ವಿಶ್ವದ 125 ಸ್ಪರ್ಧಿಗಳ ಸೋಲಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್; ಇಲ್ಲಿದೆ ಆಕೆಯ ಕಿರು ಪರಿಚಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಶ್ವದ 125 ಸ್ಪರ್ಧಿಗಳ ಸೋಲಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್; ಇಲ್ಲಿದೆ ಆಕೆಯ ಕಿರು ಪರಿಚಯ

ವಿಶ್ವದ 125 ಸ್ಪರ್ಧಿಗಳ ಸೋಲಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್; ಇಲ್ಲಿದೆ ಆಕೆಯ ಕಿರು ಪರಿಚಯ

Victoria Kjaer Theilvig: ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ ಅವರು 73ನೇ ವಿಶ್ವ ಸುಂದರಿ 2024 ರ ವಿಜೇತರಾಗಿ ಕಿರೀಟವನ್ನು ಅಲಂಕರಿಸಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ.

ವಿಶ್ವದ 125 ಸ್ಪರ್ಧಿಗಳ ಸೋಲಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್
ವಿಶ್ವದ 125 ಸ್ಪರ್ಧಿಗಳ ಸೋಲಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್

Miss Universe 2024: ಮೆಕ್ಸಿಕೋದಲ್ಲಿ ನಡೆದ 73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ (Victoria Kjaer Theilvig) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 21ರ ಹರೆಯದ ಅವರು ಭಾರತದ ರಿಯಾ ಸಿಂಘಾ (Rhea Singha) ಸೇರಿದಂತೆ ವಿಶ್ವದ 125 ಸ್ಪರ್ಧಿಗಳ ವಿರುದ್ಧ ಗೆದ್ದಿದ್ದಾರೆ. ಮಿಸ್ ಯೂನಿವರ್ಸ್ ಇಂಡಿಯಾ 2024 ಗೆದ್ದಿದ್ದ ಭಾರತದ ರಿಯಾ ಸಿಂಘಾ ಅವರು ಪ್ರಶಸ್ತಿ ಸುತ್ತಿಗೆ ಅಂದರೆ ಟಾಪ್​ 12 ಸ್ಥಾನ ಪ್ರವೇಶಿಸಲು ವಿಫಲರಾದರು.

ಇತಿಹಾಸ ಸೃಷ್ಟಿಸಿದ ಡೆನ್ಮಾರ್ಕ್

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್ ಐತಿಹಾಸಿಕ ದಾಖಲೆ ಬರೆದಿದೆ. ಮೊದಲ ಬಾರಿಗೆ ವಿಶ್ವ ಸುಂದರಿ ಪಟ್ಟ ಪಡೆದುಕೊಂಡು ಹೊಸ ಚರಿತ್ರೆ ಸೃಷ್ಟಿಸಿದೆ. ಈ ದಾಖಲೆ ಸೃಷ್ಟಿಸಲು ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ ಪ್ರಮುಖ ಪಾತ್ರವಹಿಸಿದರು. ನೈಜೀರಿಯಾ, ಮೆಕ್ಸಿಕೊ, ಥೈಲ್ಯಾಂಡ್, ವೆನೆಜುವೆಲಾ ಕ್ರಮವಾಗಿ 1, 2, 3, 4ನೇ ರನ್ನರ್ಸ್ ಅಪ್ ಸ್ಥಾನ ಪಡೆದವು. ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಮೊದಲ ರನ್ನರ್ಸ್​ಅಪ್, , ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಎರಡನೇ ರನ್ನರ್ಸ್​ಆಪ್ ಆಗಿದ್ದಾರೆ.

ವಿಶ್ವ ಸುಂದರಿ ಗೆದ್ದ ಕೆಜೆರ್ ಕಿರು ಪರಿಚಯ

* ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ 2004ರಲ್ಲಿ ಗ್ರಿಬ್ಸ್ಕೊವ್‌ನ ಸೊಬೋರ್ಗ್‌ನಲ್ಲಿ ಜನಿಸಿದರು. ಡೆನ್ಮಾರ್ಕ್‌ನ ರಾಜಧಾನಿಯ ಕೋಪನ್‌ಹೇಗನ್‌ನಲ್ಲಿ ಬೆಳೆದರು.

* ವಿಕ್ಟೋರಿಯಾ ಬಿಸಿನೆಸ್ ಮತ್ತು ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಜ್ಯುವೆಲರಿ ಉದ್ಯಮದಲ್ಲಿ ಕೆಲಸ ಮಾಡುತ್ತಾ ತನ್ನ ಶೈಕ್ಷಣಿಕ ಜೀವನವನ್ನು ಸಮತೋಲನಗೊಳಿಸಿದ್ದರು. ಆಕೆ ವಜ್ರ ಮಾರಾಟದಲ್ಲಿ ಪರಿಣತಿ ಹೊಂದಿದ್ದಾಳೆ.

* ತನ್ನ ವೃತ್ತಿಪರ ಅನ್ವೇಷಣೆಗಳ ಜೊತೆಗೆ ವಿಕ್ಟೋರಿಯಾ ಸೌಂದರ್ಯ ವಲಯದಲ್ಲಿ ಉದಯೋನ್ಮುಖ ಉದ್ಯಮಿಯಾಗಿದ್ದರು. ವ್ಯಾಪಾರ ಪ್ರಜ್ಞೆ ಮತ್ತು ಸೃಜನಶೀಲ ದೃಷ್ಟಿಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದರು.

* ವಿಕ್ಟೋರಿಯಾ ಅವರು ನೃತ್ಯದಲ್ಲಿ ಡ್ಯಾನಿಶ್ ಚಾಂಪಿಯನ್ ಆಗಿದ್ದರು. ನುರಿತ ನೃತ್ಯ ಶಿಕ್ಷಕಿ. ತನ್ನ ಪ್ರತಿಭೆ ಮತ್ತು ಕಲಾ ಪ್ರಕಾರದ ಉತ್ಸಾಹ ಪ್ರದರ್ಶಿಸುತ್ತದೆ.

* ವಿಕ್ಟೋರಿಯಾ ಅವರು ಸಮರ್ಪಿತ ಸ್ವಯಂಸೇವಕರಾಗಿದ್ದಾರೆ. ಅವರು ಸ್ಥಳೀಯ ಕ್ರೀಡಾ ಸಂಘಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸಲು ಕೆಲಸ ಮಾಡಿದ್ದಾರೆ. ಅವರ ಸಮುದಾಯದ ಇತರರಿಗೆ ಮಾರ್ಗದರ್ಶನ ನೀಡಿದ್ದಾರೆ.

* ಮಾನಸಿಕ ಆರೋಗ್ಯದ ಜಾಗೃತಿಯನ್ನೂ ಮೂಡಿಸಿದ್ದಾರೆ. ಸ್ವಯಂ-ಸಬಲೀಕರಣವನ್ನು ಪ್ರೇರೇಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

* ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಯನದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ತನ್ನ ಆಕಾಂಕ್ಷೆಯನ್ನು ಕೆಜೆರ್, ಹೊಂದಿದ್ದಾರೆ. ಆ ಮೂಲಕ ಭವಿಷ್ಯ ಲೀಡರ್ ಆಗುವ ಕನಸನ್ನು ಹೊತ್ತಿದ್ದಾರೆ.

ಭಾರತದ ರಿಯಾ ಸಿಂಘಾಗೆ ನಿರಾಸೆ

2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟಕ್ಕೆ ಮುತ್ತಿಕ್ಕಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಗುಜರಾತ್​ನ 19 ವರ್ಷದ ರಿಯಾ ಸಿಂಘಾ, ವಿಶ್ವ ಸುಂದರಿ ಕಿರೀಟ ಗೆಲ್ಲುವಲ್ಲಿ ವಿಫಲರಾದರು. 2023ರ ಮಿಸ್ ಟೀನ್ ಅರ್ಥ್ ಮತ್ತು ದಿವಾಸ್ ಮಿಸ್ ಗುಜರಾತ್ 2020 ಪ್ರಶಸ್ತಿ ಗೆದ್ದಿರುವ ಸಿಂಘಾ, ಅಹಮದಾಬಾದ್‌ನ ಜಿಎಲ್​ಎಸ್ ಯೂನಿವರ್ಸಿಟಿ ಪ್ರದರ್ಶನ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಟಾಪ್ -12ರಲ್ಲಿ ಸ್ಥಾನ ಪಡೆದಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.