ಬಿಬಿಎಂಪಿಯಿಂದ ಆರೋಗ್ಯ ಆಧರಿತ ಎಐ ತಂತ್ರಜ್ಞಾನ ಬಳಕೆ; ಬೆಂಗಳೂರಲ್ಲಿ ಅಮ್ಮನ ರಕ್ಷಿಸಿ ಅಭಿಯಾನ ಆರಂಭ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಬಿಎಂಪಿಯಿಂದ ಆರೋಗ್ಯ ಆಧರಿತ ಎಐ ತಂತ್ರಜ್ಞಾನ ಬಳಕೆ; ಬೆಂಗಳೂರಲ್ಲಿ ಅಮ್ಮನ ರಕ್ಷಿಸಿ ಅಭಿಯಾನ ಆರಂಭ

ಬಿಬಿಎಂಪಿಯಿಂದ ಆರೋಗ್ಯ ಆಧರಿತ ಎಐ ತಂತ್ರಜ್ಞಾನ ಬಳಕೆ; ಬೆಂಗಳೂರಲ್ಲಿ ಅಮ್ಮನ ರಕ್ಷಿಸಿ ಅಭಿಯಾನ ಆರಂಭ

BBMP Health Program ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಎಐ ಚಾಲಿತ ತಾಯಿ ಮತ್ತು ಶಿಶು ಆರೈಕೆ ವೇದಿಕೆಯನ್ನು ಪ್ರಾರಂಭಿಸಿದೆ ಈ ಪ್ರಾಯೋಗಿಕ ಕಾರ್ಯಕ್ರಮವು ಗರ್ಭಿಣಿಯರು ಮತ್ತು ಶಿಶುಗಳಿಗೆ ಸಮಗ್ರ 1,000 ದಿನಗಳ ನಿರಂತರ ಆರೈಕೆ,ಮಾರ್ಗದರ್ಶನ ನೀಡಲಿದೆ.

ಬಿಬಿಎಂಪಿ ಎಐ ತಂತ್ರಜ್ಞಾನ ಆಧರಿತ ಅಮ್ಮನನ್ನು ಉಳಿಸಿ ಚಟುವಟಿಕೆಗೆ ಚಾಲನೆ ನೀಡಿದೆ.
ಬಿಬಿಎಂಪಿ ಎಐ ತಂತ್ರಜ್ಞಾನ ಆಧರಿತ ಅಮ್ಮನನ್ನು ಉಳಿಸಿ ಚಟುವಟಿಕೆಗೆ ಚಾಲನೆ ನೀಡಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಸೇವ್ ಮಾಮ್' ಎಂಬ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಎಐ ಆಧಾರಿತ ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆಯನ್ನು ಪ್ರಾರಂಭಿಸಿದೆ. ಇದು ಗರ್ಭಿಣಿಯರು ಮತ್ತು ಶಿಶುಗಳಿಗೆ ಸಮಗ್ರ 1,000 ದಿನಗಳ ಚಟುವಟಿಕೆ ಆಧಾರಿತ ಪ್ರಾಯೋಗಿಕ ಕಾರ್ಯಕ್ರಮ. ಆರೋಗ್ಯ ಇಲಾಖೆಯ ಸೇವೆಗಳನ್ನು ಸಮಯಕ್ಕೆ ಅನುಗುಣವಾಗಿ ತಾಯಿ ಹಾಗೂ ಮಗುವಿಗೆ ತಲುಪಿಸುವುದನ್ನು ಖಚಿತಪಡಿಸುತ್ತದೆ. ಬೆಂಗಳೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪಾಲಿಕೆ ಆಸ್ಪತ್ರೆಗಳಲ್ಲಿ ಈ ಚಟುವಟಿಕೆ ನಡೆಯಲಿದೆ.

ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆ ಸೇವೆ ಸಾಕಷ್ಟು ಪ್ರಗತಿ ಕಂಡಿದೆ. ಅಂದರೆ ಅತ್ಯಾಧುನಿಕ ಚಿಕಿತ್ಸೆಗಳು ಎಲ್ಲರಿಗೂ ಸಿಗುತ್ತಿವೆ. ಆದೇ ರೀತಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಆರೋಗ್ಯ ಸೇವೆಗಳನ್ನು ಹೊಂದಿದೆ. ಇಲ್ಲಿ ನಿತ್ಯ ಚಿಕಿತ್ಸೆಗಳ ಜತೆಗೆ ಹೆರಿಗೆ ಸಹಿತ ಎಲ್ಲಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರಿನ ಹೆಚ್ಚಿನ ಜನ ಈ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಸೇವೆ ಬಳಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸುವ ಜತೆಯಲ್ಲಿ ಜನರ ಬಾಂಧವ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗವೂ ಹಲವಾರು ಕಾರ್ಯಕ್ರಮ ರೂಪಿಸುತ್ತಿದೆ. ಇದರಲ್ಲಿ ಸೇವ್‌ ಮಾಮ್‌ ಎನ್ನುವ ಚಟುವಟಿಕೆಯೂ ಸೇರಿದೆ. ಇದರಡಿ ಆರೋಗ್ಯ ಕೇಂದ್ರಕ್ಕೆ ಬರುವ ತಾಯಿ ಹಾಗು ಮಗುವಿನ ಸಮಗ್ರ ಆರೋಗ್ಯ, ಆರೈಕೆ ದೃಷ್ಟಿಯಿಂದ ಒಂದು ಸಾವಿರ ದಿನಗಳ ಅಂದರೆ ಸುಮಾರು ಮೂರು ವರ್ಷ ಕಾಲ ಚಟುವಟಿಕೆ ರೂಪಿಸಿರುವುದು ಇದರ ಉದ್ದೇಶ.

ತಾಯಿ ಹಾಗು ಮಗುವಿಗೆ ಚಿಕಿತ್ಸೆಗಳು, ಕಾಲ ಕಾಲಕ್ಕೆ ನೀಡಬೇಕಾದ ಲಸಿಕೆಗಳು, ಪೌಷ್ಠಿಕ ಆಹಾರ ಒದಗಿಸುವುದು, ಕಾಲ ಕಾಲಕ್ಕೆ ತಪಾಸಣೆಯನ್ನು ನಡೆಸುವುದು. ಈ ಮೂಲಕ ತಾಯಿ ಮಗುವಿನ ರಕ್ಷಣೆಗೆ ಒತ್ತು ನೀಡುವುದು ಆಶಯ. ಎಲ್ಲವನ್ನೂ ಅಪ್‌ ನಲ್ಲಿ ದಾಖಲಿಸಿ ಎಐ ತಂತ್ರಜ್ಞಾನದ ಮೂಲಕವೂ ಮಾರ್ಗದರ್ಶನವನ್ನು ಪಡೆಯುವಂತೆ ತಾಯಿಗೆ ಪ್ರೇರೇಪಿಸಲಾಗುತ್ತದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ ಕಿಶೋರ್‌ ಸುರಳ್ಕರ್‌, ಪಾಲಿಕೆಯ ಆರೋಗ್ಯ ವಿಭಾಗದ ಮೂಲಕ ತಾಯಿ ಹಾಗೂ ಮಗುವಿನ ಆರೈಕೆಗೆ ಒತ್ತು ನೀಡುವುದು ಇದರ ಉದ್ದೇಶ. ಅರೋಗ್ಯ ರಕ್ಷಣೆ ಇಂದಿನ ಅಗತ್ಯ. ಈ ಕಾರಣದಿಂದಲೇ ನಿರಂತರ ಆರೈಕೆಯ ಭರವಸೆಯೊಂದಿಗೆ ಯೋಜನೆ ಆರಂಭಿಸಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ತಾಯಿ ಮಕ್ಕಳಿಗೆ ಇದರ ಸೌಲಭ್ಯ ಸಿಗಲಿದೆ. ಈಗ ಎಲ್ಲವೂ ಸ್ಮಾರ್ಟ್‌ ಆಗಿರುವುದರಿಂದ ನಾವು ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿನಾದ್ಯಂತ ತಾಯಿ ಮತ್ತು ಮಕ್ಕಳ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಇದು ಸಹಕಾರಿ. ಇದು ಪೈಲಟ್‌ ಕಾರ್ಯಕ್ರಮವಾಗಿದ್ದು, ಪ್ರತಿಕ್ರಿಯೆ ನೋಡಿಕೊಂಡು ವಿಸ್ತರಣೆ ಮಾಡಲಾಗುತ್ತದೆ ಎನ್ನುತ್ತಾರೆ.

ರೇಬಿಸ್ ಜಾಗೃತಿ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೇಬಿಸ್ ತಡೆಗಟ್ಟುವಿಕೆಯನ್ನು ಉತ್ತೇಜಿಸಲು ಮತ್ತು ಬೀದಿ ನಾಯಿಗಳು ಮತ್ತು ನಾಗರಿಕರ ನಡುವೆ ಆರೋಗ್ಯಕರ ಸಹಬಾಳ್ವೆಯನ್ನು ಉತ್ತೇಜಿಸಲು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ.

ಬಿಬಿಎಂಪಿಯ ಇತ್ತೀಚಿನ ಉಪಕ್ರಮವು ಬೀದಿ ನಾಯಿಗಳೊಂದಿಗೆ ಜವಾಬ್ದಾರಿಯುತ ಸಂವಹನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ರೇಬಿಸ್ ತಡೆಗಟ್ಟುವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ವಯಂಸೇವಕರು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಎಲ್ಇಡಿ ಡಿಸ್ಪ್ಲೇ ಹೊಂದಿರುವ ಪ್ರಚಾರ ವಾಹನಗಳು ನಗರದಾದ್ಯಂತ ಸಂದೇಶವನ್ನು ತಲುಪಿಸುತ್ತಿದ್ದಾರೆ. ಈ ವರ್ಷ ಸುಮಾರು 43,656 ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದ್ದು, ಬೀದಿ ನಾಯಿ ಕಡಿತಕ್ಕೆ ಒಳಗಾದವರಿಗೆ ಬಿಬಿಎಂಪಿ ಉಚಿತ ಲಸಿಕೆ ಮತ್ತು ಚಿಕಿತ್ಸೆಯನ್ನು ನೀಡುತ್ತಿದೆ. ನಾಗರಿಕರು 6364893322 ಗಂಟೆಗೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡುವ ಮೂಲಕ ರೇಬಿಸ್ ಸಂಬಂಧಿತ ಆತಂಕಗಳನ್ನು ವರದಿ ಮಾಡಬಹುದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

Whats_app_banner