Entertainment News in Kannada Live September 26, 2024: ಘಟಾನುಘಟಿ ಸ್ಟಾರ್‌ಗಳ ಚಿತ್ರದ ದಾಖಲೆ ಪುಡಿಗಟ್ಟಿದ ಸ್ತ್ರೀ 2 ಒಟಿಟಿ ಪುರಪ್ರವೇಶ!; ಯಾವ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯ?
Sep 26, 2024 03:23 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- ಯಾವುದೇ ನಿರೀಕ್ಷೆ ಇಲ್ಲದೆ ಪ್ರೇಕ್ಷಕರ ಮುಂದೆ ಬಂದಿದ್ದ ಸ್ತ್ರೀ2, ಬಾಕ್ಸ್ ಆಫೀಸ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ವರ್ಷ 713 ಕೋಟಿ ರೂ ಗಳಿಕೆ ಕಂಡ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು? ಇಲ್ಲಿದೆ ಮಾಹಿತಿ.
ತೆಲುಗು ಯೂತ್‌ಫುಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಪ್ರಭುತ್ವ ಜೂನಿಯರ್ ಕಲಾಶಾಲಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದುವರೆಗೂ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಸಿನಿಮಾ ಗುರುವಾರ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರದಲ್ಲಿ ಪ್ರಣವ್, ಶಗ್ನಶ್ರೀ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
- ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ. ನಿನ್ನ ಜೊತೆ ನನ್ನ ಕಥೆ ಹೆಸರಿನ ಸೀರಿಯಲ್ ಇದೇ ಸೋಮವಾರದಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸೀರಿಯಲ್ ಮೂಲಕ ಬಹುವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ ನಟ ನಿರಂಜನ್.
- Friday Releasing Kannada Movies List: ಈ ಶುಕ್ರವಾರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಪೈಕಿ ಕಾಮಿಡಿ ಕಿಲಾಡಿ ಶೋ ಮೂಲಕವೇ ಗಮನ ಸೆಳೆದ ಇಬ್ಬರು ಹಾಸ್ಯ ನಟರ ಎರಡು ಪ್ರತ್ಯೇಕ ಸಿನಿಮಾ ರಿಲೀಸ್ ಆಗುತ್ತಿದ್ದರೆ, ಜೂನಿಯರ್ ಎನ್‌ಟಿಆರ್ ಅವರ ದೇವರ ಸಹ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿದೆ.
ದೇವರ ಸಿನಿಮಾ ಸೆಪ್ಟೆಂಬರ್ 27 ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ನಂತರ ಜ್ಯೂನಿಯರ್ ಎನ್‌ಟಿಆರ್ ಅಭಿನಯದ 3 ಸಿನಿಮಾಗಳು ತೆರೆ ಕಾಣಲಿವೆ. ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ, ಹಿಂದಿಯ ವಾರ್ 2 ಹಾಗೂ ದೇವರ 2 ಸಿನಿಮಾಗಳು 2026ರ ವೇಳೆಗೆ ರಿಲೀಸ್ ಆಗಲಿವೆ. ಇದನ್ನು ಹೊರತುಪಡಿಸಿ ಶೀಘ್ರದಲ್ಲೇ ಹೊಸ ಸಿನಿಮಾವನ್ನು ತಾರಕ್ ಅನೌನ್ಸ್ ಮಾಡಲಿದ್ದಾರೆ.
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ತನಗರಿವಿಲ್ಲದೇ ಎಲ್ಲರ ಮುಂದೆ ಬಾಯ್ತಪ್ಪ ಸಿಹಿ ಸತ್ಯವನ್ನು ಹೇಳಿದ್ದಾಳೆ. ಅರೇ ಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ. ಮತ್ತೊಂದು ಕಡೆ ಭಾರ್ಗವಿ ಹೊಸ ತಂತ್ರ ರೂಪಿಸಿದ್ದಾಳೆ. ಪರೋಕ್ಷವಾಗಿ ಸಿಹಿ ಹುಟ್ಟಿನ ಬಗ್ಗೆ ಆಕೆ ಕಡೆಯಿಂದಲೇ ಬಾಯಿಬಿಡಿಸುವ ಯತ್ನ ಮಾಡಿದ್ದಾಳೆ.
- Zee Kannada: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುವನ್ನು ಬೆಂಕಿಯಿಂದ ಕಾಪಾಡಿದ ಶಿವು ಈಗ ಅವಳನ್ನು ಮದುವೆ ಎಂಬ ಅಗ್ನಿ ಪರೀಕ್ಷೆಯಿಂದಲೂ ಕಾಪಾಡಬೇಕಾದ ಪ್ರಸಂಗ ಬಂದಿದೆ. ನಾಳೆಯೇ ಚಪ್ಪರ ಶಾಸ್ತ್ರ ಆರಂಭವಾಗಲಿದೆ.
ತೆಲುಗು ನಟ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿರಂಜೀವಿಗೆ ಮತ್ತೊಬ್ಬ ತಮ್ಮ ನಾಗಬಾಬು ಇದ್ದರೂ ಪವನ್ ಕಲ್ಯಾಣ್ ಮೇಲೆ ಒಂದು ಪಟ್ಟು ಪ್ರೀತಿ ಹೆಚ್ಚು ಇದಕ್ಕೆ ಕಾರಣ ಏನು ಎಂಬುದನ್ನು ಚಿರಂಜೀವಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
- Bigg Boss Kannada Season 11 contestants list: ಬಹುಕುತೂಹಲ ಮೂಡಿಸಿರುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಹೊಸ ಪಟ್ಟಿ ರಿವೀಲ್ ಆಗಿದೆ. ಹೊಸ ಪ್ರೋಮೋದಲ್ಲಿ ಇವರೇ ಅವರು ಎಂಬ ಸಣ್ಣ ಝಲಕ್ ಹೊರಬಿದ್ದಿದೆ. ಇವರ ಜತೆಗೆ ಇನ್ನೂ ಏಳೆಂಟು ಹೆಸರುಗಳಿವೆ. ಇಲ್ಲಿದೆ ನೋಡಿ ಪಟ್ಟಿ.
- Amruthadhare Serial Today Episode: ಮಲ್ಲಿಯ ಆರೋಗ್ಯದ ಕುರಿತು ಸೆಕೆಂಡ್ ಒಪಿನಿಯನ್ ಪಡೆಯಲು ಡಾಕ್ಟರ್ ಇಂದುಮತಿ ಬಂದಿರುವುದು ಜೈದೇವ್‌ಗೆ ಆತಂಕ ತರುತ್ತದೆ. ಇನ್ನೊಂದೆಡೆ ಮಲ್ಲಿಯ ಗೆಳತಿಯೊಬ್ಬಳು ನರ್ಸ್ ಆಗಿ ಅದೇ ಆಸ್ಪತ್ರೆಯಲ್ಲಿದ್ದಾಳೆ. ಇದು ಮಲ್ಲಿ ಬದುಕಿಗೆ ನೆರವಾಗುವ ಸೂಚನೆ.
- ಅಜ್ಜಿ ಪಂಚಾಯ್ತಿ ನಡುವೆ ಮಾತನಾಡಿದ ಶ್ರಾವಣಿ ಬಗ್ಗೆ ಮೊದಲು ಅಸಮಾಧಾನಗೊಳ್ಳುವ ವೀರೇಂದ್ರ ಅತ್ತೆಯ ಮುಖದಲ್ಲಿ ನಗು ನೋಡಿ ಅಚ್ಚರಿ ಪಡುತ್ತಾರೆ. ವೀರೇಂದ್ರನನ್ನು ಮುಗಿಸಲು ವಿಜಯಾಂಬಿಕಾ ಸಿದ್ಧಳಾದ್ರೆ, ಅಜ್ಜಿ ಮಡಿಲಲ್ಲಿ ಮಲಗಿ ಅಮ್ಮ ಎಲ್ಲಿ ಎನ್ನುತ್ತಿದ್ದಾಳೆ ಶ್ರಾವಣಿ. ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
ಮದುವೆ ಮನೆಯಿಂದ ಮನೆಗೆ ವಾಪಸ್ ಬರುವ ದಾರಿಯಲ್ಲಿ ಕುಸುಮಾ ಹಾಗೂ ತಾಂಡವ್ ನಡುವೆ ಒಪ್ಪಂದ ನಡೆಯುತ್ತದೆ. ಭಾಗ್ಯಾಳನ್ನು ನೀನು ಮೆಚ್ಚುವಂತೆ ಬದಲಿಸುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ಅಮ್ಮನ ಮಾತಿಗೆ ಒಪ್ಪುವ ತಾಂಡವ್, ನೀನು ಹೇಳಿದಂತೆ ಬದಲಿಸದಿದ್ದರೆ ನಾನು ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗಿ ಮನೆಯಿಂದ ಹೊರ ಹೋಗುತ್ತೇನೆ ಎಂದು ಕಂಡಿಷನ್ ಮಾಡುತ್ತಾನೆ.
- Devara Part 1 OTT Streaming: ದೇವರ ಪಾರ್ಟ್-1 ಸೆಪ್ಟೆಂಬರ್ 27 ರಂದು ಅಂದರೆ ನಾಳೆ ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಬಿಡುಗಡೆಗೆ ಎರಡು ದಿನಗಳ ಮೊದಲೇ ದೇವರ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಕುರಿತು ಅಪ್ಡೇಟ್ ವೈರಲ್ ಆಗುತ್ತಿದೆ.
ದೇವರ ರಿಲೀಸ್‌ಗೆ ಒಂದು ದಿನವಷ್ಟೇ ಬಾಕಿ ಇದೆ. ಜ್ಯೂ ಎನ್‌ಟಿಆರ್ ಅಭಿಮಾನಿಗಳು ಸಿನಿಮಾವನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಈ ನಡುವೆ ದೇವರ ಒಟಿಟಿ ಹಕ್ಕುಗಳು 155 ಕೋಟಿ ರೂ. ಗೆ ಮಾರಾಟವಾಗಿದ್ದು ಸಿನಿಮಾ ಥಿಯೇಟರ್‌ನಲ್ಲಿ ತೆರೆ ಕಂಡ 50 ದಿನಗಳ ನಂತರ ಸ್ಟ್ರೀಮ್ ಆಗಬಹುದು ಎನ್ನಲಾಗುತ್ತಿದೆ.