ತೀವ್ರ ಮುಜುಗರವಾಗಿದೆ; ಆಟಗಾರರ ಕಳಪೆ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಬಹಿರಂಗ ಅಸಮಾಧಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ತೀವ್ರ ಮುಜುಗರವಾಗಿದೆ; ಆಟಗಾರರ ಕಳಪೆ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಬಹಿರಂಗ ಅಸಮಾಧಾನ

ತೀವ್ರ ಮುಜುಗರವಾಗಿದೆ; ಆಟಗಾರರ ಕಳಪೆ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಬಹಿರಂಗ ಅಸಮಾಧಾನ

Delhi Capitals: ಇಂದಿನ ಪಂದ್ಯದ ಮೊದಲಾರ್ಧದಲ್ಲಿ ನಾನು ಬಹುತೇಕ ಮುಜುಗರಕ್ಕೀಡಾಗಿದ್ದೆ. ಇಷ್ಟು ರನ್‌ಗಳನ್ನು ಬಿಟ್ಟುಕೊಡಲು ನಾವು ಎರಡು ಗಂಟೆಗಳ ಕಾಲ ಬೌಲಿಂಗ್ ಮಾಡಬೇಕಾಯಿತು ಎಂದು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್​ ಬೇಸರ ವ್ಯಕ್ತಪಡಿಸಿದ್ದಾರೆ.

ಆಟಗಾರರ ಕಳಪೆ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಅಸಮಾಧಾನ
ಆಟಗಾರರ ಕಳಪೆ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಅಸಮಾಧಾನ

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 17ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹೀನಾಯ ಸೋಲನುಭವಿಸಿದೆ. ಆದರೆ ಪಂದ್ಯದ ನಂತರ ತಮ್ಮ ತಂಡದ ಪ್ರದರ್ಶನದ ಬಗ್ಗೆ ಡೆಲ್ಲಿ ಹೆಡ್​ ಕೋಚ್​ ರಿಕಿ ಪಾಂಟಿಂಗ್​ Ricky Ponting) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟದ ಮೊದಲಾರ್ಧದಲ್ಲಿ ತಂಡದ ಬೌಲರ್​ಗಳ ನ್ಯೂನತೆಗಳನ್ನು ಎತ್ತಿ ತೋರಿಸಿದ ರಿಕಿ ಪಾಂಟಿಂಗ್, ನಮ್ಮ ಪ್ರದರ್ಶನ ಮುಜುಗರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಂದಿನ ಪಂದ್ಯದ ಮೊದಲಾರ್ಧದಲ್ಲಿ ನಾನು ಬಹುತೇಕ ಮುಜುಗರಕ್ಕೀಡಾಗಿದ್ದೆ. ಇಷ್ಟು ರನ್‌ಗಳನ್ನು ಬಿಟ್ಟುಕೊಡಲು ನಾವು ಎರಡು ಗಂಟೆಗಳ ಕಾಲ ಬೌಲಿಂಗ್ ಮಾಡಬೇಕಾಯಿತು. ಇದೇ ಕಾರಣಕ್ಕೆ ನಾವು ಸ್ಲೋ ಓವರ್​ ರೇಟಿಂಗ್​ಗೆ ಒಳಗಾದೆವು. ಎರಡು ಓವರ್​ಗಳ ಹಿಂದೆ ಇದ್ದೆವು. ಹಾಗಾಗಿ ಕೊನೆಯ ಎರಡು ಓವರ್​ಗಳನ್ನು ಬೌಲ್ ಮಾಡುವ ವೇಳೆ 30 ಯಾರ್ಡ್​ ಸರ್ಕಲ್​ನಿಂದ ನಾಲ್ವರು ಫೀಲ್ಡರ್​ಗಳು ಮಾತ್ರ ಹೊರಗಿರಲು ಅವಕಾಶ ಇತ್ತು. ಇದು ಹಿನ್ನೆಡೆಯಾಯಿತು ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಪಾಂಟಿಂಗ್ ಹೇಳಿದ್ದಾರೆ.

ಶೀಘ್ರವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದ ಪಾಂಟಿಂಗ್

ಪಂದ್ಯದಲ್ಲಿ ನಮ್ಮ ತಂಡವು ಸಾಕಷ್ಟು ತಪ್ಪುಗಳನ್ನು ಎಸಗಿದ್ದು, ಅವುಗಳು ಸ್ವೀಕಾರಾರ್ಹವಲ್ಲ. ತಕ್ಷಣ ಅವುಗಳನ್ನು ತಿದ್ದಿಕೊಳ್ಳಬೇಕಿದೆ. ಆಟಗಾರರ ತಪ್ಪುಗಳ ಕುರಿತು ತಂಡದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸದ್ಯಕ್ಕೆ ತಂಡದ ಪರಾಭವದ ಕುರಿತು ವಿವರಣೆ ನೀಡುವುದು ಕಷ್ಟವಾಗಿದ್ದು, ಬೃಹತ್ ಮೊತ್ತದ ಸ್ಕೋರ್​ ನೀಡಿದ್ದು ಗ್ರಹಿಕೆಗೆ ನಿಲುಕದ್ದು. ಪಂದ್ಯದಲ್ಲಿ 17 ವೈಡ್​ಗಳನ್ನು ಹಾಕಿದ್ದೇವೆ. ಎಲ್ಲಾ ತಪ್ಪುಗಳ ಕುರಿತು ಚರ್ಚಿಸುತ್ತೇವೆ. ಶೀಘ್ರವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಎಲ್ಲಿ, ಯಾವ ವಿಭಾಗದಲ್ಲಿ, ಹೇಗೆ ತಪ್ಪು ಮಾಡಿದ್ದೇವೆ ಎಂಬುದರ ಕುರಿತು ಚರ್ಚಿಸುತ್ತೇವೆ. ಮುಕ್ತವಾಗಿ ಈ ಬಗ್ಗೆ ಮಾತನಾಡುತ್ತೇವೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್​, ಪ್ಲೇಸ್​ಮೆಂಟ್ ಸೇರಿ ಎಲ್ಲದರ ಕುರಿತು ಡಿಸ್ಕಷನ್ ಮಾಡುತ್ತೇವೆ ಎಂದು ಪಾಂಟಿಂಗ್ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹೆಡ್​ ಕೋಚ್ ಕೋಪಗೊಳ್ಳಲು ಕಾರಣಗಳು ಇವೆ. ಪಂತ್ ಡಿಆರ್​ಎಸ್​​ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಸುನಿಲ್ ನರೇನ್ ಮತ್ತು ಆಂಡ್ರೆ ರಸೆಲ್ ಅವರು ಔಟಾಗಿದ್ದರೂ ಡಿಆರ್​ಎಸ್ ತೆಗೆದುಕೊಂಡಿರಲಿಲ್ಲ.

ಸಿಕ್ಕ ಅವಕಾಶವನ್ನು ಬಳಸಿಕೊಂಡ ಸುನಿಲ್ ನರೇನ್ ಸ್ಫೋಟಕ 85 ರನ್ ಚಚ್ಚಿದರು. ಅಲ್ಲದೆ ರಸೆಲ್ ಕೂಡ 41 ರನ್​ ಸಿಡಿಸಿ ಆರ್ಭಟಿಸಿದರು. ಬೌಲರ್​ಗಳನ್ನೂ ಸರಿಯಾಗಿ ಬಳಸಿಕೊಳ್ಳದ ಕಾರಣ ಎದುರಾಳಿ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಕೆಕೆಆರ್​​ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಇದು ಐಪಿಎಲ್​ನಲ್ಲಿ ದಾಖಲಾದ ಎರಡನೇ ಗರಿಷ್ಠ ಮೊತ್ತವಾಗಿದೆ. 273 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ 166ಕ್ಕೆ ಸರ್ವಪತನಗೊಂಡಿತು.

ಕ್ರ.ಸಂತಂಡಪಂದ್ಯಗೆಲುವುಸೋಲುಅಂಕNRR
1ಕೆಕೆಆರ್​3306+2.518
2ರಾಜಸ್ಥಾನ್ 3306+1.249
3ಸಿಎಸ್​ಕೆ3214+0.976
4ಎಲ್​ಎಸ್​ಜಿ3214+0.483
5ಗುಜರಾತ್ 3214-0.738
6ಎಸ್​ಆರ್​​ಹೆಚ್3122+0.204
7ಪಂಜಾಬ್3122-0.337
8ಆರ್​ಸಿಬಿ4132-0.876
9ಡೆಲ್ಲಿ4132-1.347
10ಮುಂಬೈ3030-1.423

Whats_app_banner