ಕನ್ನಡ ಸುದ್ದಿ  /  ಕ್ರೀಡೆ  /  ಫ್ರೆಂಚ್ ಓಪನ್ 2024: ಮಾಜಿ ನಂ 1 ಆಟಗಾರ್ತಿ ನವೋಮಿ ಒಸಾಕಾ ಮಣಿಸಿದ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್

ಫ್ರೆಂಚ್ ಓಪನ್ 2024: ಮಾಜಿ ನಂ 1 ಆಟಗಾರ್ತಿ ನವೋಮಿ ಒಸಾಕಾ ಮಣಿಸಿದ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್

French Open 2024 : ಪ್ರಸಕ್ತ ಸಾಲಿನ ಫ್ರೆಂಚ್ ಓಪನ್​ ಟೂರ್ನಿಯಲ್ಲಿ ಮಾಜಿ ನಂಬರ್ 1 ಆಟಗಾರ್ತಿ ನವಾಮಿ ಒಸಾಕೊ ಅವರನ್ನು ಹಾಲಿ ನಂಬರ್ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಸೋಲಿಸಿದ್ದಾರೆ.

French Open 2024: ಮಾಜಿ ನಂ 1 ಆಟಗಾರ್ತಿ ನವೋಮಿ ಒಸಾಕಾ ಮಣಿಸಿದ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್
French Open 2024: ಮಾಜಿ ನಂ 1 ಆಟಗಾರ್ತಿ ನವೋಮಿ ಒಸಾಕಾ ಮಣಿಸಿದ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್

French Open 2024: ನಡೆಯುತ್ತಿರುವ ಫ್ರೆಂಚ್ ಓಪನ್‌ನಲ್ಲಿ 2ನೇ ಸುತ್ತಿನ ಕಠಿಣ ಹೋರಾಟದ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಟೆನಿಸ್ ತಾರೆ ಇಗಾ ಸ್ವಿಯಾಟೆಕ್ (Iga Swiatek) ಅವರು ವಿಶ್ವದ ಮಾಜಿ ನಂಬರ್ 1 ನವೋಮಿ ಒಸಾಕಾ (Naomi Osaka) ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಕೆಂಪು ಜೇಡಿ ಮಣ್ಣಿನ ಕೋರ್ಟ್​​ನಲ್ಲಿ ಸ್ವಿಯಾಟೆಕ್, 7-6 (1), 1-6, 7-5 ಅಂತರದಿಂದ ಒಸಾಕಾ ಸೋಲಿಸಿದ್ದಾರೆ. ಇಬ್ಬರ ಹೋರಾಟ ಪ್ರೇಕ್ಷಕರಿಗೆ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿತು.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ವಿಶ್ವದ ನಂ. 1 (ಇಗಾ) ಮತ್ತು ಮಾಜಿ ವಿಶ್ವ ನಂ. 1 (ಒಸಾಕಾ) ನಡುವಿನ ಈ ಪಂದ್ಯ ಅವರ ವೃತ್ತಿಜೀವನದ ಮೂರನೇ ಮುಖಾಮುಖಿಯಾಗಿತ್ತು. ಒಟ್ಟಾರೆ ಹೆಡ್-ಟು-ಹೆಡ್ ದಾಖಲೆಯಲ್ಲಿ ಸ್ವಿಯಾಟೆಕ್ 2-1ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಸಾಕಾ, ತನ್ನ ಮಾತೃತ್ವ ವಿರಾಮದ ಕೇವಲ ಐದು ತಿಂಗಳ ನಂತರ ಕಣಕ್ಕಿಳಿದು ತನ್ನ ಖಡಕ್ ಆಟವನ್ನು ಪ್ರದರ್ಶಿಸಿದರು.

ಮೊದಲ ಸೆಟ್ ಟೈಬ್ರೇಕರ್​ಗೆ ಒಳಗಾಯಿತು. ಈ ವೇಳೆ ಇಗಾ ಗೆದ್ದು ಬೀಗಿದರು. ಆರಂಭಿಕ ಹಿನ್ನಡೆಯಿಂದ ವಿಚಲಿತರಾಗದ ಒಸಾಕಾ, ಘರ್ಜಿಸಿದರು. ಎರಡನೇ ಸೆಟ್​ನಲ್ಲಿ 1-6ರಲ್ಲಿ ತಿರುಗೇಟು ನೀಡಿ ಮೂರನೇ ಸೆಟ್​ ಉಳಿಸಿಕೊಳ್ಳಲು ಯತ್ನಿಸಿದರು. ಕೊನೆಯ ಸೆಟ್​ನಲ್ಲಿ ಇಗಾ, ಆಕ್ರಮಣಕಾರಿ ಆಟದೊಂದಿಗೆ ಕಂಬ್ಯಾಕ್ ಮಾಡಿದರು. ಒಸಾಕಾ ತೀವ್ರ ನೀಡಿದ ತೀವ್ರ ಪೈಪೋಟಿ ನಡುವೆಯೂ ಸೋಲಿಗೆ ಶರಣಾದರು.

ಗೆದ್ದ ನಂತರ ಪಂದ್ಯದ ಕುರಿತು ಮಾತನಾಡಿದ ಸ್ವಿಯಾಟೆಕ್, 'ಖಂಡಿತವಾಗಿಯೂ ಈ ಪಂದ್ಯವು ನಿಜವಾಗಿಯೂ ತೀವ್ರತೆಯಿಂದ ಕೂಡಿತ್ತು' ಎಂದು ರೋಲ್ಯಾಂಡ್ ಗ್ಯಾರೋಸ್‌ಗೆ ತಿಳಿಸಿದ್ದಾರೆ. ನಾನು ನಿರೀಕ್ಷಿಸಿದ್ದಕ್ಕಿಂತ ಮೂರನೇ ಸುತ್ತು ಸಾಕಷ್ಟು ಪೈಪೋಟಿಯಿಂದ ಕೂಡಿತ್ತು ಎಂದ ಇಗಾ, ನವೊಮಿ ಸೋತರೂ ಆಕೆಯ ಆಟವನ್ನು ಗುಣಗಾನ ಮಾಡಿದ್ದಾರೆ. ನಿಜವಾಗಿಯೂ ಅದ್ಭುತ ಟೆನಿಸ್ ಆಡಿದರು ಎಂದು ಹೇಳಿದ್ದಾರೆ.

ನನ್ನ ಮನಸ್ಸು ಕೆಲವೊಮ್ಮೆ ವಿಚಿಲಿತವಾಗಿತ್ತು. ಆದರೆ ಒತ್ತಡಕ್ಕೆ ಒಳಗಾದಾಗ ನಾನು ಹೆಚ್ಚು ಗಮನಹರಿಸಲು ಮತ್ತು ಉತ್ತಮವಾಗಿ ಆಡಲು ಸಾಧ್ಯವಾಯಿತು, ಸ್ಕೋರ್ ಏನೆಂದು ಯೋಚಿಸದೆ ಆಟವನ್ನು ಮುಂದುವರೆಸಿದೆ. ಆದರೆ, ನಾನು ಸೋಲುವ ಸ್ಥಿತಿಗೂ ತಲುಪಿದ್ದೆ. ಈ ಪಂದ್ಯದಲ್ಲಾದ ತಪ್ಪುಗಳನ್ನು ಮುಂದಿನ ಪಂದ್ಯಗಳಲ್ಲಿ ಸರಿಪಡಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)