ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ-satwiksairaj rankireddy chirag shetty pair enter into quarterfinals of french open super 750 badminton tournament jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

French Open Super 750 : ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಲೇಷ್ಯಾ ಜೋಡಿ ವಿರುದ್ಧ ಸುಲಭವಾಗಿ ಗೆದ್ದ ಜೋಡಿಯು, ಕೇವಲ 32 ನಿಮಿಷಗಳಲ್ಲಿ ಪಂದ್ಯ ಪೂರ್ಣಗೊಳಿಸಿದರು.

ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ
ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ (Mohd Zakir)

ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty), ಫ್ರೆಂಚ್ ಓಪನ್ ಸೂಪರ್ 750 (French Open Super 750) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಜಯದ ಓಟ ಮುಂದುವರೆಸಿದ್ದಾರೆ. ವಿಶ್ವದ ನಂಬರ್‌ ವನ್‌ ಡಬಲ್ಸ್‌ ಜೋಡಿಯು ಅದ್ಧೂರಿಯಾಗಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ. ಮಲೇಷ್ಯಾದ ಮ್ಯಾನ್ ವೀ ಚೊಂಗ್ ಮತ್ತು ಕೈ ವೂ ಟೀ ಜೋಡಿ ವಿರುದ್ಧ ಸುಲಭ ಹಾಗೂ ನೇರ ಗೇಮ್‌ಗಳ ಗೆಲುವು ಸಾಧಿಸಿದ ಭಾರತದ ಬಲಿಷ್ಠ ಜೋಡಿಯು, ಪ್ರಶಸ್ತಿ ಸುತ್ತಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

2023ರ ಚೀನಾ ಓಪನ್, ಮಲೇಷ್ಯಾ ಓಪನ್ ಸೂಪರ್ 1000 ಮತ್ತು ಇಂಡಿಯಾ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಸತತ ರನ್ನರ್ ಅಪ್ ಸ್ಥಾನ ಪಡೆದು ವಿಶ್ವದ ನಂಬರ್‌ 1 ಡಬಲ್ಸ್ ಜೋಡಿಯಾಗಿ ಹೊರಹೊಮ್ಮಿರುವ ಸಾತ್ವಿಕ್ ಮತ್ತು ಚಿರಾಗ್, ಗುರುವಾರ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜೋಡಿಯನ್ನು 21-13, 21-12ರ ಸುಲಭ ಅಂತರದಿಂದ ಸೋಲಿಸಿದ್ದಾರೆ. ಪಂದ್ಯದುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತವು, ಕೇವಲ 32 ನಿಮಿಷಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಿದರು.

ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಜೊಮ್ಕೊ ಸುಪಾಕ್ ಮತ್ತು ಕೆಡ್ರೆನ್ ಕಿಟ್ಟಿನ್ಪೊಂಗ್ ಅವರನ್ನು ಎದುರಿಸಲಿದ್ದಾರೆ. ಆ ಮೂಲಕ ಸೆಮಿಫೈನಲ್‌ ಪ್ರವೇಶಿಸುವ ಹಂತದಲ್ಲಿದ್ದಾರೆ.

ಪಿವಿ ಸಿಂಧುಗೆ ಗೆಲುವು

ಅತ್ತ ಪಿವಿ ಸಿಂಧು ಅವರು ಮಹಿಳಾ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಎರಡನೇ ಶ್ರೇಯಾಂಕದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ. ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ನಂತರ ಇದೇ ಮೊದಲ ಬಾರಿಗೆ ಸಿಂಧು ಬಿಡಬ್ಲ್ಯೂಎಫ್ ಟೂರ್ ಆಡುತ್ತಿದ್ದಾರೆ.

ಇದನ್ನೂ ಓದಿ | ಫುಟ್ಬಾಲ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್

ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ಆಟಗಾರ್ತಿ ಸಿಂಧು, ಆರಂಭಿಕ ಗೇಮ್‌ನಲ್ಲಿ ವಿಶ್ವದ 10ನೇ ಶ್ರೇಯಾಂಕಿತ ಆಟಗಾರ್ತಿ ಜಾಂಗ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು. 13-21, 21-10, 21-14 ಅಂತರದಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಅತ್ತ ಮಹಿಳಾ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡಾ ಏಳನೇ ಶ್ರೇಯಾಂಕದ ಜಪಾನಿನ ಯೂಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 21-18, 21-13ರಿಂದ ಗೆದ್ದ ಜೋಡಿಯು ಮುಂದಿನ ಸುತ್ತಿನಲ್ಲಿ ಅವರು ಅಗ್ರ ಶ್ರೇಯಾಂಕದ ಚೀನಾದ ಜೋಡಿ ಕ್ವಿಂಗ್ ಚೆನ್ ಚೆನ್ ಮತ್ತು ಯಿ ಫಾನ್ ಜಿಯಾ ಅವರನ್ನು ಎದುರಿಸಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಚಾಂಪಿಯನ್ಸ್ ಲೀಗ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸಿಟಿ ಆಟಗಾರನಿಗೆ ಗಂಭೀರ ಗಾಯ; ಬೆರಳು ಮುರಿದುಕೊಂಡ ಮ್ಯಾಥ್ಯೂಸ್

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.