ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುತ್ತಿವೆ, ಆದ್ರೆ ಇಡೀ ಕಾಂಗ್ರೆಸ್‌ ಸಿಎಂ ಸಿದ್ದರಾಮಯ್ಯ ಪರ ಇದೆ; ಗೃಹ ಸಚಿವ ಜಿ ಪರಮೇಶ್ವರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುತ್ತಿವೆ, ಆದ್ರೆ ಇಡೀ ಕಾಂಗ್ರೆಸ್‌ ಸಿಎಂ ಸಿದ್ದರಾಮಯ್ಯ ಪರ ಇದೆ; ಗೃಹ ಸಚಿವ ಜಿ ಪರಮೇಶ್ವರ್‌

ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುತ್ತಿವೆ, ಆದ್ರೆ ಇಡೀ ಕಾಂಗ್ರೆಸ್‌ ಸಿಎಂ ಸಿದ್ದರಾಮಯ್ಯ ಪರ ಇದೆ; ಗೃಹ ಸಚಿವ ಜಿ ಪರಮೇಶ್ವರ್‌

Published Oct 01, 2024 12:28 PM IST Rakshitha Sowmya
twitter
Published Oct 01, 2024 12:28 PM IST

ರಾಜ್ಯದಲ್ಲಿ ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಈ ನಡುವೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ತಮಗೆ ಹಂಚಿಕೆ ಮಾಡಲಾಗಿದ್ದ ಎಲ್ಲಾ 14 ಸೈಟ್‌ಗಳನ್ನು ಹಿಂದಿರುಗಿಸಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜಿ ಪರಮೇಶ್ವರ್‌, ಕೇಂದ್ರ ಸರ್ಕಾರ, ಈ ವಿಚಾರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಎಲ್ಲರೂ ಷಡ್ಯಂತ್ರ ಮಾಡುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರ ಮಾಡಲು ಪ್ರತಿಪಕ್ಷಗಳು ಜೊತೆ ಸೇರಿ ಇದನ್ನೆಲ್ಲಾ ಮಾಡುತ್ತಿದೆ. ಸೈಟ್‌ ವಾಪಸ್‌ ಕೊಟ್ಟರೂ ಟೀಕಿಸುತ್ತಿದ್ದಾರೆ, ಕಾನೂನು ತನಿಖೆ ನಡೆಯುತ್ತಿರುವುದಕ್ಕೂ ಟೀಕೆ ಮಾಡುತ್ತಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ತನಿಖೆಗೆ ನಮ್ಮ ತಕರಾರು ಇಲ್ಲ. ಆದರೆ ಇಡೀ ಕಾಂಗ್ರೆಸ್‌ ಸಿದ್ದು ಪರ ನಿಂತಿದೆ ಎಂದು ಗೃಹ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

More