ಬೆಡ್‌ರೂಮ್‌ನಲ್ಲಿ ಲೈಂಗಿಕತೆ ಇರಬಾರದು ಎನ್ನುವುದೇಕೆ; ಒಲಿಂಪಿಕ್ಸ್ ಆಯೋಜಕರ​ ನಿರ್ಧಾರಕ್ಕೆ ಕಂಗನಾ ರಣಾವತ್ ಕಿಡಿ
ಕನ್ನಡ ಸುದ್ದಿ  /  ಕ್ರೀಡೆ  /  ಬೆಡ್‌ರೂಮ್‌ನಲ್ಲಿ ಲೈಂಗಿಕತೆ ಇರಬಾರದು ಎನ್ನುವುದೇಕೆ; ಒಲಿಂಪಿಕ್ಸ್ ಆಯೋಜಕರ​ ನಿರ್ಧಾರಕ್ಕೆ ಕಂಗನಾ ರಣಾವತ್ ಕಿಡಿ

ಬೆಡ್‌ರೂಮ್‌ನಲ್ಲಿ ಲೈಂಗಿಕತೆ ಇರಬಾರದು ಎನ್ನುವುದೇಕೆ; ಒಲಿಂಪಿಕ್ಸ್ ಆಯೋಜಕರ​ ನಿರ್ಧಾರಕ್ಕೆ ಕಂಗನಾ ರಣಾವತ್ ಕಿಡಿ

Kangana Ranaut: ಆದರೆ ಒಲಿಂಪಿಕ್ಸ್​ಗೂ ಲೈಂಗಿಕತೆಗೂ ಸಂಬಂಧವೇನು? ಇಲ್ಲಿ ನಿರ್ಬಂಧ ಹೇರಿರೋದ್ಯಾಕೆ? ನನಗಂತೂ ಏನೂ ತಿಳಿಯುತ್ತಿಲ್ಲ ಎಂದು ಸಂಸದೆ ಕಂಗನಾ ರಣಾವತ್​ ಕಿಡಿಕಾರಿದ್ದಾರೆ.

ಬೆಡ್‌ರೂಮ್‌ನಲ್ಲಿ ಇರಬಾರದು ಎನ್ನುವುದೇಕೆ; ಒಲಿಂಪಿಕ್ಸ್ ಆಯೋಜಕರ​ ನಿರ್ಧಾರಕ್ಕೆ ಕಂಗನಾ ರಣಾವತ್ ಕೆಂಡಾಮಂಡಲ
ಬೆಡ್‌ರೂಮ್‌ನಲ್ಲಿ ಇರಬಾರದು ಎನ್ನುವುದೇಕೆ; ಒಲಿಂಪಿಕ್ಸ್ ಆಯೋಜಕರ​ ನಿರ್ಧಾರಕ್ಕೆ ಕಂಗನಾ ರಣಾವತ್ ಕೆಂಡಾಮಂಡಲ

ಪ್ರೇಮನಗರಿ ಪ್ಯಾರಿಸ್​ನಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್​​ ಕ್ರೀಡಾಕೂಟ ಜುಲೈ 26ರ ಶುಕ್ರವಾರ ಅದ್ಧೂರಿ ಆರಂಭ ಪಡೆಯಿತು. ಈಗಾಗಲೇ ಕ್ರೀಡಾಪಟುಗಳು ಪದಕಬೇಟೆ ಶುರುವಿಟ್ಟಿದ್ದಾರೆ. ಆದರೆ, ಉದ್ಘಾಟನಾ ಸಮಾರಂಭದಲ್ಲಿ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತ ಲಿಯನಾರ್ಡೊ ಡ ವಿಂಚಿ ಅವರ ಮ್ಯೂರಲ್ ಪೇಂಟಿಂಗ್ 'ದಿ ಲಾಸ್ಟ್ ಸಪ್ಪರ್' ಅನ್ನು ಡ್ರ್ಯಾಗ್ ಕ್ವೀನ್ ವಿಷಯದ ಸ್ಪಷ್ಟ ವಿಡಂಬನೆಗೆ ಬಿಜೆಪಿ ಸಂಸದೆ ಕಂಗನಾ ರಣಾವತ್​ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಜುಲೈ 26ರ ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಮೂರು ಪ್ರಸಿದ್ಧ ಡ್ರ್ಯಾಗ್ ರೇಸ್ ಫ್ರಾನ್ಸ್ ಕ್ವೀನ್‌ಗಳು ಸೇರಿದಂತೆ 18 ಪ್ರದರ್ಶಕರನ್ನು ಒಳಗೊಂಡ ಡ್ರ್ಯಾಗ್ ಆಕ್ಟ್​ವೊಂದನ್ನು ಪ್ರದರ್ಶನ ಮಾಡಲಾಗಿತ್ತು. ಆದರೀಗ ಅದು ಟೀಕೆಗೆ ಗುರಿಯಾಗಿದೆ. ಈ ಚಿತ್ರದೊಂದಿಗೆ ಕಂಗನಾ ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದು, ಧರ್ಮನಿಂದೆನೆಯ ಚಿತ್ರ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಂಗನಾ ರಣಾವತ್ ಪೋಸ್ಟ್​ನಲ್ಲಿ ಏನಿದೆ?

ಈ ಕೃತ್ಯವನ್ನು 'ಹೈಪರ್-ಸೆಕ್ಸುವಲೈಸ್ಟ್​' ಮತ್ತು 'ದಿ ಲಾಸ್ಟ್ ಸಪ್ಪರ್‌ನ ಧರ್ಮನಿಂದೆಯ ಚಿತ್ರಣ' ಎಂದು ಟೀಕಿಸಿದ್ದಾರೆ. ಇದು ಶಿಲುಬೆಗೇರಿಸುವ ಮೊದಲು ಜೆರುಸಲೆಮ್​​ನಲ್ಲಿ ಅಪೊಸ್ತಲರೊಂದಿಗೆ ಯೇಸುವಿನ ಕೊನೆಯ ಊಟವನ್ನು ಚಿತ್ರಿಸುವ ವಿಶ್ವದ ಅತ್ಯಂತ ಪ್ರಸಿದ್ಧ ಕಲಾಕೃತಿಗಳಲ್ಲಿ ಒಂದಾಗಿದೆ. ಆದರೆ, ನೀಲಿ ಬಣ್ಣದ ನಗ್ನ ವ್ಯಕ್ತಿಯನ್ನು ಯೇಸುವಿನಂತೆ ಪ್ರದರ್ಶಿಸಿ ಕ್ರಿಶ್ಚಿಯನ್ ಧರ್ಮವನ್ನು ವಿಡಂಬನೆ ಮಾಡಿದ್ದಾರೆ. ಎಡಪಂಥೀಯರು ಒಲಿಂಪಕ್ಸ್ ಕೀಡಾಕೂಟವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಒಲಿಂಪಿಕ್ಸ್ ಉದ್ಘಾಟನೆಯಲ್ಲಿ ಎಲ್ಲವೂ ಸಲಿಂಗ ಕಾಮುಕತೆಯಿಂದ ಕೂಡಿತ್ತು ಎಂದು ಸಂಸದೆ ಹೇಳಿದ್ದಾರೆ. ನಾನು ಸಲಿಂಗಕಾಮಕ್ಕೆ ವಿರೋಧಿಯಲ್ಲ. ಆದರೆ ಒಲಿಂಪಿಕ್ಸ್​ಗೂ ಲೈಂಗಿಕತೆಗೂ ಸಂಬಂಧವೇನು? ಇಲ್ಲಿ ನಿರ್ಬಂಧ ಹೇರಿರೋದ್ಯಾಕೆ? ನನಗಂತೂ ಏನೂ ತಿಳಿಯುತ್ತಿಲ್ಲ. ಲೈಂಗಿಕತೆಯ ಮೂಲಕ ಮಾನವ ಶ್ರೇಷ್ಠತೆ ಪಡೆದುಕೊಳ್ಳಲು ಎಲ್ಲಾ ರಾಷ್ಟ್ರಗಳ ಆಟಗಳು, ಕ್ರೀಡೆಗಳ ಭಾಗವಹಿಸುವ ಅವಶ್ಯಕತೆ ಏನಿದೆ? ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕಿರಬಾರದು? ಇದು ರಾಷ್ಟ್ರೀಯ ಗುರುತಾಗಿರಬೇಕೇ? ಎಂದು ಕಿಡಿಕಾರಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.