KL Rahul: ಅಲ್ಲೇ ಕಾಯಂ ಕೆಲಸ ಇದ್ರೆ ನೋಡಿ; ಧರ್ಮಸ್ಥಳ ಭೇಟಿ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಟ್ರೋಲ್
- KL Rahul: ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೆ ಒಳಗಾಗಿ ಟೂರ್ನಿಯಿಂದಲೇ ಹೊರಬಿದ್ದ ಕನ್ನಡಿಗ ಕೆಎಲ್ ರಾಹುಲ್, ಆ ಬಳಿಕ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಿಂದಲೂ ಹೊರಗುಳಿದ ರಾಹುಲ್, ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.

(1 / 5)
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ, ಇತ್ತೀಚೆಗೆ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಭಾನುವಾರ ಮಂಜುನಾಥಸ್ವಾಮಿಯ ದರ್ಶನ ಪಡೆದ ರಾಹುಲ್, ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
(2 / 5)
ಕೆಎಲ್ ರಾಹುಲ್ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆ ಬಗೆಯ ಕಾಮೆಂಟ್‌ಗಳು ಹೊರಬಂದಿವೆ. ಈ ನಡುವೆ ಹಲವು ನೆಟ್ಟಿಗರು ಕನ್ನಡಿಗನನ್ನು ಟ್ರೋಲ್ ಮಾಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದಿಂದ ಮೈದಾನದಲ್ಲಿ ಪ್ರದರ್ಶನವೇನು ಸುಧಾರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
(3 / 5)
ದೇವಸ್ಥಾನದ ಪೂಜಾರಿಯಂತೆ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಇಲ್ಲೇ ಕಾಯಂ ಉದ್ದೋಗ ಮಾಡುವುದು ಒಳ್ಳೆಯದು ಎಂದು ಇನ್ನೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.
(4 / 5)
ಎಲ್ಲರೂ ದೇವಸ್ಥಾನಕ್ಕೆ ಹೋಗಿಯೇ ಕಂಬ್ಯಾಕ್ ಮಾಡೋದಾ ಅಂತ ಒಬ್ಬನೆಟ್ಟಿಗ ಕೇಳಿದರೆ, ಮುಂದೆ ಆಗೋದೆಲ್ಲಾ ಇತಿಹಾಸದ ಪುಟ ಸೇರಲಿದೆ ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾರೆ.
(5 / 5)
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ರಾಹುಲ್ ಅವರು ತಮ್ಮ ಭಾವಿ ಪತ್ನಿ ಅಥಿಯಾ ಶೆಟ್ಟಿ ಅವರೊಂದಿಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ 1ರಿಂದ ಇಂದೋರ್‌ನಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್‌ಗೂ ಮುಚಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೂ, ರಾಹುಲ್ ಪ್ರದರ್ಶನದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಂಡಿಲ್ಲ.
ಇತರ ಗ್ಯಾಲರಿಗಳು