Australian Open: 27ನೇ ಶ್ರೇಯಾಂಕಿತ ಬುಬ್ಲಿಕ್ ಮಣಿಸಿ 2ನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್; ಭಾರತೀಯನ ವಿಶ್ವದಾಖಲೆ
ಕನ್ನಡ ಸುದ್ದಿ  /  ಕ್ರೀಡೆ  /  Australian Open: 27ನೇ ಶ್ರೇಯಾಂಕಿತ ಬುಬ್ಲಿಕ್ ಮಣಿಸಿ 2ನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್; ಭಾರತೀಯನ ವಿಶ್ವದಾಖಲೆ

Australian Open: 27ನೇ ಶ್ರೇಯಾಂಕಿತ ಬುಬ್ಲಿಕ್ ಮಣಿಸಿ 2ನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್; ಭಾರತೀಯನ ವಿಶ್ವದಾಖಲೆ

Sumit Nagal: ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ ನೇರ ಸೆಟ್‌ಗಳ ಜಯ ದಾಖಲಿಸಿದ ಭಾರತದ ಸುಮಿತ್ ನಗಾಲ್, ಆಸ್ಟ್ರೇಲಿಯನ್ ಓಪನ್‌ನ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಸೋಲಿಸಿದ ಭಾರತದ ಸುಮಿತ್ ನಗಾಲ್
ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಸೋಲಿಸಿದ ಭಾರತದ ಸುಮಿತ್ ನಗಾಲ್ (AP)

ಭಾರತದ ಅತ್ಯುನ್ನತ ಶ್ರೇಯಾಂಕಿತ ಪುರುಷರ ಸಿಂಗಲ್ಸ್ ಟೆನಿಸ್ ಆಟಗಾರ ಸುಮಿತ್ ನಗಾಲ್ (Sumit Nagal), ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ 2024ರ (Australian Open) ಮೊದಲ ಸುತ್ತಿನಲ್ಲಿ ವಿಶ್ವದ 27ನೇ ಶ್ರೇಯಾಂಕದ ಬಲಿಷ್ಠ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್ (Alexander Bublik) ವಿರುದ್ಧ ಸುಲಭ ಜಯ ಸಾಧಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಇದೇ ಮೊದಲ ಬಾರಿಗೆ ಎರಡನೇ ಸುತ್ತಿಗೆ ಲಗ್ಗೆ ಹಾಕಿದ್ದಾರೆ.

ರೋಚಕ ಪಂದ್ಯದಲ್ಲಿ ಕಜಕಿಸ್ತಾನದ ಎದುರಾಳಿಯನ್ನು 6-4, 6-2, 7-6 [7-5]ರ ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಸುಮಿತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತದ ನಂಬರ್‌ ಶ್ರೇಯಾಂಕದ ಆಟಗಾರನಾದರೂ, ಜಾಗತಿಕ ಟೆನ್ನಿಸ್‌ ಶ್ರೇಯಾಂಕದಲ್ಲಿ 137ನೇ ಸ್ಥಾನದಲ್ಲಿರುವ ಸುಮಿತ್,‌ ಶ್ರೇಯಾಂಕದಲ್ಲಿ ತಮಗಿಂತ ನೂರಕ್ಕೂ ಅಧಿಕ ಸ್ಥಾನ ಮೇಲಿರುವ ಆಟಗಾರನ್ನು ಮಣಿಸಿದ್ದಾರೆ. ಆ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ರಮೇಶ್ ಕೃಷ್ಣನ್ ನಂತರ ಎರಡನೇ ಆಟಗಾರ

ಭಾರತದ ರಮೇಶ್ ಕೃಷ್ಣನ್ ನಂತರ ಗ್ರ್ಯಾಂಡ್ ಸ್ಲಾಮ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ತಮಗಿಂತ ಉನ್ನತ ಶ್ರೇಯಾಂಕದ ಆಟಗಾರನನ್ನು ಮಣಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸುಮಿತ್ ಪಾತ್ರರಾಗಿದ್ದಾರೆ. ಈ ಹಿಂದೆ ಕೃಷ್ಣನ್ ಅವರು 1989ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿನಲ್ಲಿ ವಿಶ್ವದ ನಂ.1 ಹಾಗೂ ಹಾಲಿ ಚಾಂಪಿಯನ್ ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿ ಇತಿಹಾಸ ಬರೆದಿದ್ದರು. ಇದೀಗ ಇದೇ ಪಂದ್ಯವನ್ನು ಸುಮಿತ್‌ ನೆನಪಿಸಿದ್ದಾರೆ.

ಇದನ್ನೂ ಓದಿ | ಕಿವೀಸ್ ವನಿತೆಯರ ವಿರುದ್ಧ 3-1ರಿಂದ ಭರ್ಜರಿ ಗೆಲುವು; ಭಾರತ ಹಾಕಿ ತಂಡದ ಒಲಿಂಪಿಕ್ಸ್ ಭರವಸೆ ಜೀವಂತ

ಇಂದಿನ ಗೆಲುವಿನೊಂದಿಗೆ ಸುಮಿತ್‌ ನಗಾಲ್‌ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.‌ ಈ ಹಿಂದೆ ಅವರು 2021ರಲ್ಲಿ ಲಿಥುವೇನಿಯಾದ ರಿಕಾರ್ಡಾಸ್ ಬೆರಾಂಕಿಸ್ ವಿರುದ್ಧ 2-6, 5-7, 3-6 ಅಂತರದಿಂದ ಸೋತು ಆರಂಭಿಕ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು. ಈ ಬಾರಿ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಪ್ರವೇಶಿಸಿದ 26 ವರ್ಷದ ಟೆನಿಸ್‌ ಪಟು, ಎರಡು ಗಂಟೆ 38 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ 31ನೇ ಶ್ರೇಯಾಂಕದ ಬುಬ್ಲಿಕ್ ಅವರನ್ನು 6-4 6-2 7-6(7-5) ಅಂತರದಿಂದ ಸೋಲಿಸಿದ್ದರು.

ವಿಶ್ವದ 139ನೇ ಶ್ರೇಯಾಂಕದ ಭಾರತೀಯ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಆಡಲಿದ್ದಾರೆ. 2020ರ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಡೊಮಿನಿಕ್ ಥೀಮ್ ವಿರುದ್ಧ ಎರಡನೇ ಸುತ್ತಿನಲ್ಲಿ ಆಡಿದ್ದ ಸುಮಿತ್‌, 6-3, 6-3, 6-2ರಿಂದ ಸೋತಿದ್ದರು.

ಇದನ್ನೂ ಓದಿ | ಕೊಹ್ಲಿ ಭೇಟಿಗೆ ಮನ ತುಡಿಯುತ್ತಿದೆ; ಕ್ರಿಕೆಟ್ ದಿಗ್ಗಜನ ಬಣ್ಣಿಸಿದ ಟೆನಿಸ್ ಲೆಜೆಂಡ್ ಜೊಕೊವಿಕ್

ಪಂದ್ಯದ ಮೊದಲ ಗೇಮ್‌ನಲ್ಲಿ ಬಬ್ಲಿಕ್ ಮುಂದೆ ಅಬ್ಬರಿಸಿದ ಸುಮಿತ್‌, ಉತ್ತಮ ಆರಂಭ ಪಡೆದರು. 42 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ 6-4 ಅಂತರದಿಂದ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಅವರು, 43 ನಿಮಿಷಗಳಲ್ಲಿ 6-2 ಅಂತರದಿಂದ ಗೆದ್ದರು. ಮೂರನೇ ಸೆಟ್‌ ರೋಚಕವಾಗಿ ಸಾಗಿತು. ಉಭಯ ಆಟಗಾರರು ಏಳನೇ ಗೇಮ್‌ನವರೆಗೆ ತಮ್ಮ ಸರ್ವ್‌ಗಳನ್ನು ಹಿಡಿದಿಟ್ಟುಕೊಂಡರು. ಮೂರನೇ ಸೆಟ್ ಟೈ ಬ್ರೇಕರ್‌ಗೆ ಬಂತು. ಅಂತಿಮವಾಗಿ ನಾಗಲ್ ಎದುರಾಳಿಯ ಅಬ್ಬರಕ್ಕೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿ, 7-5 ಅಂತರದಲ್ಲಿ ಗೆದ್ದೇ ಬಿಟ್ಟರು.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.