ಕನ್ನಡ ಸುದ್ದಿ  /  ಕ್ರೀಡೆ  /  ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Garry Kasparov : ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಷ್ಯಾದ ಮಾಜಿ ವಿಶ್ವ ಚೆಸ್​ ಚಾಂಪಿಯನ್​ ಗ್ಯಾರಿ ಕಾಸ್ಪರೋವ್ ಟಾಂಗ್ ಕೊಟ್ಟಿದ್ದಾರೆ.

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ
ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

ಹಿಂದೊಮ್ಮೆ ನನ್ನ ಫೇವರಿಟ್ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ (Garry Kasparov) ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದರು. ಆದರೀಗ ಅದೇ ದಿಗ್ಗಜ ಆಟಗಾರನಿಂದ ರಾಹುಲ್ ಟೀಕೆಗೊಳಗಾಗಿದ್ದಾರೆ. ಮಾಜಿ ವಿಶ್ವ ಚೆಸ್​ ಚಾಂಪಿಯನ್​ ಗ್ಯಾರಿ ಕಾಸ್ಪರೋವ್​ ಮಾಡಿರುವ ಟ್ವೀಟ್​ ಈಗ ಸಖತ್ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ಇದರಿಂದ ವಿಶ್ವ ಮಟ್ಟದಲ್ಲಿ ರಾಯಲ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್​ಗೆ ತೀವ್ರ ಮುಖಭಂಗವಾಗಿದೆ.

ಟ್ರೆಂಡಿಂಗ್​ ಸುದ್ದಿ

2005ರಲ್ಲಿ ಚೆಸ್​ಗೆ ವಿದಾಯ ಹೇಳಿರುವ ಗ್ಯಾರಿ ಕಾಸ್ಪರೋವ್​ ಅವರು, ಇತ್ತೀಚೆಗೆ ಎಕ್ಸ್​ ಖಾತೆಯಲ್ಲಿ ಖಾತೆದಾರರೊಬ್ಬರು ಹಾಕಿದ್ದ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ರಾಹುಲ್​ಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ರಷ್ಯಾದ ಮಾಜಿ ಚೆಸ್ ಆಟಗಾರ, ಅಗ್ರಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್ ಬರೇಲಿಯನ್ನು ಗೆಲ್ಲಬೇಕು ಎಂದು ರಾಹುಲ್ ಗಾಂಧಿಯನ್ನು ಸೂಚಿಸಿದ್ದಾರೆ.

ಬಳಕೆದಾರರ ಪೋಸ್ಟ್​ಗೆ ಪ್ರತಿಕ್ರಿಯೆ

ಸಂದೀಪ್ ಘೋಷ್ ಎಂಬುವರ ಹೆಸರಿನ ಎಕ್ಸ್​ ಖಾತೆಯಲ್ಲಿ ಕಾಸ್ಪರೋವ್ ಮತ್ತು ವಿಶ್ವನಾಥ್ ಆನಂದ್ ಅವರು ಮುಂಚೆಯೇ ವಿದಾಯ ಹೇಳಿದ್ದು ಸಮಾಧಾನವಾಗಿದೆ. ಏಕೆಂದರೆ ಅವರು ನಮ್ಮ ಕಾಲದ ಸಾರ್ವಕಾಲಿಕ ಶ್ರೇಷ್ಠ ಪ್ರತಿಭೆಯನ್ನು ಎದುರಿಸುವಂತಿಲ್ಲ ಎಂದು ಬರೆಯಲಾಗಿತ್ತು. ಎಕ್ಸ್​ ಖಾತೆದಾರನ ಪ್ರಕಾರ ಆ ಚೆಸ್ ಪ್ರತಿಭೆ, ಬೇರೆ ಯಾರೂ ಅಲ್ಲ, ರಾಹುಲ್ ಗಾಂಧಿ.

ಆದರೆ, ಹೀಗೆ ಹೇಳಲು ಕಾರಣ ಇದೆ. ಹಿಂದೊಮ್ಮೆ ಸಂದರ್ಶನ ಕೊಟ್ಟಿದ್ದ ವಿಡಿಯೋದಲ್ಲಿ ರಾಹುಲ್​ ಗಾಂಧಿ, ದೇಶದ ರಾಜಕಾರಣಿಗಳ ನಡುವೆ ನಾನೊಬ್ಬ ಶೇಷ್ಠ ಚೆಸ್​ ಆಟಗಾರ ಎಂದು ಹೇಳಿಕೊಂಡಿದ್ದರು. ಹಾಗಾಗಿ ಇದನ್ನೇ ಉಲ್ಲೇಖಿಸಿ ಕಾಸ್ಪರೋವ್ ಮತ್ತು ವಿಶ್ವನಾಥ್ ಆನಂದ್ ಅವರನ್ನು ಸಂದೀಪ್ ಟ್ಯಾಗ್ ಮಾಡಿದ್ದಾರೆ. ಇದನ್ನು ನೋಡಿದ ಕಾಸ್ಪರೋವ್, ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

ಮೊದಲು ರಾಯ್ ಬರೇಲಿ ಗೆಲ್ಲಿ ಎಂದ ಕಾಸ್ಪರೋವ್

ಕಾಸ್ಪರೋವ್ ಪ್ರತಿಕ್ರಿಯೆ ಹೀಗಿತ್ತು; ಸಾಂಪ್ರದಾಯಿಕವಾಗಿ ಅಗ್ರಸ್ಥಾನಕ್ಕೆ ಸವಾಲು ಹಾಕುವ ಮೊದಲು ನೀವು ಮೊದಲು ರಾಯ್​ಬರೇಲಿಯಿಂದ ಗೆಲ್ಲಬೇಕೆಂದು ಆದೇಶಿಸುತ್ತೇವೆ ಎಂದು ನಗುವ ಎಮೋಜಿಯನ್ನು ಹಾಕಿದ್ದಾರೆ. ಇಲ್ಲಿ ರಾಹುಲ್ ಗಾಂಧಿಯ ಹೆಸರು ಬಳಸಿದ್ದರೂ ಅವರಿಗೆ ಸಂಬಂಧಿಸಿದ ಪೋಸ್ಟ್​ ಎಂಬುದು ಅರ್ಥವಾಗುತ್ತದೆ. ಏಕೆಂದರೆ ರಾಹುಲ್ ಗಾಂಧಿ ಕೇರಳದ ವಯನಾಡಿನ ಜೊತೆಗೆ ಉತ್ತರ ಪ್ರದೇಶದ ರಾಯ್​​ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ರಾಹುಲ್​ಗೆ ಟಾಂಗ್ ಕೊಟ್ಟ ಕೆಲವೇ ಗಂಟೆಗಳಲ್ಲಿ ಕಾಸ್ಪರೋವ್, ನಾನು ತಮಾಷೆಯಾಗಿ ಹೇಳಿದ್ದೇನೆ. ನನ್ನ ಸಣ್ಣ ಹಾಸ್ಯವು ಭಾರತೀಯ ರಾಜಕೀಯದಲ್ಲಿ ಮತ್ತೊಂದು ಮಜಲಿಗೆ ಹಾದುಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ರಾಜಕಾರಣಿಯೊಬ್ಬರು ನನ್ನ ಪ್ರೀತಿಯ ಆಟದಲ್ಲಿ ತೊಡಗುವುದನ್ನು ನೋಡುವುದನ್ನು ಖುಷಿ ಪಡುತ್ತೇನೆ ಎಂದು ಕಾಸ್ಪರೋವ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಕಾಸ್ಪರೋವ್ ಅವರು ತನ್ನ ನೆಚ್ಚಿನ ಚೆಸ್ ಆಟಗಾರ ಎನ್ನುವ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿತ್ತು. ಚದುರಂಗದೊಂದಿಗಿನ ತನ್ನ ಆರಂಭಿಕ ಪ್ರಯತ್ನವನ್ನು ನೆನಪಿಸಿಕೊಂಡಿದ್ದ ಗಾಂಧಿ, ನಾನು ಏಳು ವರ್ಷದವನಿದ್ದಾಗ ಮೊದಲ ಬಾರಿಗೆ ಚೆಸ್​ ಆಡಿದ್ದೆ. ನಾನು ಚೆಸ್ ಕಲಿತ ನಂತರ ನನಗೆ ಕಲಿಸಿದವರನ್ನೇ ಸೋಲಿಸಿದ್ದೆ ಎಂದು ಆ ವಿಡಿಯೋದಲ್ಲಿ ಹೇಳಲಾಗಿತ್ತು. 2019ರಲ್ಲಿ ಅಮೇಠಿಯಿಂದ ಸ್ಪರ್ಧಿಸಿದ್ದ ರಾಹುಲ್​ ಗಾಂಧಿ, ಸ್ಮೃತಿ ಇರಾನಿ ಅವರ ವಿರುದ್ಧ ಸೋತಿದ್ದರು.