logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 22, 2024 : ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್‌ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು
ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್‌ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು

Karnataka News Live December 22, 2024 : ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್‌ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು

Dec 22, 2024 06:00 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Dec 22, 2024 06:00 PM IST

ಕರ್ನಾಟಕ News Live: ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್‌ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು

  • ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಹೇಗಿರಬೇಕು ಎನ್ನುವ ಕುರಿತು ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಜ್ಞರು ವಿಸ್ತೃತವಾಗಿ ಚರ್ಚಿಸಿದರು.
Read the full story here

Dec 22, 2024 05:43 PM IST

ಕರ್ನಾಟಕ News Live: CT Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು

  • CT Ravi: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣ ಗಂಭೀರವಾಗಿದೆ. ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ. ಇತ್ತೀಚಿನ 7 ಮುಖ್ಯ ವಿದ್ಯಮಾನ ವಿವರ ಇಲ್ಲಿದೆ.

Read the full story here

Dec 22, 2024 05:17 PM IST

ಕರ್ನಾಟಕ News Live: ಧಾರವಾಡ: ಪತ್ರಕರ್ತ ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ

  • ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾದಿಸಿದ್ದಾರೆ.
Read the full story here

Dec 22, 2024 05:10 PM IST

ಕರ್ನಾಟಕ News Live: ಶಿಕ್ಷಕರನ್ನು ನೇಮಿಸಿ, ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮಕ್ಕೆ ತಿದ್ದುಪಡಿ ತನ್ನಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಮುಖ ನಿರ್ಣಯಗಳೇನು

  • Mandya Sahitya Sammelana: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕವೂ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ.
Read the full story here

Dec 22, 2024 04:45 PM IST

ಕರ್ನಾಟಕ News Live: ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷವೂ ಆಯೋಜಿಸಿ: ಮಂಡ್ಯ ಸಮ್ಮೇಳನದಲ್ಲಿ ಕೇಳಿ ಬಂದ ಸಲಹೆ

  • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರ ದೇಶದಲ್ಲಿರುವ ನೆಲೆಸಿರುವ ಕನ್ನಡಿಗರು ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತು ಹಲವು ಅಭಿಪ್ರಾಯ ವ್ಯಕ್ತಪಡಿಸಿದರು.
Read the full story here

Dec 22, 2024 04:38 PM IST

ಕರ್ನಾಟಕ News Live: ಹುಬ್ಬಳ್ಳಿ: ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು

  • ಹೊಲವನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸುವುದಾಗಿ ಸೇಲ್ ಡೀಡ್ ಮಾಡಿಸಿ ಹಣ ಕಟ್ಟಿಸಿಕೊಂಡು, ವಾಪಸ್ ಹೊಲ ಕೇಳಿದರೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Read the full story here

Dec 22, 2024 04:02 PM IST

ಕರ್ನಾಟಕ News Live: Dharwad Power Cut: ಧಾರವಾಡದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 23 ರಂದು ಪವರ್‌ಕಟ್‌, ಎಲ್ಲೆಲ್ಲಿ ಎಷ್ಟು ಹೊತ್ತು ಎಂಬಿತ್ಯಾದಿ ವಿವರ

  • Dharwad Power Cut: ಧಾರವಾಡದ 110 ಕೆವಿ ಯುಎಎಸ್ (ಕೃಷಿ ವಿಶ್ವವಿದ್ಯಾಲಯ ಧಾರವಾಡ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 23 ರಂದು 3ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ, ಧಾರವಾಡದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 23 ರಂದು ಪವರ್‌ಕಟ್‌ ಜಾರಿಯಲ್ಲಿರಲಿದೆ. ಎಲ್ಲೆಲ್ಲಿ ಎಷ್ಟು ಹೊತ್ತು ಎಂಬಿತ್ಯಾದಿ ವಿವರ ಇಲ್ಲಿದೆ.

Read the full story here

Dec 22, 2024 02:54 PM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿ ಪ್ರತಿಭಟನೆ; ಊಟದೊಂದಿಗೆ ಮೊಟ್ಟೆ ವಿತರಣೆಗೆ ಸಿದ್ದತೆ: ಅರ್ಧ ಗೆದ್ದ ಆಹಾರ ಸಂಸ್ಕೃತಿ ಬೇಡಿಕೆ

  • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಮೆನುವಿನಲ್ಲಿ ಭಾನುವಾರ ಸಂಜೆ ಮೊಟ್ಟೆಯೂ ಸೇರಲಿದೆ. ಭಾರೀ ವಿರೋಧಕ್ಕೆ ಮಣಿದ ಮಂಡ್ಯ ಜಿಲ್ಲಾಡಳಿತ ಮೊಟ್ಟೆ ವಿತರಿಸಲು ಮುಂದಾಗಿದೆ
Read the full story here

Dec 22, 2024 02:24 PM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಶಿಕ್ಷಕನ ಹವ್ಯಾಸ, ಇವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡಿದ್ರೆ ನೀವು ನಿಬ್ಬೆರಗಾಗುವುದು ಖಂಡಿತ

  • ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ನಡುವೆ ಕೆಎಸ್‌ ಕಲ್ಯಾಣ ಕುಮಾರ್‌ ಅವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡುಗರನ್ನು ನಿಬ್ಬೆರಗು ಮಾಡುವಂತೆ ಇತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹಳ್ಳಿಯೊಂದರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರ ಹವ್ಯಾಸದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Read the full story here

Dec 22, 2024 01:57 PM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ; ಮೊಬೈಲ್ ನೆಟ್ವರ್ಕ್‌ ಇಲ್ಲದೇ ಜನರ ಪರದಾಟ, ಟಾಯ್ಲೆಟ್ ಕಥೆಯಂತೂ ಕೇಳ್ಲೇಬೇಡಿ

  • ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥೆಗಳಷ್ಟೇ ಅವ್ಯವಸ್ಥೆಯೂ ಇತ್ತು. ಮೊಬೈಲ್‌ ನೆಟ್‌ವರ್ಕ್ ಇಲ್ಲದೇ ಜನರು ಪರದಾಡಿದ್ರು. ಕೊಂಚ ಮಳೆ ಹನಿಸಿದ್ದೇ ತಡ ಸಮ್ಮೇಳನ ನಡೆಯುತ್ತಿದ್ದ ಜಾಗವು ಕೆಸರು ಗದ್ದೆಯಂತಾಗಿತ್ತು. ಟಾಯ್ಲೆಟ್‌ಗಳ ಪರಿಸ್ಥಿತಿಯಂತೂ ಕೇಳೋದೇ ಬೇಡವಾಗಿತ್ತು. ಕುಡಿಯುವ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಿತ್ತು.  
Read the full story here

Dec 22, 2024 12:05 PM IST

ಕರ್ನಾಟಕ News Live: ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ

  • ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಸಾಹಿತ್ಯ ಸಮ್ಮೇಳನವೂ ಪುಸ್ತಕ ಮಾರಾಟಗಾರರಿಗೆ ಮಾತ್ರವಲ್ಲ, ವಿವಿಧ ಉತ್ಪನ್ನಗಳ ಮಾರಾಟಗಾರರಿಗೂ ವೇದಿಕೆಯಾಗಿತ್ತು. ರಾಜ್ಯ, ದೇಶದ ವಿವಿಧ ಭಾಗಗಳಿಂದ ಬಂದ ಮಾರಾಟಗಾರರು ಇಲ್ಲಿದ್ದರು. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಕುರಿ ಉಣ್ಣೆಯ ಉತ್ಪನ್ನಗಳ ಮಾರಾಟಗಾರೊಬ್ಬರು ಗಮನ ಸೆಳೆದರು. 
Read the full story here

Dec 22, 2024 11:13 AM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನ: ಈ ಡಿಜಿಟಲ್ ಜಗತ್ತಿನಲ್ಲಿ ಸ್ಟಾಲ್‌ಗೆ ಬಂದು ಪುಸ್ತಕ ನೋಡ್ತಾರೆ, ಕೊಳ್ಳುವವರ ಸಂಖ್ಯೆ ಕಡಿಮೆ; ಮಾರಾಟಗಾರರ ಅಳಲು

  • ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 100ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿವೆ. ಕನ್ನಡದ ಹಲವು ಲೇಖಕರ ಪುಸ್ತಕಗಳು ಇಲ್ಲಿ ಕಾಣ ಸಿಗುತ್ತವೆ. ಪುಸ್ತಕ ಮಳಿಗೆಗಳ ಮುಂದೆ ಜನ ಕಿಕ್ಕಿರಿದು ನಿಂತಿರುತ್ತಾರೆ. ಆದರೆ ಮಾರಾಟಗಾರರನ್ನು ಮಾತನಾಡಿಸಿದರೆ ಸಿಕ್ಕ ವಾಸ್ತವ ಅಂಶವೇ ಬೇರೆ.
Read the full story here

Dec 22, 2024 10:37 AM IST

ಕರ್ನಾಟಕ News Live: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ

  • Kannada Sahitya Sammelana: ಕರ್ನಾಟಕದ ಗಡಿನಾಡು ಪ್ರದೇಶವಾದ ಬಳ್ಳಾರಿಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಐತಿಹಾಸಿಕ ಮಹತ್ವವಿರುವ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

     

Read the full story here

Dec 22, 2024 10:24 AM IST

ಕರ್ನಾಟಕ News Live: ಸೇವಂತಿಗೆ ಪಕೋಡಾ: ಎಲಾ.. ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು; ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್

  • Chrysanthemum: ಸೇವಂತಿಗೆ ಪಕೋಡಾ ವೈರಲ್ ಮಾಡೋದಕ್ಕಾಗಿಯೇ ಮಾಡಿದ್ದಾ ಅಥವಾ ತಿನ್ನೋದಕ್ಕಾ, ಸಂದೇಹವಂತೂ ಹಲವರಲ್ಲಿದೆ. ಸೇವಂತಿಗೆ ಪಕೋಡಾ ವಿಡಿಯೋ ನೋಡಿದ ಕೂಡಲೇ ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು ಎಂಬ ಪ್ರತಿಕ್ರಿಯೆ ವ್ಯಕ್ತವಾಗಿರೋದು. ಈ ವೈರಲ್ ವಿಡಿಯೋಕ್ಕೆ ಸಕತ್ ಪ್ರತಿಕ್ರಿಯೆ ಇದ್ದು, ಅದರ ವಿವರ ಇಲ್ಲಿದೆ.

Read the full story here

Dec 22, 2024 09:05 AM IST

ಕರ್ನಾಟಕ News Live: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಅಕ್ಷರ ಭಂಡಾರ, ಇಂದಿನ ಕನ್ನಡದ ಮೂಲಕ ಪ್ರಾಚೀನ ಕನ್ನಡ ಲಿಪಿ ಓದುವ ಖುಷಿ

  • ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ನಡುವೆ ಮಿಥಿಕ್‌ ಸೊಸೈಟಿಯ ಅಕ್ಷರ ಭಂಡಾರ ಸಾಕಷ್ಟು ಜನರ ಗಮನ ಸೆಳೆದಿದೆ. ಇಂದಿನ ಕನ್ನಡದ ಮೂಲಕ ಅಂದಿನ ಕನ್ನಡ (ಪ್ರಾಚೀನ ಕನ್ನಡ ಲಿಪಿ) ಓದುವ ಖುಷಿ ನೀಡುವ "ಅಕ್ಷರ ಭಂಡಾರ"ದ ಕುರಿತು ಇಲ್ಲಿ ವಿವರ ನೀಡಲಾಗಿದೆ.
Read the full story here

Dec 22, 2024 09:00 AM IST

ಕರ್ನಾಟಕ News Live: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ರೂ.ಗೂ ಉಂಟು ಶ್ರೇಷ್ಠ ಪುಸ್ತಕಗಳು; ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗ ಮುದ್ರಣಕ್ಕೆ ಈಗಲೂ ಬೇಡಿಕೆ

  • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶಿಷ್ಟ ಪುಸ್ತಕಗಳಿಗೆ ಬೇಡಿಕೆ ಅಧಿಕ. ಕಾರಣವಾದರೂ ಏನು.
Read the full story here

Dec 22, 2024 08:00 AM IST

ಕರ್ನಾಟಕ News Live: ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಲು ಅವಕಾಶ ಕೊಡಬೇಡಿ: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಒಕ್ಕೊರಲ ಆಗ್ರಹ

  • Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಚಳಿವಳಿಗಳು, ಅಸ್ಮಿತೆಯ ಕುರಿತು ಚರ್ಚೆ ನಡೆದು ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಎಂದಿಗೂ ಆಗದಿರಲಿ ಎನ್ನುವ ಒತ್ತಾಯವೂ ಕೇಳಿ ಬಂದಿತು.
Read the full story here

Dec 22, 2024 07:44 AM IST

ಕರ್ನಾಟಕ News Live: ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿದ್ದಾರೆ, ಕರ್ನಾಟಕಕ್ಕೆ ವಿಧಾನ ಪರಿಷತ್‌ ಅಗತ್ಯವಿದೆಯೇ; ರಾಜೀವ ಹೆಗಡೆ ಬರಹ

  • ಕರ್ನಾಟಕದಲ್ಲಿನ ಅರಾಜಕತೆಗೆ ಸಂಬಂಧಿಸಿದ ವಿಷಯಕ್ಕೆ ವಿಧಾನ ಪರಿಷತ್‌ನ ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿಕೊಂಡಿರುವ ಕಾರಣ ಪರಿಷತ್‌ನ ಅಗತ್ಯವೇನಿದೆ? ಯಾಕೆ ಎಂಬುದರ ಕುರಿತು ರಾಜೀವ ಹೆಗಡೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿವರ.
Read the full story here

Dec 22, 2024 07:00 AM IST

ಕರ್ನಾಟಕ News Live: Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಇಂದು, ಕೊನೆಯ ದಿನ ಏನೇನು ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು

  • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಏನೇನು ಗೋಷ್ಠಿ, ಚಟುವಟಿಕೆಗಳಿವೆ. ಇಲ್ಲಿದೆ ವಿವರ.
Read the full story here

Dec 22, 2024 06:38 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಸಾಧಾರಣ ಚಳಿ ಮುಂದುವರಿಕೆ; ಡಿಸೆಂಬರ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಹಗುರ ಮಳೆಯ ನಿರೀಕ್ಷೆ

  • ಕರ್ನಾಟಕದಲ್ಲಿ ಮುಂದಿನ ಮೂರ್ನಾಲ್ಕು ದಿನ ಯಾವುದೇ ರೀತಿಯ ಮಳೆಯ ಮುನ್ಸೂಚನೆ ಇಲ್ಲ. ಆದರೆ ಡಿಸೆಂಬರ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಡಿಸೆಂಬರ್ 22ರ ಭಾನುವಾರದ ಹವಾಮಾನ ವರದಿ ಇಲ್ಲಿದೆ.
Read the full story here

    ಹಂಚಿಕೊಳ್ಳಲು ಲೇಖನಗಳು