ಭಾರತದಲ್ಲಿ 80ಕ್ಕೂ ಅಧಿಕ ಚೆಸ್ ಗ್ರ್ಯಾಂಡ್ ಮಾಸ್ಟರ್ಸ್; 2010ಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚು ಎಂದ ನಿರ್ಮಲಾ
Union Budget 2024 - Finance Minister Nirmala Sitharaman : ಕಳೆದ 14 ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಚೆಸ್ ಪಟುಗಳ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿದೆ. 2010ಕ್ಕೆ ಹೋಲಿಸಿದರೆ ಇಂದು 20ರಷ್ಟು ಚೆಸ್ ಗ್ರ್ಯಾಂಡ್ ಮಾಸ್ಟರ್ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುವ ಮೂಲಕ ಕ್ರೀಡಾಪಟುಗಳ ಸಾಧನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಂಡಾಡಿದ್ದಾರೆ.
ಲೋಕಸಭಾ ಚುನಾವಣೆ (Indian General election 2024) ಪೂರ್ವ 6ನೇ ಬಾರಿಗೆ ಬಜೆಟ್ ಮಂಡಿಸುವ (Union Budget 2024) ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ದಾಖಲೆ ಬರೆದಿದ್ದಾರೆ. ಅಲ್ಲದೆ, ಈ ಬಾರಿ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಬಜೆಟ್ ಮಂಡಿಸುವ ವೇಳೆ ನಿರ್ಮಲಾ ಅವರು ದೇಶದಲ್ಲಿ ಯುವ ಕ್ರೀಡಾಪಟು ಅದರಲ್ಲೂ ಚೆಸ್ ಪಟುಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ಕಳೆದ 14 ವರ್ಷಗಳಲ್ಲಿ ಭಾರತದಲ್ಲಿ ಚೆಸ್ ಪಟುಗಳ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿದೆ. 2010ರಲ್ಲಿ 20 ಚೆಸ್ ಗ್ರ್ಯಾಂಡ್ ಮಾಸ್ಟರ್ಗಳಿದ್ದರು. ಆದರಿಂದು ಭಾರತದಲ್ಲಿ 80 ಚೆಸ್ ಗ್ರ್ಯಾಂಡ್ ಮಾಸ್ಟರ್ಗಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ಅವರು ತಮ್ಮ ಭಾಷಣದಲ್ಲಿ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಬು ಪ್ರಜ್ಞಾನಂದ ಅವರ ಪಂದ್ಯವನ್ನು ಉಲ್ಲೇಖಿಸಿದರು. ಚೆಸ್ ವಿಶ್ವಕಪ್ ಫೈನಲ್ನಲ್ಲಿ ಟೈ ಬ್ರೇಕರ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ವಿರೋಚಿತ ಸೋಲು ಕಂಡಿದ್ದರು.
2023ರ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಅಧಿಕ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಚೆಸ್ ಪ್ರತಿಭೆ ಮತ್ತು ನಮ್ಮ ನಂ 1 ಶ್ರೇಯಾಂಕಿತ ಆಟಗಾರ ಪ್ರಜ್ಞಾನಂದ 2023ರಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಕಠಿಣ ಹೋರಾಟ ನಡೆಸಿದರು. ಇಂದು, ಭಾರತವು 80ಕ್ಕೂ ಹೆಚ್ಚು ಚೆಸ್ಗ್ರ್ಯಾಂಡ್ ಮಾಸ್ಟರ್ಗಳನ್ನು ಹೊಂದಿದೆ. ಇದು 2010ಕ್ಕಿಂತ ಈಗ 20ಕ್ಕಿಂತ ಹೆಚ್ಚಾಗಿದೆ. ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಏನೆಲ್ಲಾ ಘೋಷಣೆಗಳನ್ನು ಮಾಡಲಾಗಿದೆ?
ಮಧ್ಯಂತರ ಬಜೆಟ್‌ನಲ್ಲಿ ಯಾರಿಗೆ ಎಷ್ಟು ಈ ಬಜೆಟ್‌ನಲ್ಲಿ ಏನೆಲ್ಲ ಇದೆ? ಆರ್ಥಿಕ ಪರಿವರ್ತನೆ, ದೇಶದ ಅಭಿವೃದ್ಧಿ, ಜನರ ಕಲ್ಯಾಣಕ್ಕಾಗಿ ಏನೆಲ್ಲ ಘೋಷಣೆಗಳನ್ನು ಮಾಡಲಾಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಆರ್ಥಿಕ ಪರಿವರ್ತನೆ ಮತ್ತು ದೃಷ್ಟಿಕೋನ: ಕಳೆದ ದಶಕದಲ್ಲಿ ಭಾರತವು ಗಮನಾರ್ಹ ಸಕಾರಾತ್ಮಕ ಪರಿವರ್ತನೆಯನ್ನು ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಮಂತ್ರದೊಂದಿಗೆ ಅಂತರ್ಗತ ಬೆಳವಣಿಗೆಯತ್ತ ಗಮನ ಹರಿಸಿದೆ. ರಚನಾತ್ಮಕ ಸುಧಾರಣೆಗಳು ಮತ್ತು ಜನಪರ ಕಾರ್ಯಕ್ರಮಗಳ ಪರಿಚಯವು ಹೊಸ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳಿಗೆ ಕಾರಣವಾಗಿದೆ.
ಪ್ರಮುಖ ಅಂಶಗಳು
ಅಂತರ್ಗತ ಅಭಿವೃದ್ಧಿ ಮತ್ತು ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರ್ಥಿಕ ಮತ್ತು ಹಣಕಾಸಿನ ನಿರ್ವಹಣೆ, ಜಾಗತಿಕ ಸನ್ನಿವೇಶ ಮತ್ತು ಕಾರ್ಯತಂತ್ರದ ಉಪಕ್ರಮಗಳು, ವಲಯವಾರು ನಿರ್ದಿಷ್ಟ ಉಪಕ್ರಮಗಳು, ಮೂಲಸೌಕರ್ಯ ಮತ್ತು ಪರಿಸರ ಉಪಕ್ರಮಗಳು, ಪ್ರವಾಸೋದ್ಯಮ ಮತ್ತು ಹೂಡಿಕೆ ಉತ್ತೇಜನ, ತೆರಿಗೆ ಸುಧಾರಣೆಗಳು ಮತ್ತು ಸುಗಮ ವ್ಯಾಪಾರ, ಭವಿಷ್ಯದ ದೃಷ್ಟಿಕೋನ ಮತ್ತು ' ವಿಕ್ಷಿತ್ ಭಾರತ್' ದೃಷ್ಟಿಕೋನ ಸೇರಿದಂತೆ ಪ್ರಮುಖ ಅಂಶಗಳು ಈ ಬಜೆಟ್ನಲ್ಲಿವೆ.