್ಷ ಎಂಎಸ್‌ಪಿಯನ್ನು ಮುಂಚಿತವಾಗಿ ನಿರ್ಧರಿಸಿದರೆ, ರಾಜ್ಯ ಸಹಕಾರಿ ಸಂಸ್ಥೆಗಳು ಹಾಲಿನ ಲಭ್ಯತೆಯ ಆಧಾರದ ಮೇಲೆ ರಾಜ್ಯ ಡೈರಿ ಒಕ್ಕೂಟ ಮತ್ತು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟ ಬೆಲೆಯನ್ನು ನಿರ್ಧರಿಸುತ್ತವೆ.

"ಚುನಾವಣೆಯಲ್ಲಿ ಗೆಲ್ಲುವ ಮೊದಲು, ಜಗನ್ ಅವರು ಅಧಿಕಾರಕ್ಕೆ ಬಂದರೆ ಹೈನುಗಾರರಿಗೆ ಖಾಸಗಿ ಡೈರಿಗಳಿಗಿಂತ ಹೆಚ್ಚಿನ ಖರೀದಿ ಬೆಲೆಯನ್ನು ನೀಡುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಈಗ ಅಮುಲ್ ಮೂಲಕ ಇದನ್ನು ಸಕ್ರಿಯಗೊಳಿಸುತ್ತಿದೆ. ವಿಶಾಖಾ ಅಥವಾ ವಿಜಯಾ ಡೈರಿಗಳಿಗೆ ಹಾಲು ಪೂರೈಸದೆ ಅಮುಲ್‌ಗೆ ಹಾಲು ಪೂರೈಸುವಂತೆ ರೈತರನ್ನು ಬೆದರಿಸಲು ಸರ್ಕಾರಿ ಅಧಿಕಾರಿಗಳು ಶಿಬಿರಗಳನ್ನು ನಡೆಸುತ್ತಿದ್ದಾರೆ" ಎಂದು ಮಾಜಿ ಸಿಪಿಎಂ ಸಂಸದ ಪಿ ಮಧು ಹೇಳಿದ್ದಾರೆ.

2022-2023ರಲ್ಲಿ ಲಂಪಿ ಸ್ಕಿನ್ ಡಿಸೀಸ್ (ಎಲ್ಎಸ್‌ಡಿ) ಏಕಾಏಕಿ ಹಾಲಿನ ಉತ್ಪಾದನೆಯಲ್ಲಿ ಕುಸಿತ ಮತ್ತು ಮೇವಿನ ಬೆಲೆಯಲ್ಲಿ ಹೆಚ್ಚಳದಿಂದಾಗಿ ಖಾಸಗಿ ಕಂಪನಿಗಳು ಕಚ್ಚಾ ಹಾಲಿನ ಖರೀದಿ ವೆಚ್ಚವನ್ನು ಹೆಚ್ಚಿಸಿವೆ ಎಂದು ಆಂಧ್ರಪ್ರದೇಶದ ಡೈರಿ ತಜ್ಞ ವಿಜಯ್ ಮೋಹನ್ ಹೇಳಿದ್ದಾರೆ. "ಇನ್ಪುಟ್ ವೆಚ್ಚಗಳಿಗೆ ಅನುಗುಣವಾಗಿ, ಡೈರಿ ಉದ್ಯಮದಾರರು ಹಸು ಮತ್ತು ಎಮ್ಮೆ ಹಾಲಿನ ಬೆಲೆ ಏರಿಕೆಯನ್ನು ತೆಗೆದುಕೊಂಡರು. ಆದರೆ ರೋಗದ ಬೆದರಿಕೆ ಮತ್ತು ಹರಡುವಿಕೆ ಕಡಿಮೆಯಾದ ನಂತರ, ಅವರು ಹೆಚ್ಚುವರಿ ಬೆಲೆ ಏರಿಕೆಯನ್ನು ಆಶ್ರಯಿಸಲಿಲ್ಲ. ಅಮುಲ್‌ನ ಬ್ಯಾಲೆನ್ಸ್ ಶೀಟ್‌ನ ಆರೋಗ್ಯವು ಅಲ್ಪಾವಧಿಯಲ್ಲಿ ಕಾರ್ಯಸಾಧ್ಯವಲ್ಲದಿದ್ದರೂ ಹೆಚ್ಚಿನ ವೆಚ್ಚದಲ್ಲಿ ಹಾಲನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.

ಕಳೆದ ವರ್ಷ, ಹೊಸ ಸೌಲಭ್ಯವನ್ನು ರಚಿಸಲು 385 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ ಆಂಧ್ರಪ್ರದೇಶ ಡೈರಿ ಅಭಿವೃದ್ಧಿ ಸಹಕಾರಿ ಒಕ್ಕೂಟದ (ಎಪಿಡಿಡಿಸಿಎಫ್) ಘಟಕವಾದ ನಿಷ್ಕ್ರಿಯ ಚಿತ್ತೂರು ಡೈರಿಯ ಆಸ್ತಿಗಳನ್ನು ಅಮುಲ್ ಸ್ವಾಧೀನಪಡಿಸಿಕೊಂಡಿತು. 2023ರ ಜುಲೈ ನಲ್ಲಿ, ಮುಖ್ಯಮಂತ್ರಿ ವೈಎಸ್ ಜಗನ್ ರೆಡ್ಡಿ ಅಮುಲ್ ಹಾಲು ಸಂಗ್ರಹಣೆ ಮತ್ತು ಉತ್ಪಾದನಾ ಸೌಲಭ್ಯಕ್ಕೆ ಅಡಿಪಾಯ ಹಾಕಿದರು. ಚಂದ್ರಬಾಬು ನಾಯ್ಡು ಅವರ ಪತ್ನಿ ಎನ್ ಭುವನೇಶ್ವರಿ ಒಡೆತನದ ಖಾಸಗಿ ಸಂಸ್ಥೆ ಹೆರಿಟೇಜ್ ಡೈರಿಯ ಆಗಮನದಿಂದಾಗಿ ಪದೇಪದೆ ನಷ್ಟ ಅನುಭವಿಸಿದ ನಂತರ ಚಿತ್ತೂರು ಘಟಕವನ್ನು 20 ವರ್ಷಗಳ ಹಿಂದೆ ಮುಚ್ಚಲಾಯಿತು. ಕೇರಳ, ತೆಲಂಗಾಣದಲ್ಲೂ ಗುಜರಾತ್ ಅಮುಲ್‌ಗೆ ವಿರೋಧವಾಗಿದೆ.

(ಹೈದರಾಬಾದ್ ಮೂಲದ ಸ್ವತಂತ್ರ ಪತ್ರಕರ್ತೆ ದೀಪಿಕಾ ಅಮೀರಪು ಅವರು ಪ್ರತಿ ವಾರ ಸದರ್ನ್ ಲೈಟ್ಸ್ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಪ್ರಮುಖ ಸ್ಟೋರಿಗಳನ್ನು ಬರೆಯುತ್ತಾರೆ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.