ITR Filing; ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ, ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ? -ಇಲ್ಲಿದೆ ವಿವರ-itr filing you can file return even after july 31 provided you have to bear these losses income tax news uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Itr Filing; ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ, ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ? -ಇಲ್ಲಿದೆ ವಿವರ

ITR Filing; ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ, ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ? -ಇಲ್ಲಿದೆ ವಿವರ

ITR Filing Deadline Extension; ಕಳೆದ ಹಣಕಾಸು ವರ್ಷದ ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ. ಈ ದಿನದ ಅಂತ್ಯದೊಳಗೆ ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ ಎಂಬ ಕುತೂಹಲ ತೆರಿಗೆದಾರರಿಗೆ ಇರುವುದು ಸಹಜ. ಅದರ ಪೂರ್ಣ ವಿವರ ಇಲ್ಲಿದೆ.

ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ, ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಐಟಿಆರ್‌ ಫೈಲ್ ಮಾಡಲು ಇಂದು ಕೊನೆಯ ದಿನ, ಒಂದು ವೇಳೆ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಕಳೆದ ಹಣಕಾಸು ವರ್ಷದ ಅಂದರೆ 2023-24ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು (ITR Filing) ಇಂದು (ಜುಲೈ 31) ಕೊನೇ ದಿನ. ಐಟಿಆರ್ ಸಲ್ಲಿಸುವ ಕೊನೆಯ ದಿನಾಂಕವು ಈ ವರ್ಷ ವಿಸ್ತರಿಸಲ್ಪಡುವ ಸಾಧ್ಯತೆ ಕಡಿಮೆ. ಕಳೆದ ವರ್ಷವೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ವಿಸ್ತರಿಸಿರಲಿಲ್ಲ.

ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಐಟಿಆರ್ ಸಲ್ಲಿಸುವ ಗಡುವನ್ನು ಎರಡು ವರ್ಷಗಳ ಹಿಂದೆ ವಿಸ್ತರಿಸಿತ್ತು. 2023-24ರ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ ಸುಮಾರು 6 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ, ಅದರಲ್ಲಿ 70 ಪ್ರತಿಶತದಷ್ಟು ರಿಟರ್ನ್ಸ್ ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ಸಲ್ಲಿಸಲಾಗಿದೆ.

ಗಡುವಿನ ಬಗ್ಗೆ ಆದಾಯ ತೆರಿಗೆ ಇಲಾಖೆ ಹೇಳಿದ್ದೇನು?

ಆದಾಯ ತೆರಿಗೆ ಇಲಾಖೆ ಐಟಿಆರ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಪಿಐಬಿ ಫ್ಯಾಕ್ಟ್‌ಚೆಕ್‌ ಇದು ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿತ್ತು. ಇದನ್ನು ಆದಾಯ ತೆರಿಗೆ ಇಲಾಖೆ ಮರುಟ್ವೀಟ್ ಮಾಡಿದೆ.

ಐಟಿಆರ್ ಸಲ್ಲಿಸಲು 2024ರ ಜುಲೈ 31 ಕೊನೆಯ ದಿನಾಂಕ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಈ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿಫಲರಾದವರು ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಜುಲೈ 31 ರ ಈ ಗಡುವನ್ನು ಯಾರಾದರೂ ತಪ್ಪಿಸಿಕೊಂಡರೆ, ಅವರಿಗೆ 2024ರ ಡಿಸೆಂಬರ್ 31 ರೊಳಗೆ ವಿಳಂಬವಾದ ರಿಟರ್ನ್ ಸಲ್ಲಿಸಲು ಅವಕಾಶವಿದೆ. ಆದರೆ, ಹೊಸ ತೆರಿಗೆ ಪದ್ಧತಿಯಂತೆ ಅವರು ದಂಡ ಪಾವತಿಸಬೇಕಾಗುತ್ತದೆ. ಇದರರ್ಥ ಅವರು ಎಚ್ಆರ್‌ಎ, ಬೋಧನಾ ಶುಲ್ಕ, ವಿಮಾ ಕಂತುಗಳು, ಗೃಹ ಸಾಲದ ಮೇಲಿನ ಬಡ್ಡಿ ಇತ್ಯಾದಿಗಳ ಮೂಲಕ ಲಭ್ಯವಾಗುವ ವಿನಾಯಿತಿಯಿಂದ ವಂಚಿತರಾಗುತ್ತಾರೆ ಎಂದು ಸಿಎ ಅಭಿನಂದನ್ ಪಾಂಡೆ ಹೇಳಿದರು.

ಒಂದು ವೇಳೆ ಐಟಿಆರ್‌ ಫೈಲ್ ಮಾಡದಿದ್ರೆ ಏನಾಗುತ್ತೆ? ದಂಡ ಎಷ್ಟು ಬೀಳುತ್ತೆ

ಸಿಎ ಅಜಯ್ ಬಗಾರಿಯಾ ಅವರ ಪ್ರಕಾರ, ಜುಲೈ 31 ರೊಳಗೆ ನಿಮ್ಮ ಐಟಿಆರ್ ಸಲ್ಲಿಸಲು ವಿಫಲವಾದರೆ, ನೀವು ತಡವಾಗಿಯೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ಇದಕ್ಕಾಗಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, 5000 ರೂಪಾಯಿ ತನಕ ವಿಳಂಬ ಫೈಲಿಂಗ್ ಶುಲ್ಕವನ್ನು ಆದಾಯ ತೆರಿಗೆ ವಿಧಿಸಬಹುದು. ನಿಮ್ಮ ಆದಾಯವು 5 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ, ವಿಳಂಬ ಫೈಲಿಂಗ್ ಶುಲ್ಕ 1,000 ರೂ. ಇದಲ್ಲದೆ, ತೆರಿಗೆ ಪಾವತಿಸುತ್ತಿದ್ದರೆ ಆಗ, ತಿಂಗಳಿಗೆ 1% ಅಥವಾ ತಿಂಗಳ ಒಂದು ಭಾಗದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಆದರೆ ವಿಧಿಸಿದ ದಂಡವು ಬಾಕಿ ಇರುವ ತೆರಿಗೆಯನ್ನು ಮೀರುವಂತಿಲ್ಲ.

ಇನ್ನೊಂದೆಡೆ, ಲೆಕ್ಕಪರಿಶೋಧನೆ ಮಾಡಬೇಕಾದ ಖಾತೆಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ಅಕ್ಟೋಬರ್ 31, 2024 ರವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯು ಈ ವ್ಯಕ್ತಿಗಳಿಗೆ ತಮ್ಮ ಐಟಿಆರ್ ಸಲ್ಲಿಸುವ ಮೊದಲು ಮಾನ್ಯತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್‌ ಮೂಲಕ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶವನ್ನು ನೀಡುತ್ತದೆ ಎಂದು ಸಿಎ ಸಂತೋಷ್ ಮಿಶ್ರಾ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಹಿಂದೂಸ್ತಾನ್‌ಗೆ ತಿಳಿಸಿದ್ದಾರೆ.

ಕೆಲವು ವರ್ಗದ ತೆರಿಗೆದಾರರಿಗೆ ತಮ್ಮ ಐಟಿಆರ್ ಸಲ್ಲಿಸಲು ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ತೊಡಗಿರುವ ವ್ಯವಹಾರಗಳಿಗೆ ಐಟಿಆರ್ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. ಕೆಲವು ಸಂದರ್ಭಗಳಲ್ಲಿ, ಗಡುವು ವಿಸ್ತರಣೆಯೊಂದಿಗೆ ತಡವಾಗಿ ಸಲ್ಲಿಸುವುದು ಸಹ ಅನ್ವಯವಾಗಬಹುದು.

ಕಳೆದ ಹಣಕಾಸು ವರ್ಷದಲ್ಲಿ, ಹೊಸ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ಸಲ್ಲಿಸಲಾದ ರಿಟರ್ನ್ಸ್ ಗಳಲ್ಲಿ ಶೇಕಡಾ 70 ರಷ್ಟು. ಇಡೀ ಕ್ರಮವು ಸರಳೀಕರಣದತ್ತ ಇದೆ, ಇದರ ಅಂತಿಮ ಉದ್ದೇಶವೆಂದರೆ ತೆರಿಗೆ ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು. ಈ ಹಿಂದೆ 2022-23ರ ಹಣಕಾಸು ವರ್ಷದಲ್ಲಿ ಒಟ್ಟು 8.61 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲಾಗಿತ್ತು. ಈ ಬಾರಿ ಜನರು ಸರಳೀಕೃತ ಹೊಸ ತೆರಿಗೆ ಆಡಳಿತವನ್ನು ಆಯ್ಕೆ ಮಾಡುತ್ತಾರೆಯೇ ಎಂಬ ಬಗ್ಗೆ ಕುತೂಹಲವಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಂಗಳವಾರ ಹೇಳಿದ್ದಾರೆ.

ಮಾಹಿತಿ - ಪಿಟಿಐ


(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.