ಪ್ರಧಾನಿ ಮೋದಿ ಪ್ರಮಾಣ ಸಂಪನ್ನ; ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ, ಮೈತ್ರಿ ಶಕೆ ಮತ್ತೆ ಶುರು, ಸಚಿವ ಸಂಪುಟದಲ್ಲಿ ಯಾರಿದ್ದಾರೆ ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಧಾನಿ ಮೋದಿ ಪ್ರಮಾಣ ಸಂಪನ್ನ; ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ, ಮೈತ್ರಿ ಶಕೆ ಮತ್ತೆ ಶುರು, ಸಚಿವ ಸಂಪುಟದಲ್ಲಿ ಯಾರಿದ್ದಾರೆ ಇಲ್ಲಿದೆ ವಿವರ

ಪ್ರಧಾನಿ ಮೋದಿ ಪ್ರಮಾಣ ಸಂಪನ್ನ; ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ, ಮೈತ್ರಿ ಶಕೆ ಮತ್ತೆ ಶುರು, ಸಚಿವ ಸಂಪುಟದಲ್ಲಿ ಯಾರಿದ್ದಾರೆ ಇಲ್ಲಿದೆ ವಿವರ

ರಾ‍ಷ್ಟ್ರಪತಿ ಭವನದ ಆವರಣದಲ್ಲಿ ಇಂದು ರಾತ್ರಿ 7.15ಕ್ಕೆ ಪ್ರಧಾನಿ ಮೋದಿ ಪ್ರಮಾಣ ಸಂಪನ್ನವಾಯಿತು. ಸಚಿವ ಸಂಪುಟದ ಸಹೋದ್ಯೋಗಿಗಳು ಕೂಡ ಪ್ರಮಾಣ ಸ್ವೀಕರಿಸಿದರು. ಇದರೊಂದಿಗೆ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮೈತ್ರಿ ಶಕೆ ಮತ್ತೆ ಶುರುವಾಗಿದೆ. ಸಚಿವ ಸಂಪುಟದಲ್ಲಿ ಯಾರಿದ್ದಾರೆ ವಿವರ ಹೀಗಿದೆ.

ಪ್ರಧಾನಿ ಮೋದಿ ಪ್ರಮಾಣ ಸಂಪನ್ನ; ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ, ಮೈತ್ರಿ ಶಕೆ ಮತ್ತೆ ಶುರು
ಪ್ರಧಾನಿ ಮೋದಿ ಪ್ರಮಾಣ ಸಂಪನ್ನ; ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ, ಮೈತ್ರಿ ಶಕೆ ಮತ್ತೆ ಶುರು

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಇಂದು (ಜೂನ್ 9) ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು. ಕಳೆದ ಎರಡು ಅವಧಿಗೂ ಬಿಜೆಪಿಗೆ ಸ್ಪಷ್ಟ ಬಹುಮತ ಇತ್ತು. ಈ ಬಾರಿ ನರೇಂದ್ರ ಮೋದಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಯಕರಾಗಿ ಅಧಿಕಾರ ಸ್ವೀಕರಿಸಿರುವುದು ವಿಶೇಷ.

ರಾಷ್ಟ್ರಪತಿ ಭವನದ ಆವರಣದಲ್ಲಿ ಗೋಧೂಳಿ ಮುಹೂರ್ತದಲ್ಲಿ ರಾತ್ರಿ 7.15ಕ್ಕೆ ನಡೆದ ಅದ್ದೂರಿ ಪ್ರಮಾಣವಚನ ಸಮಾರಂಭವನ್ನು ಸ್ಥಳದಲ್ಲಿದ್ದ ವಿದೇಶಿ ಗಣ್ಯರು, ಆಹ್ವಾನಿತರು ಸೇರಿ 8000ದಷ್ಟು ಅತಿಥಿಗಳೊಂದಿಗೆ ಜಗತ್ತು ಕಣ್ತುಂಬಿಕೊಂಡಿತು.

ಪ್ರಧಾನಿ ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಅದಾದ ಬಳಿಕ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್‌, ಮನೋಹರಲಾಲ್ ಖಟ್ಟರ್‌, ಎಚ್‌ ಡಿ ಕುಮಾರಸ್ವಾಮಿ, ಪಿಯೂಷ್ ಗೋಯೆಲ್‌, ಧರ್ಮೇಂದ್ರ ಪ್ರಧಾನ್, ಜಿತನ್ ರಾಮ್ ಮಾಂಜಿ, ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್), ಸರ್ಬಾನಂದ ಸೋನೋವಾಲ್‌, ಡಾ. ವೀರೇಂದ್ರ ಕುಮಾರ್, ರಾಮ್ ಮೋಹನ್ ನಾಯ್ಡು, ಪ್ರಲ್ಹಾದ್ ಜೋಶಿ, ಜುಯೆಲ್ ಓರಂ, ಗಿರಿರಾಜ್ ಸಿಂಗ್‌, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್, ಗಜೇಂದ್ರ ಸಿಂಗ್ ಶೇಖಾವತ್‌, ಅನ್ನಪೂರ್ಣಾ ದೇವಿ, ಕಿರಣ್‌ ರಿಜಿಜು, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವೀಯ, ಜಿ. ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿಆರ್‌ ಪಾಟೀಲ್‌ ಸಚಿವ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಸಚಿವರಾಗಿ ರಾವ್ ಇಂದರ್ ಜಿತ್ ಸಿಂಗ್‌, ಡಾ. ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘ್ವಾಲ್, ಪ್ರತಾಪ್ ರಾವ್ ಜಾಧವ್, ಜಯಂತ್ ಚೌಧರಿ, ಜತಿನ್ ಪ್ರಸಾದ್, ಶ್ರೀಪಾದ್ ಯೆಸ್ಸೋ ನಾಯ್ಕ್, ಪಂಕಜ್ ಚೌಧರಿ, ಕ್ರಿಶನ್ ಪಾಲ್, ರಾಮದಾಸ್ ಅಠಾವಳೆ, ರಾಮನಾಥ್ ಠಾಕೂರ್, ನಿತ್ಯಾನಂದ ರಾಯ್, ಅನುಪ್ರಿಯಾ ಪಟೇಲ್‌, ಚಂದ್ರಶೇಖರ್ ಪೆಮ್ಮಸಾನಿ, ಪ್ರೊಫೆಸರ್ ಎಸ್ ಪಿ ಸಿಂಗ್ ಭಗೇಲ್, ಶೋಭಾ ಕರಂದ್ಲಾಜೆ, ಕೀರ್ತಿ ವರ್ಧನ್ ಸಿಂಗ್, ಬಿ ಎಲ್ ವರ್ಮಾ, ಸುರೇಶ್ ಗೋಪಿ, ಎಲ್ ಮುರುಗನ್‌, ಅಜಯ್ ತಮ್ಟಾ, ಬಂಡಿ ಸಂಜಯ್, ಕಮಲೇಶ್ ಪಾಸ್ವಾನ್, ಭಾಗೀರಥ್ ಚೌಧರಿ, ಸತೀಶ್‌ ಚಂದ್ರ ದುಬೆ, ಸಂಜಯ್ ಸೇಠ್, ರವನೀತ್ ಸಿಂಗ್, ದುರ್ಗಾದಾಸ್ ಉಯಿಕೆ, ರಕ್ಷಾ ನಿಖಿಲ ಖಡ್ಸೆ, ಸುಕಾಂತ ಮಜುಂದಾರ್‌, ಸಾವಿತ್ರಿ ಠಾಕೂರ್, ತೋಕನ್ ಸಾಹು, ರಾಜ್ ಭೂಷಣ್ ಚೌಧರಿ, ಭೂಪತಿ ರಾಜು ಶ್ರೀನಿವಾಸ್ ವರ್ಮಾ, ಹರ್ಷ್ ಮಲ್ಹೋತ್ರಾ, ನಿಮು ಬೆನ್ ಬಾಂಬಣಿಯಾ, ಮುರಳೀಧರ್ ಮೊಹೋಳ್, ಜಾರ್ಜ್ ಕುರಿಯನ್, ಅವರು ಪ್ರಮಾಣ ಸ್ವೀಕರಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಇತರರು ಸೇರಿದಂತೆ ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಾವು ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ, ತಮ್ಮ ಪಕ್ಷದ ಸದಸ್ಯರೂ ಇರಲ್ಲ ಎಂದು ಶನಿವಾರವೇ ಘೋಷಿಸಿದ್ದರು.

ಮೋದಿ 3.0 - ಪ್ರಧಾನಿ ಮೋದಿ ಸಚಿವ ಸಂಪುಟ

ಮೋದಿ 3.0 ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 31 ಕ್ಯಾಬಿನೆಟ್ ಸಚಿವರು ಮತ್ತು 41 ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಸಚಿವ ಸಂಪುಟ ಸೇರಿದವರು ಯಾವ ಪಕ್ಷದವರು ಎಷ್ಟು ಎಂಬಿತ್ಯಾದಿ ವಿವರ ಹೀಗಿದೆ

ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಬಿಜೆಪಿ ಸದಸ್ಯರು

1 ) ನರೇಂದ್ರ ಮೋದಿ - ಪ್ರಧಾನಿ

2) ರಾಜನಾಥ್ ಸಿಂಗ್

3) ಅಮಿತ್ ಷಾ -

4) ನಿತಿನ್ ಗಡ್ಕರಿ

5) ಜೆಪಿ ನಡ್ಡಾ

6) ಶಿವರಾಜ್ ಸಿಂಗ್ ಚೌಹಾಣ್

7) ನಿರ್ಮಲಾ ಸೀತಾರಾಮನ್

8) ಎಸ್ ಜೈಶಂಕರ್‌

9) ಮನೋಹರಲಾಲ್ ಖಟ್ಟರ್‌

10) ಪಿಯೂಷ್ ಗೋಯೆಲ್

11) ಧರ್ಮೇಂದ್ರ ಪ್ರಧಾನ್

12) ಸರ್ಬಾನಂದ ಸೋನೋವಾಲ್‌

13) ಡಾ. ವೀರೇಂದ್ರ ಕುಮಾರ್

14) ಪ್ರಲ್ಹಾದ್ ಜೋಶಿ

15) ಜುಯೆಲ್ ಓರಂ

16) ಗಿರಿರಾಜ್ ಸಿಂಗ್‌

17) ಅಶ್ವಿನಿ ವೈಷ್ಣವ್

18) ಜ್ಯೋತಿರಾದಿತ್ಯ ಸಿಂಧಿಯಾ

19) ಭೂಪೇಂದ್ರ ಯಾದವ್

20) ಗಜೇಂದ್ರ ಸಿಂಗ್ ಶೇಖಾವತ್‌

21) ಅನ್ನಪೂರ್ಣ ದೇವಿ

22) ಕಿರಣ್‌ ರಿಜಿಜು

23) ಹರ್ದೀಪ್ ಸಿಂಗ್ ಪುರಿ

24) ಮನ್ಸುಖ್ ಮಾಂಡವೀಯ

25) ಜಿ. ಕಿಶನ್ ರೆಡ್ಡಿ

26) ಸಿ ಆರ್‌ ಪಾಟೀಲ್‌

ರಾಜ್ಯ ಮಂತ್ರಿಗಳು (State Ministers)

1) ರಾವ್ ಇಂದರ್ ಜಿತ್ ಸಿಂಗ್‌

2) ಡಾ. ಜಿತೇಂದ್ರ ಸಿಂಗ್

3) ಅರ್ಜುನ್ ರಾಮ್ ಮೇಘ್ವಾಲ್

4 ) ಜಿತಿನ್ ಪ್ರಸಾದ

5) ಶ್ರೀಪಾದ್ ಯೆಸ್ಸೋ ನಾಯ್ಕ್

6) ಪಂಕಜ್ ಚೌಧರಿ

7) ಕ್ರಿಶನ್ ಪಾಲ್

8) ನಿತ್ಯಾನಂದ ರಾಯ್

9) ವಿ. ಸೋಮಣ್ಣ

10) ಪ್ರೊಫೆಸರ್ ಎಸ್ ಪಿ ಸಿಂಗ್ ಭಗೇಲ್

11) ಶೋಭಾ ಕರಂದ್ಲಾಜೆ

12) ಕೀರ್ತಿ ವರ್ಧನ್ ಸಿಂಗ್

13) ಬಿ ಎಲ್ ವರ್ಮಾ

14) ಶಂತನು ಠಾಕೂರ್

15) ಸುರೇಶ್ ಗೋಪಿ

16) ಎಲ್ ಮುರುಗನ್

17) ಅಜಯ್ ತಮ್ಟಾ

18) ಬಂಡಿ ಸಂಜಯ್

19) ಕಮಲೇಶ್ ಪಾಸ್ವಾನ್

20) ಭಾಗೀರಥ್ ಚೌಧರಿ

21) ಸತೀಶ್‌ ಚಂದ್ರ ದುಬೆ

22) ಸಂಜಯ್ ಸೇಠ್

23 ) ರವನೀತ್ ಸಿಂಗ್

24) ದುರ್ಗಾದಾಸ್ ಉಯಿಕೆ

25) ರಕ್ಷಾ ನಿಖಿಲ ಖಡ್ಸೆ

26) ಸುಕಾಂತ ಮಜುಂದಾರ್‌

27) ಸಾವಿತ್ರಿ ಠಾಕೂರ್

28) ತೋಕನ್ ಸಾಹು

29) ರಾಜ್ ಭೂಷಣ್ ಚೌಧರಿ

30) ಭೂಪತಿ ರಾಜು ಶ್ರೀನಿವಾಸ್ ವರ್ಮಾ

31) ಹರ್ಷ್ ಮಲ್ಹೋತ್ರಾ

32) ನಿಮು ಬೆನ್ ಬಾಂಬಣಿಯಾ

33) ಮುರಳೀಧರ್ ಮೊಹೋಳ್

34) ಜಾರ್ಜ್ ಕುರಿಯನ್

35) ಪಬಿತ್ರ ಮಾರ್ಗರಿಟಾ

ಮೋದಿ ಸಂಪುಟ; ಎನ್‌ಡಿಎ ಮಿತ್ರ ಪಕ್ಷ ಸದಸ್ಯರು

ಸಂಪುಟ ದರ್ಜೆ ಸಚಿವರು (Cabinet Ministers)

ಜೆಡಿಎಸ್

1) ಎಚ್ ಡಿ ಕುಮಾರಸ್ವಾಮಿ

ಹಿಂದೂಸ್ತಾನಿ ಅವಾಮ್ ಮೋರ್ಚಾ

2) ಜಿತನ್ ರಾಮ್ ಮಾಂಜಿ

ಜೆಡಿಯು

3) ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್)

ತೆಲುಗುದೇಶಂ ಪಾರ್ಟಿ

4) ರಾಮ್ ಮೋಹನ್ ನಾಯ್ಡು

ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್ ಪಾಸ್ವಾನ್‌)

5) ಚಿರಾಜ್ ಪಾಸ್ವಾನ್‌

ರಾಜ್ಯ ಸಚಿವರು (State Ministers)

ಶಿವಸೇನಾ (ಶಿಂಧೆ)

1) ಪ್ರತಾಪ್ ರಾವ್ ಜಾಧವ್

ರಾಷ್ಟ್ರೀಯ ಲೋಕ ದಳ

2) ಜಯಂತ್ ಚೌಧರಿ

ಆರ್‌ಪಿಐ

3) ರಾಮದಾಸ್ ಅಠಾವಳೆ

ಜೆಡಿಯು

4) ರಾಮನಾಥ್ ಠಾಕೂರ್‌

ಅಪ್ನಾ ದಳ್ (ಸೋನೇಲಾಲ್‌)

5) ಅನುಪ್ರಿಯಾ ಪಟೇಲ್‌

ಟಿಡಿಪಿ

6) ಚಂದ್ರಶೇಖರ್ ಪೆಮ್ಮಸಾನಿ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನ ಗೆದ್ದುಕೊಂಡರೆ, ಮಿತ್ರಪಕ್ಷಗಳು 53 ಸ್ಥಾನಗಳನ್ನು ಗೆದ್ದ ಕಾರಣ, 543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಗೆ 293 ಸದಸ್ಯ ಬಲ ಬಂದಿದೆ. ಇದರಲ್ಲಿ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ (16), ನಿತೀಶ್ ಕುಮಾರ್ ಅವರ ಜೆಡಿಯು (12) ಸೇರಿ 28 ಸ್ಥಾನಗಳನ್ನು ಹೊಂದಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.