Asian Games: ಚೈನೀಸ್ ತೈಪೆ ವಿರುದ್ಧ ಅಚ್ಚರಿಯ ಡ್ರಾ ಸಾಧಿಸಿದ ಭಾರತ ವನಿತೆಯರ ಕಬಡ್ಡಿ ತಂಡ
Asian Games 2023: ಏಷ್ಯನ್ ಗೇಮ್ಸ್‌ನ ಎ ಗುಂಪಿನ ಪಂದ್ಯದಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ಮತ್ತು ಚೈನೀಸ್ ತೈಪೆ ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ.
ಏಷ್ಯನ್ ಗೇಮ್ಸ್‌ನ (19th Asian Games) ಎ ಗುಂಪಿನ ಪಂದ್ಯದಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು ಚೀನಾ ತೈಪೆ ವಿರುದ್ಧ 34-34 ಅಂಕಗಳ ಅಂತರದಲ್ಲಿ ಡ್ರಾ ಮಾಡಿಕೊಂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿರುವ ಕಬಡ್ಡಿ ತಡವು ಅನಿರೀಕ್ಷಿತವಾಗಿ ಡ್ರಾದೊಂದಿಗೆ ತನ್ನ ಅಭಿಯಾನದ ಆರಂಭಿಸಿದೆ.
ಭಾರತದ ಪರ, ರಿತು ನೇಗಿ ಅವರು ಮೊದಲ ಡಿಫೆಂಡಿಂಗ್ ಪಾಯಿಂಟ್ ಗಳಿಸಿದರು. ದ್ವಿತೀಯಾರ್ಧದಲ್ಲಿ ಪೂಜಾ ಹತ್ವಾಲಾ ಬೋನಸ್ ಪಾಯಿಂಟ್ ಪಡೆದರು. ಒಂದು ಹಂತದಲ್ಲಿ 26-20ರಿಂದ ಮುನ್ನಡೆ ಸಾಧಿಸಿದ್ದ ಭಾರತ, ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯ್ತು. ನಂತರ ಚೈನೀಸ್ ತೈಪೆ ತಂಡವು ಘರ್ಜಿಸಿತು. ಅಂತಿಮವಾಗಿ ಪಂದ್ಯವು 34-34ರಿಂದ ಸಮಬಲಗೊಂಡಿತು.
ಮಹಿಳೆಯರ ತಂಡವು ಮುಂದೆ ಮಂಗಳವಾರದಂದು ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ. ಇದೇ ವೇಳೆ ಪುರುಷರ ತಂಡವು ತಮ್ಮ ಎ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.
ಭಾರತ ತಂಡದ ಅಧಿಕಾರಿ ವಿ ತೇಜಸ್ವಿನಿ ಬಾಯಿ ಅವರು, ಮೊದಲ ಪಂದ್ಯದ ಡ್ರಾಗೊಂಡ ಬಳಿಕ, ತಮ್ಮ ಹುಡುಗಿಯರ ತಂಡ ಚಿನ್ನ ಗೆಲ್ಲುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
“ನಮ್ಮ ತಂಡ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ. ಇಂದು ನಾವು ಸ್ವಲ್ಪ ಉದ್ವಿಗ್ನರಾಗಿದ್ದೆವು. ಆದರೆ ಇಂದಿನಿಂದ ನಾವು ನಿರಾಳರಾಗಿದ್ದೇವೆ. ಹೀಗಾಗಿ ಮುಂದೆ ನಾವು ಗೆಲ್ಲುತ್ತೇವೆ. ಚಿನ್ನ ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ. ಚೈನೀಸ್ ತೈಪೆ ತಂಡವು ಇತ್ತೀಚೆಗೆ ಆಟದಲ್ಲಿ ಸುಧಾರಿಸಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶವನ್ನು 12-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭರ್ಜರಿ 12-0 ಗೋಲುಗಳ ಅಂತರದಿಂದ ಸೋಲಿಸಿದ ಭಾರತವು, ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಇಬ್ಬರೂ ತಲಾ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಹರ್ಮನ್‌ಪ್ರೀತ್ ಪಂದ್ಯದ 2ನೇ, 4ನೇ ಮತ್ತು 32ನೇ ನಿಮಿಷದಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿಸರು. ಅತ್ತ ಮನ್‌ದೀಪ್ 18ನೇ, 24ನೇ ಮತ್ತು 46ನೇ ನಿಮಿಷದಲ್ಲಿ ಮೂರು ಗೋಲು ಗಳಿಸಿದ ಕಾರಣ ಭಾರತ ಪೂಲ್‌ಎನಲ್ಲಿ ಅಜೇಯವಾಗಿ ಮುನ್ನಡೆಯಿತು.
ತೃತೀಯ ಲಿಂಗಿ ಮಹಿಳೆಯಿಂದಾಗಿ ಪದಕ ಕಳ್ಕೊಂಡೆ; ಹೊಸ ವಿವಾದ ಎಬ್ಬಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ವಿಫಲರಾಗಿರುವ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್, ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ತೃತೀಯ ಲಿಂಗಿ ಮಹಿಳೆಯಿಂದಾಗಿ ತಾನು ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಬರ್ಮನ್ ಅಂತಿಮವಾಗಿ ಮಹಿಳೆಯರ ಹೆಪ್ಟಾಥ್ಲಾನ್ ಲಾಂಗ್ ಜಂಪ್‌ನಲ್ಲಿ 5708 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದರು.