RRB 2024: ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ, 1,376 ಪೋಸ್ಟ್​ಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ; ವೇತನ ಎಷ್ಟಿದೆ?-rrb paramedical recruitment 2024 application window open for 1376 posts check vacancy details eligibility and more prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rrb 2024: ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ, 1,376 ಪೋಸ್ಟ್​ಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ; ವೇತನ ಎಷ್ಟಿದೆ?

RRB 2024: ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ, 1,376 ಪೋಸ್ಟ್​ಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ; ವೇತನ ಎಷ್ಟಿದೆ?

RRB Paramedical Recruitment 2024: ರೈಲ್ವೆ ನೇಮಕಾತಿ ಮಂಡಳಿಯು 1376 ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೊನೆಯ ದಿನಾಂಕ ಸೆಪ್ಟೆಂಬರ್​ 17.

ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ
ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ

RRB Paramedical Recruitment 2024: ರೈಲ್ವೆ ನೇಮಕಾತಿ ಮಂಡಳಿ (RRB) ಹೊಸ ನೇಮಕಾತಿಯ ಅಧಿಸೂಚನೆ ಬಿಡುಗಡೆ ಮಾಡಿದ್ದು, 1376 ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪ್ಯಾರಾ ಮೆಡಿಕಲ್‌ನ ವಿವಿಧ ವರ್ಗಗಳಿಗೆ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್​​ಆರ್​​ಬಿ ಪ್ರಾದೇಶಿಕ ವೆಬ್​ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಗಸ್ಟ್​​ 17ರಂದು ಅರ್ಜಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್​ 16 ಆಗಿದೆ.

ವಿದ್ಯಾರ್ಹತೆ

ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಬದಲಾಗುತ್ತವೆ. ಪಿಯುಸಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿಎಸ್ಸಿ, ಡಿಪ್ಲೊಮಾ, ಬಿಎ, ಬಿಎಸ್ಸಿ ನರ್ಸಿಂಗ್, ಡಿ ಫಾರ್ಮಸಿ, ಬಿ ಫಾರ್ಮಸಿ.

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭ - ಆಗಸ್ಟ್ 17, 2024

ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ - ಸೆಪ್ಟೆಂಬರ್ 16, 2024

ಅರ್ಜಿ ತಿದ್ದುಪಡಿಗೆ ಅವಕಾಶ - ಸೆಪ್ಟೆಂಬರ್ 17 - ಸೆಪ್ಟೆಂಬರ್ 26, 2024

ಆಯ್ಕೆ ಪ್ರಕ್ರಿಯೆ

ಪ್ಯಾರಾ ಮೆಡಿಕಲ್ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ರೈಲ್ವೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳೂ ಇರುತ್ತವೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ ಪಾವತಿಸಬೇಕು. ಆದರೆ, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಅಂಗವಿಕಲರು, ಮಹಿಳೆಯರು, ತೃತೀಯ ಲಿಂಗಿಗಳು, ಇಬಿಸಿ 250 ರೂಪಾಯಿ. ಅರ್ಜಿ ಶುಲ್ಕವನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವೆಬ್​ಸೈಟ್ - rrbapply.gov.in

ಸಂಬಳ - 19 ಸಾವಿರದಿಂದ 44 ಸಾವಿರ ತನಕ (ಉದ್ಯೋಗದ ಆಧಾರಕ್ಕೆ ತಕ್ಕಂತೆ ವೇತನ)

ಆರ್​​ಆರ್​​ಬಿ ಸ್ಟಾಫ್ ನರ್ಸ್ ಪ್ಯಾರಾಮೆಡಿಕಲ್ ನೇಮಕಾತಿಗೆ ಹೇಗೆ ಅರ್ಜಿ ಸಲ್ಲಿಸಬೇಕು?

  • ಯಾವುದೇ ಒಂದು ಅಧಿಕೃತ ಆರ್​ಆರ್​ಬಿ ವೆಬ್‌ಸೈಟ್‌ ಓಪನ್ ಮಾಡಿ.
  • ಮುಖಪುಟದಲ್ಲಿ ಆರ್​ಆರ್​ಬಿ ಪ್ಯಾರಾಮೆಡಿಕಲ್ ಪೋಸ್ಟ್​ಗೆ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
  • ಅಪ್ಲೈ ಟ್ಯಾಬ್​ನಲ್ಲಿ 'ಕ್ರಿಯೇಟ್ ಅಕೌಂಟ್' ಕ್ಲಿಕ್ ಮಾಡಿ.
  • ಖಾತೆಯನ್ನು ರಚಿಸಲು ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ವಿಳಾಸ ಮತ್ತು ಪಾಸ್​ವರ್ಡ್​​ನೊಂದಿಗೆ ಲಾಗ್ ಇನ್ ಮಾಡಿ.
  • ಈಗ ಮಾನ್ಯ ಮತ್ತು ಸರಿಯಾದ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ.
  • ನಿಗದಿತ ನಮೂನೆಯಲ್ಲಿ ಭಾವಚಿತ್ರ, ಸಹಿ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ವರ್ಗಕ್ಕೆ ಅನುಗುಣವಾಗಿ ನಿಗದಿತ ಶುಲ್ಕವನ್ನು ಪಾವತಿಸಿ.

ಪೋಸ್ಟ್​​ಗಳು - ಪೋಸ್ಟ್​​​​ಗಳು

  • ಆಹಾರ ತಜ್ಞ – 5 ಪೋಸ್ಟ್​
  • ನರ್ಸಿಂಗ್ ಸೂಪರಿಂಟೆಂಡೆಂಟ್ - ​​713 ಪೋಸ್ಟ್​
  • ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ - 4 ಪೋಸ್ಟ್​
  • ಕ್ಲಿನಿಕಲ್ ಸೈಕಾಲಜಿಸ್ಟ್ – 7 ಪೋಸ್ಟ್​​
  • ದಂತ ನೈರ್ಮಲ್ಯ ತಜ್ಞ – 3 ಪೋಸ್ಟ್​​
  • ಡಯಾಲಿಸಿಸ್ ತಂತ್ರಜ್ಞ – 20 ಪೋಸ್ಟ್​
  • ಆರೋಗ್ಯ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ III – 126 ಪೋಸ್ಟ್
  • ಲ್ಯಾಬೋರೇಟರಿ ಸೂಪರಿಂಟೆಂಡೆಂಟ್ ಗ್ರೇಡ್ III – 27 ಪೋಸ್ಟ್
  • ಪರ್ಫ್ಯೂಷನಿಸ್ಟ್ – 2 ಪೋಸ್ಟ್​​
  • ಭೌತಚಿಕಿತ್ಸಕ ಗ್ರೇಡ್ II – 20 ಪೋಸ್ಟ್​
  • ಆಕ್ಯುಪೇಷನಲ್ ಥೆರಪಿಸ್ಟ್ – 2 ಪೋಸ್ಟ್​
  • ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ – 2 ಪೋಸ್ಟ್​
  • ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ) – 246 ಪೋಸ್ಟ್​
  • ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ – 64 ಪೋಸ್ಟ್​
  • ಸ್ಪೀಚ್ ಥೆರಪಿಸ್ಟ್ – 1 ಪೋಸ್ಟ್​
  • ಹೃದಯ ತಂತ್ರಜ್ಞ – 4 ಪೋಸ್ಟ್​
  • ಆಪ್ಟೋಮೆಟ್ರಿಸ್ಟ್ – 4 ಪೋಸ್ಟ್​
  • ಇಸಿಜಿ ತಂತ್ರಜ್ಞ – 13 ಪೋಸ್ಟ್​
  • ಪ್ರಯೋಗಾಲಯ ಸಹಾಯಕ ಗ್ರೇಡ್ II – 94 ಪೋಸ್ಟ್​
  • ಫೀಲ್ಡ್ ವರ್ಕರ್ – 19 ಪೋಸ್ಟ್​

 ಆರ್​ಆರ್​​ಬಿ ಪ್ಯಾರಾಮೆಡಿಕಲ್ 2024 ರ ಸಂಬಳ
ಪೋಸ್ಟ್ ಹೆಸರುವೇತನ ಆಯೋಗಆರಂಭಿಕ ವೇತನ
ಆಹಾರತಜ್ಞ744900
ನರ್ಸಿಂಗ್ ಸೂಪರಿಂಟೆಂಡೆಂಟ್744900
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್35400
ಕ್ಲಿನಿಕಲ್ ಸೈಕಾಲಜಿಸ್ಟ್35400
ದಂತ ನೈರ್ಮಲ್ಯ ತಜ್ಞ35400
ಡಯಾಲಿಸಿಸ್ ತಂತ್ರಜ್ಞ35400
ಆರೋಗ್ಯ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 335400
ಪ್ರಯೋಗಾಲಯ ಸೂಪರಿಂಟೆಂಡೆಂಟ್ ಗ್ರೇಡ್ 335400
ಪರ್ಫ್ಯೂಷನಿಸ್ಟ್35400
ಫಿಸಿಯೋಥೆರಪಿಸ್ಟ್ ಗ್ರೇಡ್ 235400
ಆಕ್ಯುಪೇಷನಲ್ ಥೆರಪಿಸ್ಟ್35400
ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ35400
ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ)529200
ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ529200
ಸ್ಪೀಚ್ ಥೆರಪಿಸ್ಟ್529200
ಹೃದಯ ತಂತ್ರಜ್ಞ425500 
ಆಪ್ಟೋಮೆಟ್ರಿಸ್ಟ್425500 
ಇಸಿಜಿ ತಂತ್ರಜ್ಞ425500 
ಪ್ರಯೋಗಾಲಯ ಸಹಾಯಕ ಗ್ರೇಡ್ 2321700
ಫೀಲ್ಡ್ ವರ್ಕರ್219900

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.