ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದ್ದು ಯಾರು, ಕೆನಡಾಗೆ ಭಾರತದ ಮೇಲೇಕೆ ಅನುಮಾನ, ಕಾರಣ ಹೀಗಿದೆ..
ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಪ್ರಜೆ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರೂಡೊ ಬಿಂಬಿಸಿದ್ದು, ಇದರ ಹಿಂದೆ ಭಾರತದ ಅಧಿಕಾರಿಗಳ ಕೈವಾಡ ಇದೆ ಎಂದು ನೇರ ಆರೋಪ ಮಾಡಿದ್ದರು. ಭಾರತ ಸರ್ಕಾರ ಇದನ್ನು ನಿರಾಕರಿಸಿದೆ. ನಿಜವಾಗಿಯೂ ಹರ್ದೀಪ್ ಹತ್ಯೆ ಮಾಡಿದ್ದು ಯಾರು, ಭಾರತದ ಮೇಲೇಕೆ ಅನುಮಾನ - ಇಲ್ಲಿದೆ ಕಾರಣ.
ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾ ನಂಬಿದೆ. ಭಾರತದ ಅಧಿಕಾರಿಗಳ ಫೋನ್ ಕರೆಗಳನ್ನು ಆಧರಿಸಿ ಕೆನಡಾ ಸರ್ಕಾರ ಈ ಆರೋಪ ಮಾಡಿರಬಹುದು ಎಂದು ಸಿಬಿಸಿ ನ್ಯೂಸ್ ಗುರುವಾರ (ಸೆ.21) ವರದಿ ಮಾಡಿದೆ.
ಕೆನಡಾ ಸರ್ಕಾರವು ಕಳೆದ ಒಂದು ತಿಂಗಳ ಅವಧಿಯ ತನಿಖೆಯಲ್ಲಿ ಬಹಳಷ್ಟು ಗುಪ್ತಚರ ಮಾಹಿತಿ ಸಂಗ್ರಹಿಸಿದೆ. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಸೇರಿದಂತೆ ಭಾರತೀಯ ಅಧಿಕಾರಿಗಳ ಮೇಲೆ ಕಣ್ಗಾವಲು ಮತ್ತು ಅವರ ಫೋನ್ ಕರೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಕೆನಡಾ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಸಿಬಿಸಿ ನ್ಯೂಸ್ ವರದಿ ಮಾಡಿದೆ.
ಗುಪ್ತಚರ ಮಾಹಿತಿ ಆಧರಿಸಿ ಜಸ್ಟಿನ್ ಟ್ರೂಡೊ ಹೇಳಿಕೆ
ಐದು ರಾಷ್ಟ್ರಗಳ ಒಕ್ಕೂಟದಲ್ಲಿ ಕೆಲವು ಗುಪ್ತಚರ ಮಾಹಿತಿಯನ್ನು ಇತರ ದೇಶಗಳು ಕೆನಡಾದ ಜತೆಗೆ ಹಂಚಿಕೊಂಡಿವೆ. ಆ ಗುಂಪಿನಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿವೆ. ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರ ಜೋಡಿ ಥಾಮಸ್ ಅವರು ಆಗಸ್ಟ್‌ನಲ್ಲಿ ನಾಲ್ಕು ದಿನ ಮತ್ತು ಸೆಪ್ಟೆಂಬರ್‌ನಲ್ಲಿ ಐದು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ್ದರು. ಅವರ ಎರಡನೇ ಭೇಟಿಯು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಜಿ20 ನಾಯಕರ ಶೃಂಗಸಭೆಗೆ ಭೇಟಿ ನೀಡುವುದರೊಂದಿಗೆ ಹೊಂದಿಕೆಯಾಗಿದೆ.
ಇದನ್ನೂ ಓದಿ| ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ: ಭಾರತ-ಕೆನಡಾ ಸಂಬಂಧಗಳ ಅಂಕಿನೋಟ
ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಭಾರತೀಯ ಅಧಿಕಾರಿಗಳು ಖಾಸಗಿ ಸಭೆಗಳಲ್ಲಿ ನಿರಾಕರಿಸಲಿಲ್ಲ ಎಂದು ವರದಿ ಹೇಳಿದೆ.
ನ್ಯೂಯಾರ್ಕ್‌ನಲ್ಲಿ ಜಸ್ಟಿನ್ ಟ್ರೂಡೊ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹೀಗಿದೆ..
ನ್ಯೂಯಾರ್ಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರುಡೊ ಸೋಮವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾಡಿದ ಹೇಳಿಕೆಯನ್ನು ಪುನರಾವರ್ತಿಸಿದರು. ಈ ನಿಖರ ಆರೋಪವು ಭಾರತ ಸರ್ಕಾರದ ಏಜೆಂಟರು ಮತ್ತು ಜೂನ್ 18 ರಂದು ನಿಜ್ಜರ್ ಹತ್ಯೆಯ ನಡುವಿನ ಸಂಬಂಧವನ್ನು ಸೂಚಿಸಿದೆ.
ಇದನ್ನೂ ಓದಿ| ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ, ಭಾರತ ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಅವಲೋಕನ
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಈ ವಿಷಯವನ್ನು ನೇರ ಮತ್ತು ಸ್ಪಷ್ಟ ಮಾತುಗಳಲ್ಲಿ ಪ್ರಸ್ತಾಪಿಸಿದ್ದೇನೆ. ಅದರಲ್ಲಿ ನಾನು ನನ್ನ ಕಳವಳಗಳನ್ನು ಸ್ಪಷ್ಟ ಪದಗಳಲ್ಲಿ ಹಂಚಿಕೊಂಡಿದ್ದೇನೆ. ಭಾರತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯವನ್ನು ತರಲು ನಮ್ಮೊಂದಿಗೆ ಕೆಲಸ ಮಾಡಬೇಕು ಎಂದು ಜಸ್ಟಿನ್ ಟ್ರೂಡೋ ಹೇಳಿದರು.
ಈ ಆರೋಪಗಳೆಲ್ಲವೂ ಅಸಂಬದ್ಧವೆಂದು ಭಾರತ ಈಗಾಗಲೇ ಸಾರ್ವಜನಿಕವಾಗಿಯೇ ನಿರಾಕರಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹೇಗಾಯಿತು
ವ್ಯಾಂಕೋವರ್‌ನಲ್ಲಿ ಜೂನ್ 19ರಂದು ಸಂಜೆ ಸಿಖ್ ದೇಗುಲದ ಹೊರಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದ. ಆತನಿಗೆ 45 ವರ್ಷ ವಯಸ್ಸಾಗಿತ್ತು. ಈ ದಾಳಿಯನ್ನು ನಿಖರವಾಗಿ ಇಂಥವರೇ ಮಾಡಿದ್ದು ಎಂದು ದೃಢೀಕರಿಸುವುದು ಸಾಧ್ಯವಾಗಿಲ್ಲ. ಕೆನಡಾದಲ್ಲಿ ಸಿಖ್ ಸಮುದಾಯದ ಒಂದು ವರ್ಗ ಪ್ರತಿಭಟನೆ ಶುರುಮಾಡಿತ್ತು. ಈ ಪ್ರತಿಭಟನೆ ವಿವಿಧೆಡೆ ವ್ಯಾಪಿಸಿತ್ತು. ಈ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಕೆನಡಾ ಸರ್ಕಾರ, ಕಳೆದ ಒಂದು ತಿಂಗಳಿಂದ ತನಿಖೆ ನಡೆಸಿ ಈಗ ಭಾರತದ ಅಧಿಕಾರಿಗಳ ಕೈವಾಡ ಶಂಕಿಸಿದೆ.
ವಿಭಾಗ