ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ಶೇ 15, ಇಂದು ಶೇ 8ರಷ್ಟು; ಗೆಲುವಿನ ಪ್ರೆಡಿಕ್ಷನ್​ಗಳನ್ನೇ ತಲೆಕೆಳಗಾಗಿಸಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ

ಅಂದು ಶೇ 15, ಇಂದು ಶೇ 8ರಷ್ಟು; ಗೆಲುವಿನ ಪ್ರೆಡಿಕ್ಷನ್​ಗಳನ್ನೇ ತಲೆಕೆಳಗಾಗಿಸಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ

T20 World Cup 2024: ಪಾಕಿಸ್ತಾನ ತಂಡದ ವಿರುದ್ಧ ಟೀಮ್ ಇಂಡಿಯಾಗೆ ಗೆಲುವಿನ ಪ್ರಮಾಣ ಇದ್ದಿದ್ದೇ ಶೇಕಡವಾರು 8ರಷ್ಟು. ಆದರೆ, ಶೇ 92ರಷ್ಟು ಜಯದ ಅವಕಾಶ ಇದ್ದರೂ ಪಾಕ್ ಸೋತು ಮುಖಭಂಗಕ್ಕೆ ಒಳಗಾಗಿದೆ.

ಅಂದು ಶೇ 15, ಇಂದು ಶೇ 8ರಷ್ಟು; ಗೆಲುವಿನ ಪ್ರಿಡಿಕ್ಷನ್​ಗಳನ್ನೇ ತಲೆಕೆಳಗಾಗಿಸಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ
ಅಂದು ಶೇ 15, ಇಂದು ಶೇ 8ರಷ್ಟು; ಗೆಲುವಿನ ಪ್ರಿಡಿಕ್ಷನ್​ಗಳನ್ನೇ ತಲೆಕೆಳಗಾಗಿಸಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ

2024ರ ಐಸಿಸಿ ಟಿ20 ವಿಶ್ವಕಪ್ 2024ರ ಎ ಗುಂಪಿನ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು (India vs Pakistan) 6 ರನ್‌ಗಳಿಂದ ಸೋಲಿಸಿದ ಭಾರತ ತಂಡವು ಸೋಲಿನ ದವಡೆಯಿಂದ ಪಾರಾಯಿತು. ಮೆನ್ ಇನ್ ಬ್ಲೂ ಟಿ20ಐ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 119 ರನ್​​ಗಳ ಕಡಿಮೆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಗೆಲುವಿನ ಅವಕಾಶ ಇದ್ದಿದ್ದೇ ಪಾಕಿಸ್ತಾನಕ್ಕೆ ಹೆಚ್ಚು. ಆದರೆ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್​​ನ​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 9ರ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ ಎದುರು ಗೆದ್ದು ಟಿ20 ವಿಶ್ವಕಪ್ 2024​ ಇತಿಹಾಸದ ಮುಖಾಮುಖಿಯಲ್ಲಿ 8-1ರ ಮುನ್ನಡೆ ಕಾಯ್ದುಕೊಂಡಿತು. 34 ಸಾವಿರ ಪ್ರೇಕ್ಷಕರು ಈ ಹೋರಾಟಕ್ಕೆ ಸಾಕ್ಷಿಯಾಗಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ನಡೆಸಿದ ಅಸಾಧಾರಣ ಪ್ರದರ್ಶನವು ಪಾಕ್​ ಗೆಲ್ಲುವ ಪಂದ್ಯ ಕಳೆದುಕೊಳ್ಳುವಂತೆ ಮಾಡಿತು.

ಒಂದು ಹಂತದಲ್ಲಿ ಟೀಮ್ ಇಂಡಿಯಾ ಗೆಲುವಿನ ಪ್ರಮಾಣ ಇದ್ದಿದ್ದೇ ಶೇ 8ರಷ್ಟು. ಆಗ ಪಾಕಿಸ್ತಾನ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇತ್ತು. ಯಾರೂ ಸಹ ಪಂದ್ಯವನ್ನು ಭಾರತ ಗೆದ್ದುಕೊಳ್ಳುತ್ತದೆ ಎಂದು ಊಹಿಸಿಯೇ ಇರಲಿಲ್ಲ. ಪಂದ್ಯದ ಒಂದು ಹಂತದಲ್ಲಿ 2 ವಿಕೆಟ್‌ಗೆ 57 ರನ್ ಗಳಿಸಿದ್ದ ಪಾಕಿಸ್ತಾನ ಜಯದತ್ತ ಹೆಜ್ಜೆ ಹಾಕಿತ್ತು. ನಂತರ ಪಾಕ್ 11.5 ಓವರ್‌ಗಳಲ್ಲಿ 2 ವಿಕೆಟ್‌ಗೆ 71ಕ್ಕೆ ಆರಾಮದಾಯಕ ಗೆಲುವಿನ ಸಾಧಿಸಲು ಕಣ್ಣಿಟ್ಟಿತು. ಗೆಲುವಿನ ಮುನ್ಸೂಚನೆಯು ಅವರಿಗೆ 92% ರಷ್ಟು ಅನುಕೂಲಕರವಾಗಿದೆ. ಮೆನ್ ಇನ್ ಬ್ಲೂಗೆ ಶೇಕಡಾ 8%.

ತದನಂತರ ಮತ್ತೊಂದು ಪಾಕಿಸ್ತಾನದ ಕುಸಿತ ಆರಂಭಗೊಂಡಿತು. 12.2ನೇ ಓವರ್​​​ನಲ್ಲಿ ಫಖಾರ್ ಜಮನ್ ಔಟಾದರು. ಆಗ ತಂಡದ ಮೊತ್ತ 73/3 ಆಗಿತ್ತು. ನಂತರ 80 ರನ್​ಗೆ ಮೊಹಮ್ಮದ್ ರಿಜ್ವಾನ್ ವಿಕೆಟ್ ಒಪ್ಪಿಸಿದರು. ನಂತರ ಶಾದಾಬ್ ಖಾನ್, ಇಫ್ತಿಕಾರ್ ಅಹ್ಮದ್, ಇಮಾದ್ ವಾಸೀಂ ಕುಸಿತ ಕಂಡರು. ಇದರೊಂದಿಗೆ ಫಲಿತಾಂಶವೇ ಉಲ್ಟಾ ಆಯಿತು. ಗೆಲ್ಲುವ ಪಂದ್ಯದಲ್ಲೂ ಸೋಲು ಕಂಡಿತು. ಆದರೆ ಸೋಲುವ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು.

2022ರಲ್ಲೂ ಹೀಗೆಯೇ ಆಗಿತ್ತು

2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋಲುವ ಪ್ರಮಾಣವೇ ಹೆಚ್ಚಿತ್ತು. ಪವರ್​​ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿತ್ತು. ಆಗ ಪಾಕಿಸ್ತಾನ ತಂಡದ ಗೆಲುವಿಗೆ ಅವಕಾಶ 85 ರಷ್ಟಿತ್ತು. ಭಾರತದ್ದು ಕೇವಲ 15ರಷ್ಟಿತ್ತು. ಅಂದು ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಸಾಧ್ಯ ಎಂಬ ಗುರಿಯನ್ನೂ ಸಾಧಿಸಿ ತೋರಿಸಿದ್ದರು. 52 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿ ಪ್ರಿಡಿಕ್ಷನ್​ಗಳನ್ನೇ ತಲೆಕೆಳಗಾಗಿಸಿದ್ದರು.

ಸತತ ಎರಡನೇ ಗೆಲುವು, ಅಗ್ರಸ್ಥಾನಕ್ಕೆ ಲಗ್ಗೆ

ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಅಮೆರಿಕ ಇನ್ನೂ ಖಾತೆ ತೆರೆಯದೆ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ತಂಡವು ಸಹ ಪಾಕ್ ತಂಡವನ್ನು ಮಣಿಸಿದೆ. ಯುಎಸ್​ಎ ತನ್ನ ಎರಡೂ ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಪಾಕ್ ಉಳಿದ ಎರಡಲ್ಲಿ ಗೆದ್ದರೂ ಸೂಪರ್​-8ಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ