ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದಿನಿಂದ ಟಿ20 ವಿಶ್ವಕಪ್​​ ಸೂಪರ್ 8 ಪಂದ್ಯಗಳು ಆರಂಭ; ಎಲ್ಲಿ, ಯಾವಾಗ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ವಿವರ

ಇಂದಿನಿಂದ ಟಿ20 ವಿಶ್ವಕಪ್​​ ಸೂಪರ್ 8 ಪಂದ್ಯಗಳು ಆರಂಭ; ಎಲ್ಲಿ, ಯಾವಾಗ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ವಿವರ

T20 World Cup Super 8 Schedule: ಟಿ20 ವಿಶ್ವಕಪ್​​ 2024 ಸೂಪರ್ 8 ಹಂತದ ಪಂದ್ಯಗಳು ಎಲ್ಲಿ ನಡೆಯಲಿವೆ? ಯಾವ ತಂಡಗಳ ಯಾರ ವಿರುದ್ಧ ಸೆಣಸಾಟ ನಡೆಸಲಿವೆ? ಸೂಪರ್ 8 ಸುತ್ತಿನ ವೇಳಾಪಟ್ಟಿ ಇಲ್ಲಿದೆ.

ಇಂದಿನಿಂದ ಟಿ20 ವಿಶ್ವಕಪ್​​ ಸೂಪರ್ 8 ಪಂದ್ಯಗಳು ಆರಂಭ; ಎಲ್ಲಿ, ಯಾವಾಗ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ವಿವರ
ಇಂದಿನಿಂದ ಟಿ20 ವಿಶ್ವಕಪ್​​ ಸೂಪರ್ 8 ಪಂದ್ಯಗಳು ಆರಂಭ; ಎಲ್ಲಿ, ಯಾವಾಗ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ವಿವರ

ಟಿ20 ವಿಶ್ವಕಪ್​ ಲೀಗ್ (T20 World Cup 2024) ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್​-8 ಪಂದ್ಯಗಳು ಆರಂಭಗೊಳ್ಳಲಿವೆ. 2 ಗುಂಪುಗಳಲ್ಲಿ 8 ತಂಡಗಳು ಸೆಣಸಾಟ ನಡೆಸಲಿವೆ. ಈ ಪೈಕಿ 4 ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿವೆ. ಗ್ರೂಪ್-1ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅವಕಾಶ ಪಡೆದಿದ್ದರೆ, ಗ್ರೂಪ್-2ರಲ್ಲಿ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಈ ತಂಡಗಳ ನಡುವಿನ ಕಾದಾಟ ಜೂನ್ 19 ರಿಂದ ಕೆರಿಬಿಯನ್ ನೆಲದಲ್ಲಿ ನಡೆಯಲಿವೆ.

ಸೂಪರ್​​-8 ಹಂತದಲ್ಲಿ ಆಡಲು ಅವಕಾಶ ಪಡೆದ 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಲಾಗಿದೆ. ಗ್ರೂಪ್​ 1 ಮತ್ತು ಗ್ರೂಪ್​ 2ರಲ್ಲಿ ತಲಾ 4 ತಂಡಗಳು ಸ್ಥಾನ ಪಡೆದಿವೆ. ಇದರಲ್ಲಿ ಅಗ್ರ 2 ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿವೆ. ಈ ಸುತ್ತಿನಲ್ಲಿ ತಲಾ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ತಂಡವು ಸೆಮಿಫೈನಲ್​ಗೇರಲಿದೆ. ಸೋತ ತಂಡಕ್ಕೆ ಇಲ್ಲಿಗೆ ಅಭಿಯಾನ ಕೊನೆಗೊಳ್ಳಲಿದೆ.​ ಸೂಪರ್ 8 ಸುತ್ತಿನ ವೇಳಾಪಟ್ಟಿ, ಎಲ್ಲಿ, ಯಾವಾಗ, ಯಾವ ತಂಡಗಳ ನಡುವೆ ಸೆಣಸಾಟ? ಇಲ್ಲಿದೆ ವಿವರ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್ ಸೂಪರ್-8 ಸಂಪೂರ್ಣ ವೇಳಾಪಟ್ಟಿ 

ಜೂನ್ 19: ಯುಎಸ್ಎ vs ದಕ್ಷಿಣ ಆಫ್ರಿಕಾ, ನಾರ್ತ್ ಸೌಂಡ್, ಆಂಟಿಗುವಾ, ರಾತ್ರಿ 8 ಗಂಟೆಗೆ.

ಜೂನ್ 20: ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಗ್ರೋಸ್ ಐಸ್ಲೆಟ್, ಸೇಂಟ್ ಲೂಸಿಯಾ, ಬೆಳಿಗ್ಗೆ 6 ಗಂಟೆಗೆ.

ಜೂನ್ 20: ಅಫ್ಘಾನಿಸ್ತಾನ vs ಭಾರತ, ಬ್ರಿಡ್ಜ್ಟೌನ್, ಬಾರ್ಬಡೋಸ್, ರಾತ್ರಿ 8 ಗಂಟೆಗೆ.

ಜೂನ್ 21: ಆಸ್ಟ್ರೇಲಿಯಾ vs ಬಾಂಗ್ಲಾದೇಶ, ನಾರ್ತ್ ಸೌಂಡ್, ಆಂಟಿಗುವಾ, ಬೆಳಿಗ್ಗೆ 6 ಗಂಟೆಗೆ, 

ಜೂನ್ 21: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಗ್ರೋಸ್ ಐಸ್ಲೆಟ್, ಸೇಂಟ್ ಲೂಸಿಯಾ, ರಾತ್ರಿ 8 ಗಂಟೆಗೆ

ಜೂನ್ 22: ಯುಎಸ್ಎ vs ವೆಸ್ಟ್ ಇಂಡೀಸ್, ಬ್ರಿಡ್ಜ್ಟೌನ್, ಬಾರ್ಬಡೋಸ್, ಬೆಳಿಗ್ಗೆ 6 ಗಂಟೆಗೆ

ಜೂನ್ 22: ಬಾಂಗ್ಲಾದೇಶ vs ಭಾರತ, ನಾರ್ತ್ ಸೌಂಡ್, ಆಂಟಿಗುವಾ, ರಾತ್ರಿ 8 ಗಂಟೆಗೆ

ಜೂನ್ 23: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಅರ್ನೋಸ್ ವೇಲ್, ಸೇಂಟ್ ವಿನ್ಸೆಂಟ್, ಬೆಳಿಗ್ಗೆ 6 ಗಂಟೆಗೆ

ಜೂನ್ 23: ಯುಎಸ್ಎ vs ಇಂಗ್ಲೆಂಡ್, ಬ್ರಿಡ್ಜ್ಟೌನ್, ಬಾರ್ಬಡೋಸ್, ರಾತ್ರಿ 8 ಗಂಟೆಗೆ.

ಜೂನ್ 24: ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ, ನಾರ್ತ್ ಸೌಂಡ್, ಆಂಟಿಗುವಾ, ಬೆಳಿಗ್ಗೆ 6 ಗಂಟೆಗೆ

ಜೂನ್ 24: ಆಸ್ಟ್ರೇಲಿಯಾ vs ಭಾರತ, ಗ್ರೋಸ್ ಐಲೆಟ್, ಸೇಂಟ್ ಲೂಸಿಯಾ, ರಾತ್ರಿ 8 ಗಂಟೆಗೆ.

ಜೂನ್ 25: ಅಫ್ಘಾನಿಸ್ತಾನ vs ಬಾಂಗ್ಲಾದೇಶ, ಅರ್ನೋಸ್ ವೇಲ್, ಸೇಂಟ್ ವಿನ್ಸೆಂಟ್, ಬೆಳಿಗ್ಗೆ 6 ಗಂಟೆಗೆ

ಸೂಪರ್​​-8 ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಥಳಗಳು

ಆಂಟಿಗುವಾ

ಸೇಂಟ್ ಲೂಸಿಯಾ

ಬಾರ್ಬಡೋಸ್

ಸೇಂಟ್ ವಿನ್ಸೆಂಟ್