ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ ರಾಹುಲ್​ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ

ಟಿ20 ವಿಶ್ವಕಪ್​ಗೆ ರಾಹುಲ್​ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ

Rahul Dravid : ಜೂನ್ 1ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಮುಕ್ತಾಯಗೊಳ್ಳಲಿದೆ. ಆದರೆ ಅವರ ಸ್ಥಾನಕ್ಕೆ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ನಡೆಯುತ್ತಿದೆ.

ಟಿ20 ವಿಶ್ವಕಪ್​ಗೆ ರಾಹುಲ್​ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ
ಟಿ20 ವಿಶ್ವಕಪ್​ಗೆ ರಾಹುಲ್​ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ

ಬಹುನಿರೀಕ್ಷಿತ 2024ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ನಂತರ ಟೀಮ್ ಇಂಡಿಯಾ ಹೆಡ್​ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅಂತ್ಯಗೊಳ್ಳಲಿದೆ. ಎರಡು ವಾರಗಳಲ್ಲಿ ಮುಕ್ತಾಯವಾಗುವ ಐಪಿಎಲ್ ಮಧ್ಯೆಯೇ, ನೂತನ ಕೋಚ್​ ಹುಡುಕಾಟ ನಡೆಸುತ್ತಿರುವ ಬಿಸಿಸಿಐ, ಈಗಾಗಲೇ ಅರ್ಜಿ ಆಹ್ವಾನಿಸಿದೆ. ವಿಶ್ವಕಪ್​ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ, ಮಹತ್ವದ ಟೂರ್ನಿಯ ನಂತರ ನೂತನ ಕೋಚ್​ ಅಡಿಯಲ್ಲಿ ಕಣಕ್ಕಿಳಿಯಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಬಹಿರಂಗಪಡಿಸಿದ್ದಾರೆ. ದ್ರಾವಿಡ್ ಮತ್ತೊಮ್ಮೆ ಮುಂದುವರೆಯಬೇಕೆಂದರೂ ಅರ್ಜಿ ಸಲ್ಲಿಸಲೇಬೇಕು ಎಂದಿದ್ದಾರೆ. ಮುಂದಿನ ಹೆಡ್​ಕೋಚ್​ ಸ್ಥಾನಕ್ಕಾಗಿ ಶೀಘ್ರದಲ್ಲೇ ಜಾಹೀರಾತು ಕೊಡಲಾಗುವುದು. ದ್ರಾವಿಡ್ ಅವರು ತಂಡದಲ್ಲಿ ತನ್ನ ಸ್ಥಾನ ಮುಂದುವರೆಸಲು ಬಯಸಿದರೆ, ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿದೇಶಿ ಕ್ರಿಕೆಟಿಗರು ಸಹ ಭಾರತ ತಂಡದ ಮುಖ್ಯ ಕೋಚ್ ಆಗುವ ಅವಕಾಶ ಇದೆ ಎಂದು ಹೇಳಿದ್ದಾರೆ.

ಮತ್ತೆ ಮುಂದುವರೆಯಲ್ಲ ರಾಹುಲ್ ದ್ರಾವಿಡ್?

ಹೆಡ್​ಕೋಚ್ ಆಗಿ ದ್ರಾವಿಡ್ ಮತ್ತೆ ಮುಂದುವರೆಯುವುದಿಲ್ಲ. 2023ರ ಏಕದಿನ ವಿಶ್ವಕಪ್​ಗೆ ಅವರ ಅಧಿಕಾರವಧಿ ಮುಕ್ತಾಯಗೊಂಡಿತ್ತು. ಈ ವೇಳೆ ಬಿಸಿಸಿಐ ಟಿ20 ವಿಶ್ವಕಪ್​​ವರೆಗೂ ತಾವೇ ಮಾರ್ಗದರ್ಶಕರಾಗಿ ಮುಂದುವರೆಯುವಂತೆ ಕೋರಿತ್ತು. ಆದರೆ ದ್ರಾವಿಡ್, ನಾನು ಮತ್ತೆ ಮುಂದುವರೆಯಲು ಇಷ್ಟವಿಲ್ಲ ಎಂದು ಹೇಳಿದ್ದರು. ಆದರೆ ಕೊನೆಗೂ ಒಪ್ಪಿಸಿ ಟಿ20 ವಿಶ್ವಕಪ್​ವರೆಗೂ ಅಧಿಕಾರವನ್ನು ವಿಸ್ತರಿಸಲಾಗಿತ್ತು. ಹೀಗಾಗಿ ಅವರು ಮತ್ತೆ ಕೋಚ್​ ಆಗುವ ಸಾಧ್ಯತೆ ತೀರಾ ಕಡಿಮೆ.

ನಾಲ್ಕನೇ ಐಸಿಸಿ ಟೂರ್ನಮೆಂಟ್​ಗೆ ಸಜ್ಜು

2021ರ ಟಿ20 ವಿಶ್ವಕಪ್​ ಮುಕ್ತಾಯದ ನಂತರ ಭಾರತ ತಂಡದ ಹೆಡ್​ಕೋಚ್​ ಆಗಿ ನೇಮಕಗೊಂಡ ರಾಹುಲ್​ ದ್ರಾವಿಡ್, ಒಟ್ಟು ಮೂರು ಐಸಿಸಿ ಟೂರ್ನಮೆಂಟ್​ಗಳಲ್ಲಿ ಮಾರ್ಗದರ್ಶಕರಾಗಿದ್ದಾರೆ. 2022ರ ಟಿ20 ವಿಶ್ವಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ಏಕದಿನ ವಿಶ್ವಕಪ್​​ನಲ್ಲಿ ಭಾರತ ತಂಡಕ್ಕೆ ಹೆಡ್​ಕೋಚ್ ಆಗಿದ್ದರು. ಇದೀಗ 4ನೇ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಕೋಚ್​ ಆಗಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ಹಲವು ಸರಣಿ ಗೆದ್ದರೂ ಐಸಿಸಿ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ.

ಹೆಡ್​ಕೋಚ್ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ

ವಿವಿಎಸ್ ಲಕ್ಷ್ಮಣ್: ರಾಹುಲ್ ದ್ರಾವಿಡ್ ಅವರ ಸ್ಥಾನದ ಮೇಲೆ ಮೂವರು ಕಣ್ಣು ಹಾಕಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹಾಗೂ ಎನ್​ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಈ ಸ್ಥಾನಕ್ಕಾಗಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ದ್ರಾವಿಡ್ ಅನುಪಸ್ಥಿತಿಯಲ್ಲಿ ಹೆಡ್​ಕೋಚ್​ ಆಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅಂಡರ್​​-19 ವಿಶ್ವಕಪ್​ನಲ್ಲೂ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಹೀಗಾಗಿ ಅವರೇ ದ್ರಾವಿಡ್ ನಂತರ ಮುಖ್ಯಕೋಚ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅನಿಲ್ ಕುಂಬ್ಳೆ: ಈಗಾಗಲೇ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಅನಿಲ್ ಕುಂಬ್ಳೆ ಸಹ ಈ ಸ್ಪರ್ಧೆಯಲ್ಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ 2017ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿತ್ತು. ಅವರ ಕೋಚಿಂಗ್ ಅವಧಿಯಲ್ಲಿ ಭಾರತ ಟೆಸ್ಟ್​ ಸೋತಿದ್ದು ಒಂದೇ ಪಂದ್ಯ. ಹೀಗಾಗಿ ಅವರು ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆ ಮೂಲಕ ಅನುಭವಿಯನ್ನೇ ಮತ್ತೆ ತಂಡಕ್ಕೆ ಕರೆ ತಂದರೆ ಯುವ ಆಟಗಾರರನ್ನು ಬೇಗನೇ ಪಳಗಿಸಬಹುದು.

ವೀರೇಂದ್ರ ಸೆಹ್ವಾಗ್: ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಕೂಡ ರಾಹುಲ್ ದ್ರಾವಿಡ್ ಬದಲಿಗೆ ಅಗ್ರ ಹೆಸರು. ಪ್ರಸ್ತುತ ಅವರು ಯಾವುದೇ ಐಪಿಎಲ್ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿರದ ಸೆಹ್ವಾಗ್​, ತಾನು ನಿವೃತ್ತಿಯಾದ ಕೇವಲ 2 ವರ್ಷಗಳ ನಂತರ ಭಾರತ ತಂಡಕ್ಕೆ ಕೋಚ್ ಆಗಲು ಬಯಸಿದ್ದರು. 2017ರಲ್ಲಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆಯ್ಕೆಯಾಗಿರಲಿಲ್ಲ. 2021ರಲ್ಲಿ ದ್ರಾವಿಡ್​ ಅವರನ್ನು ಸಂಪರ್ಕಿಸಿ ಕೋಚ್​ ಆಗುವಂತೆ ಕೇಳಿದಂತೆ ಸೆಹ್ವಾಗ್ ಅವರನ್ನು ಕೇಳಬೇಕು. ಆಗ ಒಪ್ಪಿಗೆ ನೀಡಿದರೂ ಅಚ್ಚರಿ ಇಲ್ಲ.

IPL_Entry_Point