Karnataka News Live September 26, 2024 : ತುಮಕೂರು: ಪ್ರಾಣಿಗಳಂತೆ ತೋಟದಲ್ಲಿ ಕೂಡಿ ಹಾಕಿ ಹಿರಿಯ ಜೀವಗಳಿಗೆ ಚಿತ್ರಹಿಂಸೆ; ಜೀತಪದ್ಧತಿಯಿಂದ ವೃದ್ಧ ದಂಪತಿ ಮುಕ್ತ
Sep 26, 2024 09:11 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- Tumakuru News: ತಿಂಗಳಿಗೆ ತಲಾ 14 ಸಾವಿರ ನೀಡುವುದಾಗಿ ಹೇಳಿ ಜೀತಕ್ಕಿಟ್ಟುಕೊಂಡು ವೃದ್ಧ ದಂಪತಿಗೆ ಊಟ ನೀರು ಕೊಡದೆ ಚಿತ್ರ ಹಿಂಸೆ ನೀಡಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ವೃದ್ಧ ದಂಪತಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿದೆ.
- ಮುಡಾ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಸಿಬಿಐ ತನಿಖೆಗೆ ಇದ್ದ ಮುಕ್ತ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ರದ್ದುಪಡಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ, ಸಿಬಿಐ ಕಂಡರೆ ಭಯವೇಕೆ ಎಂದು ಪ್ರಶ್ನಿಸಿದೆ. (ವರದಿ-ಎಚ್.ಮಾರುತಿ)
- Dharwad News: ಧಾರವಾಡ ಜಿಲ್ಲೆಯಾದ್ಯಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರಣ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಸೆಪ್ಟೆಂಬರ್ 30, ಅಕ್ಟೋಬರ್ 1ರಂದು ಸಂಚಾರ ನಡೆಸಲಿದೆ.
- Siddaramaiah: ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಪಕ್ಷದ ಅಂತರ್‌ಕಲಹದ ಬಗ್ಗೆ ಭಾಷಣ ಮಾಡುವ ಹೊತ್ತಲ್ಲೇ, ಬಿಜೆಪಿ ಬಂಡಾಯ ನಾಯಕರು ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಸಭೆ ಸೇರಿ, ವಿಜಯೇಂದ್ರ ಅವರ ಪದಚ್ಯುತಿಗೆ ತಂತ್ರ ರೂಪಿಸುತ್ತಿರುವುದು ವಿಪರ್ಯಾಸ. ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
- Daddalakadu Government School: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದದ್ದೇ 28 ಮಂದಿ. ಈ ಶಾಲೆಯನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿತ್ತು. ಆದರೀಗ ಓದುತ್ತಿರುವ ಮಕ್ಕಳ ಸಂಖ್ಯೆ 1035. ಮುಚ್ಚಿ ಹೋಗಬೇಕಿದ್ದ ಈ ಸರ್ಕಾರಿ ಶಾಲೆಯ ಪ್ರಗತಿಗೆ ಕಾರಣವೇನು? ಇಲ್ಲಿದೆ ವಿವರ. (ವರದಿ-ಹರೀಶ ಮಾಂಬಾಡಿ)
- Siddaramaiah: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಒಳಪಟ್ಟಿರುವ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್ ಸಿಲುಕಿದೆ. ಅದಕ್ಕೆ ಕಾರಣ ಅಹಿಂದ ಬೆಂಬಲ ಕಳೆದುಕೊಳ್ಳುವ ಭೀತಿ. ಆದರೆ, ಒಂದು ವೇಳೆ ರಾಜೀನಾಮೆ ಪಡೆದರೆ ವರಿಷ್ಠರಿಗೆ ಯಾರು ಹಿತವರು ಈ ನಾಲ್ವರೊಳಗೆ? ಇಲ್ಲಿದೆ ಮಾಹಿತಿ. (ವರದಿ-ಎಚ್. ಮಾರುತಿ)
- Mysore Dasara Weather ಮೈಸೂರು ದಸರಾ ಜಂಬೂ ಸವಾರಿ ನೋಡಲೆಂದೇ ಲಕ್ಷಾಂತರ ಮಂದಿ ಸೇರುತ್ತಾರೆ. ಈ ದಿನ ಮೈಸೂರಿನಲ್ಲಿ ಮಳೆ ಬರಬಹುದಾ ಹೇಗೆ ಎನ್ನುವ ಪ್ರಶ್ನೆಗೆ ಹವಾಮಾನ ತಜ್ಞರು ಉತ್ತರ ನೀಡಿದ್ದಾರೆ.
- Dharwar District Consumer Court: ಸರುಕು ಪಡೆದರೂ ಮೂರು ವರ್ಷಗಳಿಂದ ಹಣವನ್ನು ನೀಡದೆ ಹುಬ್ಬಳಿಯ ಶಿವಸಾಗರ ಟ್ರೇಡರ್ಸ್ಗೆ ಹಣ ನೀಡದೆ ಸತಾಯಿಸುತ್ತಿದ್ದ ಬೆಂಗಳೂರಿನ ಎಂಟರ್ ಪ್ರೈಸರ್ಸ್ ಮಾಲೀಕರಿಗೆ ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿದೆ.
Dharwad DC Divya Prabhu: ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಕಂದಾಯ ಇಲಾಖೆಯಿಂದ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ದೊರೆತಿದೆ. ಹಾಗೂ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ರಾಕೇಶ್ ತಂಗಡಗಿ ಅವರಿಗೆ ಸಿಕ್ಕಿದೆ.
- Hubli Dharwad News: ಹಳೇ ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಮತ್ತು ಬಂಧನದ ವೇಳೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪಿಗೆ ಗುಂಡೇಟು ಹಾರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬಡ್ಡಿ ಕಿರುಕುಳಕ್ಕೆ ವಿಷ ಸೇವಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆ, ಕುದುರೆಗಳಿಗೆ ಕುಶಾಲು ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು.
- ಮಾಹಿತಿ: ಪಿ.ರಂಗಸ್ವಾಮಿ, ಮೈಸೂರು
BBMP Health Program ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಎಐ ಚಾಲಿತ ತಾಯಿ ಮತ್ತು ಶಿಶು ಆರೈಕೆ ವೇದಿಕೆಯನ್ನು ಪ್ರಾರಂಭಿಸಿದೆ ಈ ಪ್ರಾಯೋಗಿಕ ಕಾರ್ಯಕ್ರಮವು ಗರ್ಭಿಣಿಯರು ಮತ್ತು ಶಿಶುಗಳಿಗೆ ಸಮಗ್ರ 1,000 ದಿನಗಳ ನಿರಂತರ ಆರೈಕೆ,ಮಾರ್ಗದರ್ಶನ ನೀಡಲಿದೆ.
- ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯ ಸರಕಾರ ಕ್ರಮಕೈಗೊಳ್ಳುತ್ತಿದೆ. ಹೈಬ್ರಿಡ್ ವಾಹನಗಳ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ಕಡಿತಗೊಳಿಸಲು ಮತ್ತು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಉತ್ತೇಜಕಗಳನ್ನು ನೀಡುವ ಪ್ರಸ್ತಾಪವನ್ನು ರಾಜ್ಯ ಸರಕಾರ ಮಾಡಿದೆ.
- ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಲವರು ಇದರಲ್ಲಿ ಭಾಗಿಯಾಗಿರಬಹುದು ಎನ್ನುವ ಶಂಕೆ ಪೊಲೀಸರದ್ದು.
Kodagu Coffee Dasara 2024 ಕಾಫಿಯ ತವರು ಕೊಡಗಿನಲ್ಲಿ ಈ ಬಾರಿ ದಸರಾದೊಂದಿಗೆ ಕಾಫಿ ದಸರಾವೂ ಸೇರ್ಪಡೆಯಾಗಲಿದೆ.ಎರಡು ದಿನಗಳ ಕಾಲ ಕಾಫಿಯ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾಫಿ ದಸರಾ ವೇದಿಕೆಯಾಗಲಿದೆ.
ಕರ್ನಾಟಕದಲ್ಲಿ ಮೂರ್ನಾಲ್ಕು ದಿನದಿಂದ ಇದ್ದಂತಹ ಭಾರೀ ಮಳೆ ಸನ್ನಿವೇಶ ಕಡಿಮೆಯಾಗಿದ್ದು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.
- Priyank Kharge: ಕೆಪಿಎಸ್ಸಿ, ಕೆಇಎ ಮತ್ತು ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಏನೆಲ್ಲಾ ಸಲಹೆಗಳನ್ನು ಅನುಕರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ನೇಮಕಾತಿ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
- Siddaramaiah on Narenadra Modi: ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
- Bengaluru News: ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿರುವ ರೈಲು ಸಿಲುಕಿರುವ ಘಟನೆ ಹೊರ ವರ್ತುಲ ರಸ್ತೆಯ ಮುನ್ನೇಕೊಳಲ ರೈಲ್ವೆ ಗೇಟ್ ಬಳಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದ ಸಂಚಾರ ದಟ್ಟಣೆ ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.