Shanideva Blessing: ಮುಂದಿನ 4 ತಿಂಗಳವರೆಗೆ ಈ 3 ರಾಶಿಯವರಿಗೆ ಶನಿ ದೇವರ ಹೆಚ್ಚು ಆಶೀರ್ವಾದ, ಅಧಿಕ ಧನ ಲಾಭ
ಶನಿ ದೇವರ ಆಶೀರ್ವಾದದಿಂದ ಮುಂದಿನ 4 ತಿಂಗಳು ಕೆಲವು ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳು ಇವೆ. ಯಾವುವು ಆ ರಾಶಿಗಳು ಎಂಬುದರ ಮಾಹಿತಿ ಇಲ್ಲಿದೆ.
(1 / 6)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗೆ ವಿಶೇಷ ಪ್ರಾಮುಖ್ಯತೆ ಇದೆ. ಶನಿ ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದೇ ಕಾರಣದಿಂದ ಕೆಲವು ರಾಶಿಯವರಿಗೆ ಶುಭ ಮತ್ತು ಅಶುಭಗಳು ದೀರ್ಘಕಾಲದವರೆಗೆ ಇರುತ್ತದೆ. ಶನಿಯು ಯಾವುದೇ ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಕಾಲ ಇರುತ್ತಾನೆ. ಆ ನಂತರ ನಿಧಾನವಾಗಿ ಬದಲಾಗುತ್ತಾನೆ.
(2 / 6)
ಶನಿಯನ್ನು ನ್ಯಾಯದ ದೇವರು ಹಾಗೂ ಕರ್ಮವನ್ನು ಕೊಡುವ ದೇವರು ಅಂತಲೂ ಪರಿಗಣಿಸಲಾಗುತ್ತದೆ. ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಆತನು ಫಲಿತಾಂಶಗಳನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಶನಿ ದೋಷ ಇರುವ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ.
(3 / 6)
ಶನಿ ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಮರಳುತ್ತಾನೆ. ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿದೆ. ನವೆಂಬರ್ 3ರವರೆಗೆ ಕುಂಭ ರಾಶಿಯಲ್ಲಿ ಇರಲಿರುವ ಶನಿ ಆ ನಂತರ ಮುಂದೆ ಸಾಗುತ್ತಾನೆ. ಹಿಮ್ಮುಖ ಚಲನೆಯಿಂದಾಗಿ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತಾನೆ. ಕುಂಭ ರಾಶಿಯಲ್ಲಿ ಶನಿಯ ಸಂಚಾರವು ಕೆಲವು ರಾಶಿಯವರಿಗೆ ಮಂಗಳಕರ ಪರಿಣಾಮವನ್ನು ಬೀರುತ್ತದೆ.
(4 / 6)
ವೃಷಭ ರಾಶಿ: ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖವಾಗುವುದರಿಂದ ವೃಷಭ ರಾಶಿಯವರಿಗೆ ಸಾಮಾಜಿಕ ಲಾಭ ದೊರೆಯುತ್ತದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತೆದ. ಹಣಕಾಸಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತದೆ, ಸಮಾಜದಲ್ಲಿ ಗೌರವ ಹೆಚ್ಚಳ ಹಾಗೂ ಮನಸ್ಸಿನಗೆ ಸಂತೋಷ ಇರಲಿದೆ.
(5 / 6)
ತುಲಾ ರಾಶಿ - ಶನಿಯ ಹಿಮ್ಮುಖ ಚಲನೆಯಿಂದಾಗಿ ತುಲಾ ರಾಶಿಯವರಿಗೆ ಹಲವು ಫಲಗಳಿವೆ. ನವೆಂಬರ್ 3 ರೊಳಗೆ ಅವಿವಾಹಿತರು ಮದುವೆಯಾಗುವ ಸಾಧ್ಯತೆ ಇದೆ. ಜೀವನ ಸುಗಮವಾಗಿ ಸಾಗಲಿದೆ. ನವೆಂಬರ್ ಮೊದಲ ವಾರ ನಿಮಗೆ ಕಾರು ಖರೀದಿಸಲು ಸೂಕ್ತ ಸಮಯ. ನಿಮಗೆ ಯಾವುದೇ ಒಂದು ಮೂಲದಿಂದ ಹಠಾತ್ ಹಣ ಬರಲಿದೆ. ಗುಡ್ ನ್ಯೂಸ್ ಕೇಳಲಿದ್ದೀರಿ.
ಇತರ ಗ್ಯಾಲರಿಗಳು