ಕನ್ನಡ ಸುದ್ದಿ  /  ಕ್ರೀಡೆ  /  ಚಿನ್ನದ ಹುಡುಗನಿಗೆ ಮತ್ತೊಂದು ಚಿನ್ನ; ಪಾವೊ ನುರ್ಮಿ ​​ಗೇಮ್ಸ್​​ನಲ್ಲಿ ಸ್ವರ್ಣಕ್ಕೆ ಕೊರೊಳೊಡ್ಡಿದ ನೀರಜ್ ಚೋಪ್ರಾ

ಚಿನ್ನದ ಹುಡುಗನಿಗೆ ಮತ್ತೊಂದು ಚಿನ್ನ; ಪಾವೊ ನುರ್ಮಿ ​​ಗೇಮ್ಸ್​​ನಲ್ಲಿ ಸ್ವರ್ಣಕ್ಕೆ ಕೊರೊಳೊಡ್ಡಿದ ನೀರಜ್ ಚೋಪ್ರಾ

Neeraj Chopra : ಫಿನ್‌ಲ್ಯಾಂಡ್​ನ ಟುರ್ಕದಲ್ಲಿ ನಡೆದ 2024ರ ಪಾವೊ ನುರ್ಮಿ ಗೇಮ್ಸ್​​ನಲ್ಲಿ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಚಿನ್ನದ ಹುಡುಗನಿಗೆ ಮತ್ತೊಂದು ಚಿನ್ನ; ಪಾವೊ ನುರ್ಮಿ ​​ಗೇಮ್ಸ್​​ನಲ್ಲಿ ಸ್ವರ್ಣಕ್ಕೆ ಕೊರೊಳೊಡ್ಡಿದ ನೀರಜ್ ಚೋಪ್ರಾ
ಚಿನ್ನದ ಹುಡುಗನಿಗೆ ಮತ್ತೊಂದು ಚಿನ್ನ; ಪಾವೊ ನುರ್ಮಿ ​​ಗೇಮ್ಸ್​​ನಲ್ಲಿ ಸ್ವರ್ಣಕ್ಕೆ ಕೊರೊಳೊಡ್ಡಿದ ನೀರಜ್ ಚೋಪ್ರಾ

ಫಿನ್‌ಲ್ಯಾಂಡ್​ನ ಟುರ್ಕದಲ್ಲಿ ಜರುಗಿದ ಪಾವೊ ನುರ್ಮಿ ​​ಗೇಮ್ಸ್-2024ರ ಜಾವೆಲಿನ್ ಥ್ರೋನಲ್ಲಿ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಥ್ರೋ 85.97 ಮೀಟರ್‌ ಜಾವೆಲಿನ್ ಎಸೆಯುವುದರೊಂದಿಗೆ ಸ್ವರ್ಣಕ್ಕೆ ಕೊರೊಳೊಡ್ಡಿದ್ದಾರೆ. ನೀರಜ್​​ಗೆ ಫಿನ್​ಲ್ಯಾಂಡ್​ನ ಒಲಿವರ್ ಹೆಲ್ಯಾಂಡರ್ ಕಠಿಣ ಪೈಪೋಟಿ ನೀಡಿದಲ್ಲದೆ, ಎರಡನೇ ಸುತ್ತಿನಲ್ಲಿ 83.96 ಮೀಟರ್‌ ಎಸೆದು ಹಿಂದಿಕ್ಕಿದ್ದರು.

ಆದರೆ, ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು ತಮ್ಮ ತೋಳ್ಬಲ ಪ್ರದರ್ಶಿಸಿ ಗಮನ ಸೆಳೆದರು. 85.97 ಮೀಟರ್ ದೂರ ಜಾವೆಲಿನ್ ಎಸೆದು ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡರು. ಗಾಯದ ಕಾರಣದಿಂದ ಕಳೆದ ತಿಂಗಳು ಝೆಕಿಯಾದಲ್ಲಿ ನಡೆದ ಆಸ್ಟ್ರಾವ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಇದೀಗ ಬಂಗಾರವನ್ನು ಗೆಲ್ಲುವ ಮೂಲಕ ಮುಂದಿನ ತಿಂಗಳು ಜರುಗುವ ಪ್ಯಾರಿಸ್ ಒಲಿಂಪಿಕ್ಸ್​​ಗೂ ಮುನ್ನ ಭರವಸೆ ಮೂಡಿಸಿದ್ದಾರೆ.

ನೀರಜ್ 83.62ಮೀ ಎಸೆಯುವ ಮೂಲಕ ಆರಂಭಿಕ ಸುತ್ತಿನ ನಂತರ ಮುನ್ನಡೆ ಸಾಧಿಸಿದರು. ಆದರೆ, 2ನೇ ಸುತ್ತಿನ ನಂತರ ಫಿನ್‌ಲ್ಯಾಂಡ್‌ನ ಆಲಿವರ್ ಹೆಲಾಂಡರ್ ತಮ್ಮ ಈಟಿಯನ್ನು 83.96 ಮೀಟರ್‌ಗೆ ಎಸೆದ ಕಾರಣ ಚೋಪ್ರಾರನ್ನು 2ನೇ ಸ್ಥಾನಕ್ಕೆ ತಳ್ಳಿದರು. 3ನೇ ಪ್ರಯತ್ನದಲ್ಲಿ ಭಾರತದ ಆಟಗಾರ ಮತ್ತೆ ಮುನ್ನಡೆ ಸಾಧಿಸಿದರು. ಫಿನ್​ಲ್ಯಾಂಡ್​ನ ಮತ್ತೋರ್ವ ಅಥ್ಲೀಟ್ ಟೋನಿ ಕೆರಾನೆನ್ 84.19 ಮೀ. ಎಸೆಯುವ ಮೂಲಕ ಚೋಪ್ರಾ ಸಮೀಪಕ್ಕೆ ಬಂದರು. ಆದರೆ ಯಾರೂ ಭಾರತೀಯರಿಗೆ ಸವಾಲು ನೀಡಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಈ ವೇಳೆ ಜರ್ಮನಿಯ ಮ್ಯಾಕ್ಸ್ ಡೆಹ್ನಿಂಗ್, ಚೋಪ್ರಾಗೆ ಸವಾಲೊಡ್ಡಬಹುದಿತ್ತು. ವರ್ಷದ ಆರಂಭದಲ್ಲಿ 19 ವರ್ಷದ ಆಟಗಾರ 90.61 ಮೀಟರ್​ ಭರ್ಜಿ ಎಸೆದು ದಾಖಲೆ ಬರೆದಿದ್ದರು. ತನ್ನ ಮೂರು ಕಾನೂನು ಥ್ರೋಗಳಲ್ಲಿ ಮೊದಲ ಪ್ರಯತ್ನದಲ್ಲಿ 79.84 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ನಿರ್ವಹಿಸಿದರು. ಎಂಟು ಆಟಗಾರರ ಸ್ಪರ್ಧೆಯಲ್ಲಿ ಅವರು ಏಳನೇ ಸ್ಥಾನ ಪಡೆದರು. ಡೆಹ್ನಿಂಗ್ ಹೊರತಾಗಿ, ಎರಡು ಬಾರಿ ಆಂಡರ್ಸನ್ ಪೀಟರ್ಸ್ ಕೂಡ ಚಿನ್ನದ ಪದಕಕ್ಕೆ ಸವಾಲು ಹಾಕಲು ಕಣದಲ್ಲಿದ್ದರು.

ಆದರೆ ಅವರು 82.58 ಮೀ ಎತ್ತರದ ಎಸೆತವನ್ನು ನಿರ್ವಹಿಸಿ ನಾಲ್ಕನೇ ಸ್ಥಾನ ಪಡೆದರು. ಚೋಪ್ರಾ ನಂತರ ಫಿನ್‌ಲ್ಯಾಂಡ್‌ನ ಕೆರಾನೆನ್ ಮತ್ತು ಹೆಲಾಂಡರ್ ಕ್ರಮವಾಗಿ 84.19 ಮೀ ಮತ್ತು 83.96 ಮೀ ಎಸೆದು ಬೆಳ್ಳಿ ಮತ್ತು ಕಂಚು ಗೆದ್ದರು. ಚೋಪ್ರಾ ಈಗ ಜುಲೈ 7 ರಂದು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಆಡಬಹುದು.

2022ರಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್

2022ರಲ್ಲಿ ಜರುಗಿದ್ದ ಪಾವೊ ನೂರ್ಮಿ ಗೇಮ್ಸ್​ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆಲಿವರ್ ಹೆಲಾಂಡರ್ ಅತಿದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನ ಜಯಿಸಿದ್ದರು. ಒಲಿವರ್ 89.83 ಮೀಟರ್ ಎಸೆದಿದ್ದರೆ, ನೀರಜ್ 89.30 ಮೀಟರ್​ ಭರ್ಜಿ ಎಸೆದು ಅಗ್ರಸ್ಥಾನವನ್ನು ತಪ್ಪಿಸಿಕೊಂಡಿದ್ದರು. ಆದರೀಗ ಹೆಲಾಂಡರ್​​ರನ್ನು ಹಿಂದಿಕ್ಕಿ ಚೋಪ್ರಾ ಸ್ವರ್ಣಕ್ಕೆ ಮುತ್ತಿಕ್ಕಿದ್ದಾರೆ.

ಚಿನ್ನ ಗೆದ್ದಿದ್ದ ಚೋಪ್ರಾ

2020ರ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಅಂದು ಚೋಪ್ರಾ ಬರೋಬ್ಬರಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಭಾರತಕ್ಕೆ ಬಂಗಾರದ ಪದಕವನ್ನು ಸ್ವಂತ ಮಾಡಿಕೊಂಡಿದ್ದರು. ಪ್ರಸ್ತುತ ಪ್ಯಾರಿಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದಿರುವ ನೀರಜ್ ಚೋಪ್ರಾ ಮತ್ತೊಮ್ಮೆ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.