Aditya-L1: ಸೂರ್ಯನ ಅಧ್ಯಯನಕ್ಕೆ ಆದಿತ್ಯನ ಅಭಿವೃದ್ಧಿಪಡಿಸುತ್ತಿದೆ ಭಾರತ, ಆದಿತ್ಯ ಎಲ್‌1 ಉಪಗ್ರಹದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditya-l1: ಸೂರ್ಯನ ಅಧ್ಯಯನಕ್ಕೆ ಆದಿತ್ಯನ ಅಭಿವೃದ್ಧಿಪಡಿಸುತ್ತಿದೆ ಭಾರತ, ಆದಿತ್ಯ ಎಲ್‌1 ಉಪಗ್ರಹದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Aditya-L1: ಸೂರ್ಯನ ಅಧ್ಯಯನಕ್ಕೆ ಆದಿತ್ಯನ ಅಭಿವೃದ್ಧಿಪಡಿಸುತ್ತಿದೆ ಭಾರತ, ಆದಿತ್ಯ ಎಲ್‌1 ಉಪಗ್ರಹದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

  • Aditya-L1 Mission: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಮಹಾತ್ವಕಾಂಕ್ಷೆಯ ಯೋಜನೆಯಾದ ಆದಿತ್ಯ ಎಲ್‌1 ಮಿಷನ್‌ ಉಪಗ್ರಹದ ಚಿತ್ರಗಳನ್ನು ಹಂಚಿಕೊಂಡಿದೆ. ಭವಿಷ್ಯದಲ್ಲಿ ನಾಸಾದ ಪಾರ್ಕರ್‌ ಸೋಲರ್‌ ಪ್ರೋಬ್‌ನಂತೆ ಇಸ್ರೊದ ಆದಿತ್ಯನು ಆದಿತ್ಯನ ಮೇಲೆ ನಿಗಾ ಇಡಲಿದ್ದಾನೆ.

ಆದಿತ್ಯ ಎಲ್‌1 ಎನ್ನುವುದು ಭಾರತದ ಮೊದಲ ಬಾಹ್ಯಾಕಾಶ ಆಧರಿತ ಭಾರತದ ಅಬ್ಸರ್ವೇಟರಿಯಾಗಿದೆ. ಇದು ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ನಿರ್ಮಿಸುತ್ತಿರುವ ಅಬ್ಸರ್ವೇಟರಿ. ಇತರೆ ವೀಕ್ಷಣಾಲಯಗಳು ಭೂಮಿಯಲ್ಲಿದ್ದುಕೊಂಡು ಆಕಾಶ ನೋಡಿದರೆ, ಈ ಅಬ್ಸರ್ವೇಟರಿಯು ಬಾಹ್ಯಾಕಾಶದಲ್ಲಿ ತೇಲುತ್ತ ಸೂರ್ಯನ ಮೇಲೆ ನಿಗಾ ವಹಿಸಲಿದೆ. ಈ ಯೋಜನೆ ಯಾವಾಗ ಲಾಂಚ್‌ ಮಾಡಲಾಗುವುದು ಎಂದು ಇಸ್ರೋ ಇನ್ನೂ ಪ್ರಕಟಿಸಿಲ್ಲ. 
icon

(1 / 8)

Aditya-L1 mission: ಬೆಂಗಳೂರಿನ ಯುಆರ್‌ ರಾವ್‌ ಸ್ಯಾಟ್‌ಲೈಟ್‌ ಸೆಂಟರ್‌ (ಯುಆರ್‌ಎಸ್‌ಸಿ)ನಲ್ಲಿ ಸಿದ್ಧಗೊಂಡಿದ್ದು, ಇದೀಗ ಶ್ರೀಹರಿಕೋಟಾಆದ ಎಸ್‌ಡಿಎಸಿ-ಎಸ್‌ಎಚ್‌ಎಆರ್‌ಗೆ ಆಗಮಿಸಿದೆ. 
icon

(2 / 8)

ಆದಿತ್ಯ ಎಲ್‌1  ಸೂರ್ಯನ ಅಧ್ಯಯನಕ್ಕೆ ಅಂತರಿಕ್ಷದಲ್ಲಿದ್ದುಕೊಂಡು ಅಧ್ಯಯನ ಮಾಡುವ ಭಾರತದ ಮೊದಲ ಮಿಷನ್‌ ಆಗಿರಲಿದೆ.  ಸೂರ್ಯ-ಭೂಮಿ ನಡುವಿನ ಲಾರ್ಗಾಂಜ್‌ ಪಾಯಿಂಟ್‌ನ ಹಾಲೊ ಆರ್ಬಿಟ್‌ನಲ್ಲಿ ಈ ಅಂತರಿಕ್ಷ ನೌಕೆಯನ್ನು ಇಡಲಾಗುತ್ತದೆ. ಅಂದರೆ, ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ.
icon

(3 / 8)

ಈ ಬಾಹ್ಯಾಕಾಶ ನೌಕೆಯು ಏಳು ಪೇಲೋಡ್‌ಗಳನ್ನು ತನ್ನ ಜತೆ ಕೊಂಡೊಯ್ಯಲಿದೆ. ಸೂರ್ಯನ ವಿದ್ಯುತ್ಕಾಂತೀಯ ಮತ್ತು ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸಲು ಏಳು ಪೇಲೋಡ್‌ಗಳನ್ನು ಹೊಂದಿರಲಿದೆ. 
icon

(4 / 8)

ಇವು ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್, ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್, ಕಣ ಮತ್ತು ಕ್ಷೇತ್ರಗಳ ಪ್ರಸರಣ ಇತ್ಯಾದಿಗಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ನಿರ್ಣಾಯಕ ಮಾಹಿತಿಯನ್ನು ಇಸ್ರೋಗೆ ಒದಗಿಸುವ ನಿರೀಕ್ಷೆಯಿದೆ.
icon

(5 / 8)

ಈ ಯೋಜನೆಯ ಮೂಲಕ ಸೂರ್ಯನ ಅಭೂತಪೂರ್ವ ಮಾಹಿತಿಯು ವಿಜ್ಞಾನಿಗಳಿಗೆ ದೊರಕುವ ನಿರೀಕ್ಷೆಯಿದೆ. 
icon

(6 / 8)

ಈ ವೀಕ್ಷಣಾಲಯವು ನಿರ್ದಿಷ್ಟ ಕಕ್ಷೆಯಲ್ಲಿರುವುದರಿಂದ ಇದಕ್ಕೆ ಯಾವುದೇ ಗ್ರಹಣಗಳು ಅಡ್ಡಿಯಾಗುವುದಿಲ್ಲ. ಯಾವುದೇ ಅಡಚಣೆಯಿಲ್ಲದೆ ಸೂರ್ಯನ ವೀಕ್ಷಿಸಲು ಸಾಧ್ಯವಾಗಲಿದೆ. 
icon

(7 / 8)

ವಿಜ್ಞಾನಿಗಳು ಆದಿತ್ಯ-L1 ರ ಪೇಲೋಡ್ ಬಗ್ಗೆ ಹೆಚ್ಚಿನ ಭರವಸೆಯನ್ನು ಹೊಂದಿದ್ದಾರೆ. ಇದು ಸೌರ ಕರೋನದ ಭೌತಶಾಸ್ತ್ರ ಮತ್ತು ಅದರ ತಾಪಮಾನ ಕಾರ್ಯವಿಧಾನ, ಮ್ಯಾಗ್ನೆಟಿಕ್ ಫೀಲ್ಡ್ ಟೋಪೋಲಜಿ ಮತ್ತು ಕರೋನಲ್ ಮಾಸ್ ಇಜೆಕ್ಷನ್‌ಗಳ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಒಟ್ಟಾರೆ ಸೂರ್ಯ ಶಿಕಾರಿಗೆ ಹೊರಟಿರುವ ಇಸ್ರೋಗೆ ಈ ಯೋಜನೆ ಮೂಲಕ ಅಮೂಲ್ಯ, ಅಪೂರ್ವ ಮಾಹಿತಿಗಳು ದೊರಕುವ ನಿರೀಕ್ಷೆಯಿದೆ. 
icon

(8 / 8)

ಇತರ ಗ್ಯಾಲರಿಗಳು