GoPro Capture: ಬಲೂನ್ ಮೂಲಕ ಗೋಪ್ರೋ ಹಾರಿಸಿ ಆಕಾಶದಿಂದ ಭೂಮಿಯ ಚಿತ್ರ ಸೆರೆಹಿಡಿದ ಯುವಕ; ಎಷ್ಟು ಸೊಗಸಾಗಿದೆ ನೋಡಿ ಫೋಟೋ
Earth picture: BloonStu ಎಂದು ಕರೆಯಲ್ಪಡುವ ಯುಟ್ಯೂಬರ್ ಭೂಮಿಯಲ್ಲಿ ಇದ್ದುಕೊಂಡೆ ಆಕಾಶದಿಂದ ಭೂಮಿಯ ಫೋಟೋ ಕ್ಲಿಕ್ ಮಾಡಿದ್ದಾನೆ. ಇದು ಹೇಗೆ ಸಾಧ್ಯ ಎಂದು ನೀವು ಅಂದುಕೊಳ್ಳುತ್ತಿದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ. ಎಷ್ಟು ಸೊಗಸಾಗಿದೆ ನೋಡಿ ಫೋಟೋ, ನೋಡಿದವರಿಗೆ ವಾವ್! ಎಂದು ಅನಿಸುವುದು ಸಹಜ.
ನೀವೇ ಸ್ವತಃ ಆಕಾಶದಿಂದ ಭೂಮಿಯ ಪಟವನ್ನ ತೆಗೆಯೋಕೆ ಸಾಧ್ಯಾನ ಎಂದು ಒಮ್ಮೆ ಯೋಚನೆ ಮಾಡಿ. ನೀವು ಸಾಧ್ಯವಿದೆ ಎಂದು ಅಂದುಕೊಳ್ಳಬಹುದು. ಯಾಕೆಂದರೆ ವಿಮಾನ ಏರಿದಾಗ ಈ ರೀತಿ ಫೋಟೋ ತೆಗೆಯಲು ಸಾಧ್ಯವಿದೆ. ಆದರೆ ಭೂಮಿ ಮೇಲೆ ಇದ್ದುಕೊಂಡೇ ಒಬ್ಬ ಯುವಕ ಈ ಫೋಟೋ ಕ್ಲಿಕ್ ಮಾಡಿದ್ದಾನೆ. ನಿಮಗೂ ಇದನ್ನು ಕೇಳಿ ಆಶ್ಚರ್ಯ ಆಗಿರಬಹುದು. ತನ್ನ ಯೋಚನಾ ಸಾಮರ್ಥ್ಯದಿಂದ ಹಾಗೂ ಪ್ರಯತ್ನದಿಂದ ತಾನು ಭೂಮಿಯಲ್ಲೇ ಇದ್ದುಕೊಂಡು ಬಾಹ್ಯಾಕಾಶದಿಂದ ಫೋಟೋ ತೆಗೆದಿದ್ದಾನೆ. ಇದಕ್ಕೆ ತಗುಲಿದ ವೆಚ್ಚ ಕೂಡ ತುಂಬಾ ಕಡಿಮೆ.
ಹಾಗಾದ್ರೆ ಅವನು ಏನು ಮಾಡಿದ್ದಾನೆ ಎಂಬ ಅಂಶವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಒಂದು ನೈಟ್ರೋಜನ್ ಬಲೂನ್‌ಅನ್ನು ಆಕಾಶಕ್ಕೆ ಹಾರಿಬಿಟ್ಟು ಅದಕ್ಕೆ ಗೋಪ್ರೋ ಕ್ಯಾಮರಾ ಕಟ್ಟಿದ್ದಾನೆ. ಆಕಾಶದ ಅಂಚಿನಿಂದ ಭೂಮಿಯ ಚಿತ್ರವನ್ನು ಈ ಕ್ಯಾಮರಾ ಸೆರೆಹಿಡಿದಿದೆ. ನೋಡಲು ಬಹಳ ಸುಂದರವಾಗಿ ಇದು ಕಾಣುತ್ತದೆ. ತುಂಬಾ ಸಹಜವಾಗಿ ಮತ್ತು ಕ್ಲಿಯರ್‌ಆಗಿ ವಿಡಿಯೋ ಕೂಡ ಇದೆ.
BloonStu ಎಂದು ಕರೆಯಲ್ಪಡುವ ಯುಟ್ಯೂಬರ್ ಈ ಫೋಟೋವನ್ನು ತೆಗೆದಿದ್ದಾನೆ. ಹೆಚ್ಚಿನ ಗುಣಮಟ್ಟದ ಚಿತ್ರ ಇದಾಗಿದ್ದು. ನೋಡಿದವರಿಗೆ ವಾವ್! ಎಂದು ಅನಿಸುವುದು ಸಹಜ. ಗೋಪ್ರೋವು ಪ್ರತಿ ರೋಮಾಂಚನಕಾರಿ ಕ್ಷಣಗಳನ್ನು ಸೆರೆಹಿಡಿದಿದೆ. ಇದರ ಫೋಟೋ ಹಾಕು ಗುಣಮಟ್ಟದ ವಿಡಿಯೋವನ್ನು ನೋಡಿ ಜನರು ಶಭಾಷ್ ಎಂದಿದ್ದಾರೆ.
ಈ ಪ್ರಯೋಗ ಸಂಪೂರ್ಣವಾಗಿ ಯಶಸ್ವಿಯಾಗಿದೆ
ಈ ವಿಡಿಯೋವನ್ನು ನೀವೂ ಸಹ ನೋಡಬಹುದು. GoPro ಹೊಂದಿರುವ ಬಲೂನ್ ಅದು ಸಿಡಿಯುವವರೆಗೆ ಮೇಲಕ್ಕೆ ಏರಿತು ಮತ್ತೆ ಅದು ಸಿಡಿದ ನಂತರ ಭೂಮಿಯ ಕಡೆಗೆ ಮರಳಿದೆ. ನಂತರ ಅದು ಯಾವ ಜಾಗದಲ್ಲಿ ಬಿದ್ದಿದೆ ಎಂದು ಟ್ರ್ಯಾಕ್ ಮಾಡಲಾಗಿದೆ. ಅದನ್ನು ಟ್ರ್ಯಾಕ್ ಮಾಡಿ ಮತ್ತೆ ಆ ಜಾಗಕ್ಕೆ ಹೋಗಿ. ಅದನ್ನು ಹುಡಕಿ ನಂತರ ಅದರಲ್ಲಿನ ಫೂಟೇಜ್ ತೆಗೆದುಕೊಳ್ಳಲಾಗಿದೆ.
ಸ್ಪಾಟ್ ಜಿಪಿಎಸ್ ಟ್ರ್ಯಾಕರ್ ಬಳಸಿ ಅದನ್ನು ಹುಡುಕಲಾಗಿದೆ. ಅದನ್ನು ಹುಡುಕಿ ನಂತರ ಅದರ ವಿಡಿಯೋವನ್ನು ತೆಗೆದು ತಮ್ಮ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫ್ಲೈಟ್ ಸ್ಟ್ಯಾಂಡರ್ಡ್ಸ್ ಡಿಸ್ಟ್ರಿಕ್ಟ್ ಆಫೀಸ್ಗೆ ಉಡಾವಣೆ ಮಾಡುವುದಕ್ಕಿಂತ ಮುಂಚಿತವಾಗಿ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದರಂತೆ. ಎಲ್ಲಾ FAA ನಿಯಮಗಳನ್ನು ಅನುಸರಿ ನಂತರ ಉಡಾವಣೆ ಮಾಡಿದ್ಧಾರೆ.
ವಿಭಾಗ