ಕನ್ನಡ ಸುದ್ದಿ  /  ಕ್ರೀಡೆ  /  ತೈವಾನ್ ಓಪನ್​-2024: ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಕನ್ನಡಿಗ ಡಿಪಿ ಮನು

ತೈವಾನ್ ಓಪನ್​-2024: ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಕನ್ನಡಿಗ ಡಿಪಿ ಮನು

Taiwan Athletics Open 2024: ಜೂನ್ 1ರಂದು ನಡೆದ ತೈವಾನ್​ ಅಥ್ಲೀಟ್​ ಓಪನ್​​ 2024ರಲ್ಲಿ ಕರ್ನಾಟಕದ ಆಟಗಾರ ಡಿಪಿ ಮನು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ತೈವಾನ್ ಓಪನ್​-2024: ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಕನ್ನಡಿಗ ಡಿಪಿ ಮನು
ತೈವಾನ್ ಓಪನ್​-2024: ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಕನ್ನಡಿಗ ಡಿಪಿ ಮನು (olympics)

Taiwan Athletics Open 2024: ಜೂನ್ 1ರಂದು ನಡೆದ ತೈವಾನ್ ಓಪನ್​-2024ರಲ್ಲಿ ಭಾರತ ಹಾಗೂ ಕರ್ನಾಟಕದ ಅಥ್ಲೀಟ್​ ಡಿಪಿ ಮನು ಅವರು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ಡಿಪಿ ಮನು ಅವರು ಜಾವೆಲಿನ್ ಥ್ರೋ ಫೈನಲ್‌ನಲ್ಲಿ ತಮ್ಮ ಕೊನೆಸಯ ಪ್ರಯತ್ನದಲ್ಲಿ 81.58 ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಅಗ್ರಸ್ಥಾನ ಪಡೆದು ಸ್ವರ್ಣಕ್ಕೆ ಕೊರೊಳೊಡ್ಡಿದರು.

ಟ್ರೆಂಡಿಂಗ್​ ಸುದ್ದಿ

91.36 ಮೀಟರ್‌ ಜಾವೆಲಿನ್ ಥ್ರೋ ಎಸೆಯುವ ಮೂಲಕ ಏಷ್ಯನ್ ದಾಖಲೆಯನ್ನು ಹೊಂದಿರುವ ತೈವಾನ್​​ನ ಚೆಂಗ್ ಚಾವೊ-ತ್ಸುನ್ ಅವರು, ಈ ಸ್ಪರ್ಧೆಯಲ್ಲಿ 76.21 ಮೀಟರ್‌ ಎಸೆದು ಬೆಳ್ಳಿ ಗೆದ್ದಿದ್ದಾರೆ. ಮತ್ತೊಬ್ಬ ತೈವಾನ್ ಆಟಗಾರ ಹುವಾಂಗ್ ಚಾವೊ-ಹಂಗ್ 71.24 ಮೀಟರ್​ ಜಾವೆಲಿನ್ ಥ್ರೋ ಹಾಕುವುದರೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಕನ್ನಡಿಗ ಮನುಗೆ ಈ ವರ್ಷದ 3ನೇ ವೇದಿಕೆ ಇದಾಗಿದೆ. ಏಪ್ರಿಲ್​​ನಲ್ಲಿ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್​​-1 ಅನ್ನು ಗೆದ್ದಿದ್ದರು. ನಂತರ ಕಳೆದ ತಿಂಗಳು ಫೆಡರೇಶನ್ ಕಪ್‌ನಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಅಂತಿಮ ಯತ್ನದಲ್ಲಿ ಚಿನ್ನದ ಎಸೆತ

ಕನ್ನಡಿಗ ಡಿಪಿ ಮನು ತನ್ನ ಮೊದಲ ಪ್ರಯತ್ನದಲ್ಲಿ 78.32 ಮೀಟರ್ ದೂರ ಎಸೆದು ಮುನ್ನಡೆ ಸಾಧಿಸಿದರು. ಮೂರನೇ ಎಸೆತದಲ್ಲಿ 80.59 ಮೀಟರ್​​ ಮಾರ್ಕ್‌ನೊಂದಿಗೆ ತಮ್ಮ ಮುನ್ನಡೆಯನ್ನು ಕ್ರಮೇಣ ಸುಧಾರಿಸಿದರು. 4ನೇ ಪ್ರಯತ್ನದಲ್ಲಿ ಫೌಲ್ ಆದ ನಂತರ, ಮನು ಐದನೇ ಪ್ರಯತ್ನದಲ್ಲಿ ತನ್ನ ದೂರವನ್ನು 81.52 ಮೀಟರ್​​ಗೆ ಸುಧಾರಿಸಿದರು. ಅಂತಿಮ ಪ್ರಯತ್ನದಲ್ಲಿ 81.58 ಮೀಟರ್ ದೂರ ಜಾವೆಲಿನ್ ಎಸೆದು ಅತ್ಯುತ್ತಮ ಪ್ರಯತ್ನದೊಂದಿಗೆ ಮುಗಿಸಿದರು.

ಆದಾಗ್ಯೂ, ಇದು ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ತಾನೆಸೆದಿದ್ದ 82.06 ಮೀಟರ್​ ಜಾವೆಲಿನ್ ದೂರವನ್ನು ಹಿಂದಿಕ್ಕಿಲು ಸಾಧ್ಯವಾಗಲಿಲ್ಲ. ಜೂನ್ 30ರಂದು ನಡೆಯುವ ಪ್ಯಾರಿಸ್ ಒಲಿಂಪಿಕ್​​ಗೆ ಅರ್ಹತಾ ಸುತ್ತಿನಲ್ಲಿ 85.50 ಮೀಟರ್ ಎಸೆದರೆ ವಿಶ್ವದ ಅಗ್ರ 32ರೊಳಗೆ ಅವಕಾಶ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಡಿಪಿ ಮನು ವೈಯಕ್ತಿಕ ಅತ್ಯುತ್ತಮ ಪ್ರಯತ್ನ 84.35 ಮೀ (2 ವರ್ಷಗಳ ಹಿಂದೆ).

ನಿತ್ಯಾ ರಾಮರಾಜ್​ಗೆ ಬೆಳ್ಳಿ ಪದಕ

ಇದೇ ವೇಳೆ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ನಿತ್ಯಾ ರಾಮರಾಜ್ 13.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ಹಿಂದಿನ ದಿನದ ಹೀಟ್ಸ್‌ನಲ್ಲಿ ಅವರು 13.12 ಸೆ.ಗಳ ವೈಯಕ್ತಿಕ ಅತ್ಯುತ್ತಮ ದಾಖಲೆಯನ್ನು ದಾಖಲಿಸಿದರು. 12.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅಮೆರಿಕದ ಮಾಜಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ನಿಯಾ ಅಲಿ ಚಿನ್ನ ಗೆದ್ದರು.

ತೈವಾನ್​ನ ಬೋ-ಯಾ ಜಾಂಗ್ ಅವರು 13.28 ಸೆಕೆಂಡ್‌ಗಳಲ್ಲಿ ಕಂಚಿನ ಪದಕ ಗೆದ್ದರು. ಭಾರತದ ವಿಸ್ಮಯಾ ವಿಕೆ ಕೂಡ ಮಹಿಳೆಯರ 400 ಮೀ ಓಟದಲ್ಲಿ ಸ್ಪರ್ಧಿಸಿ 53.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಶ್ರೀಲಂಕಾದ ದಿಲ್ಸಾರಾ ತರುಶಿ (52.48 ಸೆ) ಚಿನ್ನ ಗೆದ್ದರೆ, ಚೈನೀಸ್ ತೈಪೆಯ ಯಿ-ಸೆನ್ ಚೆನ್ (53.44 ಸೆ) ಬೆಳ್ಳಿ ಗೆದ್ದರು. ತೈವಾನ್ ಅಥ್ಲೆಟಿಕ್ಸ್ ಓಪನ್ ಜೂನ್ 2ರ ಭಾನುವಾರ ಕೊನೆಗೊಳ್ಳಲಿದೆ.

ಟಿ20 ವಿಶ್ವಕಪ್ 2024ರ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ