ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನಕ್ಕೆ ಮಾಲೀಕರೇ ಕಾರಣ, ‘ಯೆಸ್ ಬಾಸ್’ ಎಂದರಷ್ಟೆ ಬೆಲೆ; ಪಾಕ್ ಮಾಜಿ ನಾಯಕ ಗಂಭೀರ ಆರೋಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನಕ್ಕೆ ಮಾಲೀಕರೇ ಕಾರಣ, ‘ಯೆಸ್ ಬಾಸ್’ ಎಂದರಷ್ಟೆ ಬೆಲೆ; ಪಾಕ್ ಮಾಜಿ ನಾಯಕ ಗಂಭೀರ ಆರೋಪ

ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನಕ್ಕೆ ಮಾಲೀಕರೇ ಕಾರಣ, ‘ಯೆಸ್ ಬಾಸ್’ ಎಂದರಷ್ಟೆ ಬೆಲೆ; ಪಾಕ್ ಮಾಜಿ ನಾಯಕ ಗಂಭೀರ ಆರೋಪ

Rashid Latif : ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ನೀಡುತ್ತಿರುವ ಕಳಪೆ ಪ್ರದರ್ಶನಕ್ಕೆ ಮಾಲೀಕರೇ ನೇರ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಗಂಭೀರ ಆರೋಪ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಮಾಲೀಕರ ಮೇಲೆ ಪಾಕ್ ಮಾಜಿ ನಾಯಕ ಗಂಭೀರ ಆರೋಪ.
ಮುಂಬೈ ಇಂಡಿಯನ್ಸ್ ಮಾಲೀಕರ ಮೇಲೆ ಪಾಕ್ ಮಾಜಿ ನಾಯಕ ಗಂಭೀರ ಆರೋಪ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ (Indian Premier League) 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಕಳಪೆ ಪ್ರದರ್ಶನಕ್ಕೆ ತಂಡದ ಮಾಲೀಕರೇ ನೇರ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ (Rashid Latif) ಅಚ್ಚರಿ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿರುವುದರ ಜೊತೆಗೆ ಮುಂಬೈ ಫ್ರಾಂಚೈಸಿ ಮೇಲೂ ಆಕ್ರೋಶ ವ್ಯಕ್ತವಾಗಿದೆ. ಅದರ ಸಾಲಿಗೆ ರಶೀದ್ ಲತೀಫ್ ಕೂಡ ಸೇರಿದ್ದಾರೆ.

ಫ್ರಾಂಚೈಸಿ ನಡೆಯ ಕುರಿತು ಮಾತನಾಡಿರುವ ಪಾಕ್ ಮಾಜಿ ಆಟಗಾರ, 'ಇದು ಅಸಾಮರಸ್ಯವಾಗಿದೆ. ಅವರ ಕಳಪೆ ಪ್ರದರ್ಶನವು ಮೈದಾನದಲ್ಲಿ ಆಡುವ ಸಮಸ್ಯೆಯಾಗಿ ಕಾಣುತ್ತಿಲ್ಲ. ತಂಡದ ಮೇಲೆ ಮಾನಸಿಕ ಹಿಂಸೆ ಕೂಡ ಹಿನ್ನಡೆಗೆ ಕಾರಣವಾಗುತ್ತಿದೆ. ಮಾಲೀಕರು ತಂಡದ ಮಾನಸಿಕತೆಗೆ ಭಂಗ ತರುತ್ತಿದ್ದಾರೆ. ಹಾಗಾಗಿ ಇದು ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯೂಟ್ಯೂಬ್ ಶೋನಲ್ಲಿ ಲತೀಫ್ ಹೇಳಿದ್ದಾರೆ. ಇದೇ ವೇಳೆ ಗಂಭೀರ ಆರೋಪವೊಂದನ್ನೂ ಮಾಡಿದ್ದಾರೆ.

ಲತೀಫ್ ಗಂಭೀರ ಆರೋಪ

ತಂಡದಲ್ಲಿ ಯೆಸ್​ ಬಾಸ್ ಎಂದವರಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಅಂತಹವರ ನಿರ್ಧಾರಗಳನ್ನು ಸರಳವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಆಟಗಾರರ ಸಾಮರ್ಥ್ಯ ತಡೆಯುತ್ತಾರೆ. ಎಂಐ ಮಾಲೀಕರು ಮ್ಯಾನೇಜ್​ಮೆಂಟ್​ಗೆ ಮಾರ್ಕ್ ಬೌಚರ್, ಮಾಲಿಂಗ, ಕೀರಾನ್ ಪೊಲಾರ್ಡ್ ಅವರನ್ನು ನೇಮಿಸಿದ್ದಾರೆ. ಇದು ಒಂದು ದೊಡ್ಡ ಗುಂಪು. ಇವರೆಲ್ಲರೂ ಮಾಲೀಕರ ನಿರ್ಧಾರಕ್ಕೆ ಯೆಸ್​ ಬಾಸ್ ಎನ್ನುವವರು ಎಂದು ಆರೋಪಿಸಿದ್ದಾರೆ.

ಇವರೆಲ್ಲರೂ ಮಾಲೀಕರ ಆದೇಶಕ್ಕೆ ಯಾವತ್ತೂ ಇಲ್ಲ ಎಂದವರಲ್ಲ. ವಿರೋಧ ಮಾಡುವವರೂ ಅಲ್ಲ. ಅವರಿಗೆ ಗೊತ್ತಿರುವುದು ಕೇವಲ ಒಂದೇ ಯೆಸ್​ ಬಾಸ್. ಹೀಗೆ ಧೈರ್ಯದಿಂದ ಹೇಳುವವರು ಮಾತ್ರ ಆ ತಂಡದಲ್ಲಿ ಯಶಸ್ಸು ಕಾಣುತ್ತಾರೆ ಎಂದಿರುವ ಲತೀಫ್, ಎಂಐ ಕಳಪೆ ಆಟ ಮತ್ತು ಸೋಲಿನ ಹೊಣೆಗಾರಿಕೆಗೆ ಆಟಗಾರರು ಅಥವಾ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅವರ ಮೇಲಿಲ್ಲ. ಮಾಲೀಕರ ಮೇಲೆಯೇ ಇದೆ ಎಂದು ಹೇಳಿದ್ದಾರೆ.

ಪಿಎಸ್​ಎಲ್​​ನಲ್ಲೂ ಮಾಲೀಕರದ್ದೇ ದರ್ಬಾರ್

ಪಾಕಿಸ್ತಾನ ಸೂಪರ್​ ಲೀಗ್​​ನಲ್ಲೂ ಸಹ ಮಾಲೀಕರು ಅಧಿಕಾರ ಚಲಾಯಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ತಂಡದಲ್ಲೂ ಇದನ್ನು ನೋಡಬಹುದು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸುವ ನಿರ್ಧಾರವು ತಪ್ಪಾಗಿದೆ. ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿದ ರೀತಿಯೂ ಸರಿಯಲ್ಲ ಎಂದು ಲತೀಫ್ ಹೇಳಿದ್ದಾರೆ. ಸತತ ಸೋಲಿನ ನಂತರ ಮುಂಬೈ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಹತಾಶೆ ವ್ಯಕ್ತಪಡಿಸಿದ್ದಾರೆ.

ನಾಯಕತ್ವ-ಕಾರ್ಯತಂತ್ರದ ಬಗ್ಗೆ ಪ್ರಶ್ನೆಗಳು ಹೊರಹೊಮ್ಮಿವೆ. ರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ಎದುರಿಸುತ್ತಿದ್ದಾರೆ. ಮೈದಾನಗಳಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇದು ನೂತನ ನಾಯಕನಿಗೆ ಭಾರಿ ಮುಖಭಂಗಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ಸಜ್ಜಾಗುತ್ತಿದ್ದು, ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

Whats_app_banner