ಚಾಂಪಿಯನ್ಸ್ ಲೀಗ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸಿಟಿ ಆಟಗಾರನಿಗೆ ಗಂಭೀರ ಗಾಯ; ಬೆರಳು ಮುರಿದುಕೊಂಡ ಮ್ಯಾಥ್ಯೂಸ್
Matheus Nunes Injury: ಕೋಪನ್ ಹ್ಯಾಗನ್ ವಿರುದ್ಧದ ಚಾಂಪಿಯನ್ಸ್ ಲೀಗ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸಿಟಿ ತಂಡದ ಮಿಡ್‌ಫೀಲ್ಡರ್ ಮ್ಯಾಥ್ಯೂಸ್ ನ್ಯೂನ್ಸ್ ಅವರ ಬೆರಳು ಮುರಿದಿದೆ. ಗಂಭೀರ ಗಾಯದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಚಾಂಪಿಯನ್ಸ್ ಲೀಗ್ (Champions League) ಫುಟ್ಬಾಲ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ (Manchester City) ತಂಡವು ಭರ್ಜರಿ ಫಾರ್ಮ್‌ನಲ್ಲಿದೆ. ಬುಧವಾರ ನಡೆದ ಕೋಪನ್ ಹ್ಯಾಗನ್ ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ ತಂಡವು, ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ತಂಡದ ಸ್ಟಾರ್ ಆಟಗಾರರಾದ ಮ್ಯಾನುಯೆಲ್ ಅಕಾಂಜಿ, ಜೂಲಿಯನ್ ಅಲ್ವಾರೆಜ್ ಮತ್ತು ಎರ್ಲಿಂಗ್ ಹಾಲೆಂಡ್ ಅವರ ಗೋಲುಗಳು ತಂಡಕ್ಕೆ ಗೆಲುವು ತಂದುಕೊಟ್ಟಿತು. ಆದರೆ, ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಆಟಗಾರನೊಬ್ಬನಿಗೆ ಆದ ಗಾಯವು, ತಂಡವನ್ನು ಚಿಂತೆಗೀಡುಮಾಡಿದೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಪಂದ್ಯದಲ್ಲಿ ಗೆಲುವಿನ ಹೊರತಾಗಿಯೂ ಪ್ರತಿಷ್ಠಿತ ಕ್ಲಬ್ ಮ್ಯಾಂಚೆಸ್ಟರ್ ಸಿಟಿಗೆ ಗಾಯದ ಬರೆ ಬಿದ್ದಿದೆ. ತಂಡದ ಆಟಗಾರನಾದ ಪೋರ್ಚುಗಲ್‌ನ ಮ್ಯಾಥ್ಯೂಸ್ ನ್ಯೂನ್ಸ್ (Matheus Nunes), ಪಂದ್ಯದ ವೇಳೆ ಕೈ ಬೆರಳು ಮುರಿದುಕೊಂಡಿದ್ದಾರೆ. ಮಿಡ್‌ಫೀಲ್ಡರ್ ಆಗಿರುವ ಮ್ಯಥ್ಯೂಸ್ ವಿಚಿತ್ರ ರೀತಿಯಲ್ಲಿ ಬಿದ್ದು ಬೆರಳು ಮುರಿದುಕೊಂಡರು. ಹೀಗಾಗಿ ದ್ವಿತಿಯಾರ್ಧದ ವೇಳೆ ಅವರು ತಂಡದಿಂದ ಹೊರಗುಳಿಯಬೇಕಾಯಿತು.
ಬೆರಳು ಮುರಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಗಾಯವು ಎಷ್ಟು ತೀವ್ರವಾಗಿತ್ತು ಎಂಬುದು ಫೋಟೋಗಳಿಂದ ಸ್ಪಷ್ಟವಾಗಿದೆ.
ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆಗಿರುವ ಮ್ಯಾಂಚೆಸ್ಟರ್ ಸಿಟಿ, ಚಾಂಪಿಯನ್ಸ್ ಲೀಗ್‌ನಲ್ಲಿ ತವರಿನಲ್ಲಿ ಆಡಿದ ಕೊನೆಯ 30 ಪಂದ್ಯಗಳಲ್ಲಿ 28 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಉಳಿದ ಎರಡು ಪಂದ್ಯಗಳು ಡ್ರಾಗೊಂಡಿವೆ. ಇದರಲ್ಲಿ ಕೊನೆಯ 12 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದೆ. ಪಂದ್ಯಾವಳಿಯಲ್ಲಿ ಸೋಲಿಲ್ಲದೆ ಸತತ 30ಕ್ಕೂ ಹೆಚ್ಚು ತವರು ಪಂದ್ಯಗಳನ್ನು ಆಡಿದ ಎರಡನೇ ತಂಡ ಎಂಬ ಹೆಗ್ಗಳಿಕೆ ಮ್ಯಾಂಚೆಸ್ಟರ್ ಸಿಟಿಯದ್ದು. ಈ ಹಿಂದೆ ಸೆಪ್ಟೆಂಬರ್ 2013ರಿಂದ ನವೆಂಬರ್ 2020ರವರೆಗೆ ಬಾರ್ಸಿಲೋನಾ ತಂಡವು 38 ಪಂದ್ಯಗಳನ್ನು ಗೆದ್ದ ದಾಖಲೆ ಹಾಗೆಯೇ ಇದೆ.
ಇದನ್ನೂ ಓದಿ | ಫುಟ್ಬಾಲ್ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್
ಅತ್ತ ಯುರೋಪಿಯನ್ ಸ್ಪರ್ಧೆಯ ಇತಿಹಾಸದಲ್ಲಿ ತವರಿನಲ್ಲಿ ಸತತ 9 ಪಂದ್ಯಗಳಲ್ಲಿ ಮೂರಕ್ಕೂ ಅಧಿಕ ಗೋಲುಗಳನ್ನು ಗಳಿಸಿದ ಮೊದಲ ತಂಡ ಎಂಬ ದಾಖಲೆಯೂ ಸಿಟಿಯದ್ದು. 2022ರ ಅಕ್ಟೋಬರ್ ತಿಂಗಳಲ್ಲಿ ಕೋಪನ್ ಹ್ಯಾಗನ್ ವಿರುದ್ಧ 5-0 ಅಂತರದಿಂದ ಗೆಲುವಿನೊನಿಂದಿಗೆ ತನ್ನ ಬೃಹತ್ ಅಂತರದ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಇದನ್ನೂ ಓದಿ | ಫಾರ್ಮುಲಾ ವನ್ ಡ್ರೈವರ್ ಕದ್ದಿದ್ದ ಫೆರಾರಿ ಕಾರು 28 ವರ್ಷಗಳ ಬಳಿಕ ಪತ್ತೆ; ಅತಿ ವೇಗದ ಫೆರಾರಿ ಇಷ್ಟು ದುಬಾರಿ!
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ