ಧೋನಿ ಎಂದಿಗೂ ಮುಗಿಯದ ಡೀಸಲ್ ಎಂಜಿನ್ ಇದ್ದಂತೆ ಎಂದ ಎಬಿಡಿ; 2 ವರ್ಷ ಇಂಜಿನ್ ಸೀಸ್ ಆಗಿತ್ತು ಎಂದ ಆರ್ಸಿಬಿ ಫ್ಯಾನ್ಸ್
AB de Villiers on MS Dhoni: 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ಯೂಟ್ಯೂಟ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಅವರನ್ನು ಕೊಂಡಾಡಿದ್ದಾರೆ.
2008ರ ಉದ್ಘಾಟನಾ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (Indian Premier League 2024) ಈವರೆಗೂ ಆಡುತ್ತಿರುವ ಕೆಲವೇ ಆಟಗಾರರ ಪೈಕಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಒಬ್ಬರಾಗಿದ್ದಾರೆ. 16 ಆವೃತ್ತಿಗಳನ್ನು ಪೂರೈಸಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ, 17ನೇ ಆವೃತ್ತಿಗೆ ಕಾಲಿಡಲು ಸಜ್ಜಾಗಿದ್ದಾರೆ. 42ರ ಹರೆಯದ ಆಟಗಾರ ಮುಂಬರುವ ಋತುವಿನಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ತಂಡಕ್ಕೆ 6ನೇ ಟ್ರೋಫಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ.
2020ರಲ್ಲಿ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ಬೈ ಹೇಳಿದ ಬಳಿಕ ಭಾರತ ತಂಡದ ಮಾಜಿ ನಾಯಕ ಐಪಿಎಲ್‌ನಲ್ಲಿ ಮಾತ್ರ ಮುಂದುವರಿಯಲು ಇನ್ನೂ ಸಾಕಷ್ಟು ಫಿಟ್ ಆಗಿದ್ದಾರೆ. ಕಳೆದ ಬಾರಿ ಮೊಣಕಾಲಿಗೆ ಗಾಯವಾರೂ ಟೂರ್ನಿಯುದ್ದಕ್ಕೂ ಆಡಿ ಟ್ರೋಫಿ ಜಯಿಸಿ ಅನೇಕ ಹೃದಯಗಳನ್ನು ಗೆದ್ದರು. ಧೋನಿ ಸಾಧನೆಯನ್ನು ಮಾಜಿ-ಹಾಲಿ ಕ್ರಿಕೆಟಿಗರು ಕೊಂಡಾಡಿದ್ದರು. ಇದೀಗ ಆ ಸಾಲಿಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಸೇರಿದ್ದಾರೆ.
ಧೋನಿಯನ್ನು ಕೊಂಡಾಡಿದ ಎಬಿಡಿ
ಎಬಿಡಿ ಅವರು ಧೋನಿಯನ್ನು ನಂಬಲಾಗದ ಆಟಗಾರ ಎಂದು ಶ್ಲಾಘಿಸಿದ್ದಾರೆ. ಕಳೆದ ವರ್ಷ ಎಂಎಸ್ ಧೋನಿ ಐಪಿಎಲ್ಗೆ ವಿದಾಯ ಹೇಳುತ್ತಾರೆ ಎಂದು ವದಂತಿಗಳು ಹಬ್ಬಿದ್ದವು. ಟ್ರೋಫಿ ಗೆದ್ದ ನಂತರ ಮಾತನಾಡಿದ್ದ ಅವರು, ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಆದರೆ, ಮತ್ತೊಂದು ಐಪಿಎಲ್ಗೆ ಸಾಕಷ್ಟು ಸಮಯ ಇದೆ. ಗಾಯದಿಂದ ಚೇತರಿಸಿಕೊಳ್ಳಲು ಸಮಯ ಇದೆ. ಹಾಗಾಗಿ ಮುಂದೆ ಯೋಚಿಸುತ್ತೇನೆ ಎಂದು ಆಡುವ ಸುಳಿವನ್ನು ಬಿಟ್ಟುಕೊಟ್ಟಿದ್ದರು.
ಇದೀಗ ಎಬಿ ಡಿವಿಲಿಯರ್ಸ್ ಅವರು ಧೋನಿ ನಿವೃತ್ತಿಯ ಕುರಿತು ಮಾತನಾಡಿದ್ದು, ಇದು ಧೋನಿ ಅವರ ಅಂತಿಮ ಸೀಸನ್ ಆಗಲಿದೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಎಂದಿಗೂ ಮುಗಿಯದ ಈ ಡೀಸೆಲ್ ಎಂಜಿನ್ ಎಂದು ತೋರುತ್ತಿದ್ದಾರೆ. ದಶಕಗಳಿಂದ ಕ್ರಿಕೆಟ್ ಸಕ್ರಿಯರಾಗಿದ್ದಾರೆ. ನಿಜವಾಗಲೂ ಅದ್ಭುತ ಆಟಗಾರ ಮತ್ತು ಅದ್ಭುತ ನಾಯಕ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ತಂಡದಲ್ಲಿ ಆರೋಗ್ಯಕರ ವಾತಾವರಣ ಮತ್ತು ಪ್ರಗತಿಪರ ಸಂಸ್ಕೃತಿ ಉಳಿಯಲು ಮತ್ತು ಬೆಳೆಯಲು ಕಾರಣ ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಧೋನಿ ಜೊತೆಗೆ ರವೀಂದ್ರ ಜಡೇಜಾ ಅವರಂತಹ ಹಿರಿಯ ಆಟಗಾರರು ಎಂದು ಎಬಿಡಿ ಗೌರವಿಸಿದ್ದಾರೆ. ಎಂಎಸ್‌ಡಿ ನಾಯಕತ್ವ ಕೂಲ್ ಕ್ಯಾಪ್ಟನ್, ಸ್ಟೀಫನ್ ಫ್ಲೆಮಿಂಗ್ ಶಾಂತ ತರಬೇತುದಾರ, ರವೀಂದ್ರ ಜಡೇಜಾ ಹಿರಿಯ ಆಟಗಾರರು ತಂಡದ ಅದ್ಭುತ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಬೆದರಿಸುವ ತಂಡವಾಗಿದೆ. ಅವರನ್ನು ಸೋಲಿಸುವುದು ಎಂದಿಗೂ ಸುಲಭವಲ್ಲ. ಇದು ಯಾವಾಗಲೂ ಅತ್ಯಂತ ಯಶಸ್ವಿ ಯುನಿಟ್‌ನ, ಅತ್ಯಂತ ಯಶಸ್ವಿ ಫ್ರಾಂಚೈಸ್‌ನ ಉತ್ತಮ ಲಕ್ಷಣವಾಗಿದೆ. ನೀವು ಚೆನ್ನಾಗಿ ಆಡುತ್ತಿರುವಾಗ ಆಗ ಯಾವುದೇ ತೊಂದರೆ ಇರುವುದಿಲ್ಲ. ಆಗ ನಮ್ಮನ್ನು ಯಾರೂ ತಡೆಯುವುದಿಲ್ಲ. ಆದರೆ, ನೀವು ಉತ್ತಮವಾಗಿ ಆಡದಿದ್ದಾಗ, ಅವರು (ಧೋನಿ) ಯಾವಾಗಲೂ ಸ್ಪರ್ಧಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಡಿವಿಲಿಯರ್ಸ್ ಸೇರಿಸಿದ್ದಾರೆ. ಎಬಿಡಿ ಅವರು ಧೋನಿ ಅವರನ್ನು ಹಾಡಿ ಹೊಗಳುತ್ತಿದ್ದಂತೆ ಡೀಸನ್ ಇಂಜಿನ್ ಎರಡು ವರ್ಷ ಸೀಸ್ ಆಗಿತ್ತು ಎಂದು ಕಾಮೆಂಟ್ಗಳ ಮೂಲಕ ವ್ಯಂಗ್ಯವಾಡುತ್ತಿದ್ದಾರೆ.