ISS video of aurora: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಂಡ ಭೂರಮೆಯ ಬೆಳಕಿನಾಟ, ವಿಡಿಯೋ ಹಂಚಿಕೊಂಡ ನಾಸಾ ಗಗನಯಾನಿ
ನಾಸಾದ ಗಗನಯಾತ್ರಿ ಜೋಶ್ ಕಸ್ಸಾಡ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆಗೆದಿರುವ ಅರೋರಾದ ವಿಡಿಯೋ ಇಲ್ಲಿದೆ. ಇದರೊಂದಿಗೆ ಐಎಸ್‌ಎಸ್ ಎಂದರೆ ಏನು? ಎಲ್ಲಿದೆ? ಹೇಗಿದೆ? ಇತ್ಯಾದಿ ಮಾಹಿತಿಗಳನ್ನೂ ನೀಡಲಾಗಿದೆ.
ಭೂಮಿಯಿಂದ ತುಸು ಎತ್ತರದ ಪ್ರದೇಶಕ್ಕೆ ಹೋಗಿ ಭೂಸೌಂದರ್ಯವನ್ನು ನೋಡುವಾಗ ವಾಹ್ ಎನ್ನುತ್ತೇವೆ. ವಿಮಾನದಿಂದ ಇಣುಕಿ ನೋಡಿದರೆ ಬಿಳಿಮೋಡಗಳ ಕಂಡು ಮನಸ್ಸು ರಂಗಾಗುತ್ತದೆ. ಇದೇ ರೀತಿ ಭೂಮಿಯಿಂದ ಸುಮಾರು 248 ಮೈಲಿ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭೂಮಿಯನ್ನು ನೋಡಿದರೆ ಹೇಗಿರುತ್ತದೆ? ಖಂಡಿತವಾಗಿಯೂ ಸುಂದರವಾಗಿರುತ್ತದೆ. ಐಎಎಸ್ ಈಗಾಗಲೇ ಇಂತಹ ಹಲವು ವಿಡಿಯೋಗಳನ್ನು ತೆಗೆದಿದೆ.
ಆದರೆ, ಭೂರಮೆಯ ಸೌಂದರ್ಯಕ್ಕೆ ಮುಕುಟವಿಟ್ಟಂತೆ ಹೊಳೆಯುವ ಬೆಳಕಿನಾಟವನ್ನು ಇದೇ ಮೊದಲ ಬಾರಿಗೆ ಸುಂದರವಾಗಿ ಐಎಸ್‌ಎಸ್ ಸೆರೆ ಹಿಡಿದಿದೆ. ಇದಕ್ಕೆ ಅರೋರಾ ಎಂದು ಹೆಸರು. ಅರೋರಾ ಎಂದರೆ ಧ್ರುವ ದ್ವೀಪಗಳು. ಅರುಣ ರಾಗ ಎಂದೂ ಕರೆಯಬಹುದು.
ನಾಸಾದ ಗಗನಯಾತ್ರಿ ಜೋಶ್ ಕಸ್ಸಾಡ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆಗೆದಿರುವ ಅರೋರಾದ ವಿಡಿಯೋ ಈ ಕೆಳಗಿದೆ. ನೋಡಿ ಕಣ್ತುಂಬಿಕೊಳ್ಳಿ.
ಈ ವಿಡಿಯೋವನ್ನು ಐಎಸ್‌ಎಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಭೂಗ್ರಹದಲ್ಲಿ ಸುಂದರವಿಲ್ಲದ ಯಾವುದೇ ಭಾಗವಿಲ್ಲ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆಯಲಾಗಿದೆ. ಈ ಸುಂದರ ನೋಟವನ್ನು ಕಸ್ಸಾಡ ಅವರು ತಮ್ಮ 68 ಸಿಬ್ಬಂದಿಗಳ ಜತೆ ಕಣ್ತುಂಬಿಕೊಂಡು ವಿಡಿಯೋ ಮಾಡಿದ್ದಾರೆ.
ಅರೋರಾಗಳು ನೈಸರ್ಗಿಕ ಸೃಷ್ಟಿ. ಭೂಮಿಯ ಮೇಲ್ಭಾಗದ ವಾತಾವರಣದೊಂದಿಗೆ ವಿದ್ಯುತ್ ಚಾರ್ಜ್ ಆದ ಕಣಗಳ ಘರ್ಷಣೆಯಿಂದ ಅರೋರಾ ಉಂಟಾಗುತ್ತವೆ.
ಏನಿದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದೆ. ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ 15 ದೇಶಗಳ ಐದು ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಿಗೆ ಸೇರಿ ನಿರ್ಮಿಸಿವೆ. 100 ಶತಕೋಟಿ ಡಾಲರ್ ವೆಚ್ಚದ ಐಎಸ್‌ಎಸ್ ಅನ್ನು ಬಿಡಿಬಿಡಿಯಾಗಿ ತಂದು ಬಾಹ್ಯಾಕಾಶದಲ್ಲಿ ಜೋಡಿಸಲಾಗಿದೆ. ಐಎಸ್‌ಎಸ್ 1998ರಿಂದ ಕಾರಾರಯರಂಭ ಮಾಡಿದ್ದು, 2000 ಇಸವಿಯ ನವೆಂಬರ್ 2ರಿಂದ ನಿರಂತರವಾಗಿ ಕಾರ‍್ಯನಿರತವಾಗಿದೆ.
ಐಎಸ್‌ಎಸ್ ಪಾಲುದಾರರು ಯಾರು?
ನಾಸಾ, ರಷ್ಯಾದ ರಾಸ್‌ಕಾಸ್ಮೋಸ್ ಸ್ಟೇಟ್ ಕಾರ್ಪೊರೇಷನ್ ಫಾರ್ ಸ್ಪೇಸ್ ಆ್ಯಕ್ಟಿವಿಟಿಸ್ , ಯುರೋಪಿಯನ್ ಸ್ಪೇಸ್ ಏಜೆನ್ಸಿ, ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ ಐಎಸ್‌ಎಸ್ ನಿರ್ಮಾಣದ ಹಿಂದಿನ ರೂವಾರಿಗಳು
ಐಎಸ್‌ಎಸ್ ಉದ್ದೇಶ
ಖಗೋಳ ಪರಿಸರ, ಭೂ ವೈಜ್ಞಾನಿಕ ಸಂಶೋಧನೆ, ಮಂಗಳ, ಗುರು ಗ್ರಹ ಸೇರಿದಂತೆ ಬಾಹ್ಯಾಕಾಶ ಸಂಶೋಧನೆಯ ಉದ್ದೇಶದಿಂದ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ.
ಐಎಸ್‌ಎಸ್ ಹೇಗಿದೆ?
ನಿಲ್ದಾಣವು ಅಮೆರಿಕ ಫುಟ್ಬಾಲ್ ಮೈದಾನಷ್ಟಿದೆ. 391 ಸಾವಿರ ಕೆ.ಜಿ ತೂಕವನ್ನು ಹೊಂದಿರುವ ಐಎಸ್‌ಎಸ್ ಭೂಮಿಯಿಂದ ಸರಾಸರಿ 248 ಮೈಲಿ ಎತ್ತರದಲ್ಲಿದೆ. ಇದು ಭೂಮಿಯನ್ನು ಗಂಟೆಗೆ 28 ಸಾವಿರ ಕಿ.ಮೀಟರ್ ವೇಗದಲ್ಲಿ ಪ್ರತಿ 90 ನಿಮಿಷಕ್ಕೊಮ್ಮೆ ಸುತ್ತುತ್ತದೆ. ಐದು ಮಲಗುವ ಕೊಠಡಿಗಳು, ಎರಡು ಬಾತ್‌ರೂಮ್ , ಜಿಮ್, 360 ಡಿಗ್ರಿಯಲ್ಲಿ ಭೂಮಿಯತ್ತ ಮುಖ ಮಾಡಿರುವ ಕಿಟಕಿಗಳನ್ನು ಹೊಂದಿವೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ವಾಸಯೋಗ್ಯ ಪ್ರದೇಶವನ್ನು ಬೋಯಿಂಗ್ 747 ಜಂಬೊ ಜೆಟ್ ವಿಮಾನಕ್ಕೆ ಹೋಲಿಸಿದ್ದಾರೆ.
ಬರಿಗಣ್ಣಿನಿಂದ ಐಎಸ್‌ಎಸ್ ನೋಡಬಹುದೇ
ಐಎಸ್‌ಎಸ್‌ಗೆ ಜೋಡಿಸಲಾಗಿರುವ ಸೌರಫಲಕಗಳ ಪ್ರತಿಫಲಿತದಿಂದಾಗಿ ವೀಕ್ಷಕನು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿದ್ದರೆ ನಿಲ್ದಾಣವನ್ನು ಭೂಮಿಯಿಂದ ಬರಿಕಣ್ಣಿನಿಂದ ವೀಕ್ಷಿಸಬಹುದಾಗಿದೆ. ಅನೇಕ ಸಂದರ್ಭಗಳಲ್ಲಿ ನಿಲ್ದಾಣವು ಬರಿಗಣ್ಣಿನಿಂದ ನೋಡಬಹುದಾದ ಆಕಾಶದಲ್ಲಿರುವ ವಸ್ತುವಾಗಿದೆ. ಆದರೂ ಇದನ್ನು ಎರಡರಿಂದ ಐದು ನಿಮಿಷಗಳ ಕಾಲಾವಧಿಯವರೆಗೆ ಮಾತ್ರ ನೋಡಬಹುದಾಗಿದೆ.
ಗಗನಯಾನಿಗಳಿಗೆ ಆಹಾರ ನಿದ್ದೆ ಹೇಗೆ?
ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಸೇವಿಸುವ ಬಹುಪಾಲು ಆಹಾರವನ್ನು ಶೀತ ವಾತಾವರಣದಲ್ಲಿ ಶೀತಕದಲ್ಲಿ (ರೆಫ್ರಿಜರೇಟರ್)ಅಥವಾ ಡಬ್ಬದಲ್ಲಿ ಹಾಕಿಟ್ಟು ಸಂರಕ್ಷಿಸಲಾಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ಮುನ್ನ ಆಹಾರ ಶಾಸ್ತ್ರಜ್ಞರ ಸಹಾಯದೊಂದಿಗೆ ಸೇರಿ ಆಹಾರ ಸೂಚಿಯನ್ನು ತಯಾರಿಸುತ್ತಾರೆ. ಘನರೂಪದಲ್ಲಿರುವ ಆಹಾರವನ್ನು ಚಾಕು ಮತ್ತು ಪೋರ್ಕ್‌ನಿಂದ ತಿನ್ನಲಾಗುತ್ತದೆ. ಇವುಗಳು ತೇಲಿಹೋಗದಂತೆ ಆಯಸ್ಕಾಂತದೊಂದಿಗೆ ತಟ್ಟೆಯಲ್ಲಿ ಜೋಡಿಸಲಾಗುತ್ತದೆ. ನಿಲ್ದಾಣವು ಸ್ನಾನದ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಬದಲಿಗೆ ವಾಟರ್‌ಜೆಟ್, ವೆಟ್‌ಪೈಪ್ ಮತ್ತು ಟೂತ್‌ಪೇಸ್ಟ್ ಟ್ಯೂಬ್‌ನಂತಹ ಧಾರಕದಿಂದ ಹೊರಬರುವ ಸೋಪ್ ಬಳಸುತ್ತಾರೆ. ನೀರನ್ನು ಉಳಿಸಲು ಗಗನಯಾತ್ರಿಗಳಿಗೆ ರಿನ್ಸ್‌ಲೆಸ್ (ನೀರನ್ನು ಬಳಸದೆ ಇರುವ ) ಶ್ಯಾಂಪು ಮತ್ತು ಖಾದ್ಯ ಮೂಲದ ಟೂತ್‌ಪೇಸ್ಟ್ ಕೂಡ ಒದಗಿಸಲಾಗುತ್ತದೆ. ನಿಲ್ದಾಣದಲ್ಲಿ ಎರಡು ಸ್ಪೇಸ್ ಟಾಯ್ಲೆಟ್‌ಗಳಿವೆ ಈ ಎರಡೂ ಶೌಚಾಲಯಗಳು ರಷ್ಯನ್ ವಿನ್ಯಾಸದಲ್ಲಿದೆ.