ಕನ್ನಡ ಸುದ್ದಿ  /  ಕ್ರೀಡೆ  /  D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

Who is Dommaraju Gukesh: ಚೆಸ್‌ ಚತುರ ವಿಶ್ವನಾಥನ್‌ ಆನಂದ್ ಮಾರ್ಗದರ್ಶನದಲ್ಲಿ ಬೆಳೆದ ಗುಕೇಶ್‌, ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚೆನ್ನೈ ಮೂಲದ ಈ ಹುಡುಗನ ಜೀವನದ ಸಾಧನೆಯ ಹಂತಗಳನ್ನು ನೋಡಿಕೊಂಡು ಬರೋಣ.

ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಜೀವನಗಾಥೆ
ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಜೀವನಗಾಥೆ

ಭಾರತದ ಪ್ರತಿಭಾವಂತ ಚೆಸ್ ಆಟಗಾರನೊಬ್ಬ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದಾನೆ. 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್, ಟೊರೊಂಟೊದಲ್ಲಿ ನಡೆದ ವಿಶ್ವ ಚೆಸ್‌ ಒಕ್ಕೂಟದ (FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾನೆ. ಈ ಟೂರ್ನಿ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ. ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಗುಕೇಶ್‌, ಪ್ರಜ್ಞಾನಂದ ಬಳಿಕ ಸುದ್ದಿಯಲ್ಲಿದ್ದಾನೆ. ಹಾಗಿದ್ದರೆ, ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಭಾರತದ ಈ ಚದುರಂಗದ ಚತುರನ ಕುರಿತು ಮತ್ತಷ್ಟು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಡಿ ಗುಕೇಶ್ ಪ್ರೊಫೈಲ್

  • ಹೆಸರು : ಗುಕೇಶ್ ಡಿ
  • ಪೂರ್ಣಹೆಸರು : ದೊಮ್ಮರಾಜು ಗುಕೇಶ್
  • ಜನನ: ಮೇ 29, 2006
  • ವಯಸ್ಸು: 17
  • ಹುಟ್ಟೂರು: ಚೆನ್ನೈ (ತಮಿಳುನಾಡು)
  • ವಿಶ್ವ ಶ್ರೇಯಾಂಕ: 6
  • ಟೈಟಲ್‌ಗಳು: ಗ್ರ್ಯಾಂಡ್‌ಮಾಸ್ಟರ್ (2018), ಇಂಟರ್‌ನ್ಯಾಶನಲ್ ಮಾಸ್ಟರ್ (2017), ಕ್ಯಾಂಡಿಡೇಟ್ ಮಾಸ್ಟರ್ (2015), FIDE ಮಾಸ್ಟರ್ (2014)
  • FIDE ರೇಟಿಂಗ್: 2763

ಭಾರತದಲ್ಲಿ ಚೆಸ್‌ ಎಂದಾಗ ಮೊದಲು ನೆನೆಪಿಗೆ ಬರುವವರೇ ವಿಶ್ವನಾಥನ್‌ ಆನಂದ್.‌ ಅವರ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆ ಇದೀಗ ಗುಕೇಶ್‌ ಅವರದ್ದು. ಇದರೊಂದಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ವೆಸ್ಟ್‌ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿಯಲ್ಲಿ ಆನಂದ್‌ ಅವರ ಮಾರ್ಗದರ್ಶನ ಪಡೆದು ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಗುಕೇಶ್‌ ನಿರ್ಮಿಸಿದ್ದಾರೆ.

ಮತ್ತೊಂದು ದಾಖಲೆಗೆ ಸಜ್ಜಾದ ಗುಕೇಶ್‌

ಮುಂದೆ ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಗುಕೇಶ್‌, ಈ ವರ್ಷದ ಕೊನೆಯಲ್ಲಿ ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಅಲ್ಲಿಯೂ ಗೆದ್ದರೆ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ.

ಏಳನೇ ವಯಸ್ಸಿಗ ಆಟ ಕಲಿತ ಪೋರ

ಗುಕೇಶ್‌ ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ದೇಶಕ್ಕೆ ಹಲವಾರು ಚೆಸ್‌ ಆಟಗಾರರನ್ನು ಕೊಟ್ಟ ತಮಿಳುನಾಡಿನ ರಾಜಧಾನಿ ಚೆನ್ನೈ ಹುಡುಗ. ಏಳನೇ ವಯಸ್ಸಿನಲ್ಲಿಯೇ ಚದುರಂಗದ ಮನೆಯೊಂದಿಗೆ ಆಟವಾಡಲು ಆರಂಭಿಸಿದ ಈ ಚೆಸ್‌ ಚತುರ, ಇದೀಗ, ಅದೇ ಚದುರಂಗದ ಬೋರ್ಡ್‌ ಮುಂದೆ ಕುಳಿತು ವಿಶ್ವದ ಘಟಾನುಘಟಿ ಆಟಗಾರರನ್ನು ಮಣಿಸುವ ಹಂತಕ್ಕೆ ಬೆಳೆದಿದ್ದಾನೆ. ಶಾಲೆಯಲ್ಲಿ ಆಟ ಕಲಿತ ಗುಕೇಶ್‌, ಕಲಿತ ಆರು ತಿಂಗಳೊಳಗೆ FIDE ರೇಟಿಂಗ್‌ ಪಡೆದ ಆಟಗಾರನಾದನು.

ಇದನ್ನೂ ಓದಿ | D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್; ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ

2015ರಲ್ಲಿ ಅಂಡರ್-9 ಏಷ್ಯನ್ ಸ್ಕೂಲ್ಸ್ ಚೆಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಾಧನೆ ಗುಕೇಶ್‌ ಅವರದ್ದು. ಇದರೊಂದಿಗೆ ಕ್ಯಾಂಡಿಡೇಟ್ ಮಾಸ್ಟರ್ (CM) ಪ್ರಶಸ್ತಿ ಈ ಬಾಲಕನ ಮನೆಯ ಶೋಕೇಸ್‌ನಲ್ಲಿ ರಾರಾಜಿಸಿತು.

2018ರಲ್ಲಿ ನಡೆದ ಅಂಡರ್‌-12 ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಬಾಲಕ, ಅದೇ ವರ್ಷದ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳೊಂದಿಗೆ ಮಿಂಚಿನ ಪ್ರದರ್ಶನ ನೀಡಿದ್ದು ಇತಿಹಾಸ.

2018ರ ಮಾರ್ಚ್ ತಿಂಗಳಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ (IM) ಟೈಟಲ್‌ ತನ್ನದಾಗಿಸಿಕೊಳ್ಳಲು ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರ್ಣಗೊಳಿಸಿದ ಗುಕೇಶ್, 2019ರ ಜನವರಿಯಲ್ಲಿ ಗ್ರಾಂಡ್‌ ಮಾಸ್ಟರ್‌ ಟೈಟಲ್‌‌ ತಮ್ಮದಾಗಿಸಿಕೊಂಡರು. ಕೇವಲ 12 ವರ್ಷ, ಏಳು ತಿಂಗಳು ಹಾಗೂ 17 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಇದರೊಂದಿಗೆ ಜಿಎಂ ಆದ ಎರಡನೇ ಕಿರಿಯ ಆಟಗಾರ ಎನಿಸಿಕೊಂಡರು (ಸೆರ್ಗೆಯ್ ಕರ್ಜಾಕಿನ್‌ಗಿಂತ 17 ದಿನ ಹೆಚ್ಚು).

ಚೆನ್ನೈನಲ್ಲಿ 2022ರಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ, ಹನ್ನೊಂದರಲ್ಲಿ ಒಂಬತ್ತು ಅಂಕಗಳೊಂದಿಗೆ ವೈಯಕ್ತಿಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಭಾರತವು ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಭಾಗ