Yulu electric two-wheelers: ಬಜಾಜ್ ಆಟೋ ಜತೆ ಸೇರಿ 2 ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪರಿಚಯಿಸಿದ ಬೆಂಗಳೂರಿನ ಯುಲು ಎಲೆಕ್ಟ್ರಿಕ್
ಬಜಾಜ್ ಆಟೋ ಜತೆ ಪಾಲುದಾರಿಕೆಯೊಂದಿಗೆ ಬೆಂಗಳೂರು ಮೂಲದ ಯುಲು ಬೈಕ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಮಿರಾಕಲ್ ಜಿಆರ್ ಮತ್ತು ಡೆಕ್ಸ್ ಜಿಆರ್‌ನ ಅಪ್‌ಗ್ರೇಡೆಡ್ ಆವೃತ್ತಿಗಳನ್ನು ಇಂದು ಪರಿಚಯಿಸಿದೆ.
ಬೆಂಗಳೂರು: ಬಜಾಜ್ ಆಟೋ ಜತೆ ಪಾಲುದಾರಿಕೆಯೊಂದಿಗೆ ಬೆಂಗಳೂರು ಮೂಲದ ಯುಲು ಬೈಕ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಮಿರಾಕಲ್ ಜಿಆರ್ ಮತ್ತು ಡೆಕ್ಸ್ ಜಿಆರ್‌ನ ಅಪ್‌ಗ್ರೇಡೆಡ್ ಆವೃತ್ತಿಗಳನ್ನು ಇಂದು ಪರಿಚಯಿಸಿದೆ. ಈಗಾಗಲೇ ಟ್ರಾಫಿಕ್ ರಸ್ತೆಯಲ್ಲಿ ಯುಲು ಬೈಕ್‌ಗಳಲ್ಲಿ ಸರಾಗವಾಗಿ ಹೋಗಿ ಖುಷಿಪಟ್ಟವರಿಗೆ ಇನ್ನೆರಡು ಬೈಕ್‌ಗಳು ಇನ್ನಷ್ಟು ಖುಷಿ ನೀಡುವ ನಿರೀಕ್ಷೆಯಿದೆ.
ಬಜಾಜ್ ಆಟೋ ಜತೆ ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಈ ಎರಡು ದ್ವಿಚಕ್ರವಾಹನಗಳ ವೆಚ್ಚ ಗಮನಾರ್ಹವಾಗಿ ಇಳಿಕೆ ಕಂಡಿದೆ ಎಂದು ಯುಲು ತಿಳಿಸಿದೆ. ಸ್ಥಳೀಯವಾಗಿ ಲಭ್ಯವಿರುವ ಬಿಡಿಭಾಗಗಳನ್ನು ಬಳಸಿ ಈ ದ್ವಿಚಕ್ರ ವಾಹನಗಳನ್ನು ತಯಾರಿಸುವುದಾಗಿ ಕಂಪನಿ ತಿಳಿಸಿದೆ. ಇದರಿಂದ ಇದರ ನಿರ್ಮಾಣ ವೆಚ್ಚ ತಗ್ಗಲಿದೆ ಎಂದು ಕಂಪನಿ ತಿಳಿಸಿದೆ.
"ವೆಚ್ಚ ಕಡಿಮೆ ಮಾಡುವ ದೃಷ್ಟಿಕೋನದಿಂದ ಬಜಾಜ್ ಆಟೋ ಜತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ಇದರಿಂದ ಮಾರುಕಟ್ಟೆಯಲ್ಲಿ ನಮ್ಮ ಪಾಲು ಹೆಚ್ಚಲಿದೆ" ಎಂದು ಯುಲು ಎಲೆಕ್ಟ್ರಿಕ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತ್ ಗುಪ್ತಾ ಹೇಳಿದ್ದಾರೆ.
ಸದ್ಯ ಯುಲು ಬೈಕ್‌ಗಳು ಬೆಂಗಳೂರು, ದೆಹಲಿ ಮತ್ತು ಮುಂಬೈಗಳಲ್ಲಿ ಬಾಡಿಗೆ ಮಾದರಿಗಳಲ್ಲಿ ದೊರಕುತ್ತವೆ. ಶೀಘ್ರದಲ್ಲಿ ಇದು ರಿಟೇಲ್ ಮಾಡೆಲ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅನುಜ್ ತಿವಾರಿ ತಿಳಿಸಿದ್ದಾರೆ.
ಈ ಎಲೆಕ್ಟ್ರಿಕ್ ವಾಹನ ಕಂಪನಿಗೆ ಅಮೆರಿಕ ಮೂಲದ ಮ್ಯಾಗ್ನಾ ಇಂಟರ್‌ನ್ಯಾಷನಲ್ ಕೂಡ ಹೂಡಿಕೆ ಮಾಡಿದೆ.
ಬಜಾಜ್ ಆಟೋ ಜತೆ ಮೈತ್ರಿ ಮಾಡಿಕೊಂಡಿದ್ದರೂ ಬಜಾಜ್‌ನ ಎಂಜಿನ್ (ಪವರ್‌ಟ್ರೈನ್) ಮತ್ತು ಬ್ಯಾಟರಿ ಮಾತ್ರ ಬಳಸಿಕೊಳ್ಳಲಿದೆ. ಈ ಎರಡು ವಾಹನಗಳನ್ನೂ ತನ್ನ ಮೂಲ ಘಟಕದಲ್ಲಿಯೇ ಕಂಪನಿ ಉತ್ಪಾದಿಸಲಿದೆ.
ಯುಲು ಬೈಕ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಅಮೆರಿಕ ಮೂಲಕದ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನಿಂದ (ಡಿಎಫ್‌ಸಿ) ಸುಮಾರು 73 ಕೋಟಿ ರೂ. ಸಾಲ ಪಡೆದಿತ್ತು. ಕಳೆದ ವರ್ಷ ಇದು ಸೀರಿಸ್ ಬಿ ಫಂಡಿಂಗ್ ಸುತ್ತಿನಲ್ಲಿ 653 ಕೋಟಿ ರೂ. ನಿಧಿ ಸಂಗ್ರಹಿಸಿತ್ತು.
ಈ ವರ್ಷ ಆಗಮಿಸಲಿರುವ ಬೈಕ್‌ಗಳು
ಭಾರತದ ಪ್ರತಿಷ್ಠಿತ ಮೋಟಾರ್‌ಬೈಕ್ ಕಂಪನಿಗಳು, ಹೊಸ ವರ್ಷದಲ್ಲಿ ಹೊಸ ತಲೆಮಾರಿನ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಅದೇ ರೀತಿ ಪ್ರಸ್ತುತ ಕೆಲವು ಮಾದರಿಗಳು ನವೀಕರಣಗಳನ್ನು ಪಡೆಯಲಿವೆ. ಈ ಪೈಕಿ ಕೆಲವು ಬೈಕ್‌ಗಳು ಭಾರೀ ವಿಶೇಷತೆಗಳನ್ನು ಹೊಂದಿದ್ದು, ಈ ಕುರಿತು ಇಲ್ಲಿದೆ ಮಾಹಿತಿ..
ಎಲ್ಲರಿಗೂ ಬೇಕು ಕಾರು ಬೈಕು, ದೇಶದಲ್ಲಿ ಭರ್ಜರಿ ವಾಹನ ಮಾರಾಟ
ಸ್ವಂತ ವಾಹನ ಹೊಂದುವ ಜನರ ಬಯಕೆ ಹೆಚ್ಚಾಗಿದ್ದು, ದೇಶದಲ್ಲಿ ವಾಹನ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ. ಕಳೆದ ತಿಂಗಳು ಅಂದರೆ ಜನವರಿ ತಿಂಗಳಲ್ಲಿ ದೇಶದಲ್ಲಿ ರಿಟೇಲ್ ವಾಹನ ಮಾರಾಟವು ಶೇಕಡ 14ರಷ್ಟು ಏರಿಕೆ ದಾಖಲಿಸಿದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಈ ಕುರಿತು ವಿವರ ಇಲ್ಲಿದೆ.