ಕನ್ನಡ ಸುದ್ದಿ  /  Sports  /  Pkl 2024 Winner Pro Kabaddi League Winning Team Puneri Paltan Prize Money Awards Stats Haryana Steelers Runners Up Prs

ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪುಣೇರಿ ಪಲ್ಟನ್ಸ್​ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು; ರನ್ನರ್​ಅಪ್​ ಹರಿಯಾಣ ಗೆದ್ದಿದ್ದೆಷ್ಟು?​

Pro Kabaddi League Prize Money : ಪ್ರೊ ಕಬಡ್ಡಿ ಲೀಗ್ ಮುಕ್ತಾಯಗೊಂಡಿದೆ. ಪುಣೇರಿ ಪಲ್ಟನ್ ಚಾಂಪಿಯನ್ ಆಗಿದೆ. ಹಾಗಾದರೆ ವಿಜೇತರಿಗೆ ಸಿಕ್ಕ ಬಹುಮಾನದ ಹಣವೆಷ್ಟು? ರನ್ನರ್​ಅಪ್ ತಂಡಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ನೋಡಿ ವಿವರ.

ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪುಣೇರಿ ಪಲ್ಟನ್ಸ್​ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು
ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪುಣೇರಿ ಪಲ್ಟನ್ಸ್​ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು

ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿ ಮುಕ್ತಾಯಗೊಂಡಿದೆ. ಮೂರು ತಿಂಗಳ ನಾನ್​ಸ್ಟಾಪ್​ ಮನರಂಜನೆಗೆ ರೋಚಕ ತೆರೆ ಬಿದ್ದಿದೆ. 2023ರ ಡಿಸೆಂಬರ್​ 2ರಿಂದ 2024ರ ಮಾರ್ಚ್​ 1ರವರೆಗೂ ನಡೆದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿ ಪುಣೇರಿ ಪಲ್ಟನ್ ಚೊಚ್ಚಲ ಪ್ರೊ ಕಬಡ್ಡಿ ಲೀಗ್​ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ 28-25 ಅಂಕಗಳ ಅಂತರದಿಂದ ಪಲ್ಟನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಹೈದರಾಬಾದ್‌ನ ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಿತು. 10 ಋತುಗಳಲ್ಲಿ ಮೊದಲ ಬಾರಿಗೆ ಪುಣೇರಿ ಪಲ್ಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಲೀಗ್​​ನ ಒಟ್ಟಾರೆ ಬಹುಮಾನ 8 ಕೋಟಿ ರೂಪಾಯಿ. ಇದರಲ್ಲಿ ವಿಜೇತರು, ರನ್ನರ್ ಮತ್ತು ಅಗ್ರ ಆರು ಸ್ಥಾನ ಪಡೆಯುವ ತಂಡಗಳು ಮಾತ್ರವಲ್ಲದೆ ತೀರ್ಪುಗಾರರಿಗೂ ಬಹುಮಾನದ ಹಣ ವಿತರಿಸಲಾಗುತ್ತದೆ. ಬನ್ನಿ ಯಾವ ತಂಡಕ್ಕೆ ಎಷ್ಟು ಮೊತ್ತ ಸಿಗಲಿದೆ ಎಂಬುದನ್ನು ನೋಡೋಣ.

ವಿಜೇತರು - 3 ಕೋಟಿ ರೂ (ಪುಣೇರಿ ಪಲ್ಟನ್)

ರನ್ನರ್ ಅಪ್ - 1.80 ಕೋಟಿ (ಹರಿಯಾಣ ಸ್ಟೀಲರ್ಸ್)

3-4ನೇ ಸ್ಥಾನ ಪಡೆದ ತಂಡಗಳು - ತಲಾ 90 ಲಕ್ಷ ರೂಪಾಯಿ

5-6ನೇ ಸ್ಥಾನ ಪಡೆದ ತಂಡಗಳು - ತಲಾ 45 ಲಕ್ಷ ರೂಪಾಯಿ

ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ: ಅಸ್ಲಂ ಇನಾಮದಾರ್ (ಪುನೇರಿ ಪಲ್ಟನ್) - 20 ಲಕ್ಷ ರೂಪಾಯಿ

ರೈಡರ್ ಆಫ್ ದಿ ಸೀಸನ್: ಅಶು ಮಲಿಕ್ (ದಬಾಂಗ್ ಡೆಲ್ಲಿ ಕೆಸಿ) - 15 ಲಕ್ಷ ರೂಪಾಯಿ.

ಈ ಆವೃತ್ತಿಯ ಅತ್ಯುತ್ತಮ ಡಿಫೆಂಡರ್: ಮೊಹಮ್ಮದ್ರೇಜಾ ಚಿಯಾನೆಹ್ (ಪುನೇರಿ ಪಲ್ಟನ್) - 15 ಲಕ್ಷ ರೂಪಾಯಿ.

ಆವೃತ್ತಿಯ ಉದಯೋನ್ಮುಖ ಆಟಗಾರ: ಯೋಗೇಶ್ ದಹಿಯಾ (ದಬಾಂಗ್ ಡೆಲ್ಲಿ) - 8 ಲಕ್ಷ ರೂ.

ಪಿಕೆಎಲ್ ಅಂಕಿ-ಅಂಶಗಳು

ಅತಿ ಹೆಚ್ಚು ಅಂಕ ಪಡೆದ ಆಟಗಾರ: ಅಶು ಮಲಿಕ್ (ದಬಾಂಗ್ ಡೆಲ್ಲಿ) - 23 ಪಂದ್ಯಗಳಲ್ಲಿ 280 ಅಂಕ

ಅತ್ಯಧಿಕ ಅಂಕ ಪಡೆದ ತಂಡ: ಪುಣೇರಿ ಪಲ್ಟನ್ - 24 ಪಂದ್ಯಗಳಲ್ಲಿ 950 ಅಂಕ.

ಅತಿ ಹೆಚ್ಚು ರೇಡ್ಸ್ ಪಾಯಿಂಟ್ಸ್: ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) ಮತ್ತು ಅಶು ಮಲಿಕ್ (ದಬಾಂಗ್ ಡೆಲ್ಲಿ) - 23 ಪಂದ್ಯಗಳಲ್ಲಿ 276 ಅಂಕ

ಹೆಚ್ಚಿನ ರೇಡ್ ಪಾಯಿಂಟ್‌ಗಳು (ತಂಡ): ಬೆಂಗಾಲ್ ವಾರಿಯರ್ಸ್ - 22 ಪಂದ್ಯಗಳಲ್ಲಿ 504 ಅಂಕ

ಅತ್ಯಂತ ಯಶಸ್ವಿ ರೈಡ್‌ಗಳು: ಅಶು ಮಲಿಕ್ (ದಬಾಂಗ್ ದೆಹಲಿ) - 23 ಪಂದ್ಯಗಳಲ್ಲಿ 228

ಅತ್ಯಂತ ಯಶಸ್ವಿ ರೈಡ್​ (ತಂಡ): ಪಾಟ್ನಾ ಪೈರೇಟ್ಸ್ - 24 ಪಂದ್ಯಗಳಲ್ಲಿ 400

ಹೆಚ್ಚಿನ ಸೂಪರ್ 10ಗಳು: ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) - 23 ಪಂದ್ಯಗಳಲ್ಲಿ 17

ಅತಿ ಹೆಚ್ಚು ಸೂಪರ್ ರೈಡ್‌ಗಳು (ತಂಡ): ಗುಜರಾತ್ ಜೈಂಟ್ಸ್ - 23 ಪಂದ್ಯಗಳಲ್ಲಿ 18 ಸೂಪರ್ ರೈಡ್

ಹೆಚ್ಚಿನ ಟ್ಯಾಕಲ್ ಪಾಯಿಂಟ್‌: ಮೊಹಮ್ಮದ್ರೇಜಾ ಚಿಯಾನೆ (ಪುನೇರಿ ಪಲ್ಟನ್) - 24 ಪಂದ್ಯಗಳಲ್ಲಿ 99 ಅಂಕ.