Team India: ರೋಹಿತ್ ಶರ್ಮಾ-ಗೌತಮ್ ಗಂಭೀರ್ ನಡುವೆ ಬಿರುಕು; ಎರಡಲ್ಲ ಮೂರು ಬಣ ಆಗಿದೆಯಾ ಟೀಂ ಇಂಡಿಯಾ
ಕನ್ನಡ ಸುದ್ದಿ  /  ಕ್ರಿಕೆಟ್  /  Team India: ರೋಹಿತ್ ಶರ್ಮಾ-ಗೌತಮ್ ಗಂಭೀರ್ ನಡುವೆ ಬಿರುಕು; ಎರಡಲ್ಲ ಮೂರು ಬಣ ಆಗಿದೆಯಾ ಟೀಂ ಇಂಡಿಯಾ

Team India: ರೋಹಿತ್ ಶರ್ಮಾ-ಗೌತಮ್ ಗಂಭೀರ್ ನಡುವೆ ಬಿರುಕು; ಎರಡಲ್ಲ ಮೂರು ಬಣ ಆಗಿದೆಯಾ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಸೋಲು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಇದೀಗ ಈ ಆಘಾತಕಾರಿ ಪ್ರದರ್ಶನದ ನಡುವೆಯೇ ಸಂಚಲನ ಮೂಡಿಸುವ ವರದಿ ಬಂದಿದೆ. ಸದ್ಯ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳಲಾಗುತ್ತಿದೆ. (ವರದಿ: ವಿನಯ್ ಭಟ್)

ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಷ್ಟರಲ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ಬಿರುಕು ಮೂಡಿದೆ ಎಂಬ ವಿಷಯ ಭಾರಿ ಚರ್ಚೆಯಾಗುತ್ತಿದೆ.
ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಷ್ಟರಲ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ಬಿರುಕು ಮೂಡಿದೆ ಎಂಬ ವಿಷಯ ಭಾರಿ ಚರ್ಚೆಯಾಗುತ್ತಿದೆ.

ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ನಂತರ ಉತ್ತುಂಗದಲ್ಲಿದ್ದ ಭಾರತೀಯ ಕ್ರಿಕೆಟ್ ತಂಡ ಮತ್ತು ಸ್ಟಾರ್ ಆಟಗಾರರು ಇದೀಗ ಇದ್ದಕ್ಕಿದ್ದಂತೆ ಕುಸಿದಿದ್ದಾರೆ. ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ಅದ್ಭುತ ಪ್ರದರ್ಶನ ಮುಂದುವರೆದಿದೆ, ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಎರಡೂ ಸ್ವರೂಪಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನವು ನಿರಂತರವಾಗಿ ಕುಸಿಯಲಾರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಸೋಲು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಇದೀಗ ಈ ಆಘಾತಕಾರಿ ಪ್ರದರ್ಶನದ ನಡುವೆಯೇ ಸಂಚಲನ ಮೂಡಿಸುವ ವರದಿ ಬಂದಿದೆ. ಸದ್ಯ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳಲಾಗಿದೆ. ತಂಡವನ್ನು ನಡೆಸುವ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆಯಂತೆ.

ಯಾವ ಕಾರಣಕ್ಕೆ ರೋಹಿತ್-ಗಂಭೀರ್ ವಿವಾದ

ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ, ನವೆಂಬರ್ 1 ರಿಂದ ಮುಂಬೈನಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ 2 ದಿನಗಳ ಮೊದಲು ಕೆಲ ಮಹತ್ವದ ಘಟನೆ ನಡೆದಿದೆ. ರೋಹಿತ್ ಮತ್ತು ಗಂಭೀರ್ ನಡುವೆ ತಂಡದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಆಟಗಾರರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಒಂದು ಹಂತದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದಗಳು ನಡೆದಿವೆ ಎಂದೂ ಹೇಳಲಾಗಿದೆ.

ವರದಿಯಲ್ಲಿ, ಟೀಂ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿ, ರೋಹಿತ್ ಮತ್ತು ಗಂಭೀರ್ ನಡುವಿನ ಈ ವಿವಾದಕ್ಕೆ ವಿವಿಧ ರೀತಿಯ ನಿರ್ಧಾರಗಳು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಇದರ ಪ್ರಕಾರ, ನಾಯಕ ರೋಹಿತ್ ಶರ್ಮಾ ಇಷ್ಟಪಡದ ಹಲವು ನಿರ್ಧಾರಗಳನ್ನು ಗೌತಮ್ ಗಂಭೀರ್ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ. ಗಂಭೀರ್ ಕೋಚ್ ಆದ ನಂತರ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಏಕೆಂದರೆ ಗಂಭೀರ್ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯಲು ಸಿದ್ಧರಿಲ್ಲ ಎಂದು ವರದಿಯಲ್ಲಿ ಹೇಳಲಾಗುತ್ತಿದೆ.

ರೋಹಿತ್ ಅವರ ಇಚ್ಛೆಯಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಟೀಂ ಇಂಡಿಯಾ ಪ್ರದರ್ಶನದ ಬಗ್ಗೆಯೂ ಚರ್ಚೆ ನಡೆದಿದೆಯಂತೆ. ವಿಶೇಷವಾಗಿ ಏಕದಿನ ಮತ್ತು ಟೆಸ್ಟ್ ತಂಡದ ಪ್ರದರ್ಶನವು ಪ್ರಶ್ನಾರ್ಹವಾಗಿದೆ, ಏಕೆಂದರೆ ಈ ಎರಡೂ ಸ್ವರೂಪಗಳಲ್ಲಿ, ರೋಹಿತ್ ನಾಯಕರಾಗಿದ್ದಾರೆ ಮತ್ತು ಅವರನ್ನು ಹೊರತುಪಡಿಸಿ, ಕೆಲವು ಹಿರಿಯ ಆಟಗಾರರು ಸಹ ತಂಡದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡ ಸೋಲನ್ನು ಎದುರಿಸಬೇಕಾಗಿ ಬಂದಿದ್ದು, ಇದೀಗ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ನೆಲ ಕಚ್ಚಿದೆ.

ಕೆಲವು ಹಿರಿಯ ಆಟಗಾರರು ನಿರಂತರವಾಗಿ ವೈಫಲ್ಯ ಅನುಭವಿಸುತ್ತಿರುವ ಕಾರಣ ಕೋಚ್ ಗಂಭೀರ್ ಇವರ ಪ್ರದರ್ಶನದಿಂದ ಸಂತಸಗೊಂಡಿಲ್ಲ ಎಂದು ಹೇಳಲಾಗಿದೆ. ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಲಿ, ಇಲ್ಲದಿದ್ದರೆ ತಂಡದಿಂದ ಕೈಬಿಡಬೇಕು ಎಂದು ಗಂಭೀರ್ ಬಯಸಿದ್ದಾರೆ.

ಟೀಂ ಇಂಡಿಯಾ ವಿಭಜನೆ?

ಈ ವಿವಾದ ಬೆಳಕಿಗೆ ಬಂದ ನಂತರ ಹಲವು ಹಿರಿಯ ಆಟಗಾರರು ರೋಹಿತ್ ಪರ ಒಲವು ತೋರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ತಂಡ ಈಗ 3 ಗುಂಪುಗಳಾಗಿ ವಿಂಗಡನೆಯಾಗಿದೆ. ಇದರಲ್ಲಿ ರೋಹಿತ್ ಶರ್ಮಾ ಸೇರಿದಂತೆ ಕೆಲವು ಹಿರಿಯ ಆಟಗಾರರಿದ್ದರೆ, ಕೋಚ್ ಗಂಭೀರ್ ಜೊತೆ ಕೆಲ ಆಟಗಾರರು ನಿಂತಿದ್ದಾರೆ. ಇವುಗಳ ಹೊರತಾಗಿ, ಯಾವುದೇ ಗುಂಪಿನ ಭಾಗವಾಗಿರದ ಆಟಗಾರರಲ್ಲಿ ಸ್ವಲ್ಪ ಭಾಗವಿದೆ. ಈ ಎಲ್ಲಾ ಹೇಳಿಕೆಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. (ವರದಿ: ವಿನಯ್ ಭಟ್)

Whats_app_banner