Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಫುಟ್ಬಾಲ್ ತಂಡದ ವೇಳಾಪಟ್ಟಿ, ದಿನಾಂಕ, ಸಮಯ, ಲೈವ್ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡ ತನ್ನ ಮೊದಲ ಪಂದ್ಯವನ್ನು ಚೈನೀಸ್ ತೈಪೆ ವಿರುದ್ಧ ಆಡಲಿದೆ. ಭಾರತ ಮಹಿಳಾ ತಂಡದ ಇತರೆ ಪಂದ್ಯಗಳ ಸ್ಥಳ, ದಿನಾಂಕ, ಲೈವ್ ಸ್ಟ್ರೀಮಿಂಗ್ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ಗೆ (Asian Games) ಭಾರತದ ಮಹಿಳಾ ಫುಟ್ಬಾಲ್ ತಂಡ (Indian Womens Football Team) ಸಜ್ಜಾಗಿದೆ. 9 ವರ್ಷಗಳ ಬಳಿಕ ಭಾರತೀಯ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್ 2023ರ ಕ್ರೀಡಾಕೂಟದಲ್ಲಿ ಭಾಗವಹಿಸಿವೆ.
ಒಟ್ಟು 8 ಸ್ಥಳಗಳಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಪುರುಷರ ಫುಟ್ಬಾಲ್ ಪಂದ್ಯಗಳು ಸೆಪ್ಟೆಂಬರ್ 19 ರಿಂದಲೇ ಆರಂಭವಾಗಿದ್ದರೆ. ಮಹಿಳಾ ತಂಡಗಳ ಪಂದ್ಯಗಳು ನಾಡಿದ್ದು (ಸೆಪ್ಟೆಂಬರ್ 21 ರಿಂದ) ಆರಂಭವಾಗಲಿವೆ.
ಏಷ್ಯನ್ ಗೇಮ್ಸ್‌ನಲ್ಲಿ ಅಂಡರ್-23 ಫುಟ್ಬಾಲ್ ತಂಡಗಳು ಮಾತ್ರ ಭಾಗವಹಿಸಲು ಅವಕಾಶ ಇದೆ. ಆದರೆ ತಂಡಗಳಲ್ಲಿ ಮೂರು ಹಿರಿಯ ಆಟಗಾರರ ಲಭ್ಯತೆಗೆ ಅವಕಾಶ ಇದೆ. ಆದರೆ ಮಹಿಳಾ ಫುಟ್ಬಾಲ್ ತಂಡಗಳಿಗೆ ಇಂತಹ ನಿಯಮಗಳು ಅನ್ವಯಿಸುವುದಿಲ್ಲ. ಹಿರಿಯ ಆಟಗಾರರಿಂದ ಕೂಡಿದ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.
ಮಹಿಳೆಯರ 16 ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಎರಡು ಗುಂಪುಗಳಲ್ಲಿ ತಲಾ ಮೂರು ತಂಡಗಳಿವೆ. ಎರಡು ಗುಂಪುಗಳಲ್ಲಿ ತಲಾ 4 ತಂಡಗಳಿವೆ.
ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಫುಟ್ಬಾಲ್ ಗುಂಪುಗಳು
ಗುಂಪು ಎ: ಚೀನಾ, ಉಜ್ಬೀಕಿಸ್ತಾನ್, ಮಂಗೋಲಿಯಾ
ಗುಂಪು ಬಿ: ಭಾರತ, ಚೈನೀಸ್ ತೈಪೆ, ಥೈಲ್ಯಾಂಡ್,
ಗುಂಪು ಸಿ: ಉತ್ತರ ಕೊರಿಯಾ, ಸಿಂಗಾಪುರ
ಗುಂಪು ಡಿ: ಜಪಾನ್, ವಿಯೆಟ್ನಾಂ, ನೇಪಾಳ, ಬಾಂಗ್ಲಾದೇಶ
ಗುಂಪು ಇ: ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್, ಫಿಲಿಪೈನ್ಸ್, ಮ್ಯಾನ್ಮಾರ್
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಫುಟ್ಬಾಲ್ ತಂಡದ ಮೊದಲ ಪಂದ್ಯ
ಪಂದ್ಯ: ಭಾರತ vs ಚೈನೀಸ್ ತೈಪೆ
ಯಾವಾಗ: ಪಂದ್ಯ ಸೆಪ್ಟೆಂಬರ್ 21, ಗುರುವಾರ
ಸ್ಥಳ: ವೆಂಝೌ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ
ಸಮಯ: ಸಂಜೆ 5 ಗಂಟೆ (ಭಾರತೀಯ ಕಾಲಮಾನ)
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಫುಟ್ಬಾಲ್ ತಂಡದ ಎರಡನೇ ಪಂದ್ಯ
ಪಂದ್ಯ: ಭಾರತ vs ಚೈನೀಸ್ ತೈಪೆ
ಯಾವಾಗ: ಪಂದ್ಯ ಸೆಪ್ಟೆಂಬರ್ 24, ಭಾನುವಾರ
ಸ್ಥಳ: ವೆಂಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ
ಸಮಯ: ಮಧ್ಯಾಹ್ನ 1.30 ಗಂಟೆ (ಭಾರತೀಯ ಕಾಲಮಾನ)
ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡ ಅರ್ಹತೆ ಪಡೆದರೆ ಸ್ಪರ್ಧಿಸಲಿರುವ ಮುಂದಿನ ಹಂತದ ಪಂದ್ಯಗಳು
ಸೆಪ್ಟೆಂಬರ್ 30: ಮಹಿಳೆಯರ ಕ್ವಾರ್ಟರ್‌ಫೈನಲ್ (ಭಾರತ ಅರ್ಹತೆ ಪಡೆದರೆ)
ಅಕ್ಟೋಬರ್ 3: ಮಹಿಳೆಯರ ಸೆಮಿಫೈನಲ್ (ಭಾರತ ಅರ್ಹತೆ ಪಡೆದರೆ)
ಅಕ್ಟೋಬರ್ 6:ಮಹಿಳೆಯರ ಚಿನ್ನ/ ಕಂಚಿನ ಪದಕದ ಪಂದ್ಯ (ಭಾರತ ಅರ್ಹತೆ ಪಡೆದರೆ)
ಏಷ್ಯನ್ ಗೇಮ್ಸ್ 2023ರ ಫುಟ್ಬಾಲ್ ನಡೆಯುವ ಸ್ಥಳಗಳು
ಏಷ್ಯನ್ ಗೇಮ್ಸ್ 2023ರ ಫುಟ್ಬಾಲ್ ಪಂದ್ಯಗಳು ಚೀನಾದ ಹ್ಯಾಂಗ್‌ಝೌ ಒಲಿಂಪಿಕ್ ಸ್ಪೋರ್ಟ್ಸ್ ಪಾರ್ಕ್, ಲಿನ್‌ಪಿಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಶಾಂಗ್‌ಚೆಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಕ್ಸಿಯೋಶನ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಝೆಜಿಯಾಂಗ್ ನಾರ್ಮಲ್ ಯೂರ್ನಿವರ್ಸಿಟಿ ಈಸ್ಟ್ ಸ್ಟೇಡಿಯಂ, ಜಿನ್‌ಹುಮಾ ಕ್ರೀಡಾಂಗಣ, ಸೆಂಟರ್ ಸ್ಟೇಡಿಯಂ ಮತ್ತು ವೆಂಝೌ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.
ಏಷ್ಯನ್ ಗೇಮ್ಸ್ 2023ರ ಭಾರತೀಯ ಮಹಿಳಾ ಫುಟ್ಬಾಲ್ ತಂಡ
ಗೋಲ್‌ಕೀಪರ್‌ಗಳು: ಶ್ರೇಯಾ ಹೂಡಾ, ಸೌಮ್ಯಾ ನಾರಾಯಣಸ್ವಾಮಿ, ಪಂಥೋಯ್ ಚಾನು
ಡಿಫೆಂಡರ್ಸ್: ಆಶಾಲತಾ ದೇವಿ, ಸ್ವೀಟಿ ದೇವಿ, ರಿತು ರಾಣಿ, ದಲಿಮಾ ಛಿಬ್ಬರ್, ಅಸ್ತಮ್ ಓರಾನ್, ಸಂಜು, ರಂಜನಾ ಚಾನು
ಮಿಡ್‌ಫೀಲ್ಡರ್ಸ್: ಸಂಗೀತಾ ಬಸ್‌ಫೋರ್, ಪ್ರಿಯಾಂಕಾ ದೇವಿ, ಇಂದುಮತಿ ಕತಿರೇಸನ್, ಅಂಜು ತಮಾಂಗ್, ಸೌಮ್ಯಾ ಗುಗುಲೋತ್, ಡ್ಯಾಂಗ್‌ಮೇ ಗ್ರೇಸ್
ಫಾರ್ವರ್ಡ್‌ಗಳು: ಪ್ಯಾರಿ ಕ್ಸಾಕ್ಸಾ, ಜ್ಯೋತಿ, ರೇಣು, ಬಾಲಾ ದೇವಿ, ಮನಿಶಾ, ಸಂಧಿಯಾ ರಂಗನಾಥನ್
ಮುಖ್ಯ ಕೋಚ್: ಥಾಮಸ್ ಡೆನ್ನರ್ಬಿ
ಏಷ್ಯನ್ ಗೇಮ್ಸ್ 2023ರ ಭಾರತೀಯ ಫುಟ್ಬಾಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಏಷ್ಯನ್ ಆಟಗಳ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಎಲ್ಲಾ ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಏಷ್ಯನೇ ಗೇಮ್ಸ್ ಭಾರತೀಯ ಫುಟ್ಬಾಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಫುಟ್ಬಾಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸೋನಿ ಲೈವ್‌ನಲ್ಲಿ ಲಭ್ಯವಿದೆ.