Dr Bro Bungee Jump: ಜೀಸಸ್, ಅಲ್ಲಾ, ಆಂಜನೇಯನ ನೆನೆದು 770 ಅಡಿ ಎತ್ತರದಿಂದ ಬಂಜೀ ಜಂಪ್ ಮಾಡಿದ ಡಾ. ಬ್ರೋ !
- ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಡಾ. ಬ್ರೋ ಅವರನ್ನು ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ. ಡಾ. ಬ್ರೋ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಗಗನ್ ಅವರನ್ನು ಜನರು ಡಾ. ಬ್ರೋ ಎಂದೇ ಗುರುತಿಸುತ್ತಾರೆ. ಯೂಟ್ಯೂಬರ್ ಗಗನ್ ಎಂದರೆ ತಕ್ಷಣ ಯಾರಿಗೂ ನೆನಪಾಗುವುದಿಲ್ಲ.

(1 / 8)
ಪಾಕಿಸ್ತಾನ, ಆಫ್ಘಾನಿಸ್ತಾನದಂತ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ಗಗನ್ ಬಹಳ ಸುದ್ದಿಯಲ್ಲಿದ್ದರು. ಧೈರ್ಯವಾಗಿ ಅಲ್ಲಿನ ನಿರ್ಜನ ಪ್ರದೇಶಗಳಲ್ಲಿ ಸುತ್ತಿ ಬಂದ ಗಗನ್ ಧೈರ್ಯ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು. (PC: Dr Bro YouTube Channel)
(2 / 8)
ಇತ್ತೀಚೆಗೆ ಹೊನ್ನಾವರದಲ್ಲಿ ಗಗನ್, ಫ್ಲೈಯಿಂಗ್ ಪಾಸ್‌ಪೋರ್ಟ್ ಹಾಗೂ ಗ್ಲೋಬಲ್ ಕನ್ನಡಿಗ ಯೂಟ್ಯೂಬರ್ಸ್‌ಗಳ ಜೊತೆ ಒಟ್ಟಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
(5 / 8)
ಹಾಂಗ್‌ಕಾಂಗ್‌ನಲ್ಲಿ monster ಬಿಲ್ಡಿಂಗ್ ಮುಂದೆ ನಿಂತು ಅಲ್ಲಿ ಜನರು ಹೇಗೆ ವಾಸಿಸುತ್ತಾರೆ, ಎಷ್ಟು ಬಾಡಿಗೆ ನೀಡುತ್ತಾರೆ? ಆ ಕಟ್ಟಡಗಳಲ್ಲಿ ಎಷ್ಟು ಜನಸಂಖ್ಯೆ ಇದೆ ಎಂಬ ಮಾಹಿತಿ ನೀಡಿದ್ದಾರೆ.
(6 / 8)
ಗಗನ್, ಮಕಾವ್ ನಗರದಲ್ಲಿ 770 ಅಡಿ ಎತ್ತರದ ಟವರ್‌ನಿಂದ ಬಂಜೀ ಜಂಪ್ ಮಾಡಿದ್ದಾರೆ. ಈ ವಿಡಿಯೋವನ್ನು ಮಂಗಳವಾರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
(7 / 8)
ಗಗನ್ ಎತ್ತರದ ಕಟ್ಟಡದಿಂದ ಧುಮುಕುವಾಗ ಭಯಭೀತರಾಗಿದ್ದಾರೆ. ಎಲ್ಲಾ ದೇವರನ್ನು ನೆನೆದು ಕೊನೆಗೂ ಧೈರ್ಯದಿಂದ ಜಂಪ್ ಮಾಡಿದ್ದಾರೆ. ಈ ವಿಡಿಯೋ ನೋಡುವವರಿಗೆ ಕೂಡಾ ಭಯ ಎನಿಸಿದರೂ, ಗಗನ್ ಅವರ ಹಾಸ್ಯದ ಮಾತುಗಳು ನಗು ತರಿಸುವಂತಿದೆ.
ಇತರ ಗ್ಯಾಲರಿಗಳು