ಸಿಯೆಟ್ ಕ್ರಿಕೆಟ್ ಅವಾರ್ಡ್ಸ್ 2024: ರೋಹಿತ್ ಶರ್ಮಾ ಟು ವಿರಾಟ್ ಕೊಹ್ಲಿ - ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
CEAT Cricket Awards 2024: ಭಾರತದ ಟೈರ್ ತಯಾರಿಕಾ ಕಂಪನಿ ಸಿಯೆಟ್ ವರ್ಷದ ಕ್ರಿಕೆಟ್ ಅವಾರ್ಡ್ಗಳನ್ನು ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಅವುಗಳ ಪಟ್ಟಿ ಇಂತಿದೆ.
ಆಗಸ್ಟ್ 21ರಂದು ಬುಧವಾರ ಮುಂಬೈನಲ್ಲಿ ಜರುಗಿದ ಸಿತೆಟ್ ಕ್ರಿಕೆಟ್ ಅವಾರ್ಡ್ಸ್ ಸಮಾರಂಭದಲ್ಲಿ ಸೂಪರ್ಸ್ಟಾರ್ ಕ್ರಿಕೆಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಸ್ಟಾರ್ ಕ್ರಿಕೆಟರ್ಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. 2023ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಅವರಿಗೆ ಪುರುಷರ ವರ್ಷದ ಒಡಿಐ ಬ್ಯಾಟರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
26ನೇ ಆವೃತ್ತಿಯ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯರ ಜೊತೆಗೆ ಇಬ್ಬರು ವಿದೇಶಿ ಆಟಗಾರರು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್ ಅವರನ್ನು ವರ್ಷದ ಪುರುಷರ ಟಿ20ಐ ಬ್ಯಾಟರ್ ಎಂದು ಗೌರವಿಸಲಾಯಿತು. ನ್ಯೂಜಿಲೆಂಡ್ನ ಟಿಮ್ ಸೌಥಿ ವರ್ಷದ ಪುರುಷರ ಟಿ20ಐ ಬೌಲರ್ ಎಂಬ ಪ್ರಶಸ್ತಿ ಗೆದ್ದರು. ಇದೇ ವೇಳೆ ಮಹಿಳಾ ಕ್ರಿಕೆಟರ್ಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆಗೆ ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್, ಶಫಾಲಿ ವರ್ಮಾ ಸೇರಿದಂತೆ ಹಲವರು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಕ್ರಿಕೆಟ್ನಲ್ಲಿ ಆಟಗಾರನಾಗಿ ಹಾಗೂ ಕೋಚ್ ಆಗಿ ಅಪಾರ ಸೇವೆ ಸಲ್ಲಿಸಿದ ರಾಹುಲ್ ದ್ರಾವಿಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
ರೋಹಿತ್-ಕೊಹ್ಲಿ ಅದ್ಭುತ ಪ್ರದರ್ಶನ
ಕಳೆದ ವರ್ಷ ಏಕದಿನ ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ರೋಹಿತ್ ಅವರಿಂದಲೂ ಇಂತಹದ್ದೇ ಪ್ರದರ್ಶನ ಬಂದಿತ್ತು. ಅವರು ನಾಯಕನಾಗಿಯೂ ಅಪಾರ ಕೊಡುಗೆ ನೀಡಿದ್ದರು. ಹೀಗಾಗಿ, ಅವರನ್ನು ಪುರುಷರ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇನ್ನು ಬೌಲಿಂಗ್ನಲ್ಲಿ ಮಿಂಚಿದ್ದ ಮೊಹಮ್ಮದ್ ಶಮಿಗೆ ಪ್ರಶಸ್ತಿಗೂ ಆಯ್ಕೆ ಮಾಡಲಾಗಿದೆ. ಆದರೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾಗೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ.
ಸಿಯೆಟ್ ಕ್ರಿಕೆಟ್ ಅವಾರ್ಡ್ಸ್-2024: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಜೀವಮಾನ ಸಾಧನೆ ಪ್ರಶಸ್ತಿ - ರಾಹುಲ್ ದ್ರಾವಿಡ್
ಪುರುಷರ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ - ರೋಹಿತ್ ಶರ್ಮಾ
ಪುರುಷರ ವರ್ಷದ ಬ್ಯಾಟರ್ - ವಿರಾಟ್ ಕೊಹ್ಲಿ
ಪುರುಷರ ವರ್ಷದ ಏಕದಿನ ಬೌಲರ್ - ಮೊಹಮ್ಮದ್ ಶಮಿ
ಪುರುಷರ ವರ್ಷದ ಟೆಸ್ಟ್ ಬ್ಯಾಟರ್ - ಯಶಸ್ವಿ ಜೈಸ್ವಾಲ್
ಪುರುಷರ ವರ್ಷದ ಟೆಸ್ಟ್ ಬೌಲರ್ - ರವಿಚಂದ್ರನ್ ಅಶ್ವಿನ್
ಪುರುಷರ ಟಿ20ಐ ವರ್ಷದ ಬ್ಯಾಟರ್ - ಫಿಲ್ ಸಾಲ್ಟ್
ಪುರುಷರ ಟಿ20ಐ ವರ್ಷದ ಬೌಲರ್ - ಟಿಮ್ ಸೌಥಿ
ವರ್ಷದ ದೇಶೀಯ ಕ್ರಿಕೆಟಿಗ - ಸಾಯಿ ಕಿಶೋರ್
ಮಹಿಳಾ ವರ್ಷದ ಭಾರತೀಯ ಬ್ಯಾಟರ್ - ಸ್ಮೃತಿ ಮಂಧಾನ
ಮಹಿಳಾ ವರ್ಷದ ಭಾರತೀಯ ಬೌಲರ್ - ದೀಪ್ತಿ ಶರ್ಮಾ
ಸ್ಮರಣಿಕೆ - ಮಹಿಳಾ ಟಿ20ಐ ಇತಿಹಾಸದಲ್ಲಿ ನಾಯಕಿಯಾಗಿ ಹೆಚ್ಚು ಪಂದ್ಯಗಳು - ಹರ್ಮನ್‌ಪ್ರೀತ್ ಕೌರ್
ಸ್ಮರಣಿಕೆ - ಟಾಟಾ ಐಪಿಎಲ್‌ನಲ್ಲಿ ಅತ್ಯುತ್ತಮ ನಾಯಕತ್ವ - ಶ್ರೇಯಸ್ ಅಯ್ಯರ್
ಸ್ಮರಣಿಕೆ - ಮಹಿಳಾ ಟೆಸ್ಟ್‌ನಲ್ಲಿ ವೇಗದ ದ್ವಿಶತಕ - ಶಫಾಲಿ ವರ್ಮಾ
ಕ್ರೀಡಾ ಆಡಳಿತ ಶ್ರೇಷ್ಠತೆ ಪ್ರಶಸ್ತಿ - ಜಯ್ ಶಾ