Entertainment News in Kannada Live September 12, 2024: ಅಡಿಯೋಸ್ ಅಮಿಗೋಸ್ ಒಟಿಟಿ ಸಿನಿಮಾ ವಿಮರ್ಶೆ: ಶ್ರೀಮಂತ ಕುಡುಕ- ಅಸಹಾಯಕ ಬಡವನ ನಶೆಯ ಪ್ರಯಾಣ; ಕಾಮಿಡಿ ಕಿಕ್ ನೀಡುವ ಫೀಲ್ ಗುಡ್ ಮೂವಿ
Sep 12, 2024 06:48 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- ಅಡಿಯೋಸ್ ಅಮಿಗೋಸ್ ಒಟಿಟಿ ಸಿನಿಮಾ ವಿಮರ್ಶೆ: ನೆಟ್‌ಫ್ಲಿಕ್ಸ್‌ನಲ್ಲಿ ಮೂಲ ಮಲಯಾಳಂನ ಅಡಿಯೋಸ್ ಅಮಿಗೋಸ್ ಎಂಬ ಸಿನಿಮಾವಿದೆ. ತಾಯಿಯ ಚಿಕಿತ್ಸೆಗೆ 25 ಸಾವಿರ ಹೊಂದಿಸಲು ಪರದಾಡುವ ವ್ಯಕ್ತಿಗೆ ಜಾಲಿಗಾಗಿ ಸುತ್ತಾಡುವ ಶ್ರೀಮಂತ ಕುಡುಕನೊಬ್ಬನ ಗೆಳೆತನ ದೊರಕುತ್ತದೆ. ಸ್ನೇಹದ ಅಮಲಿನ ಪ್ರಯಾಣದಲ್ಲಿ ಸಿಕ್ಕಾಪಟ್ಟೆ ನಗು ಪ್ರೇಕ್ಷಕರಿಗೆ ದೊರಕುತ್ತದೆ.
- Vinay Rajkumar Pepe: ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ವಿನಯ್ ರಾಜ್‌ಕುಮಾರ್ ಮುನ್ನುಡಿ ಬರೆದಿದ್ದರು. ಹಿಂದೆಂದೂ ಕಾಣದ ವಿನಯ್ ಅವರನ್ನು ನೋಡಿದ ಚಿತ್ರರಸಿಕರು, ಹೊಸ ಅವತಾರಕ್ಕೆ ಫಿದಾ ಆಗಿದ್ದರು. ಇದೀಗ ಇದೇ ಪೆಪೆ ಚಿತ್ರದ ಒಟಿಟಿ ಬಿಡುಗಡೆಯ ಅಪ್‌ಡೇಟ್ ಲಭ್ಯವಾಗಿದೆ.
- Varun Aradya: ನಟನಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕವೇ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ ವರುಣ್ ಆರಾಧ್ಯ. ಇದೀಗ ಇದೇ ವರುಣ್ ವಿರುದ್ಧ ಕೊಲೆ ಬೆದರಿಕೆ ಮತ್ತು ಬ್ಲಾಕ್‌ಮೇಲ್ ಆರೋಪ ಕೇಳಿಬಂದಿತ್ತು. ಇದೆಲ್ಲದಕ್ಕೂ ವರುಣ್ ಸ್ಪಷ್ಟನೆ ನೀಡಿದ್ದಾರೆ.
- ಮಾಜಿ ಪ್ರೇಮಿಗಳಾದ ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಖಾಸಗಿ ಫೋಟೋ ಇಟ್ಟುಕೊಂಡು ಬೆದರಿಸುತ್ತಿದ್ದಾನೆ ಎಂಬ ದೂರಿನ ಬಳಿಕ ಇದೀಗ ವರ್ಷಾ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
- Seetha Rama Serial Sep 11th Episode: ಸೀತಾ ರಾಮ ಸೀರಿಯಲ್‌ನಲ್ಲಿ ಸೀತೆಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಒಂದು ಕಡೆ ಶ್ಯಾಮ್ ಜತೆ ರಾಮನೂ ಸೇರಿ ಸರೋಗಸಿ ತಾಯಿಯ ಹುಡುಕಾಟಕ್ಕಿಳಿದಿದ್ದಾರೆ. ಮತ್ತೊಂದು ಕಡೆ ಸೀತಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂತ್ರ ಹೆಣೆಯುತ್ತಿದ್ದಾನೆ ರುದ್ರಪ್ರತಾಪ್.
- Chandan Shetty: ಚಂದನ್ ಶೆಟ್ಟಿ ಕಂಠದಲ್ಲಿ ಇಂಟರ್‌ವಲ್ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಗಣೇಶನ ಹಬ್ಬಕ್ಕೆ ರಿಲೀಸ್ ಆದ ಈ ಹಾಡಿನಲ್ಲಿ ಗಣಪನನ್ನೇ ಜಪಿಸಿದ್ದಾರೆ ಚಂದನ್ ಶೆಟ್ಟಿ.
- Suvarna Celebrity League: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
- Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಶಿವು ಹಾಗೂ ಪಾರ್ವತಿ ಸಂಕಷ್ಟದಲ್ಲಿದ್ದಾರೆ. ಶಿವು ಮಾಡಬೇಕಾದ ಕೆಲಸ ಮಾಡಿ ಮುಗಿಸಿದರೂ ಅವನೊಳಗೆ ಆತಂಕ ಇದೆ. ಪಾರುವನ್ನು ಹೇಗೆ ಪಾರ್ ಮಾಡ್ತಾನೆ? ಎಂದು ಕಾದು ನೋಡಬೇಕಿದೆ.
- Amruthadhaare September 12th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ಪ್ರಮುಖವಾಗಿ 8 ವಿದ್ಯಮಾನಗಳು ನಡೆದಿವೆ. ಗೌತಮ್ ಮತ್ತು ಭೂಮಿಕಾರ ಒಲವಧಾರೆ, ಚಮಕ್‌ಚಲ್ಲೋ ದಿಯಾಳನ್ನು ಭೇಟಿಯಾಗಲು ಮಲ್ಲಿಯೊಂದಿಗೆ ಹೊರಟ ಜೈದೇವ್‌ನ ಕಥೆಯ ಜತೆ ಪಾರ್ಥ-ಅಪೇಕ್ಷಾರ ಕಥೆಯೂ ಇಲ್ಲಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆಪ್ಟೆಂಬರ್ 11ರ ಎಪಿಸೋಡ್. ಶ್ರೇಷ್ಠಾ-ತಾಂಡವ್ ಮದುವೆ ತಡೆಯಲು ಕುಸುಮಾ ಮನೆಯಿಂದ ಹೊರಡುತ್ತಾಳೆ. ಅತ್ತೆ ನಡೆ ಕಂಡು ಭಾಗ್ಯಾ ಆಶ್ಚರ್ಯಗೊಳ್ಳುತ್ತಾಳೆ. ಅವಳು ಹೊರಡುತ್ತಿದ್ದಂತೆ ಸುಂದ್ರಿ ಭಾಗ್ಯಾಳನ್ನು ಭೇಟಿಯಾಗಲು ಮನೆಗೆ ಬರುತ್ತಾಳೆ.
- Shravani Subramanya Kannada Serial Today Episode September 11th: ವೀರೇಂದ್ರನ ಬಳಿ ಮಗಳನ್ನು ಚೆನ್ನಾಗಿ ಬೆಳೆಸಿದ್ದೀಯಾ ಎಂದು ಹೊಗಳಿದ ಲಲಿತಾದೇವಿ, ಅಜ್ಜಿ ಬಗ್ಗೆ ಸುಬ್ಬು ಬಳಿ ದೂರು ಹೇಳಿದ ಶ್ರಾವಣಿ, ವಿಜಯಾಂಬಿಕಾಗೆ ಮಾತಲ್ಲೇ ನಡುಕ ಹುಟ್ಟಿಸಿದ್ರು ಲಲಿತಾದೇವಿ, ಶ್ರಾವಣಿಯನ್ನು ಎಂದಿಗೂ ಮಗಳು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂದ್ರು ವೀರೇಂದ್ರ.
ಮಲೈಕಾ ಅರೋರಾ ತಂದೆ ಅನಿಲ್ ಕುಲ್‌ದೀಪ್ ಮೆಹ್ತಾ ನಿಧನದ ಸುದ್ದಿ ತಿಳಿದ ಬಾಲಿವುಡ್ ಸೆಲೆಬ್ರಿಟಿಗಳು ಅವರ ಅಂತಿಮ ದರ್ಶನ ಪಡೆಯಲು ಬಾಂದ್ರಾಗೆ ತೆರಳುತ್ತಿದ್ದಾರೆ. ಅರ್ಜುನ್ ಕಪೂರ್ ಕೂಡಾ ಮಾಜಿ ಪ್ರೇಯಸಿ ಮಲೈಕಾ ಅರೋರಾ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
2021 ರಲ್ಲಿ ಅನೌನ್ಸ್ ಮಾಡಲಾಗಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಚಿತ್ರೀಕರಣ ಮುಗಿದಿದೆ. ಹೊಂಬಾಳೆ ಫಿಲ್ಮ್ಸ್ ಈಗ ಸಿನಿಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದು ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.